"1 ಕೋಟಿ ರೂಪಾಯಿ ವೆಚ್ಚದಲ್ಲಿ ಪಂಚಮಸಾಲಿ ಸಮುದಾಯ ಭವನ ನಿರ್ಮಾಣಕ್ಕೆ: ಶಾಸಕರು ಕೆ ನೇಮಿರಾಜ ನಾಯ್ಕ್ ಭರವಸೆ "

ಕೊಟ್ಟೂರು: ಕಿತ್ತೂರಾಣಿ ಚೆನ್ನಮ್ಮ ಬ್ರಿಟಿಷ ವಿರುದ್ಧ ಹೋರಾಡಿದ ವೀರ ಮಹಿಳೆ ಅವರ ಧೈರ್ಯ,ಸಾಹಸ, ಶೌರ್ಯ, ಇಂದಿನ ಯುವ ಪೀಳಿಗೆಯ ತಿಳಿದುಕೊಳ್ಳಬೇಕು ಹಾಗೂ ಒಂದು ಕೋಟಿ ವೆಚ್ಚದಲ್ಲಿ ಪಂಚಮಸಾಲಿ ಸಮುದಾಯ ಭವನ ನಿರ್ಮಾಣ ಮಾಡಿಕೊಡುತ್ತೇನೆ ಎಂದು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ನೇಮಿರಾಜ್ ನಾಯಕ್ ಭರವಸೆ ನೀಡಿದರು.

ತಾಲೂಕಿನ ಚಪ್ಪರದಹಳ್ಳಿ ಗ್ರಾಮದ ಪಂಚಮಸಾಲಿ ಭವನದಲ್ಲಿ 247ನೇ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. 

ನಂತರ ಶಾಸಕ ಕೆ. ನೇಮಿರಾಜ್ ನಾಯ್ಕ್ ಮಾತನಾಡಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಧೈರ್ಯ, ಸಾಹಸ ಪರಾಕ್ರಮ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಕನ್ನಡಿಗತಿ ಮತ್ತು ಚೆನ್ನಮ್ಮನ ಅವರ ಆದರ್ಶಗಳನ್ನು ಸ್ಪೂರ್ತಿಯಾಗಿ ಯುವಕರು ಪಡೆದುಕೊಳ್ಳಬೇಕು. ಅರ್ಧಕ್ಕೆ ನಿಂತಿರುವ ಪಂಚಮಸಾಲಿ ಸಮುದಾಯ ಭವನವನ್ನು ಕೆಕೆಆರ್‌ಡಿ ಅನುದಾನ ಅಡಿಯಲ್ಲಿ ಒಂದು ಕೋಟಿ ವೆಚ್ಚದಲ್ಲಿ ಸುಂದರವಾದ ಸಮುದಾಯ ಭವನ ನಿರ್ಮಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.

ಹಗರಿಬೊಮ್ಮನಹಳ್ಳಿ ಕಿತ್ತೂರಾಣಿ ಚೆನ್ನಮ್ಮ, ಕನಕದಾಸರು, ಮಹರ್ಷಿ ವಾಲ್ಮೀಕಿ 1.50 ಲಕ್ಷದ ವೆಚ್ಚದಲ್ಲಿ ಮೂರು ಪ್ರತಿಭೆಗಳನ್ನು ನಿರ್ಮಾಣ ಮಾಡಲಾಗುವುದು.

ಕೊಟ್ಟೂರಿಗೆ 50 ಹಾಸಿಗೆ ಆಸ್ಪತ್ರೆ ನಿರ್ಮಾಣ ಮಿನಿ ವಿಧಾನಸೌಧ ಮಲ್ಲನಾಯಕನಹಳ್ಳಿ ಹತ್ತಿರ ಹಳ್ಳಕ್ಕೆ ಎರಡು ಕೋಟಿ ವೆಚ್ಚದ ಬ್ರಿಡ್ಜ್ ನಿರ್ಮಾಣ. ಕೊಟ್ಟೂರು ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ಹಾಗೂ ನನ್ನ ಅವಧಿ ಒಳಗೆ ಎಲ್ಲಾ ಗ್ರಾಮಗಳ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದರು. ನಮ್ಮ ಸರ್ಕಾರದ ಅಧಿಕಾರಕ್ಕೆ ಬಂದರೆ ಕೊಟ್ಟೂರು ಪಟ್ಟಣ ಪಂಚಾಯತಿಯನ್ನು ಪುರಸಭೆನಾಗಿ ಮಾಡುತ್ತೇನೆ ಹಾಗೂ ಚಪ್ಪರದಹಳ್ಳಿ ಗ್ರಾಮವನ್ನು ಕೊಟ್ಟೂರು ಪುರಸಭೆಗೆ ಸೇರಿಸುತ್ತೇನೆ ಎಂದು ಶಾಸಕ ಕೆ. ನೇಮಿರಾಜ್ ನಾಯಕ್ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಎಂ ಎಂ ಜೆ ಹರ್ಷವರ್ಧನ್, ಗ್ರಾ ಪಂ. ಸದಸ್ಯರಾದ ಕೊಟ್ರೇಶ್, ಅಂಬಳಿ ಕೊಟ್ರಪ್ಪ, ಪಂಚಮಸಾಲಿ ಮುಖಂಡರುಗಳಾದ ಎಂ ಶಿವಣ್ಣ, ಪಂಪಾಪತಿ, ಅಶೋಕ, ಭರಮಗೌಡರು, ಹುಲಿಮನಿ ಮಲ್ಲೇಶ್, ಪ್ರಸನ್ನ, ಡಿಶ್ ಮಂಜುನಾಥ, ಊರಿನ ಮುಖಂಡರು ಯುವಕರು ಮತ್ತಿತರು ಉಪಸ್ಥಿತರಿದ್ದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ