ಪೋಸ್ಟ್‌ಗಳು

ಮಾರ್ಚ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

*ಜಲ ಜೀವನ್ ಮಿಷನ್ ಅಡಿಯಲ್ಲಿ ಕಾಮಗಾರಿ ಕಳಪೆ*

ಇಮೇಜ್
ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ. ಆಗ್ರಹ ಕೊಟ್ಟೂರು ತಾಲೂಕಿನ ಕಂದಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಂದಗಲ್ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ನಿರ್ಮಾಣವಾದ ಕಾಮಗಾರಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿದರು  ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸಿದರೂ ಸ್ಥಳೀಯ ಆಡಳಿತದ ನಿರ್ಲಕ್ಷತನದಿಂದ ಕಳಪೆ ಕಾಮಗಾರಿಯಿಂದ ಜನತೆಗೆ ಯೋಜನೆಗಳಿಂದ ವಂಚಿತರಾಗುವಂತಾಗಿದೆ. ಸರ್ಕಾರ , ಜನಪ್ರತಿನಿಧಿಗಳು ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು ಇದನ್ನು ಕೂಡಲೇ ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ. ಆಗ್ರಹಿಸಿದರು .ಸಿಪಿಐ ಕಂದಗಲ್ ಗ್ರಾಮ ಘಟಕ ಅಧ್ಯಕ್ಷ ತಿಮ್ಮಣ್ಣ , ಸಿಪಿಐ ತಾಲೂಕು ಕಾರ್ಯದರ್ಶಿ ಕೆ ರೇಣುಕಮ್ಮ ಪತ್ರಿಕೆಗೆ ತಿಳಿಸಿದರು 

ಕಂಪ್ಲಿ-ಕೋಟೆ ಚೆಕ್ ಪೋಸ್ಟ್ ನಲ್ಲಿ 8 ಲಕ್ಷ 23 ಸಾವಿರ ರೂ ಹಣವನ್ನು ವಶಕ್ಕೆ ಪಡೆದ ಕಂಪ್ಲಿ ಪೊಲೀಸರು

ಇಮೇಜ್
ಕಂಪ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮಾದರಿ ನೀತಿ ಸಂಹಿತೆಯು ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದು, 91-ಕಂಪ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಂಪ್ಲಿಕೋಟೆ ಚೆಕ್ ಪೋಸ್ಟ್ ನಲ್ಲಿ ಶುಕ್ರವಾರ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಅನಧಿಕೃತವಾಗಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 8ಲಕ್ಷ23 ಸಾವಿರ ರೂಪಾಯಿ ಹಣವನ್ನು ಪೊಲೀಸರು ವಶ ಪಡಿಸಿಕೊಂಡರು. ಕಂಪ್ಲಿಯಿಂದ ಗಂಗಾವತಿ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮೂರು ಬೈಕಗಳಲ್ಲಿ ಮೂರು ಜನರ ಬ್ಯಾಗಗಳನ್ನು ತಪಾಸಣೆ ನಡೆಸುವ ಸಂದರ್ಭದಲ್ಲಿ ಒಂದು ಬ್ಯಾಗನ್ನಲ್ಲಿ 6 ಲಕ್ಷ ಐದು ಸಾವಿರ ಇನ್ನೋರ್ವನ ಬ್ಯಾಗನ್ನಲ್ಲಿ 1 ಲಕ್ಷ ರೂ ಹಾಗೂ ಮತ್ತೊಬ್ಬನ ಬ್ಯಾಗನಲ್ಲಿ 1ಲಕ್ಷ 18 ಸಾವಿರ ರೂಪಾಯಿ ಒಟ್ಟಾರೆ ಮೂರು ಜನ ವ್ಯಕ್ತಿಗಳಿಂದ 8ಲಕ್ಷ 23 ಸಾವಿರ ರೂಪಾಯಿಗಳು ಅನಧಿಕೃತವಾಗಿ ಸಾಗಿಸುತ್ತಿದ್ದ ಹಣ ಹಾಗೂ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿರುವ ಲೋಕಸಭಾ ಚುನಾವಣಾ ಎಸ್.ಎಸ್.ಟಿ ತಂಡ ಹಾಗೂ ಕಂಪ್ಲಿ ಪೊಲೀಸ್ ಠಾಣೆಯ 91-ವಿಧಾನಸಭಾ ಕ್ಷೇತ್ರದ ನೋಡಲ್ ಅಧಿಕಾರಿ ಪಿ.ಐ ಪ್ರಕಾಶ ಮಾಳಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕಂಪ್ಲಿ ಪೊಲೀಸ್ ಠಾಣೆಯ ಪಿ.ಐ ಪ್ರಕಾಶ ಮಾಳಿ,ಪಿಎಸ್ಐ ಎನ್.ಶೇಷಾಚಲನಾಯ್ಡು, ಎಸ್.ಎಸ್.ಟಿ ತಂಡದ ಸಿಬ್ಬಂದಿ ಶ್ರೀಕಾಂತ,ಪೊಲೀಸ್ ಸಿಬ್ಬಂದಿಗಳಾದ ಬಸಪ್ಪ, ಈರಪ್ಪದುದುಮಿ ಸೇರಿದಂತೆ ಅನೇಕರಿದ್ದರು.

*ಅನ್ನ ದಾಸೋಹಕ್ಕೆ ಭಕ್ತಿಪೂರ್ವಕವಾಗಿ ದೇಣಿಗೆ*

ಇಮೇಜ್
ಕೊಟ್ಟೂರು : ಪಟ್ಟಣದ ಆರಾಧ್ಯ ದೈವ ಶ್ರೀ ಗುರುಕೊಟ್ಟೂರೇಶ್ವರ ಕೃಪೆಯು ದೊಡ್ಡದು ಸಾವಿರಾರು ಭಕ್ತರು ಕೊಡುಗೆ ದಾನಿಗಳಾಗಿ ಭಕ್ತಿ ಪೂರ್ವಕವಾಗಿ ದೇಣಿಗೆ ರೂಪದಲ್ಲಿ ಕೊಡುವಂತಹ ಭಕ್ತರು ಇದ್ದಾರೆ . ಕಟಾಗಿಹಳ್ಳಿ ಮಠದ ವಂಶಸ್ಥರಾದ ವಾಗೀಶ್ ಕಟಾಗಿಹಳ್ಳಿ ಮಠ್ ಪತ್ನಿ ಸುಮನ್ ವಾಗೀಶ್, ಮಕ್ಕಳು ಸೋಹನ್ & ಧವನ್. ಅವರು ಅನ್ನ ದಾಸೋಹಕ್ಕೆ ದೇಣಿಗೆ ರೂಪದಲ್ಲಿ  55555/-.ರೂ ಗಳನ್ನು ಸಲ್ಲಿಸಿದರು. ದೇವಸ್ಥಾನದ  ಇಓ  ಶಾಂತಮ್ಮ  ಮತ್ತು ಧರ್ಮಕರ್ತರು ಎಂ. ಕೆ. ಶೇಖರಯ್ಯ  ಉಪಸ್ಥಿತರಿದ್ದರು.

*ತಳವಾರ ಅಕ್ಷತಾ ಪ್ರಧಾನ ಕಾರ್ಯದರ್ಶಿ ಆಯ್ಕೆ*

ಇಮೇಜ್
ಕೊಟ್ಟೂರು ತಾಲೂಕಿನ ತಳವಾರ ಅಕ್ಷತಾ ತಂದೆ ಟಿ.ಚಂದ್ರಪ್ಪ.ಕೆ ಗಜಾಪುರ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆ ಮಾಡಿದ್ದಾರೆ. ಎನ್ ಎಸ್ ಯು ಐ. ಯ ಜಿಲ್ಲಾ ಅಧ್ಯಕ್ಷರಾದ ಜಿ ತಿಪ್ಪೇಸ್ವಾಮಿ ಗಚ್ಚಿನಮನೆ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಭಾರತದ ರಾಷ್ಟ್ರೀಯ ವಿದ್ಯಾರ್ಥಿಗಳ ಪರ ಜಯಕ್ಕಾಗಿ ಹೋರಾಡುವೆ

ಪಂಚಾಯತಿ ಕಾರ್ಯಾಲಯದಲ್ಲಿ ನೀತಿ ಸಂಹಿತೆ ಉಲ್ಲಂಘನೆ : ಕರವೇ ಮನವಿ

ಇಮೇಜ್
ಮಸ್ಕಿ : ತಾಲೂಕಿನ ಮಾರಲ ದಿನ್ನಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ 2024 ನೇ ಸಾಲಿನ ಸಾರ್ವತ್ರಿಕ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಇದ್ದರು,ನಿಯಮ ಮೀರಿ ಕಾರ್ಯಾಲಯದಲ್ಲಿ ಕೇಂದ್ರ ಸರಕಾರದ ಯೋಜನೆಗಳ ವಿವರ ಹೊಂದಿದ ಹಾಗೂ ಪ್ರಧಾನಿ ನರೇಂದ್ರ ಮೋದಿ ರವರ ಭಾವಚಿತ್ರ ಇರುವ ಕ್ಯಾಲೆಂಡರ್ ಅನ್ನು ನೇತು ಹಾಕಲಾಗಿದೆ.ಆದ್ದರಿಂದ ಶಿಸ್ತು ಕಾನೂನೂ ಕ್ರಮ ಜರುಗಿಸಿ ಎಂದು ಕರವೇ ನಾರಾಯಣಗೌಡ ಬಣ ಒತ್ತಾಯಿಸಿದೆ. 2024 ನೇ ಸಾಲಿನ ಸಾರ್ವತ್ರಿಕ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಇದ್ದರು,ನಿಯಮ ಮೀರಿ ಕಾರ್ಯಾಲಯದಲ್ಲಿ ಕೇಂದ್ರ ಸರಕಾರದ ಯೋಜನೆಗಳ ವಿವರ ಹೊಂದಿದ ಹಾಗೂ ಪ್ರಧಾನಿ ನರೇಂದ್ರ ಮೋದಿ ರವರ ಭಾವಚಿತ್ರ ಇರುವ ಕ್ಯಾಲೆಂಡರ್ ಅನ್ನು ನೇತು ಹಾಕಲಾಗಿದೆ.ಆದ್ದರಿಂದ ಸಂಭಂದಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕಾನೂನೂ ಕ್ರಮ ಜರುಗಿಸಬೇಕು ಎಂದು ಹೋಬಳಿ ಘಟಕದ ಅಧ್ಯಕ್ಷ ರಾದ ಅಮರೇಶ್ ಸಾಲಿ ಇವರ ದೂರಿನ ಮೇರೆಗೆ ಕರವೇ ನಾರಾಯಣಗೌಡ ಬಣ ತಾಲೂಕ ಸಂಘಟನೆಯ ತಾಲೂಕ ಅಧ್ಯಕ್ಷರಾದ ದುರ್ಗರಾಜ್ ವಟಗಲ್ ಸಹಾಯಕ ಚುಣಾವಣೆ ಅಧಿಕಾರಿ ಇವರಲ್ಲಿ ಮನವಿಪತ್ರ ನೀಡುವ ಮೂಲಕ ಒತ್ತಾಯಿಸಿದ್ದಾರೆ

ಪತ್ರಕರ್ತ ಶ್ರೀನಿವಾಸ್ ಮಧುಶ್ರೀ ಇವರಿಗೆ"ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿ "ನೀಡಿ ಗೌರವಿಸಲಾಯಿತು.

ಇಮೇಜ್
ಲಿಂಗಸಗೂರು-ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಎರಡನೇ ರಾಜ್ಯ ಪತ್ರಕರ್ತರ ಸಮ್ಮೇಳನ ಬೆಂಗಳೂರಿನ ಎಂ ವಿ ಎಂ ಕನ್ವೆನ್ ಷನ್ ಹಾಲ್ ನೆಲಮಂಗಲದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಶ್ರೀನಿವಾಸ್ ಮಧುಶ್ರೀ ಹಟ್ಟಿ ಚಿನ್ನದ ಗಣಿ ವ್ಯವಸ್ಥಾಪಕರು ಆರ್ ಟಿ ವಿ ಕನ್ನಡ ಚಿನ್ನದ ನಾಡಿನ ಕನ್ನಡಿಗ ಧ್ವನಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಲಿಂಗಸಗೂರು ತಾಲೂಕಾಧ್ಯಕ್ಷರು.ಮತ್ತು ಉದಯ ಕಾಲ ಕನ್ನಡ ದಿನ ಪತ್ರಿಕೆಯ ಹಟ್ಟಿ ವರದಿಗಾರರಾದ ಇವರನ್ನು ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆಯನ್ನು ಗುರುತಿಸಿ " ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿ " ನೀಡಿ ಗೌರವಿಸಲಾಯಿತು.  "ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿ " ಪಡೆದ ಶ್ರೀನಿವಾಸ್ ಮಧುಶ್ರೀ ಹಟ್ಟಿ ಚಿನ್ನದ ಗಣಿ ಇವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಪತ್ರಕರ್ತರಾದ ವಿಘ್ನೇಶ್ ಹಿರೇನಗನೂರು.ಯೋಗಪ್ಪ ದೊಡ್ಮನಿ, ಮೌನೇಶ್ ಕಾಕಾ ನಗರ,ರೋಹನ್ ಎಸ್, ರಾಯಪ್ಪ ಬಳಗಾನೂರು. ಮೌನದ್ದೀನ್ ಬೂದಿನಾಳ.ಶಿವಕುಮಾರ್ ನಾಯಕ್. ಹಾಗೂ ಲಿಂಗಸಗೂರು ತಾಲೂಕು ಪತ್ರಕರ್ತರ ಧ್ವನಿ ಸಂಘಟನೆಯ ಎಲ್ಲಾ ಪದಾಧಿಕಾರಿಗಳು "ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿ" ಪಡೆದ ಶ್ರೀನಿವಾಸ್ ಮಧುಶ್ರೀ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಬಿಜೆಪಿಗರ ಹೋರಾಟ ಜನರಿಗೆ ಹಾಸ್ಯಾಸ್ಪದವಾಗಿದೆ ಅಭಿವೃದ್ಧಿಗಾಗಿ ಹೋರಾಟ ಮಾಡಿ, ಸಣ್ಣ ವಿಚಾರಕಲ್ಲ; ಶರಣೆಗೌಡ ಮಾ.ಪಾ

ಇಮೇಜ್
ವರದಿ - ಮಂಜುನಾಥ್ ಕೋಳೂರು ಕೊಪ್ಪಳ  ಕೊಪ್ಪಳ ಕಾರಟಗಿ : -ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠವಾಗಿಲ್ಲ, ಹೇಳಿಕೊಳ್ಳುವಂತಹ ನಾಯಕರು ಇಲ್ಲ, ಕಳೆದ ಹತ್ತು ವರ್ಷದಲ್ಲಿ ಬಿಜೆಪಿಯ ಅಭಿವೃದ್ಧಿ ಕೆಲಸ ಶೂನ್ಯವಾಗಿದೆ. ಕ್ಷೇತ್ರದಲ್ಲಿ ಯಾವುದಾದರೂ ಅಭಿವೃದ್ಧಿ ಕೆಲಸ ಮಾಡುವಂತೆ ಹೋರಾಟ ಮಾಡಿ ಅದನ್ನು ಬಿಟ್ಟು ಸಣ್ಣಪುಟ್ಟ ವಿಚಾರಕ್ಕೆ ಹೋರಾಟ ಮಾಡಬೇಡಿ, ನಿಮ್ಮ ಹೋರಾಟ ಜನರಿಗೆ ಹಾಸ್ಯಾಸ್ಪದವಾಗುತ್ತದೆ ಎಂದು ಕಾರಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೆಗೌಡ ಮಾಲಿಪಾಟೀಲ್ ಹೇಳಿದರು.  ಕಾರಟಗಿ ಪಟ್ಟಣದ ಸಚಿವ ಶಿವರಾಜ ಎಸ್ ತಂಗಡಗಿಯವರ ಗೃಹ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರಟಗಿ ಮಂಡಳದ ಬಿಜೆಪಿ ಪದಾಧಿಕಾರಿಗಳು ಕಾರ್ಯಕರ್ತರಿಗೆ ತಿಳಿ ಹೇಳುತ್ತೆನೆ, ಕಳೆದ ಹತ್ತು ವರ್ಷಗಳಿಂದ ಜನಸಾಮಾನ್ಯನಿಗೆ ತಲುಪುವ ಒಂದೇ ಒಂದು ಅಭಿವೃದ್ಧಿ ಯೋಜನೆಯನ್ನು ಕೇಂದ್ರ ಸರ್ಕಾರ ಮಾಡಿಲ್ಲ, ಆದ್ದರಿಂದ ಜನಸಾಮಾನ್ಯರಿಗೆ ಅನುಕೂಲಕ್ಕೆ ಎರಡು ಕೋಟಿ ಉದ್ಯೋಗ ನೀಡುತ್ತೇವೆ ಎಂದು ಭರವಸೆ ನೀಡಿ ಆಡಳಿತಕ್ಕೆ ಬಂದ ಮೋದಿ ಸರ್ಕಾರ ಕೆಲಸ ಮಾಡಲ್ಲ, ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿ ಮೋದಿ ಮೋದಿ ಎನ್ನುವ ಯುವಕರಿಗೆ ಕಪಾಳ ಮೋಕ್ಷ ಮಾಡಬೇಕು ಎಂದಿದ್ದಾರೆ. ಇದರ ಅರ್ಥ ತಿಳಿ ಹೇಳುವ ಕೆಲಸ ಮಾಡಬೇಕು. ಬಿಜೆಪಿ ವೈಫಲ್ಯಕ್ಕೆ ಛೀಮಾರಿ ಹಾಕುವ ಉದ್ದೇಶ ಮಾತಿನಲ್ಲಿದೆ. ಅಲ್ಲದೆ ಕಳೆದ ಚುನಾವಣೆಯಲ್ಲಿ ಕ್ಷೇತ್ರದ ವಿವಿಧಡೆ ಮತ ಕೇಳಲು ಹೋಗಿದ್ದ ಬಿಜೆಪಿಗೆ

ಯುವಕರು ಮೋದಿ ಎಂದರೆ ಕಪಾಳಕ್ಕೆ ಹೊಡೆಯಿರಿ ಸಚಿವ ತಂಗಡಗಿ ಹೇಳಿಕೆಯ ವಿರುದ್ಧ ಬಿಜೆಪಿಗರಿಂದ ಪ್ರತಿಭಟನೆ

ಇಮೇಜ್
 ವರದಿ- ಮಂಜುನಾಥ್ ಕೋಳೂರು ಕೊಪ್ಪಳ   ಕೊಪ್ಪಳ : - ದೇಶದ ಪ್ರಧಾನಿಯಾದ ನರೇಂದ್ರ ಮೋದಿಯವರಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್ ತಂಗಡಗಿ ಅವಹೇಳನಕಾರಿಯಾಗಿ ಹೇಳಿಕೆಯನ್ನು ನೀಡಿದ್ದಾರೆ ಎಂದು ಅವರ ಹೇಳಿಕೆಯನ್ನು ಖಂಡಿಸಿ, ಕೊಪ್ಪಳ ಜಿಲ್ಲಾ ಯುವ ಮೋರ್ಚಾ ಹಾಗೂ ಕಾರಟಗಿ-ಕನಕಗಿರಿ ಮಂಡಲ ಯುವ ಮೋರ್ಚಾ ಸಹಯೋಗದೊಂದಿಗೆ ಕಾರಟಗಿ ಪಟ್ಟಣದ ಬಿಜೆಪಿ ಕಾರ್ಯಾಲಯದಿಂದ ಕನಕದಾಸ ವೃತ್ತದವರೆಗೂ ತೆರಳಿ ಪ್ರತಿಭಟನೆ ಮಾಡಿದರು. ಕನಕಗಿರಿ ವಿಧಾನಸಭಾ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಿವರಾಜ ಎಸ್ ತಂಗಡಗಿ ಅವರು ವಿದ್ಯಾರ್ಥಿಗಳು ಯುವಕರು ಮೋದಿ ಅಂತ ಕೂಗಿದರೆ ಕಪಾಳಕ್ಕೆ ಒಡೆಯಿರಿ ಎಂದು ಹೇಳಿಕೆ ನೀಡುವ ಮೂಲಕ ದೇಶದ ಪ್ರಧಾನಿಗೆ ಅವಮಾನ ಮಾಡುವುದು ಸೂಕ್ತವಲ್ಲ ಇವರು ತಮ್ಮ ಹೇಳಿಕೆಗೆ ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಜಿಲ್ಲಾ ಯುವ ಮೋರ್ಚಾವತಿಯಿಂದ ಬೃಹತ್ ಪ್ರತಿಭಟನೆ ಮಾಡಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ನಾಗರಾಜ ಬಿಲ್ಗಾರ್, ಜಡೆಯಪ್ಪ ಮುಕ್ಕುಂದಿ, ಶಿವಶರಣೆಗೌಡ, ಅಮರೇಶ ರೈತನಗರ, ಮೌನೇಶ ದಢೇಸುಗೂರು, ಮಂಜುನಾಥ ಮಸ್ಕಿ, ಹೊಸಕೇರಾ ಮಂಜುನಾಥ, ರವಿಸಿಂಗ್ ವಕೀಲರು ಯರಡೋಣಾ, ಪಂಪನಗೌಡ ಶರಣಬಸವರಡ್ಡಿ, ವೆಂಕಟೇಶ ಕನಕಗಿರಿ, ದೇವರಾಜ್ ಜುರಟಗಿ, ಸುರೇಶ್ ರಾಥೋಡ್, ಚಂದ್ರಶೇಖರಗೌಡ, ಬಸವರಾಜ ಎತ್ತಿನಮನಿ, ವಿರುಪಾಕ್ಷಿ ಗುಂಡೂರು, ಅಮರೇಶ್ ಕಟಾಬ್ಲಿ, ಮಹಿಳಾ ಘಟಕದ ಮುಖಂಡರಾದ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ : ಕಲಾವಿದರ ಆರೋಪ

ಇಮೇಜ್
ವರದಿ - ಮಂಜುನಾಥ್ ಕೋಳೂರು ಕೊಪ್ಪಳ ಕೊಪ್ಪಳ : ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮೊರಮನಳ್ಳಿ ಜಿಲ್ಲೆಗೆ ಆಗಮಿಸಿದ ದಿನಗಳಿಂದ ಅಂದರೆ ೨೦೨೧ ರಿಂದ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿರುತ್ತಾರೆ ಮೂಲ ಕಲಾವಿಧರಿಗೆ ಸಂಪೂರ್ಣವಾಗಿ ಅನ್ಯಾಯವಾಗುತ್ತಿದ್ದು ಮತ್ತು ಇವರು ತಮಗೆ ಅನುಕೂಲವಾಗುವ ಕೆಲವು ಕಲಾವಿದರನ್ನು ಹಿಡಿದುಕೊಂಡು ಇಲಾಖೆಗೆ ಬಂದ ಹಣವನ್ನು ದೋಚುತ್ತಿದ್ದಾರೆ ಇವರ ಮೇಲೆ ತನಿಖೆಗೆ ಆದೇಶಿಸಬೇಕು ಮತ್ತು ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಎಂದು ಕಲಾವಿದರಾದ ಬಾಷು ಹಿರೇಮನಿ,ನಾಗರಾಜು ಶ್ಯಾವಿ,ಅಲ್ಲಾಬಕ್ಷಿ ವಾಲಿಕಾರ ಮತ್ತೀತರರು ಆಗ್ರಹಿಸಿದ್ದಾರೆ.  ಅವರು ಮಂಗಳವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ೨೦೨೪ ರಲ್ಲಿ ಕನಕಗಿರಿ ಉತ್ಸವ,ಆನೆಗುಂದಿ ಉತ್ಸವದಲ್ಲಿ ಕುಷ್ಟಗಿ ತಾಲೂಕಿನ ಒಬ್ಬ ಕಲಾವಿಧರ ಕುಟುಂಬಕ್ಕೆ ೩ ಕಾರ್ಯಕ್ರಮಗಳನ್ನು ಎರಡೂ ವೇದಿಕೆಗಳಲ್ಲಿ ನೀಡಿರುತ್ತಾರೆ ಮತ್ತು ಗಂಗಾವತಿಯ ಅನೇಕ ಕುಟುಂಬಗಳಿಗೆ ಒಂದು ಕುಟುಂಬಕ್ಕೆ ೩ ಕಾರ್ಯಕ್ರಮಗಳಂತೆ ೫ ಕುಟುಂಬಗಳಿಗೆ ಕಾರ್ಯಕ್ರಮಗಳನ್ನು ನೀಡಿರುತ್ತಾರೆ,೨೦೨೩-೨೪ ರ ಪ್ರಾಯೋಜಿತ ಕಾರ್ಯಕ್ರಮಗಳನ್ನು ತಮಗೆ ಅನುಕೂಲವಾಗುವ ಕಲಾವಿಧರಿಗೆ ಕಾರ್ಯಕ್ರಮಗಳನ್ನು ನೀಡಿ ಕೇವಲ ಸೆಪ್ಟೆಂಬರ್, ಅಕ್ಟೋಬರ್ ಎರಡು ತಿಂಗಳಲ್ಲಿ ೧೧ ಲಕ್ಷ ರೂಪಾಯಿ ಹಣವನ್ನು ಬಳಸಿರುತ್ತಾರೆ. ನವೆಂಬರ ಪ್ರಾಯೋಜಿತ ಕಾರ್ಯಕ್ರಮಗಳನ್ನು ಮಾಡಿದ ಕಲ

ಸಿದ್ದಾಪುರ ಗ್ರಾಮದ ನರೇಗಾ ಕೂಲಿಕಾರರಿಗೆ ಮತದಾನ ಜಾಗೃತಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಿ: ಸೋಮನಾಥ ನಾಯಕ

ಇಮೇಜ್
ವರದಿ - ಮಂಜುನಾಥ್ ಕೋಳೂರು, ಕೊಪ್ಪಳ ಕೊಪ್ಪಳ : - ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ತಾಲೂಕಾ ಪಂಚಾಯತ ಐಇಸಿ ಸಂಯೋಜಕ ಸೋಮನಾಥ ನಾಯಕ ಅವರು ಹೇಳಿದರು.  ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ನರೇಗಾ ಕೂಲಿಕಾರರಿಗೆ ಗ್ರಾಮದ ರೈತರ ಹೊಲದಲ್ಲಿ ನಾಲಾ ಹೂಳೆತ್ತುವ ಕೆಲಸ ನೀಡಲಾಗಿದ್ದು, ಕಾಮಗಾರಿ ಸ್ಥಳದಲ್ಲಿ ಆಯೋಜಿಸಲಾದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇಲ್ಲಿ ಎಲ್ಲರಿಗೂ ಮತದಾನದ ಹಕ್ಕಿದೆ. ದೇಶದ ಭವಿಷ್ಯಕ್ಕಾಗಿ ನಿಮ್ಮದೊಂದು ಮತ ಅತ್ಯಅಮೂಲ್ಯವಾದ್ದು, ದೇಶದ ಸುಭದ್ರ ಭವಿಷ್ಯಕ್ಕಾಗಿ ಪ್ರತಿಯೊಬ್ಬರು ತಪ್ಪದೇ ಮತದಾನ ಚಲಾಯಿಸಿ ಪ್ರಜಾಪ್ರಭುತ್ವ ಗೆಲ್ಲಿಸಿ. ಮತದಾರರು ಯಾವುದೇ ಆಸೆ, ಆಮೀಷಕ್ಕೆ ಒಳಗಾಗದೆ ನಿಮ್ಮ ಮತದಾನ ಹಕ್ಕು ಚಲಾಯಿಸಿ ಶೇ.100 ರಷ್ಟು ಮತದಾನದ ಪ್ರಗತಿ ಸಾಧಿಸಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು. ನಂತರ ಮತದಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.  *ವಲಸೆ ಯಾಕ್ರಿ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನ:* ಏಪ್ರಿಲ್ 1 ರಿಂದ ಮೇ ಅಂತ್ಯದವರೆಗೆ ನರೇಗಾ ಯೋಜನೆಯಡಿ ಮಹಿಳೆಯರು, ವಿಶೇಷ ಚೇತನರು, ಲಿಂಗತ್ವ ಅಲ್ಪ ಸಂಖ್ಯಾತರು, ದುರ್ಬಲವರ್ಗದ ಕುಟುಂಬದವರು ಹಾಗೂ ಎಲ್ಲಾ ನೊಂದಾಯಿತ ಕೂಲಿಕಾರರಿಗೆ ನಿರಂತರವಾಗಿ ಕೆಲಸ ಒದಗಿಸಲಾಗುವುದು. ದಯವಿಟ್ಟು ಯಾರು ವಲಸೆ ಹೋಗಬಾರದು ನಿಮ್ಮೂರ

ರಾಜಶೇಖರ ಹಿಟ್ನಾಳ ಅವರಿಂದ ಬಿರುಸಿನ ಪ್ರಚಾರ

ಇಮೇಜ್
   ವರದಿ- ಮಂಜುನಾಥ್ ಕೋಳೂರು ಕೊಪ್ಪಳ  ಕೊಪ್ಪಳ:- ಲೋಕಸಭಾ ಚುನಾವಣೆ-2024ರ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರು ಇಂದು ಕುಷ್ಟಗಿ ವಿಧಾನಸಭಾ ಕ್ಷೇತ್ರ ದ ಶ್ರೀ ಅಮರನಾಥೇಶ್ವರ ಮಹಾದೇವ ಮಠದ ಶ್ರೀ ಸಹದೇವಾನಂದ ಗಿರಿ ನಾಗಸಾಧುಗಳನ್ನು ಭೇಟಿಯಾಗಿ ಕ್ಷೇತ್ರದ ಕುರಿತು ಚರ್ಚಿಸಿದರು.  ಅಮರೇಗೌಡ ಬಯ್ಯಾಪುರ ರವರ ಪುತ್ರರಾದ ದೊಡ್ಡ ಬಸವರಾಜ್, ಮಾಲತಿ ನಾಯಕ್, ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ, ಲಾಡ್ಲೆ ಮಷಾಕ್ ದೋಟಿಹಾಳ್, ವಸಂತ ಮೇಲಿನಮನೆ, ಉಮೇಶ್ ಮಂಗಳೂರು, ಮಾನಪ್ಪ ತಳವಾರ, ಮಾಂತೇಶ್ ಬಂಡೇರ್, ಮಾಂತೇಶ ಅಗಸಿಮುಂದಿನ, ಅಮರೇಗೌಡ ವಕೀಲರು, ತಿಪ್ಪಣ್ಣ ವಕೀಲರ,ು ಹುಸೇನ್ ಸಾಬ್ ನದಾಪ್, ಸಂಗಪ್ಪ ಬಿಜ್ಕಲ್, ಶಾರದ ಕಟ್ಟಮನಿ, ಬಸವರಾಜ ವರಪೇಟೆ, ಶಂಕರಗೌಡ ಇನ್ನೂ ಮುಂತಾದ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಇದ್ದರು.

ಮೌಲ್ಯಮಾಪನ ಕೇಂದ್ರದಲ್ಲಿ ಹೃದಯಾಘಾತದಿಂದ ಉಪನ್ಯಾಸಕ ಹೃದಯವಂತ ಶಂಕರ ಗೌಡ ಪಾಟೀಲ್ ನಿಧನ

ಇಮೇಜ್
ಮಸ್ಕಿ : ದ್ವಿತೀಯ ಪಿಯು ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು ಹೋಗಿದ್ದ ಉಪನ್ಯಾಸಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬುಧವಾರ ಸಂಭವಿಸಿದೆ. ಉಪನ್ಯಾಸಕ ಶಂಕರಗೌಡ (42) ಮೃತರು. ಲಿಂಗಸೂಗೂರು ತಾಲುಕು ಕರಡಕಲ್ ಗ್ರಾಮದ ನಿವಾಸಿಯಾಗಿದ್ದ ಮಸ್ಕಿ ತಾಲ್ಲೂಕಿನ ಸರಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾಗಿದ್ದ  ಶಂಕರಗೌಡ ಅವರು, ಮಸ್ಕಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಳ್ಳಾರಿ ನಗರದ ಸಂತಜಾನ್ ಪಿಯು ಕಾಲೇಜಿನಲ್ಲಿ ಇಂದಿನಿಂದ ಆರಂಭವಾಗಿದ್ದ ದ್ವಿತೀಯ ಪಿಯು ಸಮಾಜಶಾಸ್ತ್ರ ಉತ್ತರ ಪತ್ರಿಕೆಯ ಮೌಲ್ಯಮಾಪನಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಬಳ್ಳಾರಿಗೆ ಹೋಗಿದ್ದರು. ಸಂತಜಾನ್ ಕಾಲೇಜಿನಲ್ಲಿ ಬೆಳಗ್ಗೆ ರಿಪೋರ್ಟ್ ಮಾಡಿಕೊಂಡಿದ್ದ ಉಪನ್ಯಾಸಕ ಶಂಕರಗೌಡ, 12 ಗಂಟೆ ಸುಮಾರಿಗೆ ಉತ್ತರ ಪತ್ರಿಕೆಗಳ ಮೌಲ್ಯಮಾಪನಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಸ್ವಲ್ಪ ಹೊತ್ತಿಗೆ ಕೇಂದ್ರದಲ್ಲೇ ಹೃದಯಾಘಾತವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಸಿರುಗುಪ್ಪ ರಸ್ತೆಯಲ್ಲಿನ ಬಳ್ಳಾರಿ ಹೆಲ್ತ್ ಸೆಂಟರ್ ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರೊಳಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ ಎಂದ ಡಿಡಿಪಿಯು ಪಾಲಾಕ್ಷ ತಿಳಿಸಿದ್ದಾರೆ ಇನ್ನೂ ಸುದ್ದಿ ತಿಳಿದ ಮಸ್ಕಿ ಕಾಲೇಜ್ ಆವರಣದಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಅಗಲಿದ ಶಿ

ಕಳಪೆ ಮಟ್ಟದ ರಸ್ತೆ ಕಾಮಗಾರಿ ತನಿಖೆಗೆ ಬಾಲಸ್ವಾಮಿ ಜಿನ್ನಾಪುರ್ ಆಗ್ರಹ

ಇಮೇಜ್
ಮಸ್ಕಿ: ತಾಲೂಕಿನ ಬಳಗಾನೂರು ಹೋಬಳಿಯ,ನಾಗರೆಡ್ಡಿ ಕ್ಯಾಂಪ್ ನಿಂದ ಜವಳಗೇರಾ ಸಂಪರ್ಕ ಕಲ್ಪಿಸುವ ರಸ್ತೆವರಗೆ ತುಂಗಭದ್ರಾ ಅಚ್ಚು ಕಟ್ಟು ಪ್ರದೇಶ ಕಾಡ ಯೋಜನೆಯಡಿಯಲ್ಲಿ 17 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ 1.75ಕಿ.ಮಿ. ಮೆಟ್ಲಿಂಗ್ ರಸ್ತೆ ಕಾಮಗಾರಿ ಕಳಪೆ ಮಟ್ಟದ್ದಾಗಿದ್ದು ಕೂಡಲೇ ಸಂಬಂಧಿತ ಅಧಿಕಾರಿಗಳು ಪರಿಶೀಲಿಸಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ಬಾಲಸ್ವಾಮಿ ಜಿನ್ನಾಪೂರ ರವರು ತುಂಗಾಭದ್ರ ಕಾಡಾ ಇಲಾಖೆ ಅಧಿಕಾರಿಗಳಿಗೆ ಬರೆದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಸರಕಾರದಿಂದ ಕೈಗೊಂಡ ಮೆಟ್ಲಿಂಗ್ ರಸ್ತೆ ನಿರ್ಮಾಣ ಹಂತದಲ್ಲೇ ಸಂಪೂರ್ಣ ಕಳಪೆ ಮಟ್ಟದ್ದಾಗಿದೆ. ರಸ್ತೆಗೆ ಮಣ್ಣು, ಒಂದಿಷ್ಟು ಜಲ್ಲಿ ಕಲ್ಲು ಹಾಕಿ ರಸ್ತೆ ಕೆಲಸ ನಡೆಯುತ್ತಿದೆ.ಕಳಪೆ ಮಟ್ಟದ ಮರಮ ಹಾಕಿ ಕೆಲಸ ನಿರ್ವಹಿಸಿದ್ದಾರೆ. ಕಾಮಗಾರಿ ಪ್ರಾರಂಭಕ್ಕೂ ಮುನ್ನ ನಾಮಫಲಕ ಹಾಕದೆ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ, ರಸ್ತೆಗೆ ಮರಮ ಗುಣಮಟ್ಟದ್ದು ತಪಾಸಣೆ ಮಾಡದೆ ಗುತ್ತೇದಾರ ತನ್ನ ಮನಸ್ಸು ಇಚ್ಛೆಯಂತೆ ಕೆಲಸ ನಿರ್ವಹಿಸುತ್ತಿದ್ದಾನೆ. ಈ ಕುರಿತು ಸಂಬಂಧಿತ ಗುತ್ತಿಗೆದಾರರ ಗಮನಕ್ಕೆ ತಂದರೂ ಗುಣಮಟ್ಟದ ಕಾಮಗಾರಿ ಕೈಗೊಳ್ಳುತ್ತಿಲ್ಲ. ಹಾಗೂ  ಕೂಡಲೇ ಸಂಬಂಧಿತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಾಮಗಾರಿ ಪರಿಶೀಲಿಸಿ ಸಂಬಂಧ ಪಟ್ಟ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಂಡು ಕಾಮಗಾರಿಯ ಬಿಲ್ಲನ್ನು ತಡೆಹಿಡಿಬೇಕು, ಮತ್ತು ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋ

ಕುಡಿಯುವ ನೀರಿಗಾಗಿ ಕಂದಗಲ್ಲು ಗ್ರಾಮ ಪಂಚಾಯಿತಿ ಗ್ರಾಮಸ್ಥರು ಪರದಾಟ

ಇಮೇಜ್
ಕೊಟ್ಟೂರು: ತಾಲ್ಲೂಕಿನ ಕಂದಗಲ್ಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಗ್ರಾಮಸ್ಥರಿಗೆ ಕುಡಿಯುವ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ಜನಪ್ರತಿನಿಧಿಗಳು ಹಾಗೂ ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಜನರು ಕುಡಿಯುವ ನೀರಿಗಾಗಿ ಸರತಿ ಸಾಲಿನಲ್ಲಿ ನಿಂತು ನೀರು ಹಿಡಯಬೇಕಾಗಿದೆ. ಗ್ರಾಮದ ಜನತೆ ಕೆಲಸಗಳನ್ನು ಬಿಟ್ಟು ನೀರು ಹಿಡಿಯುವಂತಹ ಪರಿಸ್ಥಿತಿ ದಿನ ನಿತ್ಯ ಕಾಣಬಹುದಾಗಿದೆ. ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸಿದರೂ ಸ್ಥಳೀಯ ಆಡಳಿತದ ನಿರ್ಲಕ್ಷತನದಿಂದ ಜನತೆ ಯೋಜನೆಗಳಿಂದ ವಂಚಿತರಾಗುವಂತಾಗಿದೆ ಎಂದು ತಿಮ್ಮಲಾಪುರ ಕಲ್ಯಾಣಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ನಳಗಳಲ್ಲಿ ಸಮರ್ಪಕವಾಗಿ ನೀರಿನ ಪೂರೈಕೆಯಾಗದ ಕಾರಣ ಜನತೆ ಗ್ರಾಮದ ಸಮೀಪದಲ್ಲಿರುವ ಜಮೀನುಗಳಲ್ಲಿರುವ ಕೊಳವೆ ಬಾವಿಗಳಿಂದ ಸುಡುವ ಬಿಸಿಲಿನಲ್ಲಿ ನೀರು ತಂದು ಜೀವನ ಮಾಡುವಂತಾಗಿದೆ ಎಂದು ಗ್ರಾಮದ ಬಸಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ. ತಿಮ್ಮಲಾಪುರದ ಸಮುದಾಯ ಾರೋಗ್ಯ ಕೇಂದ್ರದಲ್ಲಿ  ಕುಡಿಯುವ ನೀರಿನ ಅಭಾವದಿಂದ ರೋಗಿಗಳು ಹಾಗೂ ಚಿಕಿತ್ಸೆಗೆ ಬರುವವರು ದಾಹದಿಂದ ಬಳಲುವಂತಹ ಪರಿಸ್ಥಿತಿ ಕಂಡರೂ ಗ್ರಾಮ ಪಂಚಾಯ್ತಿ ನಿರ್ಲಕ್ಷತನ ತೋರುತ್ತದೆ ಎಂದು ಚಿಕಿತ್ಸೆಗೆ ಬಂದ ಬಸವರಾಜ್ ಅಸಮಧಾನ ವ್ಯಕ್ತಪಡಿಸಿದರು. ಕೂಡಲೇ ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಕೂಡಲೇ ನೀರು ಪೂರೈಕೆಗೆ ಸೂಕ್ತ ಕ್ರಮಕೈಗೊಳ್ಳದಿದ್ದರೆ ಉಗ್ರ ಹೋ

"ಕೊಟ್ಟೂರು ತಾಲ್ಲೂಕಿನಾದ್ಯಂತ ಇಸ್ಪೀಟ್ ಹಾವಳಿ"

ಇಮೇಜ್
*ಹೊರವಲಯ ಅಡ್ಡಗಳು * ಕೊಟ್ಟೂರು ತಾಲ್ಲೂಕಿನಾದ್ಯಂತ ಇಸ್ಪೀಟ್ ಹಾವಳಿ ವಿಪರೀತ ಹೆಚ್ಚಾಗಿದ್ದು, ಹದಿಹರೆಯದ ಯುವಕರೇ ಈ ಚಟಕ್ಕೆ ಬಿದ್ದು ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುವುದಲ್ಲದೆ, ತಮ್ಮ ಕುಟುಂಬಗಳು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ಸಮಯದಲ್ಲಿ ೧೦ ರಿಂದ ೧೫ ಗ್ರೂಪ್‌ಗಳನ್ನು ಮಾಡಿಕೊಂಡು, ಹೊರವಲಯವಾಗಿರುವ  ಕೂಡ್ಲಿಗಿ ರಸ್ತೆ,ಬಣವಿಕಲ್ಲು ಅರಣ್ಯ, ಚಿರಿಬಿ ಅರಣ್ಯ, ಜೋಳದ ಕೂಡ್ಲಿಗಿ, ಚೀರನಹಳ್ಳಿ ಅರಣ್ಯಗಳ ಸ್ಥಳಗಳನ್ನು ಅಡ್ಡಾ ಮಾಡಿಕೊಂಡು ಇಸ್ಪೀಟು ಆಡುತ್ತಿದ್ದಾರೆ. ಪೋಲಿಸ್ ಠಾಣಾ ಸರಹದ್ದು ಮುಕ್ತಾಯವಾಗಿ ನಂತರ ವ್ಯಾಪ್ತಿಯಲ್ಲಿ ಆಡುವುದನ್ನು ಕೆಲ ಪೊಲೀಸ್ ಪೇದೆಗಳೇ ಇಸ್ಪೀಟ್ ಆಡಲು ಸಹಕಾರ ನೀಡಿ ತಮ್ಮ ಭಕ್ಷೀಸನ್ನು ಪಡೆಯುತ್ತಿದ್ದಾರೆ. ಎಂದು  ವ್ಯಕ್ತವಾಗಿವೆ. "ಪೊಲೀಸರಿಗೆ ಭಕ್ಷೀಸು ನೀಡುವ ಗುಂಡ..?" ಇತ್ತೀಚಿನ ದಿನಗಳಲ್ಲಿ ಚಪ್ಪರದಹಳ್ಳಿ ಹೊರವಲಯ, ಹಗರಿ ಗಜಪುರ ಹೊರವಲಯ , ಅಯ್ಯನಹಳ್ಳಿ ಹಗರಿ ಹಳ್ಳ, ಸಂಗಮೇಶ್ವರ ಹಗರಿ ಹಳ್ಳ ಇಲ್ಲಿ ಇಸ್ಪೀಟ್ ಆಟಗಳನ್ನು ಆಡಿಸುತ್ತಿರುವವರಲ್ಲಿ ಚಪ್ಪರದಹಳ್ಳಿಯ ಕೊಟ್ರೇಶ್ ಅಲಿಯಾಸ್ ಗುಂಡಾ ಹಾಗೂ ಕಡ್ಲಿ ಎಂಬುವವರು ಪ್ರಮುಖರಾಗಿದ್ದಾರೆ. ? ಇವರು ಹಲವಾರು ವರ್ಷಗಳಿಂದಲೂ ಇಸ್ಪೀಟ್ ಆಡುತ್ತಿದ್ದರೂ ಪೊಲೀಸ್ ಇಲಾಖೆ ಇವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇಸ್ಪೀಟ್ ಆಡಿಸುವ ಅಡ್ಡಾಗಳು ಗೊತ್ತಿದ್ದರೂ ಕಣ್ಮುಚ್ಚಿಕೊಂಡು ಕುಳಿತಿದೆ.  ಇಸ್ಪೀಟ್ ಆಡುವ ವಿಷಯ ಪೊಲೀಸರಿಗೆ ತಿಳಿ

ಮಟ್ಕಾ ದಂಧೆ: ಕೂಲಿ ಕಾರ್ಮಿಕರೇ ಟಾರ್ಗೆಟ್‌! ಸಾಲದ ಶೂಲಕ್ಕೆ ಸಿಲುಕಿದ ಶ್ರಮಿಕ ವರ್ಗ ಬಲಿ

ಇಮೇಜ್
ಒಸಿ - ಮಟ್ಕಾ ದಂಧೆ ನಡೆಸುವರು ಗಡಿಪಾರು ಯಾವಗ..! ಕೊಟ್ಟೂರು: ಪಟ್ಟಣ ಹಾಗೂ ಸುತ್ತಮುತ್ತನ ಹಳ್ಳಿಗಳಲ್ಲಿ ಮಟ್ಕಾದಿಂದ ಸಾಲ ಬಾಧೆ ತಾಳಲಾಗದೆ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ತೀರಿಸಲಾಗದೆ ಗ್ರಾಮವನ್ನೇ ತೊರೆದಿರುವ ನಿದರ್ಶನಗಳು ಇವೆ. ಸಮಾಜದಲ್ಲಿನ ಗೌರವ ಹಾಳಾಗುತ್ತದೆ ಎಂಬ ಕಾರಣ, ಮುಜುಗರ ಸೇರಿದಂತೆ ನಾನಾ ಕಾರಣಗಳಿಂದ ಆತ್ಮಹತ್ಯೆ ನಡೆದಿರುವ ಘಟನೆಗಳು ಈ ಹಿಂದೆ ನಡೆದಿವೆ. ರಾಜ್ಯಕ್ಕೆ ಆನ್‌ಲೈನ್‌ ಮಟ್ಕಾ ಗಳು ವ್ಯಾಪಿಸಿದೆ. ಕೂಲಿ ಕಾರ್ಮಿಕ ವರ್ಗವನ್ನು ಗುರಿಯಾಗಿಸಿಕೊಂಡು ದಂಧೆಕೋರರು ಚಟುವಟಿಕೆ ನಡೆಸುತ್ತಿದ್ದಾರೆ. ಚಟಕ್ಕೆ ದಾಸರಾಗಿರುವ ಶ್ರಮಿಕ ವರ್ಗ ಸಾಲದ ಶೂಲಕ್ಕೆ ಸಿಲುಕಿ ಗ್ರಾಮ ತೊರೆಯುವ ಪರಿಸ್ಥಿತಿ ಎದುರಾಗಿದೆ. ಜತೆಗೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿಗಳ  ಪ್ರಕರಣಗಳು ದಾಖಲಾಗಿ ಇರುವುದಿಲ್ಲ. ಮತ್ತು ಮಟ್ಕಾ ಗಳು ಕಾರಣವಾಗುತ್ತಿದೆ. ಮುಂಬಯಿಯಿಂದ ಮಟ್ಕಾ ದಂಧೆಯನ್ನು ಆನ್‌ಲೈನ್‌ ಮೂಲಕ ನಡೆಸಲಾಗುತ್ತಿದ್ದು, ನಾನಾ ಆ್ಯಪ್‌ಗಳು ಗೂಗಲ್‌ನಲ್ಲಿ ಲಭ್ಯವಿದೆ. ಬಳ್ಳಾರಿ ವಿಜಯನಗರ ಜಿಲ್ಲೆಯಲ್ಲಿ ಪ್ರಮುಖವಾಗಿ ಹೆಸರು ಕೇಳಿ ಬರುವ ಕಿಂಗ್ ಪಿನ್ ಕ್ಯಾಷನಕ್ಕೇರಿ ಸಿದ್ದೇಶ್, ಮತ್ತು ಹತ್ತಿರದ ಸಂಬಂಧಿ ಚಪ್ಪರದಹಳ್ಳಿ ಕೋಟೆಪ್ಪ , ಹಾಗೂ ರಿಯಾ, ಮತ್ತು ಕೊಟ್ಟೂರಿನಲ್ಲಿ ಅನೇಕರು ಸಹಭಾಗಿತ್ವದಲ್ಲಿ ಪ್ರಮುಖ ಪಟ್ಟಿ ಹಿಡಿಯುವ ಮಟ್ಕಾ ದಂಧೆ ಕಂಪನಿ ಮಾಲೀಕರು. ವಿಪರೀತವಾಗಿದ್ದಾರೆ. ಇಂತ

ಕೊಟ್ಟೂರಿನಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ಆಡ್ಸೋರು ಏಳು ಜನ.! ,ಪ್ರಮುಖ ವ್ಯಕ್ತಿ ಹಗರಿಬೊಮ್ಮನಹಳ್ಳಿಯಲ್ಲಿ ಸುತ್ತಮುತ್ತ ತಾಲೂಕಿನಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ಬಲು ಜೋರು...!

ಇಮೇಜ್
ರಾಜಾರೋಷವಾಗಿ ನಡೆಯುತ್ತಿದೆ ಕ್ರಿಕೆಟ್ ಬೆಟ್ಟಿಂಗ್‌ ದಂಧೆ,ಬೆಟ್ಟಿಂಗ್‌ ಗೆ ಕಡಿವಾಣ ಯಾವಾಗ..! ಕೊಟ್ಟೂರು ತಾಲೂಕಿನಾದ್ಯಂತ ಬಹುತೇಕ ಗ್ರಾಮ ಮತ್ತು ಪಟ್ಟಣಗಳಲ್ಲಿ  ಸಂಜೆಯಾಗುತ್ತಿದ್ದಂತೆಯೇ, ಸಾರ್ವಜನಿಕ ಸ್ಥಳಗಳಲ್ಲಿ ಬೆಟ್ಟಿಂಗ್‌ ದಂಧೆ ಜೋರಾಗಿದೆ. ಕಾಲೇಜ್‌ ವಿದ್ಯಾರ್ಥಿಗಳು, ಯುವಕರು, ಸಣ್ಣ ಪುಟ್ಟ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿ ಬೆಟ್ಟಿಂಗ್‌ ದಂಧೆಗೆ ದಾಸರಾಗಿದ್ದಾರೆ. ಮೊಬೈಲ್‌ ಶಾಪ್‌, ಪಾನ್‌ ಶಾಪ್‌, ಹೋಟೆಲ್‌ಗಳಲ್ಲಿ ಬೆಟ್ಟಿಂಗ್‌ ವ್ಯವಹಾರ ನಡೆಯುತ್ತಿದೆ. ಕ್ರಿಕೆಟ್‌ ಪಂದ್ಯಾವಳಿ ಆರಂಭವಾಗುತ್ತಿದ್ದಂತೆಯೇ, ಎಲ್ಲೆಡೆ ಬೆಟ್ಟಿಂಗ್‌ ದಂಧೆ ಮತ್ತು ಆನ್ಲೈನ್ ದಂಧೆ ಚುರುಕಾಗಿದೆ. ಯುವಕರು ಬೆಟ್ಟಿಂಗ್‌ನಲ್ಲಿ ತೊಡಗುತ್ತಿದ್ದಾರೆ. ಯುವ ಜನತೆ ಸಾಲದ ಶೂಲಕ್ಕೆ ಸಿಲುಕುತ್ತಿದ್ದಾರೆ. ತಂಡಗಳ ಸೋಲು-ಗೆಲುವಿನ ಲೆಕ್ಕಾಚಾರದ ಆಧಾರದ ಮೇಲೆ ಇಂತಿಷ್ಟು ಹಣ ಎಂದು ನಿಗದಿಪಡಿಸಿ ಬೆಟ್ಟಿಂಗ್‌ ದಂಧೆ ನಡೆಯುತ್ತಿದೆ. ದುರ್ಬಲ ತಂಡದ ಪರವಾಗಿ 1,000 ರೂ. ಕಟ್ಟಿ ಗೆದ್ದರೆ, ಪ್ರತಿಯಾಗಿ 800 ರೂ. ಕೊಡುತ್ತಾರೆ. ಅದೇ ಬಲಿಷ್ಠ ತಂಡದ ಪರವಾಗಿ ಕಟ್ಟಿ ಗೆಲುವು ಸಾಧಿಸಿದರೆ, ಸರಿ ಸಮಾನ ಮೊತ್ತ ನೀಡುತ್ತಾರೆ. ಪ್ರತಿ ಬಾಲ್‌ಗೆ, ಓವರ್‌ ಮತ್ತು ಬ್ಯಾಟ್ಸ್‌ಮನ್‌ ಎಷ್ಟು ರನ್‌ ಹೊಡೆಯುತ್ತಾನೆ, ಬೌಲರ್‌ ಎಷ್ಟು ವಿಕೆಟ್‌ ಗಳಿಸುತ್ತಾನೆ ಎಂಬಿತ್ಯಾದಿ ಪ್ರತಿ ಹಂತದಲ್ಲೂ ಬೆಟ್ಟಿಂಗ್‌ ಪ್ರಕ್ರಿಯೆ ನಡೆಯುತ್ತಿದೆ. ನಾಳೆ ಯಾವ ಪಂದ್ಯದ ಪರವಾಗ

ದಲಿತ ಸಂಘಟನೆಯ ನೂತನ ಪದಾಧಿಕಾರಿಗಳ ನೇಮಕ

ಇಮೇಜ್
ಮಸ್ಕಿ : ತಾಲೂಕ ದಲಿತ ಸಂರಕ್ಷ ಸಮಿತಿ ಪಧಾದಿಕಾರಿಗಳ ಸಭೆ ಪಟ್ಟಣ ದ ಅಶೋಕ ಶಿಲಾಶಾಸನದ ಹತ್ತಿರ ದಲಿತ ಸಂರಕ್ಷ ಸಮಿತಿಯ ಜಿಲ್ಲಾಧ್ಯಕ್ಷ ಬಾಲಸ್ವಾಮಿ ಜಿನ್ನಾಪೂರು ಅಧ್ಯಕ್ಷತೆ ಯಲ್ಲಿ ಶನಿವಾರ ಜರುಗಿತು. ದಲಿತ ಸಂರಕ್ಷ ಸಮಿತಿ ಜಿಲ್ಲಾಧ್ಯಕ್ಷ ಬಾಲಸ್ವಾಮಿ ಜಿನ್ನಾಪೂರು ಮಾತ ನಾಡಿ ಸಂಘಟನೆಯ ಬೆಳವಣಿಗೆಗೆ ರಾಜ್ಯ ಮುಖಂಡ ಮಲ್ಲೇಶ ಬಳಗಾ ನೂರ, ರಾಜ್ಯ ಕಾನೂನು ಸಲಹೆಗಾರ ಮಲ್ಲಪ್ಪ ನಾಗರಬೆಂಚಿ, ಜಿಲ್ಲಾಕಾ ರ್ಯಾದ್ಯಕ್ಷ ಸಿದ್ದಪ್ಪ ಹೂವಿನಭಾವಿ, ಜಿಲ್ಲಾ ಉಪಾಧ್ಯಕ್ಷ ಮೌನೇಶ ಬಳಗಾನೂರ, ಅಮರಪ್ಪ ಡಬ್ಬೇರಮ ಡುಗು, ತಾಲ್ಲೂಕ ಅಧ್ಯಕ್ಷ ಮರಿ ಸ್ವಾಮಿ ಬೆನಕನಾಳ, ಕರಿಯಪ್ಪ ತೋರಣದಿನ್ನಿ, ಶ್ರೀಕಾಂತ ಮುರಾರಿ ಸೇರಿದಂತೆ ಸಮಾಜದ ಹಲವಾರು ಮುಖಂಡರು ಸಂಘಟನೆಯ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.  ಮಸ್ಕಿ ನಗರ ಘಟಕ ರಚನೆ: ಮಸ್ಕಿ ನಗರ ಘಟಕ ಅಧ್ಯಕ್ಷರನ್ನಾಗಿ ವೆಂಕ ಟೇಶ ಮುರಾರಿ, ಉಪಾಧ್ಯಕ್ಷರನ್ನಾಗಿ ಸಿದ್ದು ಮುರಾರಿ, ಸಂಘಟನೆ ಕಾರ್ಯದರ್ಶಿಯಾಗಿ ಹುಲಗೇಶ ಮುರಾರಿ ಯನ್ನು ರಾಜ್ಯ ಮತ್ತು ಜಿಲ್ಲಾ ಸಮಿತಿಯ ಮುಖಂಡರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ದಲಿತ ಮುಖಂಡ ಪುರಸಭೆ ಸದಸ್ಯ ಮೌನೇಶ ಮುರಾರಿ ಮಾತನಾಡಿ ಸಮಾಜದಲ್ಲಿ ದಲಿತರ ಮೇಲೆ ಆಗುತ್ತಿರುವ ಅನ್ಯಾಯ ಹಾಗೂ ದೌರ್ಜನ್ಯವನ್ನು ತಡೆಗಟ್ಟಲು ಎಲ್ಲರೂ ಶ್ರಮಿಸಬೇಕು. ಹಾಗೂ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಬೇಕು ಹಾಗೂ ನ್ಯಾಯದ

ಜೋಳ ಖರೀದಿ ಕೇಂದ್ರ ಪ್ರಾರಂಭ ಮಾಡಲು ರೈತರ ಒತ್ತಾಯ

ಇಮೇಜ್
ಮಸ್ಕಿ : ತಾಲೂಕಿನ ಸುಮಾರು 10622 ಹೆಕ್ಟೇರ್ ನಲ್ಲಿ ರೈತರು ಜೋಳ ಹಾಗೂ ಹೈಬ್ರಿಡ್ಡ ಜೋಳ ಬೆಳೆದಿದ್ದು, ಅಂದಾಜು ಒಂದು ಹೆಕ್ಟೇರ್ ಗೆ 43.75 ಕ್ವಿಂಟಾಲ್ನಷ್ಟು ಫಸಲು ಬೆಳೆದಿದ್ದು. ಕೆಲ ರೈತರು ಕಡಿಮೆ ಬೆಲೆ ಆದರೂ ಪರವಾಗಿಲ್ಲ ಮೊದಲು ಮಾರಾಟವಾಗಲಿ ಎಂಬ ಉದ್ದೇಶದಿಂದ ಈಗಾಗಲೇ ಮಾರಾಟ ಮಾಡಿದ್ದಾರೆ. ತಾಲೂಕಿನಲ್ಲಿ ಜೋಳ ಖರೀದಿ ಕೇಂದ್ರ ಆರಂಭಿಸಿದರೆ ಮಾರಾಟಕ್ಕೆ ಅನುಕೂಲವಾಗಲಿದೆ ಎಂಬುದು ರೈತರ ಅಭಿಪ್ರಾಯ. ಖರೀದಿ ಕೇಂದ್ರಕ್ಕೆ ಬೇಡಿಕೆ ಮಸ್ಕಿ ತಾಲೂಕಿನ ವ್ಯಾಪ್ತಿಯ ಖರೀದಿ ಕೇಂದ್ರ ಗಳನ್ನು ತೆರೆದರೆ ರೈತರಿಗೆ ಅನುಕೂಲ ವಾಗುತ್ತದೆ ಎಂಬ ಉದ್ಧೇಶದಿಂದ ಪ್ರತಿ ಭಟನೆ ಮಾಡಿ ಸರಕಾರದ ಗಮನ ಸೆಳೆಯಲು ಮನವಿ ಪತ್ರವನ್ನು ಶನಿವಾರ ರಾಯಚೂರು ಆಪರ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ. ನಂತರ ಮಾತನಾಡಿದ ರೈತ ಬಸವ ಲಿಂಗ ಹೂವಿನ ಭಾವಿ, ಮಸ್ಕಿ ತಾಲೂಕಿನ ವ್ಯಾಪ್ತಿಯ ಜೋಳ ಕೇಂದ್ರಗಳನ್ನು ತೆರೆದರೆ ರೈತರಿಗೆ ತುಂಬಾ ಅನುಕೂಲವಾಗುತ್ತದೆ. ಈಗಾಗಲೇ ಬೇರೆ ಬೇರೆ ತಾಲೂಕುಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ ಆದರೆ ಮಸ್ಕಿ ತಾಲೂಕಿಗೆ ಇನ್ನು ಜೋಳದ ಖರೀದಿ ಕೇಂದ್ರ ಪ್ರಾರಂಭ ಮಾಡಿಲ್ಲ ಯಾಕೆ ತಾರತಮ್ಯ ಮಾಡುತ್ತಿದ್ದಾರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗೊತ್ತಾಗುತ್ತ ಇಲ್ಲ ಇನ್ನು ಮುಂದೆ ಆದರೂ ಮಸ್ಕಿ ತಾಲೂಕಿನ ವ್ಯಾಪ್ತಿಯಲ್ಲಿ ಜೋಳ ಖರೀದಿ ಕೇಂದ್ರ ಮಾಡುವವರು ಕೇಂದ್ರ ಸರಕಾರ ನಿಗದಿ ಮಾಡಿರುವ ಬೆಲೆ ನೀಡಿ ಖರೀದಿ ಮಾಡಿದರೆ ರೈತರಿಗೆ ನಷ್ಟ ಆಗುವುದಿಲ್ಲ. ಜ

ಪರೀಕ್ಷೆ ಬರೆಯುವ ಹಲಗೆ ಡಿಎಸ್‌ಎಸ್‌ಕೆ ಜಿಲ್ಲಾ ಉಪಾಧ್ಯಕ್ಷ ಬಿ.ಮೌನೇಶ ವಿತರಣೆ

ಇಮೇಜ್
ಮಸ್ಕಿ : ಮಾರ್ಚ೨೫ ರಿಂದ ಎಪ್ರೇಲ್ ೮ ರವರೆಗೆ ನಡೆಯುವ ೨೦೨೪-೨೫ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನಲೆಯಲ್ಲಿ ತಾಲೂಕಿನ ಶ್ರೀಬಸವೇಶ್ವರ ಸಂಯುಕ್ತ ಪ್ರೌಢ ಶಾಲೆಯ ಸುಮಾರು ೭೦ ವಿದ್ಯಾರ್ಥಿಗಳಿಗೆ ಸಂಸ್ಕೃತಿಕ ನಾಯಕ ಶ್ರೀಬಸವೇಶ್ವರರ ಭಾವಚಿತ್ರ ಇರುವ ಪರೀಕ್ಷೆ ಬರೆಯುವ ಹಲಗೆ [ಕ್ಲೀಪ್‌ಬೋರ್ಡ] ಅನ್ನು ಉಚಿತವಾಗಿ ಡಿಎಸ್‌ಎಸ್‌ಕೆ ಜಿಲ್ಲಾ ಉಪಾಧ್ಯಕ್ಷ ಬಿ.ಮೌನೇಶ ಬಳಗಾನೂರು ವಿತರಿಸಿ ಶುಭ ಹಾರೈಸಿದರು.    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಸಿದ್ಧನಗೌಡ ಮಾಲಿಪಾಟೀಲ್ ಮಾತನಾಡಿ ನಿರಾತಂಕವಾಗಿ ಪರೀಕ್ಷೆಯನ್ನು ಬರೆದು, ಉತ್ತಮ ಅಂಕಗಳನ್ನು ಗಳಿಸಿ, ಸಂಸ್ಥೆ ಮತ್ತು ಶಾಲೆ ಶಿಕ್ಷಕರ ಗೌರವವನ್ನು ಹೆಚ್ಚಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮ ಕುರಿತು ಡಿಎಸ್‌ಎಸ್‌ಕೆ ಉಪಾಧ್ಯಕ್ಷ ಬಿ.ಮೌನೇಶ, ಶಾಲೆಯ ಮುಖ್ಯಗುರು ಅಮರನಾಥಹಳ್ಳೂರು, ಶ್ರೀಸಿದ್ಧರಾಮೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪರಶುರಾಮ, ಶ್ರೀಬಸವೇಶ್ವರ ಪಧವಿಕಾಲೇಜಿನ ಪ್ರಾಚಾರ್ಯ ಎಂ.ಡಿಯೂಸೂಫ್, ಶಿಕ್ಷಕರಾದ ಮಹಾಂತೇಶ, ಬಸವರಾಜ ಎಕ್ಕಿ, ಶಿಕ್ಷಕಿ ಬೋರಮ್ಮ, ಯುವ ಮುಖಂಡ ಆಶೀಫ್ ಚೌದರಿ, ಹನುಮಂತ ಜಾನೇಕಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.   ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ೮೦ ಕ್ಕೆ ೭೦ ಕ್ಕೂ ಹೆಚ್ಚು ಅಂಕ ಪಡೆದ ಸುಮಾರು ೨೦ ವಿದ್ಯಾರ್ಥಿಗಳಿಗೆ ಗಣಿತ ವೀಷಯ ಶಿಕ್ಷಕ ಬಸವರಾಜ ಎಕ್ಕಿ ವಿದ

ಕಾಂಗ್ರೆಸ್‌ ಆಡಳಿತ ವೈಫಲ್ಯದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ : ಹೇಮಲತಾ ನಾಯಕ

ಇಮೇಜ್
 ವರದಿ - ಮಂಜುನಾಥ ಕೋಳೂರು ಕೊಪ್ಪಳ  ಕೊಪ್ಪಳ : -- ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದ ವೈಫಲ್ಯ ದಿಂದ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕ್ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿ ಗ್ಯಾರಂಟಿಗಳ ಆಸರೆಯಿಂದ ಅಧಿಕಾರಕ್ಕೇರಿದ ಕಾಂಗ್ರೆಸ್, ಗ್ಯಾರಂಟಿಗಳನ್ನು ಘೋಷಿಸಿದಂತೆ ಯಥಾವತ್ತಾಗಿ ಜಾರಿ ಮಾಡದೆ ರಾಜ್ಯದ ಜನತೆಗೆ ಮಂಕು ಬೂದಿ ಎರಚಿದೆ. ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿರುವ ಕಾಂಗ್ರೆಸ್ ಒಂದೇ ವರ್ಗದ ಅತಿಯಾದ ಓಲೈಕೆಯಲ್ಲಿ ತೊಡಗಿದೆ. ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದ ಒಳಗೆ ದೇಶದ್ರೋಹಿ ಘೋಷಣೆ ಕೂಗಿದವರ ವಿರುದ್ಧ ಯಾವುದೇ ಕಟ್ಟುನಿಟ್ಟಿನ ಕ್ರಮ ಜರಗಿಸದೆ ದೇಶ ವಿರೋಧಿ ನೀತಿ ಅನುಸರಿಸಿರುವುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷ ಘೋಷಿಸಿದ ಗ್ಯಾರಂಟಿಗಳಿಗೆ ರಾಜ್ಯದ ಜನತೆಯ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಸರಕಾರ ಬೊಕ್ಕಸವನ್ನು ಬರಿದಾಗಿಸಿ ಆಡಳಿತ ವ್ಯವಸ್ಥೆಯಲ್ಲಿ ವೈಫಲ್ಯ ಕಂಡ ಪರಿಣಾಮವಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಅರಾಜಕತೆ ಸೃಷ್ಟಿಯಾಗಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಜನ ವಿರೋಧಿ ನೀತಿ, ರಾಷ್ಟ್ರ ವಿರೋಧಿ ಮಾನಸಿಕತೆ ಹಾಗೂ ಆಡಳಿತ ವೈಫಲ್ಯಗಳ ವಿಸ್ತ್ರತ ಮಾಹಿತಿ. ಇಡೀ ಕರ್ನಾಟಕದಲ್ಲಿ ಬರಗಾಲ ಆವರಿಸಿದ್ದರೂ ರಾಜ್ಯ ಕಾಂಗ್ರೆಸ್ ಸರಕಾರ ಬರಪರಿಹಾರ ಕಾರ್ಯದಲ್ಲಿ ಸಂಪೂರ್ಣ ವಿಫಲವಾಗಿದೆ. 875ಕ್ಕೂ ಹ

ಸಡಗರದೊಂದಿಗೆ ಜರುಗಿದ ಕೋಟೆ ವೀರಭದ್ರೇಶ್ವರ ಜೋಡಿ ರಥೋತ್ಸವ

ಇಮೇಜ್
  ಕೊಟ್ಟೂರು: ಪಟ್ಟಣದ ಕೋಟೆ ಭಾಗದ ಪೂರ್ವದ ಶ್ರೀ ವೀರಭದ್ರೇಶ್ವರ ಸ್ವಾಮಿ ಮತ್ತು ರೇಣುಕಾಚಾರ್ಯರ ಸ್ವಾಮಿ ಮೂರ್ತಿಗಳ ಜೋಡಿ' ರಥೋತ್ಸವ ಶುಕ್ರವಾರ  ಸಂಜೆ 6.02ರ ಸುಮಾರಿನ ಬ್ರಾಹ್ಮ ಮುಹೂರ್ತದಲ್ಲಿ ಭಕ್ತರ ಸಡಗರ ಸಂಭ್ರಗಳೊಂದಿಗೆ ಜರುಗಿದವು. ರಥೋತ್ಸವ ಚಾಲನೆ ಪಡೆಯುವುದಕ್ಕಿಂತ ಮುಂಚಿತವಾಗಿ ಉಭಯ ದೇವರುಗಳ ಮೂರ್ತಿಗಳನ್ನು ಆಯಾಗಾರ ಬಳಗದವರು ದೇವಸ್ಥಾನದಿಂದ ಸಕಲ ಬಿರುದಾವಳಿಗಳೊಂದಿಗೆ ಮೆರವಣಿಗೆ ಕೈಗೊಂಡು ಹೊರತಂದು ರಥಗಳ ಬಳಿಗೆ ತೆರಳಿದರು. ನಂತರ ಉತ್ಸವ ಮೂರ್ತಿಗಳನ್ನು ರಥದ ಸುತ್ತ ಮೂರು ಪ್ರದಕ್ಷಣಿಗಳನ್ನು ಹಾಕಿದರು. ವೀರಭದ್ರೇಶ್ವರದ ರಥದಲ್ಲಿ ಕೊಟ್ಟೂರೇಶ್ವರ ಸ್ವಾಮಿಯ ಕ್ರಿಯಾ ಮೂರ್ತಿ ಆರ್, ಎಂ, ಶಿವಪ್ರಕಾಶ ಕೊಟ್ಟೂರು ದೇವರು, ರೇಣುಕ ಮೂರ್ತಿ ರಥದಲ್ಲಿ ಆಸೀನರಾಗಿದ್ದರು. ನಂತರ ಶ್ರೀಸ್ವಾಮಿ ಪಟಾಕ್ಷಿ ಹರಾಜು ಪ್ರಕ್ರಿಯೆ ನಡೆದು 1,50.000 ರೂ ಗಳಿಗೆ ಕೂಗಿ, ಹಳ್ಳಿ ಗಂಗಮ್ಮ  ತನ್ನ ದಾಗಿಸಿಕೊಂಡರು. ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಜೋಡಿ ರಥೋತ್ಸವಗಳು ಆರಂಭಗೊಂಡಿತು. ರಥೋತ್ಸವಗಳು ಗೌಡರ ಬೀದಿ, ಹಿರೇಮಠ, ಮುಖ್ಯ ರಸ್ತೆ ಮೂಲಕ ಸಾಗಿ ನಂತರ ದೇವಸ್ಥಾನದ ಬಳಿ ಬಂದು ನೆಲೆ ನಿಂತಿತು. ಪಾಲ್ಗೊಂಡಿದರು ಆಯಗಾರ ಬಳಗದ ಆರ್,ಎಂ,ಗುರು, ಬಸವಸ್ವಾಮಿ, ಮಂಜುನಾಥಗೌಡ, ಕನ್ನಳ್ಳಿ ರಾಜಪ್ಪ, ಶಿವಕುಮಾರ ಗೌಡ, ರಾಜುಗೌಡ, ಸೋಮು, ಆರ್. ಎಂ, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

*ಭಕ್ತರಿಂದ ಕೋಟೆ ವೀರಭದ್ರ ಸ್ವಾಮಿಗೆ ಹರಕೆ ಅರ್ಪಣೆ*

ಇಮೇಜ್
ಕೊಟ್ಟೂರು: ಪಟ್ಟಣದ ಪುರದ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಜರುಗುವ ಶುಕ್ರವಾರ ದಂದು ಮುನ್ನದಿನವಾದ ಗುರುವಾರ ದಂದು ವಿವಿಧ ಬಗೆಯ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಿಗ್ಗೆ ಗಂಗೆಯನ್ನು ಪೂಜೆಗೈದು ದೇವಸ್ಥಾನದ ಬಳಿ ಮಹಿಳೆಯರು ಮತ್ತು ಪುರುಷರು ಹೊತ್ತು ತರುತ್ತಿದ್ದಂತೆ ಅಗ್ನಿಗುಂಡ ಹಾಯುವ ಕಾರ್ಯಕ್ರಮ ಚಾಲನೆ ಪಡೆಯಿತು. ದೇವರಿಗೆ ಹರಕೆಹೊತ್ತು ವೀರಭದ್ರೇಶ್ವರ ಸ್ವಾಮಿಯ ಭಕ್ತರು ಮಹಿಳೆಯರು ಎನ್ನದೆ ಒಬ್ಬರಾದ ಮೇಲೆ ಒಬ್ಬರಂತೆ ಸಣ್ಣ ಹೊಂಡದಲ್ಲಿ ಹಾಕಲಾಗಿದ್ದ ಅಗ್ನಿಯನ್ನು ತುಳಿದು ಭಕ್ತಿ ಸಮರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳು ಸಹ ಉತ್ಸಾಹದಿಂದ ಪಾಲ್ಗೊಂಡು ನಮಿಸಿದರು. ಅಗ್ನಿ ಹಾಯುವ ಕಾರ್ಯಕ್ರಮದ ನಂತರ ವೀರಭದ್ರ ಸ್ವಾಮಿಯ ಹಲಗೆ ಮತ್ತು ಗುಗ್ಗಳದ ಮೆರವಣಿಗೆ ಪಟ್ಟಣದ ಕೊಟ್ಟೂರೇಶ್ವರ ದೇವಸ್ಥಾನದ ರಸ್ತೆ ಸೇರಿದಂತೆ ಇತರೆಡೆ ಸಾಗಿತು. ಈ ಸಂದರ್ಭದಲ್ಲಿ ವೀರಭದ್ರ ದೇವರನ್ನು ಮನೆದೇವರನ್ನಾಗಿಸಿಕೊಂಡ ಯುವಕರು ಮತ್ತು ಮಹಿಳೆಯರು ಚೂಪಾದ ದೊಡ್ಡ ಶಸ್ತ್ರ (ತಾಮ್ರದ ಸೂಜಿ)ಯನ್ನು ಯುವಕರು ಕಪಾಳಕ್ಕೆ ಚುಚ್ಚಿಸಿಕೊಂಡರೆ ಮಹಿಳೆಯರು ತಮ್ಮ ಕೈ ಮೇಲ್ಬಾಗದಲ್ಲಿ ಚುಚ್ಚಿಸಿಕೊಂಡು ಭಕ್ತಿ ಸಮರ್ಪಿಸಿದರು.

ಮತ್ತೊಮ್ಮೆ ಮೋದಿ ಪ್ರಧಾನಿಗಾಗಿ ದೇವರಾಜ್ ಯುವಕನಿಂದ ಕ್ಷೌರ ಸೇವೆ

ಇಮೇಜ್
ಮಸ್ಕಿ: ನರೇಂದ್ರ ಮೋದಿ ಅವರು ಮಗದೊಮ್ಮೆ ದೇಶದ ಪ್ರಧಾನಿ ಆಗಬೇಕೆಂದು ಮಸ್ಕಿಯ ಯುವಕ ಉಚಿತ ಕ್ಷೌರಿಕ ಸೇವೆಯನ್ನು ಬುಧುವಾರ ಸಲ್ಲಿಸಿದರು. ಪಟ್ಟಣದ ಅಭಿನಂದನ ಸ್ಫೂರ್ತಿ ಧಾಮದಲ್ಲಿ 30 ಕ್ಕೂ ಹೆಚ್ಚು ಅನಾಥ, ಅಂಗವಿಕಲ ಮತ್ತು ಬಡ ಮಕ್ಕಳು ಇದ್ದು, ಈ ಮಕ್ಕಳಿಗೆ ಊಟ ವಸತಿ ಸಹಿತ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಈ ಮಕ್ಕಳ ಪೋಷಣೆಗೆ ಹಲವಾರು ಜನರು ತಮ್ಮ ತನು ಮನದಿಂದ ಸೇವೆಯನ್ನು ಸಲ್ಲಿಸುತ್ತಿದ್ದು ಕಂಡು ಬಂದಿದ್ದು, ಅಂತೆಯೇ ಯುವ ಬ್ರಿಗೇಡನ ದೇವರಾಜ ಎಂಬ ಯುವಕ, ದೇಶಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗಲೆಂದು ಉಚಿತ ಕ್ಷೌರಿಕ ಸೇವೆ ಸಲ್ಲಿಸಿದರು. ಅವರಿಗೆ ಸ್ನೇಹಿತ ಕಾರ್ತಿಕ್, ಮಲ್ಲಿಕಾರ್ಜುನ , ಅಭಿನಂದನ ಸ್ಫೂರ್ತಿ ಧಾಮದ ಮಕ್ಕಳಿಗೆ ಉಚಿತವಾಗಿ ಕಟಿಂಗ್ ಮಾಡುವ ಮೂಲಕ ಯುವ ಬ್ರಿಗೇಡ್ ಯುವಕರಿಗೆ ಸಾಥ್ ನೀಡುವುದರ ಮೂಲಕ ಇತರ ಯುವಕರಿಗೆ ಮಾದರಿ ಆಗಿ, ಸಮಾಜಮುಖಿ ಕಾರ್ಯಗಳಲ್ಲಿ ಸಹ ಸೈ ಎನಿಸಿಕೊಂಡಿದ್ದಾರೆ.  ಈ ವೇಳೆ ,ತಾಲ್ಲೂಕು ಯುವ ಬ್ರಿಗೇಡ್ ಸಂಚಾಲಕ ಅಶೋಕ ಬೆಳಗಲ್,ಮಲ್ಲಿಕಾರ್ಜುನ ಕಟ್ಟಿಮನಿ,ಕಾರ್ತಿಕ ಇದ್ದರು.

ಕೂಡ್ಲಿಗಿ ಕ್ಷೇತ್ರದ ಶಾಸಕರೇ ಎಲ್ಲಿದ್ದೀರಿ :ವಾಹನ ಸವಾರರಾ ಬಲಿಗೆ ಕಾದಿದೆ ಬಣವಿಕಲ್ಲ ರಸ್ತೆ

ಇಮೇಜ್
ವಿಜಯನಗರ ಜಿಲ್ಲೆಯ ಕೊಟ್ಟೂರು. ಬಣವಿಕಲ್ಲ ರಸ್ತೆಯ ಕೊಟ್ಟೂರಿನಿಂದ ಸುಮಾರು ಹದಿನಾಲ್ಕು ಕಿಲೋಮೀಟರ್ ದೂರದಲ್ಲಿ ಸುಮಾರು ಒಂದುವರೆ ತಿಂಗಳ ಹಿಂದೆ ನೂತನ ರಸ್ತೆ ಕಾಮಗಾರಿ ನಡೆದ್ದಿದ್ದುಎರಡು ಕಿಲೋಮೀಟರ್ ರಸ್ತೆ ಗ 10 ಎಂ.ಎಂ.ಜಲ್ಲಿ ಕಲ್ಲುಗಳನ್ನು ಹರಡಿ ಹಾಗೆ ಬಿಟ್ಟಿದ್ದಾರೆ. ಇದರಿಂದ ಈ ಭಾಗದ ಚಿರಬಿ.ಗಂಗಮ್ಮನಹಳ್ಳಿ. ಗುಣಸಾಗರ.ಬಣವಿಕಲ್ಲ ಮತ್ತು ರಾಷ್ಟ್ರೀಯ ಹೆದ್ದಾರಿ ಯ ಸಂಪರ್ಕ ತೀರಾ ದುಸ್ತರ ವಾಗಿದೆ ಎಷ್ಟೋ ವಾಹನ ಸವಾರರು ಬಿದ್ದು ಆಸ್ಪತ್ರೆಗೆ ದಾಖಲಿ ಸಲಾಗಿದ್ದಾರೆ. ಈ ಬಗ್ಗೆ ಗುತ್ತಿಗೆದಾರರು ಸಂಪರ್ಕ ಕ್ಕೆ ಸಿಗುತ್ತಿಲ್ಲ ಲೋಕೋಪಯೋಗಿ ಇಲಾಖೆ ಗೆ ಸೇರಿದ ಈ ರಸ್ತೆ ಇಲಾಖೆ ಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಅವರನ್ನ ವಿಚಾರಿಸಿದರೆ ಗುತ್ತಿಗೆದಾರರಿಗ ಹಣ ಬಂದಿಲ್ಲ ಅದಕ್ಕೆ ನಿಂತಿದೆ ಎಂದು ಹಾರಿಕೆ ಉತ್ತರ ನಿಡುತ್ತಿದ್ದಾರೆ

ಕನ್ನಡ ಸಾಹಿತ್ಯಕ್ಕೆ ವಚನಕಾರರ ಕೊಡುಗೆ ಅಪಾರವಾಗಿದೆ

ಇಮೇಜ್
ಕೊಟ್ಟೂರು : ಎರಡು ಸಾವಿರ ವರ್ಷಗಳ ಇತಿಹಾಸವನ್ನ ಹೊಂದಿರುವ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಚನಕಾರರ ಕೊಡುಗೆಯೂ ಅಪಾರವಾಗಿದೆ ಎಂದು ನಿಂಬಳಗೇರೆ ಸರಕಾರಿ ಪ್ರೌಢ ಶಾಲೆ ಶಿಕ್ಷಕ ಕೆ.ವೀರಭದ್ರಪ್ಪ ಹೇಳಿದರು. ಪಟ್ಟಣದ ತುಂಗಭದ್ರ ಶಿಕ್ಷಣ ಕಾಲೇಜಿನಲ್ಲಿ ತಾಲೂಕು ಕಸಾಪ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಬುಧವಾರ ಉಪನ್ಯಾಸ ನೀಡಿದರು. ಸಾಹಿತ್ಯದಲ್ಲಿ ವಚನ ಸಾಹಿತ್ಯ ವಿಶೇಷವಾಗಿದೆ. ಬಸವ ಪೂರ್ವ, ಬಸವಯುಗ ಮತ್ತು ಬಸವೋತ್ತರ ವಚನ ಸಾಹಿತ್ಯ ಎಂದು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಸಮಾಜದಲ್ಲಿ ಕೈಗೊಂಡಿದ್ದ ಕಾಯಕಕ್ಕೆ ಆದ್ಯತೆ ನೀಡಿದ್ದ ವಚನಕಾರರು, ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವವನ್ನು ಅಳವಡಿಸಿಕೊಂಡಿದ್ದರು.  ೧೨ನೇ ಶತಮಾನದ ಬಸವಾದಿ ಎಲ್ಲ ಶರಣರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ್ದಾರೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ದೇವರಮನಿ ಕೊಟ್ರೇಶ ಮಾತನಾಡಿ, ದತ್ತಿ ಉಪನ್ಯಾಸಗಳ ಮೂಲಕ ಶರಣರ, ವಚನಕಾರರ, ಸಾಹಿತಿಗಳ ಪರಿಚಯ ಹಾಗೂ ಅವರ ಕಾರ್ಯಕ್ಷೇತ್ರದ ಸಾಧನೆಯನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡುವ ಯತ್ನ ಕಸಾಪದ್ದಾಗಿದೆ. ತಾಲೂಕಿನ ಕಾಲೇಜು, ಪ್ರೌಢ ಶಾಲೆಗಳಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿಮಾನ ಮೂಡಿಸಲಾಗುತ್ತಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಗೌರವ ಕಾರ್ಯದರ್ಶಿ ಎಸ್.ರಾಜಣ್ಣ, ಅತಿಥಿಗಳಾದ ಪ್ರಾಚಾರ್ಯ ಎಸ್.ಎ

ಸಂಭ್ರಮದಿAದ ಜರುಗಿದ ಗಾಣಗಟ್ಟೆ ಮಾಯಮ್ಮ ದೇವಿಯ ರಥೋತ್ಸವ

ಇಮೇಜ್
ಕೊಟ್ಟೂರು : ಸದಾ ಹಣ ಅಲಂಕಾರ ದೇವತೆ ಎಂದೇ ಪ್ರಸಿದ್ಧವಾದ ತಾಲೂಕಿನ ಗಾಣಗಟ್ಟೆ ಮಾಯಮ್ಮ ದೇವಿಯ ರಥೋತ್ಸವ ಬುಧವಾರ ಸಂಜೆ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ವಿಜೃಂಭಣೆಯಿAದ ನೆರವೇರಿತು. ಆಂಧ್ರ ಪ್ರದೇಶ ಸೇರಿದಂತೆ ರಥೋತ್ಸವದ ಮುಂಚೆ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಮತ್ತಿತರ ಕಡೆಯಿಂದ ಭಕ್ತರು ರಥೋತ್ಸವ ದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಇದರೊಂದಿಗೆ ರಥೋತ್ಸವ ವೀಕ್ಷಣೆಗೆ ಹರಕೆ ಹೊತ್ತು ಕೆಲ ಭಕ್ತರು ಕೊಟ್ಟೂರು ಮತ್ತಿತರ ಕಡೆಗಳಿಂದ ಪಾದಯಾತ್ರೆ ಮೂಲಕ ಆಗಮಿಸಿದ್ದರು.  ವಾದ್ಯಗಳೊಂದಿಗೆ ರಥದ ಬಳಿ ಪಲ್ಲಕ್ಕಿ ಮೆರವಣಿಗೆಯೊಂದಿಗೆ ತಂದ ಪೂಜಾ ಬಳಗದವರು ರಥದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ದೇವಿಯ ಪಟದ ಹರಾಜು ಪ್ರಕ್ರಿಯೆ ನಡೆಯಿತು. ದಾವಣಗೆರೆ ಮಹೇಶ ಅವರು ಮುಕ್ತಿ ಬಾವುಟ ಪಟಾಕ್ಷಿಯನ್ನು 301101 ರೂಗಳಿಗೆ ಕೂಗಿ ಪಡೆಯುವಲ್ಲಿ ಯಶಸ್ವಿಯಾದರು. ರಾಜ್ಯದ ಉಳಿದ ಎಲ್ಲಾ ದೇವರ ರಥಗಳನ್ನು ಭಕ್ತರು ಮಿಣಿ ಮೂಲಕ ಎಳೆದೊಯ್ದರೆ ಗಾಣಗಟ್ಟೆ ಮಾಯಮ್ಮ ದೇವಿಯ ರಥವನ್ನು ಯಾವುದೇ ಮಿಣಿ ಬಳಸದೆ ಭಕ್ತರು ತಳ್ಳುವ ಮೂಲಕ ರಥವನ್ನು ಎಳೆದೊಯ್ದರು. ರಥ ಪಾದಗಟ್ಟೆವರೆಗೆ ಮುಂದುವರೆದು ನಂತರ ಮೂಲ ಸ್ಥಾನಕ್ಕೆ ಬಂದು ತಲುಪಿತು. ರಥ ಸಾಗುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರು ಬಾಳೆಹಣ್ಣು, ಉತ್ತುತ್ತಿ ಮತ್ತಿತರಗಳನ್ನು ಎಸೆದು ದೇವಿಗೆ ನಮಿಸಿದರು.

15 ದಿನದಿಂದ ಕುಡಿಯಲು ನೀರಿಲ್ಲದೇ ಶಾಲಾ ವಿದ್ಯಾರ್ಥಿಗಳ ಪರದಾಟ

ಇಮೇಜ್
ಮಸ್ಕಿ : ತಾಲೂಕಿನ ಮೆದಿಕಿನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕರೇಗುಡ್ಡ ಶಾಲಾ ಮಕ್ಕಳು ಕುಡಿಯಲು ಮತ್ತು ತಟ್ಟೆ ತೊಳೆಯಲು 15 ದಿನಗಳಿಂದ ನೀರಿಲ್ಲದೇ ಪರದಾಟ ಪಿಡಿಒ ಗಮನಕ್ಕೆ ತಂದರೂ ಕ್ಯಾರೇ ಎನ್ನದೆ ನಿರ್ಲಕ್ಷ್ಯ ತೋರಿದ್ದರಿಂದ ಶಾಲಾ ವಿದ್ಯಾರ್ಥಿಗಳು ತಟ್ಟೆ ಹಿಡಿದು ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿದರು. ಸತತ ಹದಿನೈದು ದಿನಗಳಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ (ಕರೇಗುಡ್ಡ) ಮೆದಿಕಿನಾಳ ಶಾಲಾ ಮಕ್ಕಳು ನೀರು ಇಲ್ಲದೇ ಪರದಾಟ ನಡೆಸಿದ್ದು,ಶಾಲೆಯ ವಿದ್ಯಾರ್ಥಿಗಳ ಪಾಲಕರು ಹಾಗೂ ಸಾರ್ವಜನಿಕರು ಯಾರೇ ಕರೆ ಮಾಡಿದರೂ ಕರೆ ಸ್ವೀಕರಿಸದೇ ನಿರ್ಲಕ್ಷ್ಯ ವಹಿಸುವ ಮೂಲಕ ಕರ್ತವ್ಯ ಲೋಪ ಎಸಗಿದ ಮೆದಿಕಿನಾಳ ಗ್ರಾಮ ಪಂಚಾಯತಿ ಪಿಡಿಒ ತಿಮ್ಮಣ್ಣ ಭೋವಿ. ಯಾರೋ ಮಾಡಿದ ಕರ್ತವ್ಯ ಲೋಪಕ್ಕೆ ಸಮಜಾಯಿಷಿ ಉತ್ತರ ನೀಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗೆ ಶಾಲೆಯಲ್ಲಿ ನೀರಿಲ್ಲ ಎಂದು ವಿದ್ಯಾರ್ಥಿಗಳು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶೇಖರಪ್ಪ ಭಜಂತ್ರಿ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ತೆರಳಿ 15 ದಿನದಿಂದ ನೀರು ಬಂದಿಲ್ಲ ಎಂದು ಕೇಳಲು ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಯನ್ನು ಕೇಳಿದರೇ ಕಛೇರಿಯಲ್ಲಿ ಇರುವುದಿಲ್ಲ. ನಂತರ ಸಿಬ್ಬಂದಿಯಾದ ಕಾರ್ಯದರ್ಶಿ ಅಮರೇಶ್ ಆಗಮಿಸಿ ಇಂದು ಪಿಡಿಒ ತಿಮ್ಮಣ್ಣ ಭೋವಿ ರವರು ರಾಯಚೂರಿಗೆ ತೆರಳಿದ್ದಾರೆ ನೀರಿನ ಸಮಸ್ಯೆಯನ್ನು ನಾಳೆಯೇ ಬಗೆಹರಿಸಲಾಗುವುದು ಎಂದು ಪಿಡಿಒ ಸಾಹೇಬ್ರ

ತಮ್ಮದಲ್ಲದ ಜಾಗದಲ್ಲಿ ಬೀದಿಬದಿ ವ್ಯಾಪಾರಸ್ತರ ಹಣ್ಣಿನ ಅಂಗಡಿ ಮೇಲೆ ದೇವರಮನಿ ಶಿವಚರಣ ದರ್ಪ

ಇಮೇಜ್
ಕೊಟ್ಟೂರು : ಪಟ್ಟಣದ ಸರ್ವೆ ನಂ. ೭೬೪/೧ ರಲ್ಲಿ ೦.೩೩ ಎಕರೆ ಜಮೀನಿನಲ್ಲಿ ೦.೧೦ ಎಕರೆ ಜಮೀನಿಗೆ ಸಂಬಂಧಿಸಿದಂತೆ ಕೂಡ್ಲಿಗಿ ನ್ಯಾಯಾಲಯದಲ್ಲಿ ೨೦೦೧ ರಲ್ಲಿ ದಾವೆ ದಾಖಲಾಗಿದ್ದು ೨೦೨೩ರ ಏಪ್ರಿಲ್ ತಿಂಗಳಲ್ಲಿ ಎಫ್.ಡಿ.ಪಿ. ಡಿಕ್ರಿ ಆಗಿ ಗಂಗಾಧರ, ರುದ್ರೇಶ್ ಮತ್ತು ಇತರರಿಗೆ ನ್ಯಾಯಾಲಯದಿಂದ ಸ್ವಾಧೀನ ಆದೇಶ ನೀಡಿರುತ್ತದೆ.  ನ್ಯಾಯಾಲಯದ ಆದೇಶದ ಮೇರೆಗೆ ಅಮೀನ್ದಾರ್ ಪರಮೇಶ್ ರವರು ಸ್ಥಳಕ್ಕೆ ಆಗಮಿಸಿ, ೦.೧೦ ಎಕರೆ ಜಮೀನನ್ನು ಮಾಲೀಕರಿಗೆ ಹಸ್ತಾಂತರಿಸಿದರು. ಹಾಗೂ ಪಟ್ಟಣದಲ್ಲಿ ತಮಟೆ ಮೂಲಕ ಸಾರಿದರು. ಯಾರೂ ಸಹ ಇದರಲ್ಲಿ ಒತ್ತುವರಿ ಮಾಡಬಾರದೆಂದು ಸಾರು ಹಾಕಿದರು. ಕೊಟ್ -1 ಇತ್ತೀಚಿನ ದಿನಗಳಲ್ಲಿ ಹಣ್ಣಿನ ಅಂಗಡಿ ಮೇಲೆ ದರ್ಪ ಮಾಡಿರುವ ದೇವರಮನಿ ಶಿವಚರಣ ಇವರು ಈ ಜಾಗ ಕೋರ್ಟ್‌ನಿಂದ ಎಫ್.ಡಿ.ಪಿ. ಆಗಿದ್ದು ನ್ಯಾಯಾಲಯದವರು ಬುಧವಾರ ರಂದು ಈ ಜಾಗವನ್ನು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ಇದೆಲ್ಲ ತಿಳಿದಿದ್ದೂ, ಬೀದಿಬದಿಯ ವ್ಯಾಪಾರದ ಹಣ್ಣಿನ ಅಂಗಡಿಯ ಮೇಲೆ ದರ್ಪ ತೋರಿಸಿರುವ ಇವರಿಗೆ ಸರಿಯಾದ ಮಾಹಿತಿ ಇದ್ದೂ, ಬೇಕೆಂದೇ ಇಂತಹ ದರ್ಪ ತೋರಿಸಿದ್ದಾರೆ. ಇಲ್ಲಿಯವರೆಗೂ ಪೊಲೀಸ್ ಇಲಾಖೆ ಕಾನೂನು ಕ್ರಮ ಜರುಗಿಸಿರುವುದಿಲ್ಲ ಎಂದು ಪ್ರವೀಣ್ ಕುಮಾರ್ ತಿಳಿಸಿ, ಇಂತಹವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದರು.

ಕೌಶಲ್ಯ ತರಬೇತಿಯನ್ನು ಸದುಪಯೋಗ ಪಡಿಸಿಕೊಳ್ಳಿ : ಸಿದ್ದಪ್ಪ ಉದ್ಬಾಳ

ಇಮೇಜ್
ಮಸ್ಕಿ : ಕೌಶಲ್ಯ ತರಬೇತಿಯನ್ನು ಯುವಕರು ಸದುಪಯೋಗ ಪಡಿಸಿ ಕೊಳ್ಳಬೇಕು ಎಂದು ಸನ್ ರೈಸ್ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸಿದ್ದಪ್ಪ ಉದ್ಬಾಳ ರವರು ಹೇಳಿದರು. ಪಟ್ಟಣದಲ್ಲಿ ಸನ್ ರೈಸ್ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ರಾಯಚೂರಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆ ಹಾಗೂ ಪರೀಕ್ಷೆ ಪೂರ್ವ ತರಬೇತಿ ಕೇಂದ್ರದ ವತಿಯಿಂದ ಜರುಗುವ ನಿರುದ್ಯೋಗ ಯುವಕ ಯುವತಿಯರಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ ಯುವಕರು ಓದು ಬರಹ ಹಾಗೂ ಜ್ಞಾನದ ಬಗ್ಗೆ ತಿಳಿದುಕೊಳ್ಳದೆ ಕಲಹಾರಣ ಮಾಡುತ್ತ ಸಮಯವನ್ನು ವ್ಯರ್ಥ ಮಾಡುತ್ತಾ ಜೀವನ ನಡೆಸುತಿದ್ದೇವೆ.   ಯುವಕರು ಈ ರೀತಿಯ ತರಬೇತಿಗಳನ್ನು ಪಡೆದುಕೊಂಡು ಸರಕಾರದ ಪ್ರತಿಯೊಂದು ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುತ್ತಾ ಅಭಿವೃದ್ಧಿಯನ್ನು ಕಾಣಬೇಕು ಹಾಗೂ ಸರಕಾರದ ಪ್ರತಿಯೊಂದು ಯೋಜನೆಗಳ ಲಾಭ ಪಡೆದುಕೊಳ್ಳಲು ಮನವಿ ಮಾಡಿದರು. ಅದೇ ರೀತಿ,SKES ಪ್ಯಾರಾಮೆಡಿಕಲ್ ಕಾಲೇಜ್ ಸಂಸ್ಥೆಯ ಅಧ್ಯಕ್ಷರಾದ ಡಾ. ಬಾಬುರಾವ್ ಎಂ  ರಾಯಚೂರು ರವರು ಮಾತನಾಡಿ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗ ಯುವಕರನ್ನು ಉದ್ದೇಶಿಸಿ ಮಾತನಾಡಿ ಸ್ಪರ್ಧೆ ಮಾಡೋದಕ್ಕೆ ಯಾವುದೇ ರೀತಿಯ ಭೇದಭಾವ ತಾರತಮ್ಯ ಇರುವುದಿಲ್ಲ. ಆದ್ದರಿಂದ ನಾವುಗಳು ಅಂತಹ ಮೇಲು ಕೀಳು ತಾರತಮ್ಯಗಳನ್ನು ಹಿಂದಕ್ಕೆ ತಳ್ಳಿ ಮುಂದೆ ಬಂದಾಗ ಮಾತ್ರ ನಮಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಗಳು