ಉಜ್ಜಯಿನಿ ಶ್ರೀಗಳಿಂದ ಕೊಟ್ಟೂರು ಕೆರೆಗೆ ಬಾಗೀನ ಸಮರ್ಪಣೆ
ಕೊಟ್ಟೂರು : ತಾಲೂಕು ಹಸಿರಿನಿಂದ ಕಂಗೊಳಿಸುವAತೆ ಮಾಡಲು ಕೊಟ್ಟೂರು ಕೆರೆ ಪ್ರತಿ ವರ್ಷ ತುಂಬಬೇಕು. ಹತ್ತಿರದಲ್ಲಿನ ತುಂಗಭದ್ರ ನೀರಿನ ಸೌಕರ್ಯ ಪಡೆದು ಕೆರೆ ತುಂಬಿಸುವ ಯೋಜನೆ ಜಾರಿಗೆಗೊಳ್ಳಬೇಕು. ಶಾಸಕರು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಉಜ್ಜಿಯನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜಿ ದೇಶೀ ಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಕೊಟ್ಟೂರು ಕೆರೆ ತುಂಬಿ ಕೋಡಿ ಬಿದ್ದ ಹಿನ್ನಲೆಯಲ್ಲಿ ಮಂಗಳವಾರ ಮಹಿಳೆರಿಗೆ ಉಡಿ ತುಂಬವ ಕಾರ್ಯಕ್ರಮ ಹಾಗೂ ಕೆರೆ ಬಾಗೀನ ಅರ್ಪಿಸುವ ಕಾರ್ಯಕ್ರಮದಲ್ಲಿ ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿರಾಜ ನಾಯ್ಕೆ, ಎಂ.ಎA.ಜೆ. ಹರ್ಷವರ್ಧನ ಜೊತೆಗೆ ಸೇರಿ ಕೆರೆಗೆ ಬಾಗೀನ ಸಮರ್ಪಿಸಿ ಉಜ್ಜಿಯನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜಿ ದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿದರು.
ಕೊಟ್ಟೂರು ಸೇರಿದಂತೆ ೧೭ ಕೆರೆಗಳಿಗೆ ತುಂಗಭದ್ರ ಜಲಾಶಯದಿಂದ ನೀರು ತುಂಬಿಸುವ ಕಾರ್ಯವನ್ನು ಸರ್ಕಾರ ಕೈಗೊಳ್ಳಬೇಕು ಪೂರ್ಣ ಮಳೆಯಾಶ್ರಿತ ಪ್ರದೇಶವಾಗಿರುವ ಕೊಟ್ಟೂರು ಕೆರೆ ಭರ್ತಿಯಾಗಿ ಕೋಡಿ ಬಿದ್ದಿದ್ದು ಕೆರೆಯಲ್ಲಿನ ನೀರನ್ನು ಉಳಿಸಿಕೊಳ್ಳುವ ಯೋಜನೆ ಕೈಗೊಳ್ಳಬೇಕು ಎಂದು ಉಜ್ಜಿಯನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜಿ ದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮಿಜೀ ಒತ್ತಾಯಿಸಿದರು .
ಬಾಗೀನ ಸಮರ್ಪಿಸಿ ಶಾಸಕ ಕೆ.ನೇಮಿರಾಜ ನಾಯ್ಕ್ ಮಾತನಾಡಿ ನಾನು ಮೊದಲನೇ ಬಾರಿಗೆ ಶಾಸಕರಾಗಿದ್ದ ಅವಧಿಯ ೨೦೦೯ ರಲ್ಲಿ ಕೊಟ್ಟೂರು ಕೆರೆ ತುಂಬಿ ಕೋಡಿ ಸಹ ಬಿದ್ದಿತ್ತು ಈಗ ಮತ್ತೆ ಶಾಸಕನಾಗಿದ್ದೇನೆ ಈ ವರ್ಷವೂ ಕೊಟ್ಟೂರು ಕೆರೆಗೆ ಕೋಡಿ ಬಿದ್ದಿರುವುದು ನನ್ನ ಶಾಸಕತ್ವದ ಸಾರ್ಥಕತೆಯಾಗಿದೆ ಎಂದರು .
ಶಾಶ್ವತ ನೀರು ತುಂಬಿಸುವ ಕಾರ್ಯಯೋಜನೆ ಸಿದ್ದಗೊಳಿಸಿದ್ದು ಕೇಂದ್ರ ಸಚಿವರುಗಳಾದ ಹೆಚ್.ಡಿ ಕುಮಾರ ಸ್ವಾಮಿ ಮತ್ತು ವಿ.ಸೋಮಣ್ಣರ ಮೂಲಕ ಕೇಂದ್ರ ಸರ್ಕಾರದ ಅನುದಾನವನ್ನು ಪಡೆಯಲು ಪ್ರಯತ್ನ ಸಾಗಿದ್ದು ದೆಹಲಿಗೆ ನಿಯೋಗದ ಮೂಲಕ ತೆರಳುವೆ ಎಂದರು .
ಚಾನುಕೋಟಿ ಮಠಾಧ್ಯಕ್ಷ ಡಾ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಜೀ ಮಾತನಾಡಿ ಕೊಟ್ಟೂರೇಶ್ವರನ ಮೂರ್ತಿಯನ್ನು ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಇರಿಸಲಾಗಿರುತ್ತದೆ. ಬೆಳಿಗ್ಗೆ ವಾದ್ಯಗಳೊಂದಿಗೆ ಗಂಗಾ ಮತಸ್ಥರು ಹಾಗೂ ರಾಮಲಿಂಗೇಶ್ವರ ದೈವಸ್ಥರು ಕೆರೆಗೆ ತಂದು ಅಭಿಷೇಕ ಮಾಡಿ ನಂತರ ಗಂಗಾ ಮಾತೆಗೆ ಪೂಜೆ ಸಲ್ಲಿಸಲಾಗುವುದು. ನಂತರ ಬಾಗಿನ ಸಮರ್ಪಣೆ ಮಾಡಿ ಮಹಿಳೆಯರಿಗೆ ಉಡಿ ತುಂಬಲಾಗುವುದು ಎಂದರು.
ಜಿ.ಪಂ ಮಾಜಿ ಸದಸ್ಯ, ಎಂ.ಎA.ಜೆ ಹರ್ಷವರ್ಧನ್ ಮಾತನಾಡಿ ಶಾಸಕರು ಯಾವುದಾದರೂ ಅನುದಾನದಲ್ಲಿ ಕೆರೆಯ ಸುತ್ತಮುತ್ತಲಿನ ಮುಳ್ಳು ಗಂಟಿಗಳನ್ನು ತೆಗಿಸಬೇಕು. ಕೊಟ್ಟೂರು ಕೆರೆಗೆ ಸುಗಮದಾರಿ ನಿರ್ಮಾಣವಾಗಬೇಕು. ನಾಗರೀಕರು ಕೆರೆಯನ್ನು ನೋಡಲು ಬರುವವರಿಗೆ ಸೂಕ್ತವಾದ ದಾರಿ ಇಲ್ಲ. ಅಲ್ಲದೆ ಕೆರೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಂದಿಪುರದ ಮಹೇಶ್ವರ ಸ್ವಾಮೀಜಿ, ತಹಶೀಲ್ದಾರ ಅಮರೇಶ್ ಜಿ.ಕೆ, ಸಣ್ಣ ನೀರಾವರಿ ಇಲಾಖೆಯ ಎ.ಇ.ಇ ಸೂಗಪ್ಪ, ಸಹಾಯಕ ಇಂಜಿನಿಯರ್ ರಾಜು ಮೇಡಂ , ಪ.ಪಂ ಮುಖ್ಯ ಅಧಿಕಾರಿ ನಸುರುಲ್ಲಾ , ಎಮ್.ಎಮ್.ಜೆ.ಶೋಬಿತ್, ಬೂದಿ ಶಿವಕುಮಾರ ಅಡಿಕೆ ಮಂಜುನಾಥ, ಮರಬದ ನಾಗರಾಜ, ರಾಂಪುರ ಪ್ರಕಾಶ, ರುದ್ರಮ್ಮ ಮಾತೆ, ಗೋಣಿಪ್ಪ, ಮೈದೂರು ವಿಶ್ವನಾಥ , ಪಿ.ಡಬ್ಲ್ ಡಿ ಸಹಾಯಕ ಇಂಜಿನಿಯರ್ ಕೊಟ್ರೇಶ್, ಸಬ್ ಇನ್ಸ್ ಪೆಕ್ಟರ್ ಗೀತಾಂಜಲಿ ಸಿಂಧೆ, ತಗ್ಗಿನಕೇರಿ ಕೊಟ್ರೇಶ್, ಶಿವಕುಮಾರ ಮತ್ತಿತರರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ