*ಸೋಲಾರ್ ಕಂಪನಿ ವಿರುದ್ಧ ರೈತರ ಸಂಘಟನೆಗಳ ಆಕ್ರೋಶ*

ಕೊಟ್ಟೂರು : ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ದಲಿತ ಸಂಘರ್ಷ ಸಮಿತಿ ವತಿಯಿಂದ ಕೃಷಿ ಜಮೀನಿನಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸಿರುವ ಕುರಿತು ಅದನ್ನು ಕೂಡಲೇ ತೆರವುಗೊಳಿಸುವಂತೆ ತಹಶೀಲ್ದಾರರಿಗೆ ರಾಜ್ಯಧ್ಯಕ್ಷ ಭರಮಣ್ಣ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. 

ಸೋಲಾರ್ ಘಟಕವನ್ನು ಅಳವಡಿಸಲು ಒಂದೇ ಕಡೆ ನೂರಾರು ಎಕರೆ ಭೂಮಿ ಬೇಕಾಗುತ್ತದೆ. ಹಾಗಾಗಿ ಸೂಕ್ತವೆನಿಸುವ ಜಮೀನು ಪಡೆಯಲು ಕಂಪನಿಯವರು ಅನೇಕ ಮಾರ್ಗಗಳನ್ನು ಮಧ್ಯವರ್ತಿಗಳ ಮೂಲಕ ಅನುಸರಿಸುತ್ತಿದ್ದಾರೆ. ಅಧಿಕೃತವಾಗಿ ಹೊಲ ನೀಡುವ ರೈತನಿಂದ ಪಡೆದ ಜಮೀನಿನ ಪಕ್ಕದ ರೈತನಿಗೆ ಗೊತ್ತಿಲ್ಲದಂತೆ ಕೆಲವರ ಹೊಲದಲ್ಲಿ ಅನುಮತಿ ಪಡೆಯದೇ ಅನಧಿಕೃತವಾಗಿ ಪ್ಲಾಂಟ್‌ಗಳನ್ನು ಅಳವಡಿಸುತ್ತಿದ್ದಾರೆ. ಕೃಷಿ ಯೋಗ್ಯವಾದ ಜಮೀನುಗಳನ್ನು ರೈತರಿಂದ ಕಡಿಮೆ ದರದಲ್ಲಿ ಪಡೆದು ರೈತರ ಜಮೀನುಗಳನ್ನು ಪವರ್ ಆಪ್ ಅರ್ಟನಿ ಮೂಲಕ 30 ವರ್ಷಕ್ಕಿಂದ ಹೆಚ್ಚು ಲೀಜ್ ಪಡೆದುಕೊಂಡಿದ್ದರು. ಕಂಪನಿಯವರು ರೈತರ ಜಮೀನುಗಳನ್ನು ನೊಂದಾಯಿಸುವುದಕ್ಕಿAದ ಮುಂಚೆನೆ ಪ್ಲಾಂಟ್ ಅಳವಡಿಸುವ ಕಾರ್ಯ ಚಟುವಟಿಕೆ ಕೈಗೊಂಡಿದ್ದಾರೆ. ಕಾಯಿದೆ ನಿಯಮಗಳಿಗೆ ವಿರುದ್ದವಾಗಿ ಕೃಷಿಗೆ ಯೋಗ್ಯವಲ್ಲದ ಜಮೀನುಗಳನ್ನು ಪಡೆಯುವುದನ್ನು ಬಿಟ್ಟು ಯೋಗ್ಯವಾದ ಜಮೀನನ್ನು ಪಡೆದು ರೈತರಿಗೆ ವಂಚಿಸುತ್ತಿದ್ದಾರೆ. ಇಂತಹವರ ವಿರುದ್ದ ಕೂಡಲೇ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು. 

ಪಟ್ಟಣದ ಸಮೀಪ ಗ್ರಾಮದ ರೈತರೊಬ್ಬರ ಹೊಲದಲ್ಲಿ ಬದುವಿನ ಒಂದು ಕಡೆಯಿಂದ ಜಮೀನಿನ ಒಳಗೆ ನಾಲ್ಕೈದು ಸೋಲಾರ್ ತಟ್ಟೆಗಳನ್ನು ನಿರ್ಮಾಣ ಮಾಡಿದ್ದಾರೆ ಫಲವತ್ತಾದ ಕಪ್ಪುಮಣ್ಣಿನ ಭೂಮಿ ಹೊಂದಿರುವ ರೈತರ ಜಮೀನುಗಳನು ಓ2 ಪವರ್ ಸೋಲಾರ್ ಕಂಪನಿಯವರು ವಿವಿಧ ಮಾರ್ಗಗಳ ಮೂಲಕ ರೈತರ ಮನ ಒಲಿಸಿ ವರ್ಷಾನುಗಟ್ಟಲೆ ನೂರಾರು ಎಕರೆಯಲ್ಲಿ ಸೋಲಾರ್ ಪ್ಲಾಂಟ್ ಅವಳವಡಿಸಿದ್ದಾರೆ. ಇದರ ಬೆನ್ನಲ್ಲೇ ಸೋಲಾರ್ ಕಂಪನಿಗಳು ಸಹ ಇಲ್ಲಿಗೆ ಲಗ್ಗೆ ಇಟ್ಟಿವೆ.

ಹಣದ ಆಮಿಷ ತೋರಿಸಿ ಫಲವತ್ತಾದ ಕೃಷಿಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ಪಡೆಯುತ್ತಿದ್ದಾರೆ. ಈಗಾಗಲೇ ಹೋಬಳಿಯ ರಾಂಪುರ, ಜೋಳದ ಕೂಡ್ಲಿಗಿ, ಸುತ್ತಮುತ್ತಲಿನ ಗ್ರಾಮಗಳ ಜಮೀನುಗಳಲ್ಲಿ ಸೋಲಾರ್ ಕಂಪನಿ ಚಟುವಟಿಕೆಗಳು ಗರಿಗೆದರಿವೆ. ಇದರಿಂದ ನೂರಾರು ಎಕರೆ ಕೃಷಿ ಭೂಮಿ ಕಡಿಮೆಯಾಗಲಿದ್ದು, ಮುಂಬರುವ ದಿನಗಳಲ್ಲಿ ದುಷ್ಪರಿಣಾಮ ಉಂಟಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಸೋಲಾರ್ ಪ್ಲಾಂಟ್‌ಗೆ ಜಮೀನು ಪಡೆಯುವ ಕಂಪನಿಯವರು ಹೊಲದ ಒಂದು ಭಾಗದಲ್ಲಿ ಘಟಕ ಸ್ಥಾಪನೆ ಮಾಡುತ್ತಾರೆ. ನಂತರ ತಟ್ಟೆಗಳ ಅಳತೆಗೆ ತಕ್ಕಂತೆ ಭೂಮಿಯಯಲ್ಲಿ ಗುಂಡಿಗಳನ್ನು ತೋಡುತ್ತಾರೆ. ಅಲ್ಲಿ ಕಾಂಕ್ರೀಟ್ ಹಾಕಿ ಕಬ್ಬಿಣದ ಕಂಬಗಳನ್ನು ಜೋಡಿಸಿ ತಟ್ಟೆಗಳನ್ನು ಅಳವಡಿಸುತ್ತಾರೆ. ನಂತರ ಆ ಹೊಲದ ಸುತ್ತಲೂ ಕಾಂಪೌAಡ್ ಹಾಕುತ್ತಾರೆ. ಇದರಿಂದಾಗಿ ಸಂಪೂರ್ಣವಾಗಿ ಕೃಷಿ ಮುಕ್ತ ಹೊಲವಾಗಿ ಪರಿವರ್ತನೆಯಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಈಚಿಗೆ ಕಂದಾಯ ನಿರೀಕ್ಷರಾಗಿ ನೇಮಕಗೊಂಡಿರುವೆ. ಹಾಗಾಗಿ ಈ ಹಿಂದೆ ಯಾವ ಪ್ಲ್ಯಾಂಟ್‌ಗೆ ಅನುಮತಿ ಕೊಡಲಾಗಿದೆ ಎನ್ನುವ ಮಾಹಿತಿಯನ್ನು ಪರಿಶೀಲಿಸಬೇಕಿದೆ. ಯಾವೆಲ್ಲಾ ರೈತರ ಹೊಲದಲ್ಲಿ ಸೋಲಾರ್ ಘಟಕಗಳನ್ನು ನಿರ್ಮಾಣ ಮಾಡಲಾಗಿದೆಯೋ ಎಂದು ಸಂಬAಧಿಸಿದ ದಾಖಲಾತಿಗಳನ್ನು ಪರಿಶೀಲಿಸಲು ರೈತ ಸಂಘಟನೆಗಳು ಮನವಿ ಸಲ್ಲಿಸಿದರು. 

ಉಪ ನೋಂದಣಿ : ಕಡ್ಡಾಯವಾಗಿ ಕರ್ನಾಟಕದಲ್ಲಿ ಸರ್ಕಾರದ ಆದೇಶದ ಪ್ರಕಾರ ಶೇ.60 ರಷ್ಟು ಕನ್ನಡ ಕಡ್ಡಾಯವಾಗಿ ನೊಂದಣಿ ಪತ್ರ ಇರಬೇಕು. ಆದರೆ ಕಂಪನಿಯವರು ಆಂಗ್ಲ ಭಾಷೆಯಲ್ಲಿ ಪತ್ರವನ್ನು ತಯಾರಿಸಿ ರೈತರಿಗೆ ಅರ್ಥವಾಗದ ರೀತಿಯಲ್ಲಿ ನೊಂದಾಯಿಸಿರುತ್ತಾರೆ. ಇಂತಹ ಅಧಿಕಾರಿಗಳಿಗೆ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. 

ಬೇಡಿಕೆ : ರೈತರು ಜಮೀನಿಗೆ ಲೀಜ್ ಮಾಡಿಕೊಳ್ಳಲು ಪ್ರತಿ ವರ್ಷಕ್ಕೆ 32ಸಾವಿರ ಬದಲಾಗಿ 1 ಲಕ್ಷ ರೂ.ಗಳನ್ನು ಹಣ ನೀಡಬೇಕು. 

 30 ವರ್ಷಗಳ ಅವಧಿಗೆ ಎಕರೆಗೆ ಪ್ರತಿಯೊಬ್ಬ ರೈತನಿಗೂ 30 ಲಕ್ಷ ರೂ ಹಣವನ್ನು ರೈತರ ಖಾತೆ ಎಫ್‌ಡಿ ಮಾಡಬೇಕು. ಅದರಿಂದ ಬರುವ ಬಡ್ಡಿ ಹಣವನ್ನು ರೈತರೇ ಬಳಸಿಕೊಳ್ಳಬೇಕು. 

ಪಹಣಿಯಲ್ಲಿ ರೈತರ ಹೆಸರು ಬದಲಾವಣೆಯಾಗದಂತೆ ಕೇವಲ ಲೀಜ್ ಆಗ್ರಿಮೆಂಟ್ ಮಾತ್ರ ಮಾಡಿಕೊಳ್ಳಬೇಕು.

ಕೋಟ್-1 : ರೈತರು ಈ ದೇಶದ ಬೆನ್ನೆಲುಬ ಅಂತಹ ರೈತರನ್ನು ಅಡಿಯಾಳುಗಳನ್ನಾಗಿ ಮಾಡಿಕೊಳ್ಳುವ ಕಂಪನಿಯವರ ವರ್ತನೆ ನಿಜಕ್ಕೂ ಖಂಡನೀಯ ನಮ್ಮ ರೈತರ ಜಮೀನುಗಳನ್ನು ಪಡೆಯುವಾಗ ಅವರಿಗೆ ಸಲ್ಲಬೇಕಾದ ಹಣವನ್ನು ನೀಡಿ ಶೇ.60 ರಷ್ಟು ಕನ್ನಡ ಭಾಷೆಯಲ್ಲಿ ನೋಂದಣಿ ಪತ್ರವನ್ನು ನೀಡಬೇಕು. ಪಹಣೆಯಲ್ಲಿ ರೈತರ ಹೆಸರು ಬದಲಾಗದಂತೆ ಕ್ರಮ ವಹಿಸಬೇಕು. ಎಕರೆ 30 ಸಾವಿರ ಆಮಿಷ ತೋರಿಸಿ ರೈತರನ್ನು ಯಮಾರಿಸಿದ್ದಾರೆ. ಕೂಡಲೇ ಎಕರೆಗೆ 1 ಲಕ್ಷ ರೂ. ನೀಡಬೇಕು ಇಲ್ಲವಾದರೆ ಮುಂದಿನಗಳಲ್ಲಿ ಎಲ್ಲಾ ಸಂಘಟನೆಗಳಿಂದ ಮುತ್ತಿಗೆ ಹಾಕುತ್ತೇವೆ. ಎನ್. ಭರಮಣ್ಣರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷರು. 

ಕೋಟ್-2 : ಈ ಕಂಪನಿಯವರು ಸರ್ಕಾರದ ರಸ್ತೆಗಳನ್ನು ದುರುಪಯೋಗ ಪಡೆದುಕೊಂಡು ಕೃಷಿ ಚಟುವಟಿಕೆಗಳಿಗೆ ಓಡಾಡಲು ರೈತರಿಗೆ ತುಂಬಾ ತೊಂದರೆಯಾಗುತ್ತಿದೆ ಸಾಕಷ್ಟು ಬಾರಿ ರೈತರು ಸಹ ಅಳಲು ತೊಡಿಕೊಂಡರು ಯಾವೋಬ್ಬ ಅಧಿಕಾರಿಗಳು ರೈತರ ಬಗ್ಗೆ ಗಮನ ಹರಿಸಿಲ್ಲ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಹನುಮಂತಪ್ಪ ಟಿ.ವಕೀಲರು

ಕೋಟ್ : ಸೋಲಾರ್ ಕಂಪನಿಗಳ ವಿರುದ್ಧ ಸಾಕಷ್ಟು ದೂರುಗಳು ಕೇಳಿಬಂದಿವೆ. ರೈತರ ಜಮೀನನ್ನು ದುರುಪಯೋಗ ಮಾಡಿಕೊಳ್ಳುವ ಕಂಪನಿಯ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಎಂದರು ಜಿ. ಅಮರೇಶ ತಹಶೀಲ್ದಾರರು ಕೊಟ್ಟೂರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ