" ವಿಜಯದಶಮಿಯ ವಿಜಯಶಾಲಿ : ಕೆಪಿಎಸ್ ತಂಡಕ್ಕೆ"

 

*ವಿಜಯದಶಮಿ ಪ್ರಯುಕ್ತ ಕ್ರಿಕೆಟ್ ಆಯೋಜಿಸಿದ ಕೆಪಿಎಸ್ ಪತ್ರಕರ್ತರು ಪ್ರಥಮ ಬಾರಿಯಲ್ಲಿ ಅತ್ತ್ಯುತ್ತಮ ಗೆಲುವು  ಸಾಧಿಸಿದ  ಕೆಪಿಎಸ್ ತಂಡ *

ಕೊಟ್ಟೂರು: ವಿಜಯದಶಮಿಯ ಪ್ರಯುಕ್ತ ಕರ್ನಾಟಕ ಪತ್ರಕರ್ತರ ಸಂಘದ ತಾಲ್ಲೂಕು ಘಟಕ ಕ್ರಿಕೆಟ್ ಆಯೋಜಿಸಲಾಗಿತ್ತು. ಒಟ್ಟು ೧೦ ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದ ಸೆಣಸಾಟಕ್ಕಾಗಿ ಹಳೆ ಕೊಟ್ಟೂರು ಮತ್ತು ಶಿಕ್ಷಕರ ಎ ತಂಡ ಸೆಮಿಫೈನಲ್‌ನಲ್ಲಿ ಹಣಾಹಣಿಯಾಗಿ ಹಳೆ ಕೊಟ್ಟೂರು ತಂಡ ಫೈನಲ್‌ಗೆ ಲಗ್ಗೆಯಿಟ್ಟಿತು. ನಂತರ ಆರೋಗ್ಯ ಇಲಾಖೆ ತಂಡ ಹಾಗೂ ಕರ್ನಾಟಕ ಪತ್ರಕರ್ತರ ಸಂಘ ಸೆಮಿಫೈನಲ್‌ನಲ್ಲಿ ರೋಚಕದ ಆಟವಾಡಿತು. 


 ಈ ಪಂದ್ಯದಲ್ಲಿ ಗೌಸ್ ಅತ್ಯುತ್ತಮವಾಗಿ ೧೦೩ ರನ್‌ಗಳ ಶತಕದ ಆಟವಾಡಿದರು. ಕರ್ನಾಟಕ ಪತ್ರಕರ್ತರ ಸಂಘ ಫೈನಲ್‌ಗೆ ಬಂದಿದ್ದವು. ಭಾನುವಾರ ಮಧ್ಯಾಹ್ನ ಹಳೆ ಕೊಟ್ಟೂರು ಮತ್ತು ಕರ್ನಾಟಕ ಪತ್ರಕರ್ತರ ಸಂಘದ ಫೈನಲ್ ಆಟವನ್ನು ಆಡಿದವು. ಫೈನಲ್ ಪಂದ್ಯಕ್ಕೆ ಬಿ.ಡಿ.ಸಿ.ಸಿ. ಬ್ಯಂಕ್ ಉಪಾಧ್ಯಕ್ಷ ಐ.ಎಂ.ದಾರುಕೇಶ್ ಟಾಸ್ ತೂರಿ ಆಟಗಾರರಿಗೆ ಪ್ರೋತ್ಸಾಹ ನೀಡಿ, ಕ್ರೀಡೆ ಜೀವನದಲ್ಲಿ ಬಹಳ ಮುಖ್ಯ. ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ದೈಹಿಕ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬಹುದು ಎಂಬ ಪ್ರೋತ್ಸಾಹದ ಮಾತುಗಳನ್ನಾಡಿ, ಬ್ಯಾಟಿಂಗ್ ನಡೆಸಿದರು. 

ಟಾಸ್ ಗೆದ್ದ ಹಳೆ ಕೊಟ್ಟೂರು ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿತು. ನಿಗದಿತ ೧೦ ಓವರ್‌ಗಳಲ್ಲಿ ೧೩೦ ರನ್ ಪೇರಿಸಿದ ಕರ್ನಾಟಕ ಪತ್ರಕರ್ತರ ಸಂಘದ ಮರುಉತ್ತರವಾಗಿ ಹಳೆ ಕೊಟ್ಟೂರು ತಂಡ ೭ ವಿಕಟ್‌ಗಳ ನಷ್ಟ ಅನುಭವಿಸಿ ೯೨ ರನ್ ಗಳಿಸಲಷ್ಟೇ ಶಕ್ತವಾಯಿತು. ಅಂತಿಮ ಹಣಾಹಣಿಯಲ್ಲಿ ರೋಚಕವಾಗಿತ್ತು. ಅಂತಿಮವಾಗಿ ವಿಜಯದಶಮಿ ಕ್ರಿಕೆಟ್ ಪಂದ್ಯವನ್ನು ಗೆಲ್ಲುವುದರ ಮೂಲಕ ತಾನೇ ಆಯೋಜಿಸಿದ್ದ ಪಂದ್ಯಾಟದಲ್ಲಿ ತಾನೇ ಗೆದ್ದು ವಿಜಯದ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿತು.

ಕೊಟ್ಟೂರಿನ ಇತಿಹಾಸದಲ್ಲಿ ಇದು ಮೊದಲ ಬಾರಿಗೆ ಇಂತಹ ಪಂದ್ಯಾಟದ ಆಯೋಜನೆಯಾಗಿದ್ದು ಇದೇ ಮೊದಲಾಗಿತ್ತು. ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಟ ಎರಡೂ ಪ್ರಶಸ್ತಿಗಳನ್ನು ಗೌಸ್ ರವರಿಗೆ ಬಂದಿತು. ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಕೊಟ್ರೇಶ್ ಸೆಮಿಫೈನಲ್ ಮ್ಯಾಚ್‌ನಲ್ಲಿ ಎರಡು ವಿಕೆಟ್ ಮತ್ತು ಫೈನಲ್ ಮ್ಯಾಚ್‌ನಲ್ಲಿ ರೋಚಕವಾಗಿ ಬೌಲಿಂಗ್ ನಡೆಸಿ, ಮೂರು ಓವರ್‌ಗಳಲ್ಲಿ ಆರು ವಿಕೆಟ್ ಪಡೆದು ಅತ್ಯುತ್ತಮವಾಗಿ ಆಟವಾಡಿದರು.

ಹಿರಿಯ ವಕೀಲರಾದ ಸೋಮಣ್ಣ, ಎಸ್ ಎಂ ಪ್ರಕಾಶ್ ,ಡಿ ಲಿಂಗರಾಜ, ರಾಂಪುರ ರಮೇಶ್, ಬಾವಿಕಟ್ಟೆ ಶಿವಾನಂದ, ಪ್ರಭು, ಹಾಗೂ ವಕೀಲರ ಗುರು,ಆರೋಗ್ಯಾಧಿಕಾರಿಗಳಾದ ಬದ್ಯಾನಾಯ್ಕ, ಹಿರಿಯ ಶಿಕ್ಷಕ ಸಿದ್ರಾಮೇಶ್ವರ, ಬಣಕಾರ ಬಸವರಾಜ, ತಾಲ್ಲೂಕು ಪಂಚಾಯಿತಿ ಎ.ಡಿ. ವಿಜಯಕುಮಾರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪಂದ್ಯಾವಳಿಗಳನ್ನು ವೀಕ್ಷಿಸಿ, ಆಟಗಾರರಿಗೆ ಪ್ರೋತ್ಸಾಹ ತುಂಬಿದರು.  ಶಿರಿಬಿ ಪ್ರಕಾಶ್, ಸುಜಿ, ರಾಘು, ಮಂಜುನಾಥ್, ಕಿಚ್ಚ ಗುರು,ಇನ್ನು ಅನೇಕರು ಉತ್ತಮ ತೀರ್ಪುಗಾರರಿದ್ದರು  ಕ್ರೀಡಾಂಗಣದಲ್ಲಿ ಕಿಕ್ಕಿರಿದ ಜನರಿಗೆ ರಸದೌತಣ ನೀಡಿದರು. ರನ್ನರ್ ಅಪ್ ಹಳೆ ಕೊಟ್ಟೂರು ತಂಡ ಮತ್ತು ಫೈನಲ್‌ನಲ್ಲಿ ಗೆಲುವನ್ನು ಸಾಧಿಸಿದ ಕರ್ನಾಟಕ ಪತ್ರಕರ್ತರ ಸಂಘಕ್ಕೆ ಹಿರಿಯ ಪತ್ರಕರ್ತರು ಕೆ ಎಂ ಚಂದ್ರಶೇಖರ್,ಸರ್ವರು ಅಭಿನಂದನೆ ತಿಳಿಸಿದರು.




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ