ಛಾಯಾ ಸಾಧಕ ಪುರಸ್ಕೃತ ಮಲ್ಲಿಕಾರ್ಜುನ ವೀರಾಪುರ ಗೆ ಗೆಳೆಯರಿಂದ ಸನ್ಮಾನ
ಮಸ್ಕಿ : ಪಟ್ಟಣದ ಯುವ ಉತ್ಸಾಹಿ ಸಮಾಜ ಸೇವಕ ರಾಗಿ ಹಾಗೂ ಫೋಟೋಗ್ರಾಫರ್ ವೃತ್ತಿ ಯಲ್ಲಿ ನಿಪುಣತೆಯನ್ನು ಹೊಂದಿರುವ ಶ್ರೀ ಮಲ್ಲಿಕಾರ್ಜುನ ವೀರಾಪುರ ರವರಿಗೆ ಛಾಯಾ ಸಾಧಕ ಪ್ರಶಸ್ತಿ ಲಭಿಸಿದ ಪ್ರಯುಕ್ತ ಗೆಳೆಯರ ಬಳಗದ ಮೌನೇಶ್ ಮೆದಿಕಿನಾಳ ಇವರಿಂದ ಸನ್ಮಾನ. ಸತತ 23 ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ.
ಇವರ ಛಾಯಾಚಿತ್ರ ಹಾಗೂ ಫೋಟೋಗ್ರಾಫರ್ ರಂಗದಲ್ಲಿ ಇವರ ಸೇವೆ ಇಡೀ ಚಿತ್ರ ರಂಗದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಡಾ.ಶಿವ ರಾಜಕುಮಾರ ಅಭಿನಯದ ಜೋಡಿ ಹಕ್ಕಿ,ಇದ್ದಂತೆ ಪ್ರಮವಯ್ಯ,ಜಗತ್ ಕಿಲಾಡಿ,ಅಮೆರಿಕಾ ಅಮೆರಿಕಾ, ದರ್ಶನ ಅಭಿನಯದ ನಮ್ಮ ಪ್ರೀತಿಯ ರಾಮು, ಮುಂತಾದ ಇನ್ನೂ ಹಲವಾರು ಚಿತ್ರ ಗಳಲ್ಲಿ ಸ್ಥಿರ ಛಾಯ ಗ್ರಾಹಕರಾಗಿ ಸೇವೆ ಸಲ್ಲಿಸಿ
ಕಲಾ ದೇವಿಯ ಆರಾಧನಾ ಮಾಡುವ ಉದ್ದೇಶದಿಂದ ಮಸ್ಕಿ ಪಟ್ಟಣದಲ್ಲಿ ಪೋಟೋ ಶಾಪ್ ಇಟ್ಟುಕೊಂಡು ಜೀವನದ ಬಂಡಿ ಸಾಗಿಸುತ್ತಿದ್ದಾರೆ.
ಇವರು ಮಸ್ಕಿ ಯಲ್ಲಿ ಎಲೆ ಮರೆ ಕಾಯಿಯಂತೆ ಕೆಲಸ ಮಾಡುವ ಮನಸ್ಸು ಸಾರ್ವಜನಿಕರ ಮುಚ್ಚುಗೆ ಪಾತ್ರವಾಗಿದೆ.
ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘ ಬೆಂಗಳೂರು ನಗರದಲ್ಲಿ ನೆಡೆದ ಕಾರ್ಯಕ್ರಮ ದಲ್ಲಿ ಮಲ್ಲಿಕಾರ್ಜುನ ವೀರಾಪುರ ಯವರಿಗೆ ಛಾಯಾ ಸಾಧಕ ಪ್ರಶಸ್ತಿಯನ್ನು ಇದೇ ಸೆ.21 ರಂದು
ನೀಡಿ ಸನ್ಮಾನಿಸಿ ಗೌರವಿಸಲಾಯಿತು.ಪಟ್ಟಣದ ಗಚ್ಚಿನ ಹಿರೇ ಮಠದ ಭವನದಲ್ಲಿ 185 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್ ಇವರ ಸಮ್ಮುಖದಲ್ಲಿ ಮೌನೇಶ್ ಮೆದಿಕಿನಾಳ ಇವರು ಪ್ರಶಸ್ತಿ ಪುರಸ್ಕೃತರು ಹಾಗೂ ಅವರ ಅರ್ಧಾಂಗಿ ರವರಿಗೆ ಶಾಲು ಹೂವಿನ ಹಾರ ಹಾಕಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಅಕ್ಬರ್ ರಾಯಚೂರು,ಕರಿಯಪ್ಪ ಹೊಸೂರು,ಸಂಗಮೇಶ್ ಹರವಿ,ವೆಂಕಟೇಶ್ ತೋರಣ ದಿನ್ನಿ,ಅಮರೇಶ್ ನಾಯಕ,ಶೇಖರ್ ಜೇಗರಕಲ್, ಶ್ರೀಶೈಲ ಮಸ್ಕಿ,ಸತೀಶ್ ಹಿರೇಮಠ ಸೇರಿದಂತೆ ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ