ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆ

 

ಮಸ್ಕಿ : ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಯನ್ನು ಅರ್ಥಪೂರ್ಣ ವಾಗಿ ಆಚರಣೆ ಮಾಡಲಾಯಿತು.

ಈ ವೇಳೆ, ಬಿಜೆಪಿ ಮಂಡಲ ಅಧ್ಯಕ್ಷ ಶರಣಬಸವ ಸೊಪ್ಪಿಮಠ ಅವರು ಮಾತನಾಡಿ ಬ್ರಿಟಿಷರಿಗೆ ಸಿಂಹಸ್ವಪ್ನದಂತೆ ಕಾಡಿದ ವೀರ ವನಿತೆ, ಕಿತ್ತೂರು ರಾಣಿ ಚೆನ್ನಮ್ಮ ಸ್ವಾಭಿಮಾನದಿಂದ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ರಣಕಹಳೆಯೂದಿದ ಚೆನ್ನಮ್ಮನವರ ಛಲ, ನಿಷ್ಠೆ, ಧೈರ್ಯ ಹಾಗೂ ಸಾಹಸಗಳು ಕನ್ನಡ ನಾಡಿನ ಸಮಸ್ತ ಮಹಿಳೆಯರಿಗೆ ಸರ್ವಕಾಲಿಕ ಪ್ರೇರಣೆ ಎಂದರು.

ಈ ಸಂದರ್ಭದಲ್ಲಿ,ಪಂಚಮಸಾಲಿ ಸಮಾಜದ ಅಧ್ಯಕ್ಷ ಚಿನ್ನನಗೌಡ ಗೋನಾಳ್, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಪುರಸಭೆ ಸದಸ್ಯ ಚೇತನ್ ಪಾಟೀಲ,ಮಲ್ಲಿಕಾರ್ಜುನ್ ಬ್ಯಾಳಿ, ಮೌನೇಶ್ ನಾಯಕ, ಶಿವರಾಜ್ ಬುಕ್ಕಣ್ಣ, ಅಶೋಕ್ ಠಾಕೂರ್, ಶರಣಬಸವ ವಕೀಲರು, ವೀರಭದ್ರಯ್ಯ ಜಂಗಮರಳ್ಳಿ, ಮಂಜುನಾಥ್ ನಾಯಕವಾಡಿ,

ಹುಲಿಗೇಶ್ ಮುರಾರಿ, ಬಸವರಾಜಪ್ಪ ಮಿಟ್ಟಿಮನಿ, ಶಂಕ್ರಪ್ಪ ಬೈಲುಗುಡ್ಡ, ಸುರೇಶ್ ಪಲ್ಯದ, ಸಂಗನಗೌಡ ಸೇರಿದಂತೆ ಸಮಾಜದ ಹಿರಿಯರು ಯುವಕರು,ಪಕ್ಷದ ಕಾರ್ಯಕರ್ತರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ