ಶಿಬಿರಾರ್ಥಿಗಳಿಗೆ ಉಚಿತ ಕಟಿಂಗ್ ಮಾಡುವ ಮೂಲಕ ಮಾನವೀಯತೆ ಮೆರದ ದೇವರಾಜ ಬಳಗಾನೂರ ತಂಡ
ಮಸ್ಕಿ : ಮೂಲ ಕ್ಷೌರಿಕರಾದ ನಾವುಗಳು ಕೇವಲ ವೃತ್ತಿಯಲ್ಲಿ ಕ್ಷೌರಿಕರಾಗಿರಲಿಲ್ಲ.ಕ್ಷೌರಿಕ ವೃತ್ತಿಯ ಜೊತೆಗೆ ಸಾಮಾನ್ಯ ಗಾಯಗಳಿಗೆ ಗಿಡಮೂಲಿಕೆಯ ಔಷಧ ಹಚ್ಚುವುದು, ದಂತಚಿಕಿತ್ಸೆ, ಶಸ್ತ್ರಚಿಕಿತ್ಸೆಗಳನ್ನು ಮಾಡುವುದು ಹೀಗೆ ಹಲವು ಪಾರಂಪರಿಕ ವೈದ್ಯಪದ್ದತಿಯಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೇವೆ ಎಂದು ದೇವರಾಜ್ ಬಳಗಾನೂರ ರವರು ಹೇಳಿದರು.
ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪ ಆವರಣದಲ್ಲಿ. ಶ್ರೀ ಧರ್ಮಸ್ಥಳ ಮಂಜುನಾಥ 1859 ನೇ ಮಧ್ಯವರ್ಜನ ಶಿಬಿರ ಉದ್ಘಾಟನೆ ಸಮಾರಂಭ ಸಮಿತಿ
ಮಸ್ಕಿ ತಾಲೂಕು ಹಾಗೂ ಪರಮಪೂಜ್ಯ ರಾಜರ್ಷ ಡಾ.ಡಿ ವೀರೇಂದ್ರ ಹೆಗಡೆಯವರ ಕೃಪ ಆಶೀರ್ವಾದದಿಂದ ನಾವು ಶಿಬಿರದ 70 ಜನಕ್ಕೆ ಕಟಿಂಗ್ ಶೇವಿಂಗ್ ಉಚಿತವಾಗಿ ಸೇವಾ ಮನೋಭಾವನೆಯಿಂದ ಮಾಡುತ್ತವೆ.
ನಮ್ಮ ಇತಿಹಾಸ ಸಾರುವ ಈ ದಿನವನ್ನು ನಮಗಾಗಿ ಸಮರ್ಪಿಸಿಕೊಂಡು ಕೇಶವಿನ್ಯಾಸವನ್ನು ಘನತೆ ಗೌರವದಿಂದ ಮಾಡುತ್ತ ನಮ್ಮ ನಮ್ಮ ವೃತ್ತಿಕೌಶಲ್ಯ ವೃತ್ತಿಪ್ರೇಮ, ವೃತ್ತಿಗೌರವ, ವೃತ್ತಿರಕ್ಷಣೆಯ ಜಗತ್ತಿನ ಧ್ವನಿಗೆ ನಾವೂ ಧ್ವನಿಗೂಡಿಸೋಣ ಎಂದು ದೇವರಾಜ ಬಳಗಾನೂರ ರವರು ಹೇಳಿದರು.
ಈ ವೇಳೆ,ಪಂಪಣ್ಣ ಗಬ್ಬೂರು,ಶರಣಪ್ಪ ಉದ್ಬಾಳ್ ವೀರೇಶ್ ಕಟ್ಟಿಮನಿ, ಚಂದ್ರಣ್ಣ ಸಾನಬಾಳ, ದೇವರಾಜ್ ಮಸ್ಕಿ, ಸೇರಿದಂತೆ ಶಿಬಿರಾರ್ಥಿಗಳು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ