ಉದ್ಬಾಳ ಯು ಹಾಗೂ ಚಿಕ್ಕಕಡಬೂರು ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಸಂವಿಧಾನ ಜಾಗೃತಿ ಜಾಥಾ
ಮಸ್ಕಿ : ತಾಲ್ಲೂಕಿನ ಉದ್ಬಾಳ ಯು ಹಾಗೂ ಚಿಕ್ಕಕಡಬೂರು ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು. ಜಾಥಾವು ಸುಂಕನೂರ ನಿಂದ ಗ್ರಾಮಕ್ಕೆ ಆಗಮಿಸುತ್ತಲೇ ಅಧಿಕಾರಿಗಳು ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು , ಅಂಗನವಾಡಿ ಕಾರ್ಯಕರ್ತೆಯರಿಂದ ಕುಂಭ, ಕಳಸ, ಡೊಳ್ಳು, ವಿದ್ಯಾರ್ಥಿಗಳಿಂದ ವಿವಿಧ ವೇಷಭೂಷಣ ಗಳಿಂದ ಉದ್ಬಾಳ ಯು ಹಾಗೂ ಚಿಕ್ಕಕಡಬೂರು ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ ಜಾಥಾವು ಬಹಳ ಸಂಭ್ರಮ ಸಡಗರದೊಂದಿಗೆ ಜರುಗಿತು. ನಂತರ ಕಾರ್ಯಕ್ರಮದಲ್ಲಿ ತಹಶೀಲ್ದಾರ ಸುಧಾ ಅರಮನೆ ಯವರು ಪ್ರತಿಜ್ಞೆ ವಿಧಿ ಭೋದಿಸಿದರು. ಇದೇ ವೇಳೆ ತಹಶೀಲ್ದಾರರಾದ ಸುಧಾ ಅರಮನೆ ರವರು ಮಾತನಾಡಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನ ಇಂದು ಎಲ್ಲರಿಗೂ ಉಪಯುಕ್ತವಾಗಿದೆ, ಸಂವಿಧಾನವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು,ಬೇರೆ ದೇಶಗಳಲ್ಲಿ ಅನೇಕ ಸಲ ರಚನೆ ಮಾಡಿದ ಸಂವಿಧಾನವನ್ನು ರದ್ದು ಮಾಡಿ ಮತ್ತೆ ಬೇರೆ ಅನುಕೂಲಕ್ಕೆ ತಕ್ಕಂತೆ ಸಂವಿಧಾನ ರಚನೆ ಮಾಡಿದ್ದು ಇದೆ, ಆದರೆ ಭಾರತದಲ್ಲಿ ಸ್ವಾತಂತ್ರ್ಯಗೊಂಡ ನಂತರ ರಚನೆಯಾದ ಸಂವಿಧಾನ ಇಂದಿಗೂ ಅದನ್ನೇ ಮುಂದುವರಿಸಿಕೊಂಡು ಬಂದಿದ್ದೀವಿ ಅಂದರೆ ಇದಕ್ಕೆ ಡಾ. ಬಿ.ಆರ್ ಅಂಬೇಡ್ಕರರ ಅಪಾರವಾದ ಜ್ಞಾನ, ಭವಿಷ್ಯದ ಕಲ್ಪನೆಯಾಗಿದೆ ಎಂದರು. ಈ ಸಂದರ್ಭದಲ್ಲಿ, ತಾಲೂಕ ಮಟ್ಟದ ಅಧಿಕಾರಿಗಳು, ವಿವಿಧ ಶಾಲೆಯ ಶಿಕ್ಷಕರು ದಲಿತ ಪರ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್