ಮಕ್ಕಳ ಭಾವನೆ ಅರಿತುಕೊಂಡು ಬೋಧನೆ ಮಾಡಬೇಕೆಂದು : ಶಾಸಕ ಹಂಪನಗೌಡ ಬಾದರ್ಲಿ
ಮಸ್ಕಿ: ವಿದ್ಯಾರ್ಥಿಗಳಿಗೆ ಪಠ್ಯಕ್ಕೆ ಸೀಮಿತಗೊಳಿಸಬಾರದು, ಪಠ್ಯದ ಜೊತೆಗೆ ಸಂಸ್ಕಾರ, ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕೆಂದು ಸಿಂಧನೂರಿನ ಶಾಸಕ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಹಂಪನಗೌಡ ಬಾದರ್ಲಿ ಅವರು ಶಿಕ್ಷಕರಿಗೆ ಸಲಹೆ ನೀಡಿದರು.
ಪಟ್ಟಣದ ಭ್ರಮರಾಂಭ ದೇವಸ್ಥಾನದಲ್ಲಿ ನಡೆದ ಜಿಲ್ಲಾ ಶೈಕ್ಷಣಿಕ ಸಮಾವೇಶ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸದೃಢ ದೇಶ ನಿರ್ಮಾಣವಾಗಲು ಶಿಕ್ಷಕನ ಕೈಯಲ್ಲಿದೆ. ಮಕ್ಕಳ ಭಾವನೆ ಅರಿತುಕೊಂಡು ಬೋಧನೆ ಮಾಡಬೇಕೆಂದು ಹೇಳಿದರು. ಶೈಕ್ಷಣಿಕ ಸಮಾವೇಶ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸಮಸ್ಯೆಗಳನ್ನು ಪರಿಹರಿಸಲು ಒಂದು ಉತ್ತಮ ವೇದಿಕೆಯಾಗಿದೆ. ಖಾಸಗಿ ಶಾಲೆಯ ಒಕ್ಕೂಟದ ವ್ಯಾಪ್ತಿಗೆ ಯಾವುದೇ ಅಹಿತಕರ ಘಟನೆಗಳು ನಡೆದರೂ ನನ್ನ ಗಮನಕ್ಕೆ ತನ್ನಿ ಅದಕ್ಕೆ ಪರಿಹಾರ ಹುಡುಕುವ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಅಲ್ಪ ವೇತನದಲ್ಲಿ ಗುಣಾತ್ಮಕ ಶಿಕ್ಷಣವನ್ನು ನೀಡುವ ಕೆಲಸ ಶಿಕ್ಷಕ ಮಾಡುತ್ತಿದ್ದಾನೆ. ಸರ್ಕಾರ ಖಾಸಗಿ ಶಿಕ್ಷಕರಿಗೆ ಮೂಲ ಸೌಕರ್ಯ ನೀಡಬೇಕು. ಸಿಆರ್‌ಎಫ್ ಅನುದಾನವನ್ನು ಶಿಕ್ಷಣ ಸಂಸ್ಥೆಗೆ ಬಳಕೆ ಮಾಡಿಕೊಳ್ಳುವುದಕ್ಕೆ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಜೆ.ಟಿ.ಪಾಟೀಲ್ ಅವರ ಜೊತೆ ಚರ್ಚೆ ಮಾಡಿದ್ದೇನೆ. ಅನುದಾನ ಬಳಕೆಗೆ ಸಮ್ಮತಿ ಸೂಚಿಸಿದ್ದಾರೆ ಎಂದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೌಚಾಲಯ, ಕುಡಿಯುವ ನೀರು, ಶಾಲೆ, ರಸ್ತೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಪಡಿಸಲು ಕೆ.ಕೆ.ಆರ್.ಡಿ.ಬಿ ಅಧ್ಯಕ್ಷರ ಹಾಗೂ ಸಚಿವರ ಗಮನಕ್ಕೆ ತಂದಿದ್ದೇನೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು. ಪ್ರಶಸ್ತಿ ಪಡೆದ ಮಾತ್ರಕ್ಕೆ ಉತ್ತಮ ಶಿಕ್ಷಕನಲ್ಲ, ಬದಲಾಗಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಮಾರ್ಗದರ್ಶನ ನೀಡವವನೇ ನಿಜವಾದ ಉತ್ತಮ ಶಿಕ್ಷಕ ಎಂದರು. ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು ಹಾಗೂ ವಿವಿಧ ಶಾಲೆಯ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲ್ಯಾಣ ಕರ್ನಾಟಕ ಬಾಗದಲ್ಲಿ 15 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದ್ದು, ಅತಿಥಿ ಶಿಕ್ಷಕರಿಂದ ಸರ್ಕಾರಿ ಶಾಲೆಗಳು ನಡೆಯುತ್ತಿವೆ. ಯಾವುದೇ ಸರ್ಕಾರ ಇರಲಿ ಶಿಕ್ಷಕ ನಿವೃತ್ತಿ ಹೊಂದಿದಾಗ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕೆಲಸ ಮಾಡಬೇಕು. ಇದರ ಜೊತೆಗೆ ಶಿಕ್ಷಣ, ಆರೋಗ್ಯ, ರೈತರ ಸಮಸ್ಯೆ ನಿವಾರಿಸುವ ಕೆಲಸ ಆಗಬೇಕು ಎಂದರು. ಹಣ ಮಾಡುವ ಉದ್ದೇಶದಿಂದ ಶಿಕ್ಷಣ ಸಂಸ್ಥೆ ಆರಂಭ ಮಾಡಬಾರದು, ಸಮಾಜಸೇವೆ ಮಾಡುವ ಹಂಬಲ ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಲ್ಲಿ ಇರಬೇಕು ಎಂದರು.
- ಪ್ರತಾಪ ಗೌಡ ಪಾಟೀಲ್, ಮಾಜಿ ಶಾಸಕರು.
ಈ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ತಾಲೂಕು ಅಧ್ಯಕ್ಷ, ಶಿವಕುಮಾರ.ಕೆ, ವಕೀಲ ನಾಗರಾಜ ಮಸ್ಕಿ, ಗೌರಮ್ಮ.ಜಿ.ನಾಯಕ, ನರಸಪ್ಪ ಯಾದವ, ಮಂಜುನಾಥ ಸ್ವಾಮಿ, ಕೆ.ವಿ.ರೆಡ್ಡಿ, ಲಿಂಗಪ್ಪ ಚವ್ಹಾಣ್ ದಿ ಬೆಸ್ಟ್ ಪಬ್ಲಿಕ್ ಶಾಲೆಯ ಸಿದ್ದು,ಶ್ರೀ ಸಾಯಿ ಚೈತನ್ಯ ಪಬ್ಲಿಕ್ ಶಾಲೆಯ ಶ್ರೀ ನಿವಾಸ ಸೇರಿದಂತೆ ಇನ್ನಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ