ಪೋಸ್ಟ್‌ಗಳು

ಪುನೀತ್ ರಾಜ್ ಕುಮಾರ್ 49ನೇ ಜನ್ಮದಿನದ ಅಂಗವಾಗಿ : ನೂರಾರು ಜನರಿಗೆ ಅನ್ನ ಸಂತರ್ಪಣೆ,ಮಕ್ಕಳಿಗೆ ಪುಸ್ತಕ ವಿತರಣೆ

ಇಮೇಜ್
ಕೊಟ್ಟೂರು: ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಅವರ 49ನೇ ಜನ್ಮದಿನಾಚರಣೆ  ನಿಮಿತ್ತ ಭಾನುವಾರ ಕೊಟ್ಟೂರಿನ ಗಾಂಧಿ ಸರ್ಕಲ್ ತೇರು ಗಡ್ಡೆ ಹತ್ತಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಕರ್ನಾಟಕ ರತ್ನ  ಡಾಕ್ಟರ್ ಪುನೀತ್ ರಾಜಕುಮಾರ್ ಅವರ  ಜನ್ಮದಿನಾಚರಣೆ  ಅಂಗವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್, ಪೆನ್ನು ,ಪೆನ್ಸಿಲ್ ರಬ್ಬರ್ ಹಾಗೂ ಪುಸ್ತಕ, ಫ್ಲೆವುಡ್ ಗಳನ್ನು ವಿತರಿಸಲಾಯಿತು. 17 ಕೆಜಿ ಕೇಕನ್ನು ಕತ್ತರಿಸಿ ನಂತರ ಪುನೀತ್ ರಾಜಕುಮಾರ್ ಅವರಿಗೆ ಪೂಜೆ ಸಲ್ಲಿಸಿದರು. ಬಿರು ಬಿಸಿಲಿನ ಬೇಸಿಗೆಯ ಪುನೀತ್ ರಾಜಕುಮಾರ್ ರವರ ಹೆಸರಿನಲ್ಲಿ "ನೀರಿನ ಅರವಟ್ಟಿಗೆ " ದಾಹವನ್ನು  ತೀರಿಸಿದ ಪುನಿತ್ ಅಭಿಮಾನಿಗಳು, ಮತ್ತು ನೂರಾರು ಜನರಿಗೆ ಅನ್ನಸಂತರ್ಪಣೆ ಏರ್ಪಡಿಸಿದರು. ಈ ಕಾರ್ಯಕ್ರಮವು ಯಶಸ್ವಿಯಾಗಲು ಸಹಕರಿಸಿದ ಸಾರ್ವಜನಿಕರಿಗೆ ಹಾಗೂ ಸ್ನೇಹಿತರ ಬಳಗಕ್ಕೆ ಪ್ರಕಾಶ್ ರಾಂಪುರದ ಇವರು ತುಂಬು ಹೃದಯದಿಂದ ಅಭಿನಂದನೆಯನ್ನು ಸಲ್ಲಿಸಿದರು.                                           ಈ ಸಂದರ್ಭದಲ್ಲಿ ಅಧ್ಯಕ್ಷರು ರಾಂಪುರ ಪ್ರಕಾಶ್,ಕೆ ಎಮ್ ಎಮ್ ಗುರುಸ್ವಾಮಿ ಉಪಾಧ್ಯಕ್ಷರು , ಹಾಗೂ ಜಿ ರಾಜು. ಎಲ್ ಕೊಟ್ರೇಶ.ಎಚ್ ವೀರೇಶ. ಐ ಮಂಜುನಾಥ. ಬಿ ಅಪ್ಪಾಜಿ. ಬಿ ಗೀರಿಷ. ಬಿ ಕೊಟ್ರೇಶ. ಜಿ ಕೊಟ್ರೇಶ. ಉಪಸ್ಥಿತರಿದ್ದರು.

ಪ್ರಾಣಿ ಪಕ್ಷಿಗಳ ದಾಹ ನೀಗಿಸಿ : ಮಂಜುನಾಥ್ ಬಿಜ್ಜಳ್

ಇಮೇಜ್
ಮಸ್ಕಿ : ಬೇಸಿಗೆಯ ಸಂದರ್ಭದಲ್ಲಿ ಪಕ್ಷಿಗಳ ನೀರಿನ ದಾಹವನ್ನು ನೀಗಿಸುವ ಉದ್ದೇಶದಿಂದ ಅರವಟ್ಟಿಗೆ ಕಟ್ಟುವ ಸಲುವಾಗಿ 141 ನೇ ಸಂಡೆ ಫಾರ್ ಸೋಷಿಯಲ್ ವರ್ಕ್ ಅಭಿಯಾನದ ಮೂಲಕ ಮನೆ ಮನೆಗಳಲ್ಲಿ ಅರವಟ್ಟಿಗೆ ಕಟ್ಟುವ ಜಾಗೃತಿ ಅಭಿಯಾನಕ್ಕೆ ಮಸ್ಕಿಯ ಬಸವೇಶ್ವರ ನಗರದ ಪುಟ್ಟರಾಜ ಗವಾಯಿ ಉದ್ಯಾನವನದಲ್ಲಿ ಚಾಲನೆ ನೀಡಲಾಯಿತು. ಇದೆ ಸಂದರ್ಭದಲ್ಲಿ ಚಾಲನೆ ನೀಡಿ ಮಾತನಾಡಿದ ಶುಭೋದಯ ವಾಕಿಂಗ್ ಟೀಮ್ ಗೆಳೆಯರ ಬಳಗದ ಅಧ್ಯಕ್ಷರಾದ ಮಂಜುನಾಥ್ ಬಿಜ್ಜಳ್ ಅವರು ಬೇಸಿಗೆ ಆರಂಭವಾಗಿದೆ. ಈ ಸಂಧರ್ಭದಲ್ಲಿ ನೀರಿನ ಸಮಸ್ಯೆ ಎನ್ನುವುದು ಸಾಮಾನ್ಯ ಆಗಿರುತ್ತದೆ. ಮನುಷ್ಯರು ತಮ್ಮ ನೀರಿನ ದಾಹ ಹೇಗೋ ನಿವಾರಣೆ ಮಾಡಿಕೊಂಡು ಜೀವಿಸುತ್ತಾರೆ. ಆದರೆ ಪ್ರಾಣಿ ಪಕ್ಷಿಗಳಿಗೆ ಇದು ಸ್ವಲ್ಪ ಕಷ್ಟವಾಗುತ್ತೆ. ಪ್ರಾಣಿ ಪಕ್ಷಿಗಳ ದಾಹ ನೀಗಿಸುವದು ಮತ್ತು ಅವುಗಳನ್ನು ರಕ್ಷಣೆ ಮಾಡುವದು ನಮ್ಮೆಲ್ಲರ ಹೊಣೆ ಆಗಿದೆ. ಆದ್ದರಿಂದ ಎಲ್ಲರೂ ದಯವಿಟ್ಟು ತಮ್ಮ ತಮ್ಮ ಮನೆಗಳ ಮೇಲೆ ನೀರು ಹಾಗೂ ಆಹಾರವನ್ನು ಪೂರೈಕೆ ಮಾಡಿ ಎಂದರು. ಮತ್ತು ಈ ಕಾರ್ಯಕ್ಕೆ ಅಭಿಯಾನ ಆರಂಭಿಸಿದ ಅಭಿನಂದನ್ ಸಂಸ್ಥೆಯ ಎಲ್ಲಾ ಸಾಮಾಜಿಕ ಕಾರ್ಯಗಳಿಗೆ ಶುಭವಾಗಲಿ ಎಂದು ಹರಸಿದರು. ಈ ಸಂಧರ್ಭದಲ್ಲಿ ಮಲ್ಲಿಕಾರ್ಜುನ ಹೂವಿನಭಾವಿ, ಭರತ್ ದೇಶಮುಖ್, ವಿರೇಶ ಕಮತರ್, ಪರಶುರಾಮ ಕೊಡಗುಂಟಿ, ಮಲ್ಲಿಕಾರ್ಜುನ ಉದ್ಬಾಳ, ಸೋಮಶೇಖರ್ ಸಿರವಾರ ಮಠ, ಸಿದ್ಧಾರೆಡ್ಡಿ ಗಿಣಿವಾರ, ಮಹಾಂತೇಶ ಎಚ್, ರಾಮಣ್ಣ ಹಂಪರಗುಂದಿ ಹಾಗೂ ಪದಾಧಿಕಾರಿ

ಗುಟುಕು ನೀರಿನ ಅಭಿಯಾನ ಶ್ಲಾಘನೀಯ : ಪಿಎಸ್ಐ ದಾದಾವಲಿ

ಇಮೇಜ್
ಮಸ್ಕಿ : ತಾಲೂಕಿನ ಬಳಗಾನೂರ ಪಟ್ಟಣದ ಪೋಲಿಸ್ ಠಾಣೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ಮಸ್ಕಿ ತಾಲೂಕ ಘಟಕ ಹಾಗೂ ಪೋಲಿಸ್ ಇಲಾಖೆ ಸಹಯೋಗದೊಂದಿಗೆ ಹಕ್ಕಿ ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವನ್ನು ಪಕ್ಷಿಗಳ ಅರವಟ್ಟಿಗೆ ಗಳಿಗೆ ಕಾಳು ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಬಳಗಾನೂರ ಪೋಲಿಸ್ ಠಾಣೆಯ ಅಧಿಕಾರಿ PSI ದಾದಾವಲಿ ಅವರು ವನಸಿರಿ ಫೌಂಡೇಶನ್ ಮಸ್ಕಿ ತಾಲೂಕ ಘಟಕದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಪಕ್ಷಿಗಳ ಅರವಟ್ಟಿಗೆ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಬರಗಾಲದಲ್ಲಿ ಕೂಡಾ ಪ್ರಾಣಿ ಪಕ್ಷಿಗಳ ಉಳುವಿಗಾಗಿ ಕೈಗೊಂಡ ಕಾರ್ಯ ಶ್ಲಾಘನೀಯ.ಸಾರ್ವಜನಿಕರು ಕೂಡಾ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹ ತೀರಿಸಲು ಮುಂದಾಗಬೇಕು. ಈ ವರ್ಷ ದೇಶದಾದ್ಯಂತ ಬರಗಾಲದಿಂದ ಅಂತರ್ಜಲ ಮತ್ತು ಪ್ರತಿ ಹಳ್ಳಕೊಳ್ಳಗಳಲ್ಲಿರುವ ನೀರಿನ ಪ್ರಮಾಣ ಸಾಕಷ್ಟು ಕಡಿಮೆಯಾಗಿ ಎಲ್ಲಾ ಕಡೆ ಒಣಗಿರುವ ಸಂದರ್ಭದಲ್ಲಿ ಜನಸಾಮಾನ್ಯರಿಗೆ ನೀರಿನ ಅಭಾವ ಹೆಚ್ಚಾಗಿದೆ.ಅದೇರೀತಿ ಪ್ರಾಣಿಪಕ್ಷಿಗಳಿಗೆ ಮೂಕ ಜಲಜಂತುಗಳಿಗೆ ಮುಖ್ಯವಾಗಿ ನೀರು ಅವುಗಳಿಗೂ ಬೇಕು ಅಂತ ಸಂದರ್ಭದಲ್ಲಿ ಆ ಪ್ರಾಣಿಗಳು ನೀರಿಲ್ಲದೆ ಹುಡುಕಿಕೊಂಡು ಹೋಗಿ ಸತ್ತು ಹೋಗಿರುವ ಸಾಕಷ್ಟೂ ಉದಾಹರಣೆಗಳು ನಮ್ಮಲ್ಲಿವೆ. ಇದನ್ನರಿತ ವನಸಿರಿ ಫೌಂಡೇಶನ್ ನಿಂದ ಪ್ರಾಣಿಪಕ್ಷಿಗಳ ಉಳುವಿಗೋಸ್ಕರ ವಿನೂತನ ಕಾರ್ಯಕ್ರಮ ಮಣ್ಣಿನ ಮಡಿಕೆಗಳನ್ನು ಕಟ್ಟಿ ಆಹಾರ ಮತ್ತು ನೀ

ಸೋಮನಾಥ ಜೆಇ ಮೇಲೆ ಕ್ರಮ ಜರುಗಿಸಲು ಮನವಿ

ಇಮೇಜ್
ವರದಿ : ಗ್ಯಾನಪ್ಪ ದೊಡ್ಡಮನಿ ಮಸ್ಕಿ : ತಾಲೂಕಿನ ಹಿರೇದಿನ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮೆಹಬೂಬ್ ನಗರ ಕ್ಯಾಂಪಿನಲ್ಲಿ ಶಾಸಕರ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಿದ್ದು ಸದರಿ ಕಾಮಗಾರಿಯ ಬಗ್ಗೆ ಸಾರ್ವಜನಿಕರು ಸೋಮನಾಥ ಜೆಇ ಎನ್ನುವವರ ಬಳಿ ಮಾಹಿತಿ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಗ್ರಾಮದ ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಯಚೂರು ಇವರಲ್ಲಿ ಮನವಿ ಪತ್ರವನ್ನು ಸಲ್ಲಿಸಿದರು. ಹಿರೇದಿನ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮೆಹಬೂಬ್ ನಗರ ಕ್ಯಾಂಪಿನಲ್ಲಿ ಶಾಸಕರ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆದಿರುತ್ತದೆ ಸದರಿ ಸಿಸಿ ರಸ್ತೆ ಕಾಮಗಾರಿಯು ಸಂಪೂರ್ಣವಾಗಿ ಕಳಪೆ ಮಟ್ಟದಲ್ಲಿ ನಿರ್ವಹಿಸುತ್ತಿರುವುದು ಗ್ರಾಮಸ್ಥರಾದ ನಮಗೆ ತಿಳಿದು ಬಂದಿರುವುದರಿಂದ ಸದರಿ ಕಾಮಗಾರಿಯೂ ಸರಕಾರ ಹೊರಡಿಸಿರುವ ಅಂದಾಜು ಪಟ್ಟಿಯಲ್ಲಿ ಇರುವ (ಎಸ್ಟಿಮೇಟ್ ಕಾಫಿ) ಪ್ರಕಾರ ಕಾಮಗಾರಿಯನ್ನು ಮಾಡುತ್ತಿಲ್ಲವೆಂಬುವುದು ಧೃಡಪಟ್ಟಿದ್ದು,ಸೋಮನಾಥ ಜೆಇ ಇವರನ್ನು ಸಾರ್ವಜನಿಕರು ಕಾಮಗಾರಿಯ ವಿವರ ನೀಡಿ ಎಂದು ಕೇಳಿದರೇ ಜಿಲ್ಲಾ ಪಂಚಾಯತ್ ರಾಯಚೂರು ಇವರನ್ನು ಭೇಟಿಯಾಗಿ ಸದರಿ ಕಾಮಗಾರಿ ಕಳಪೆ ಮಟ್ಟದ್ದಾಗಿರುತ್ತದೆ.  ಎಂದು ವಿನಂತಿಸಿ ಕೊಂಡಾಗ ನೀವು ನನ್ನನ್ನು ಏನು ಕೇಳಬಾರದು? ನಾನು ಯಾವುದನ್ನು ಕೊಡುವುದಿಲ್ಲ.. ಯಾವ ಬಜೆಟ್ ನಲ್ಲಿ ಆಗಿರ

"ಅದ್ದೂರಿಯಾಗಿ ತೂಲಹಳ್ಳಿ ಮರುಳ ಸಿದ್ದೇಶ್ವರ ಸ್ವಾಮಿ ರಥೋತ್ಸವ"

ಇಮೇಜ್
ಕೊಟ್ಟೂರು ತಾಲೂಕಿನ ತೂಲಹಳ್ಳಿ ಗ್ರಾಮದ ಮರುಳ ಸಿದ್ದೇಶ್ವರ ಸ್ವಾಮಿ ಯ ರಥೋತ್ಸವ ಗುರುವಾರ ಸಂಜೆ ಅಸಾಂಖ್ಯಾತ ಭಕ್ತರ ನಡುವೆ ನಡೆಯಿತು. ಪ್ರತಿ ವರ್ಷ ದಂತೆ ಈ ವರ್ಷ ವು ಭಕ್ತರ ಸಂಖ್ಯೆ ಹೆಚ್ಚುತ್ತಿದೆ ಮರುಳಸಿದ್ದೇಶ್ವ ಸ್ವಾಮಿಯು ಸಕಲ ಬಿರುದಾವಾಳಿಗಳಿಂದ ರಥವನ್ನೇರಿದರು ಭಕ್ತರು ಬಾಳೆಹಣ್ಣು.ಕಾಯಿ ಹಾಕುವದರ ಮೂಲಕ ತಮ್ಮ ಭಕ್ತಿ ಮೇರೆದರು.

ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬೆಳೆಯಬೇಕು : ಎನ್ ಎಫ್ ಐ ಡಬ್ಲ್ಯೂ ರಾಜ್ಯ ಕಾರ್ಯದರ್ಶಿಗಳು ಕೆ ರೇಣುಕಮ್ಮ

ಇಮೇಜ್
ಕೊಟ್ಟೂರು ತಾಲೂಕಿನ ಕೆ ಗಜಾಪುರ ಗ್ರಾಮದಲ್ಲಿ ಶುಕ್ರವಾರ ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ  ಎನ್ ಎಫ್ ಐ ಡಬ್ಲ್ಯೂ ರಾಜ್ಯ ಕಾರ್ಯದರ್ಶಿಗಳು ಕೆ ರೇಣುಕಮ್ಮ, ಮಾತನಾಡಿ ಅಂತರರಾಷ್ಟ್ರೀಯ ಮಹಿಳಾ ದಿನದ ಮಹತ್ವ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸಲು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ.  21ನೇ ಶತಮಾನದ ಅತಿದೊಡ್ಡ ಜಾಗತಿಕ ಸವಾಲುಗಳಲ್ಲಿ ಒಂದಾಗಿದೆ. ಪುರುಷರಿಗಿಂತ ಮಹಿಳೆಯರನ್ನು ಹೆಚ್ಚು ದುರ್ಬಲರಂತೆ ಕಾಣಲಾಗುತ್ತಿದೆ. ಮಹಿಳೆಯರು ಪ್ರಮುಖ ಪಾತ್ರವಹಿಸುತ್ತಾರೆ. ಮಹಿಳೆಯರು ಮತ್ತು ಯುವತಿಯರು ಹೆಚ್ಚು ಪ್ರಭಾವಶಾಲಿ, ಶಕ್ತಿಯುತ ನಾಯಕಿಯರಾಗಿದ್ದಾರೆ.  ವಿಶ್ವದಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಸಾರ್ವಜನಿಕ ಭಾಷಣ, ರ್‍ಯಾಲಿ, ಕಾರ್ಯಾಗಾರ ಮತ್ತು ವಿಚಾರಗೋಷ್ಠಿ, ಚರ್ಚೆಗಳು, ರಸಪ್ರಶ್ನೆ ಸ್ಪರ್ಧೆ ಮತ್ತು ಉಪನ್ಯಾಸಗಳನ್ನು ನಡೆಸುವ ಮೂಲಕ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ.ಎಂದು ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು,ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಾರದಮ್ಮ ಗ್ರಾಮ ಪಂಚಾಯಿತಿ ಸದಸ್ಯರು ಎಚ್ ನಾಗರತ್ನಮ್ಮ, ಮುಖ್ಯ ಗುರುಗಳಾದ ಎಚ್ ಅಂಜಿನಪ್ಪ ಶಿಕ್ಷಕರು, ಗುರು ಸರ್ ,ಸವಿತಾ ವಿ,ಎ ಬಸಮ್ಮ ಗ್ರಾಮ ಲೆಕ್ಕಾಧಿಕಾರಿಗಳು,  ಚೇತನ ಮೇಡಂ ಅವರು, ಚಂದ್ರಪ್ಪ ಸರ್, ಶಾಲಿನಿ ಮೇಡಂ, ರೇಖಾ ಮೇಡಂ, ಸ

"ಕೊಟ್ಟೂರಿನ ಎಲ್ಲಾ ವಾರ್ಡ್ಗಳಲ್ಲಿ ನೀರಿನ ಅಭಾವ "

ಇಮೇಜ್
ಕೊಟ್ಟೂರಿನ:ಡಾ. ಬಿ.ಆರ್ ಅಂಬೇಡ್ಕರ್ ಕಾಲೋನಿಯ ನಿವಾಸಿಗಳು ಕುಡಿಯುವ ನೀರಿಗಾಗಿ ನಿತ್ಯ ಪರದಾಟ ಕೊಟ್ಟೂರು : ನಿರ್ವಹಣೆಯಿಲ್ಲದೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಹಲವು ವರ್ಷಗಳಿಂದ ಸ್ಥಗಿತಗೊಂಡಿವೆ. ಈ ಕುರಿತು ಪಟ್ಟಣ ಪಂಚಾಯತಿ ದಿವ್ಯ ನಿರ್ಲಕ್ಷೆ ಧೋರಣೆ ತಾಳಿರುವ  ಪರಿಣಾಮ, ಬಿರು ಬಿಸಿಲಿಗೆ ಹಾಗೂ  ಕಾಲೋನಿಯ ಜನರು ನಿತ್ಯ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಪಟ್ಟಣದ ಹ್ಯಾಳ್ಯಾ ಡಾ. ಬಿ ಆರ್ ಅಂಬೇಡ್ಕರ್ ಕಾಲೋನಿಯಲ್ಲಿ ಸುಮಾರು 300 ಕುಟುಂಬಗಳು ವಾಸವಾಗಿದ್ದು ಕುಡಿಯುವ ನೀರಿಗಾಗಿ ದಿನನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಕಾಲೋನಿಯಲ್ಲಿ ಶುದ್ಧ ಕುಡಿಯುವಿನ ಘಟಕ ಸ್ಥಾಪನೆಯಾಗಿ ಮೂರ್ನಾಲ್ಕು ವರ್ಷ ಕಳೆದರೂ ನಿರ್ವಹಣೆ ಇಲ್ಲದೆ ಶುದ್ಧ ಕುಡಿಯುವ ನೀರಿನ ಘಟಕದ ತುಕ್ಕು  ಹಿಡಿದಿದ್ದಾವೆ. ಸಾರ್ವಜನಿಕ ಮೂಲಭೂತ ಸೌಕರ್ಯಗಳಲ್ಲಿ ಮೊದಲ ಆದ್ಯತೆಗೆ ಅರ್ಹವಾಗಿರುವ ಕುಡಿಯುವ ನೀರಿನ ಕುರಿತು ಪಟ್ಟಣ ಪಂಚಾಯಿತಿ ನಿರ್ಲಕ್ಷ ದೋರಣೆ ತಾಳಿರುವುದು ಇದರ ಬಗ್ಗೆ ಕಾಲೋನಿಯ ನಿವಾಸಿಗಳು ಸಂಬಂಧಪಟ್ಟ ಪಟ್ಟಣ ಪಂಚಾಯತಿ ಅಧಿಕಾರಿಗಳು ಮತ್ತು ಹಾಗೂ ಜನಪ್ರತಿನಿಧಿಗಳ ಹಲವು ಬಾರಿ  ಮನವಿ ಮಾಡಿದರು ಯಾವುದೇ ಪ್ರಯೋಜನವಿಲ್ಲ ಬೇಸಿಗೆ  ಮುನ್ನವೇ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದೇವೆ ಎಂದು ಸ್ಥಳೀಯ ನಿವಾಸಿಗಳಾದ ವೀರಭದ್ರಪ್ಪ ಜಿ ತಿಪ್ಪೇಸ್ವಾಮಿ, ಟಿ.ಮೈಲಾಪ್ಪ, ಅಮರೇಶ್ ಸ್ಥಳೀಯ ಆಡಳಿತ ವಿರುದ್ಧ   ಆಕ್ರೋಶ ವ್ಯಕ್ತಪಡ