ಪೋಸ್ಟ್‌ಗಳು

ವಿಶ್ವಕರ್ಮ ಸಮಾಜ ಶ್ರೀ ಕಾಳಿಕಾ ದೇವಸ್ಥಾನದಲ್ಲಿ ದೀಪೋತ್ಸವ ಸಂಭ್ರಮಾಚರಣೆ

ಇಮೇಜ್
ಮಸ್ಕಿ : ಪಟ್ಟಣದ ಕಾಳಿಕಾ ದೇವಿ ದೇವಸ್ಥಾನದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಸ್ಥಾಪನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಶ್ರೀರಾಮನ ಫೋಟೋ ಪೂಜೆ ಮಾಡಿ. ನಂತರ ವಿಶ್ವಕರ್ಮ ಸಮಾಜ ಹಾಗೂ ಬಿಜೆಪಿ ಪಕ್ಷದ ಮುಖಂಡರು ದೇವಿಗೆ ಭಕ್ತಿಯಿಂದ ದೀಪ ಬೆಳಗಿ ಸರಳತೆಯಿಂದ ದೀಪೋತ್ಸವ ಸಂಭ್ರಮವು ಹಬ್ಬವಾಗಿ ಆಚರಿಸಲಾಯಿತು. ಸೋಮವಾರ ಅಯೋಧ್ಯೇಯಲ್ಲಿ ಮೈಸೂರ್ ನ ವಿಶ್ವಕರ್ಮ ಸಮಾಜದ ಶಿಲ್ಪಿ ಅರುಣ್ ಯೋಗಿರಾಜ್ ಅವರು ರೂಪಾಗೊಂಡ ಬಾಲಶ್ರೀ ರಾಮನ ಮೂರ್ತಿ ಕೆತ್ತನೆಗೆ ಇಂದು ಪ್ರಾಣ ಪ್ರತಿಷ್ಠಾಪನೆ ಪೂಜೆ ಮಾಡಿದ್ದು ನಮ್ಮ ದೇಶ ನಮ್ಮ ಸಮಾಜದ ಹೆಮ್ಮೆಯ ವಿಷಯವಾಗಿದೆ.ಮಸ್ಕಿ ವಿಶ್ವಕರ್ಮ ಕುಲದೇವತೆ ಶ್ರೀ ಕಾಳಿಕಾ ದೇವಿಗೆ ಮುಂಜಾನೆ ಅಭಿಷೇಕ ಪೂಜಾ ಪುನಸ್ಕಾರಗಳು ಹಾಗೂ ಶ್ರೀ ರಾಮನ ಫೋಟೋಕ್ಕೆ ಪೂಜೆ ಸಲ್ಲಿಸಿ ಆನಂತರ ಶ್ರೀ ಕಾಳಿಕಾ ದೇವಸ್ಥಾನದಲ್ಲಿ ಸಾಯಂಕಾಲ 5.30 ಕೆ ದೀಪಗಳನ್ನು ಹಚ್ಚುವ ಮುಖಾಂತರ ಶ್ರೀ ರಾಮನ ಫೋಟೋಕ್ಕೆ ದೀಪ ಬೆಳಗುವ ಮುಖಾಂತರ ಶ್ರೀ ರಾಮನ ನೆನೆದು ಭಕ್ತಿಯಿಂದ ಪೂಜಿಸಿದರು. ಈ ಒಂದು ದೀಪೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ಪ್ರತಾಪಗೌಡ ಪಾಟೀಲ್ ಹಾಗೂ ವಿಶ್ವಕರ್ಮ ಸಮಾಜದ ಮಹಿಳೆಯರು ಎಲ್ಲಾರು ಸೇರಿ ಈ ಕಾರ್ಯಕ್ರಮವನ್ನು ದೀಪ ಬೆಳಗುವ ಮುಖಾಂತರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಮಸ್ಕಿ ವಿಶ್ವಕರ್ಮ ಸಮಾಜದ ಮುಖಂಡರು ದೇವರಾಜ್ ಕಂಬಾರ್ ಅಂಬರೀಷ್ ಚಿಲ್ಕರಾಗಿ,ಮಸ್ಕಿ ವಿಶ್ವಕರ್ಮ ಸಮಾಜದ ಅಧ್ಯಕ್ಷರ

ಬಸಪ್ಪ ಜಂಗಮರ ಹಳ್ಳಿ ಬಗರ್ ಹುಕ್ಕುಂ ಸಮಿತಿಯನೂತನ ಸದಸ್ಯರಿಗೆ ಸನ್ಮಾನ

ಇಮೇಜ್
ಮಸ್ಕಿ : ತಾಲೂಕಿನ ಜಂಗಮರಹಳ್ಳಿ ಗ್ರಾಮದ ಮಾಜಿ ತಾಲೂಕ ಪಂಚಾಯತ ಸದಸ್ಯರಾದ ಬಸಪ್ಪ ಜಂಗಮರ ಹಳ್ಳಿ ಇವರನ್ನು ಬಗರ್ ಹುಕ್ಕುಂ ಸಮಿತಿಯ ಸದಸ್ಯರನ್ನಾಗಿ ಅಯ್ಕೆ ಮಾಡಿದ್ದು ಆತ್ಮೀಯರು ಹಾಗೂ ತಾಲೂಕ ಮುಖಂಡರಿಂದ ಸನ್ಮಾನ ಮಾಡಲಾಯಿತು. ಪಟ್ಟಣದ ಬಸವೇಶ್ವರ ವೃತ್ತದ ಬಳಿ ಮಸ್ಕಿ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಮಿತಿಗೆ ಮಸ್ಕಿ ಕ್ಷೇತ್ರದ ಶಾಸಕರಾದ ಆರ್ ಬಸನಗೌಡ ತುರುವಿಹಾಳ ಅವರು ಸದಸ್ಯರನ್ನಾಗಿ ಅಯ್ಕೆ ಮಾಡಿದ್ದು, ನೂತನ ಬಗರ್ ಹುಕ್ಕುಂ ಸದಸ್ಯರಿಗೆ ತಾಲೂಕ ಮುಖಂಡರು ಹಾಗೂ ಆತ್ಮೀಯರು ಶಾಲು ಹೊದಿಸಿ ಹೂವಿನ ಹಾರ ಹಾಕಿ ಸಿಹಿ ತಿನ್ನಿಸುವ ಮೂಲಕ ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿಕೆ ಆರ್ ಎಸ್ ಸಂಘದ ತಾಲೂಕ ಅಧ್ಯಕ್ಷರ ಸಂತೋಷ್ ಹಿರೆದಿನ್ನಿ ವೆಂಕಟೇಶ್ ನಾಯಕ್ ಚಿಲ್ಕರಾಗಿ,ಬಾಲಸ್ವಾಮಿ ಹೂವಿನಬಾವಿ, ಮಾಳಪ್ಪ, ಬಾಲ ಸ್ವಾಮಿ ಹಿರೇದಿನ್ನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕ್ಲಿನಿಕಲ್‌ಗಳ ಮಧ್ಯ ಹೊಂದಾಣಿಕೆಯಿಂದ : ನಕಲಿ ವೈದ್ಯರ ಹಾವಳಿ ತಡೆಗೆ ಆಗ್ರಹ..!

ಇಮೇಜ್
"ನಕಲಿ ವೈದ್ಯರಿಂದ ಜನರ ಜೀವನದ ಜೋತೆ ಚೆಲ್ಲಾಟ" ಕೊಟ್ಟೂರಿನಲ್ಲಿ ನಕಲಿ ವೈದ್ಯರ ಹವಾಳಿ ಹೆಚ್ಚಾಗಿದ್ದು ಜನರ ಜೀವನದ ಜೋತೆ ಚೆಲ್ಲಾಟ ಸಾರ್ವಜನಿಕರಲ್ಲಿ ಆಂತಕ ಜ್ವರ ಇತರೆ ಖಾಯಿಲೆಗಳಿಗೆ ಐಡೋಜ್ ಇಂಜೆಕ್ಷನ್ ಕೊಡುವುದು ಇದರಿಂದ ರೋಗಿಗಳಿಗೆ ರಿಯಾಕ್ಷನ್‌ಗೆ ಒಳಗಾಗಿ ದೂರದ ಆಸ್ಪತ್ರೆಗಳಿಗೆ ದಾಖಲಾಗಿ ಬಡರೋಗಿಗಳ ಜೀವಕ್ಕೆ ಸಾಚಕರ ತರುತ್ತಿದ್ದಾರೆ. ಮೆಡಿಕಲ್ ಶಾಪು ಹಾಗೂ ನಕಲಿ ವೈದ್ಯರ ಮಧ್ಯ ಹೊಂದಣಿಕೆಯಿಂದ ಜನರ ಜೀವನದ ಜೋತೆ ಚಲ್ಲಾಟವಾಡುತ್ತಿದ್ದಾರೆ. ಎಮ್.ಬಿ.ಬಿ.ಎಸ್. ಡಾಕ್ಟರ್‌ಗಳ ಮಾತ್ರೆ ಚೀಟಿಗಳನ್ನು ಮಾತ್ರ ಮೆಡಿಕಲ್ ಶಾಪುಗಳು ಪರೀಗಣಿಸಬೇಕು ಇವರುಗಳು ನಕಲಿ ವೈದ್ಯರ ಹೊಂದಣಿಕೆಯಿಂದ ಕಾನೂನು ಉಲ್ಲಂಘಿಸಿ ಯಾವ ಚೀಟಿಯಾಲ್ಲದರೂ ಬರೆದಿರುವ ಮಾತ್ರೆಗಳಿಗೆ ಕೂಡುತ್ತಿದ್ದು ಸಾರ್ವಜನಿಕರ ಜೀವನ ಜೋತೆ ಆಟವಾಡುತ್ತಿದ್ದಾರೆ. ಅಜೇಯ್ ಡಾಕ್ಟರ್ ಮೂಲವಾಧಿ ರೋಗಕ್ಕೆ ಮಾತ್ರ ಚಿಕಿತ್ಸೆಯ ಡಾಕ್ಟರ್‌ಆಗಿ ಇದ್ದು ಈಗ ಈ ಡಾಕ್ಟರ್ ಎಲ್ಲಾ ರೋಗಕ್ಕೂ ಚಿಕಿತ್ಸೆಯ ಮಾತ್ರೆ ಚೀಟಿಯನ್ನು ಪಕ್ಕದಲ್ಲೇ ಇರುವ ರಾಯಲ್ ಮೆಡಿಕಲ್ ಶಾಪು ಜೋತೆಗೆ ಹೊಂದಣಿಕೆಯಿಂದ ಸಾರ್ವಜನಿಕರಿಗೆ ಜಾಷಧಿಗಳನ್ನು ನೀಡುತ್ತಿದ್ದು ಮೆಡಿಕಲ್ ಶಾಪು ಪರವಾನಿಗೆ ರದ್ದುಪಡಿಸಬೇಕು, ನಕಲಿ ವೈದ್ಯರ ಮೇಲೆ ಸೂಕ್ತಕ್ರಮ ಕೈಗೊಳ್ಳುವಂತೆ.ಮತ್ತು ಇನ್ನೂ ಕೊಟ್ಟೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಅನೇಕ ನಕಲಿ ವೈದ್ಯರ ಕಡಿವಾಣ ಹಾಕುವಂತೆ. ಸಾರ್ವಜನಿಕರಾದ ವಿಜಯ್, ಹಾಗೂ ಸಂಘಟನೆಗಳು ಸಿಪಿಎಂಎಲ

ಪಟ್ಟಣದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯಿಂದ ಪಥಸಂಚಲನ

ಇಮೇಜ್
ಮಸ್ಕಿ: ಪಟ್ಟಣದಲ್ಲಿ ರಾಷ್ಟ್ರ ಸೇವಿಕಾ ಸಮಿತಿ ವತಿಯಿಂದ ನಡೆದ ಆ‌ರ್.ಎಸ್.ಎಸ್ ಮಹಿಳಾ ಕಾರ್ಯಕರ್ತೆಯರ ಆಕರ್ಷಕ ಪಥಸಂಚಲನ ಕಣ್ಮನ ಸೆಳೆಯಿತು.  ಕೇಂದ್ರ ಶಾಲೆ ಮೈದಾನದಿಂದ ಆರಂಭವಾದ ಪಥ ಸಂಚಲನವು ನಗರದ ಚೆನ್ನಮ್ಮ ವೃತ್ತ, ಕಾಳಿಕಾದೇವಿ ರಸ್ತೆ, ವಿಶ್ವಕರ್ಮ ವೃತ್ತ, ಗಾಡಿ ಬಾವಿ ವೃತ್ತ, ದೈವದ ಕಟ್ಟೆ, ಹಳೆ ಪೊಲೀಸ್ ಸ್ಟೇಷನ್, ಉಪ್ಪಲ ದೊಡ್ಡಿ ಪೇಟೆ, ತಾಲೂಕು ಪಂಚಾಯತ, ನರಸ್ ಗೌಡ ಪ್ರೌಢಶಾಲೆ ವರಿಗೆ ಸಂಚಲನವು ಸೇರಿದಂತೆ ಹೀಗೆ ನಗರದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರ ಸೇವಿಕಾ ಸಮಿತಿ ತಂಡದ ಪಥಸಂಚಲನ ಸಂಚರಿಸಿತು.   ಒಟ್ಟಾರೆ ರಾಷ್ಟ್ರ ಸೇವಿಕಾ ಸಮಿತಿ ಪಥಸಂಚಲನದ ವೇಳೆ ದೇಶಾಭಿಮಾನ ಘೋಷಣೆಗಳು ಮೊಳಗಿದವು.ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿಯ ಬಿಗಿ ಭದ್ರತೆಯಲ್ಲಿ ಸೇವಿಕಾ ಪಥ ಸಂಚಲನ ಜರಗಿತು.

ಅರ್ಥಗರ್ಭಿತ ಗಣರಾಜ್ಯೋತ್ಸವಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಿ : ಡಾ.ಕೆ.ಮಲ್ಲಪ್ಪ ತಹಶೀಲ್ದಾರ್

ಇಮೇಜ್
ಮಸ್ಕಿ: ತಾಲೂಕಡಳಿತದಿಂದ ವಿಶಿಷ್ಟ ಮತ್ತು ಅರ್ಥಗರ್ಭಿತವಾಗಿ ಜನವರಿ 26 ರಂದು ಗಣರಾಜ್ಯೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಗ್ರೇಡ್-2 ತಹಶೀಲ್ದಾರರು ಡಾ.ಕೆ.ಮಲ್ಲಪ್ಪ ಹೇಳಿದರು. ತಾಲೂಕು ದಂಡಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗಣರಾಜ್ಯೋತ್ಸವ ನಿಮಿತ್ತ ಜರುಗಿದ ಪೂರ್ವಭಾವಿ ಸಭೆಯಲ್ಲಿ ನೇತೃತ್ವ ವಹಿಸಿದ್ದ ಗ್ರೇಡ್_ 2 ತಹಸೀಲ್ದಾರ್ ಡಾ.ಕೆ. ಮಲ್ಲಪ್ಪ ಮಾತನಾಡಿ ಎಲ್ಲಾ ಇಲಾಖೆ ಅಧಿಕಾರಿಗಳು ಮತ್ತು  ಸಂಘ - ಸಂಸ್ಥೆಗಳು ಕೈಜೋಡಿಸಿ ಗಣರಾಜ್ಯೋತ್ಸವ ಯಶಸ್ವಿಗೆ ಸಹಕರಿಸಬೇಕು ಎಂದು ಕೋರಿದರು. ಪಟ್ಟಣದ ಸರ್ಕಾರಿ ಮಹಿಳಾ ಪ್ರೌಢಶಾಲೆ ಆವರಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಕಳೆದ ಬಾರಿಯಂತೆ ಅರ್ಥಪೂರ್ಣವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು. ಬೆಳಗಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು.  ಅದೇ ರೀತಿ ಸ್ತಬ್ಧಚಿತ್ರಗಳನ್ನು ಸಹ ವಿಷಯಾಧರಿತವಾಗಿ, ಆಕರ್ಷಣೀಯವಾಗಿ ನಿರ್ಮಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಗಣರಾಜ್ಯೋತ್ಸವ ದಿನದಂದು ಕುಡಿಯುವ ನೀರು ಒದಗಿಸುವುದು, ಜತೆಗೆ ಸ್ವಚ್ಛತೆ ಸಂಬಂಧ ಅಗತ್ಯವಿರುವ ಕಡೆ ಕಸದಬುಟ್ಟಿ ಇಡುವುದು ಮತ್ತಿತರ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ವೇದಿಕೆಯನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡುವಂತೆ ನಿರ್ದೇಶನ ನೀಡಲಾಯಿತು. ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಪ್ರತಿ ಇಲಾಖೆ ಅಧಿಕಾರಿ ಮತ್ತು

*ಸರ್ಕಾರಿ ಶಾಲೆಯಲ್ಲಿ ಆಹಾರ ಮೇಳ ಕಾರ್ಯಕ್ರಮ*

ಇಮೇಜ್
ಮಸ್ಕಿ : ತಾಲ್ಲೂಕಿನ ಚಿಕ್ಕ ಕಡಬೂರೂ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಲ್ಲಿ ನೂರು ದಿನಗಳ ಓದುವೆ ನಾನು ಈ ಕುರಿತಂತೆ ಆಹಾರಮೇಳ ಕಾರ್ಯಕ್ರಮ ನಡೆಯಿತು. ಸರಕಾರಿ ಶಾಲಾ ಆವರಣದಲ್ಲಿ ಮಕ್ಕಳೇ ತಂದು ವ್ಯಾಪಾರಕ್ಕೆ ಇಟ್ಟಂತಹ ಆಹಾರ ಧಾನ್ಯಗಳು ತರಕಾರಿಗಳು ಫಲ ಪುಷ್ಪಗಳು ದಿನಸಿ ಸಾಮಾನುಗಳು ಮುಂತಾದ ವಸ್ತುಗಳನ್ನು ಅವರು ತೂಕ ಮಾಡಿ ಅಳತೆ ನೋಡುವ ಪರಿ ನಿಜಕ್ಕೂ ಅತ್ಯದ್ಭುತ. ವಸ್ತುಗಳ ಖರೀದಿಗಾಗಿ ಸೇರಿದ್ದ ಮಕ್ಕಳು ಪಾಲಕ ಪ್ರತಿನಿಧಿಗಳು ಊರಿನ ನಾಯಕರು ದಾರಿಹೋಕರು ಮುಗಿಬಿದ್ದು ಖರೀದಿಸುತ್ತಿದ್ದರೆ ವಾರದ ಸಂತೆಯನ್ನೇ ನೆನಪಿಸುವಂತಿತ್ತು. ಅತ್ಯುತ್ತಮ ರೀತಿಯಲ್ಲಿ ಮೂಡಿಬಂದ ಈ ಕಾರ್ಯಕ್ರಮವು ಪೌಷ್ಟಿಕತೆಯ ಬಗ್ಗೆ ಮಾತ್ರ ತಿಳಿಸುವುದಲ್ಲದೆ ವ್ಯಾಪಾರ ವಹಿವಾಟಿನ ಜ್ಞಾನದ ಕೊಂಡಿಯಾಗಿತ್ತು. ಮಕ್ಕಳು ವಸ್ತುಗಳನ್ನು ಮಾರಿ ಸಂಪಾದಿಸಿದ ಹಣವನ್ನು ಎಣಿಸುತ್ತಿದ್ದರೆ ದೇಶದ ಬೆನ್ನೆಲುಬು ರೈತನನ್ನೇ ನೋಡಿದಂತಾಗುತ್ತಿತ್ತು. ಸರಕಾರದ ಈ ಕಾರ್ಯಕ್ರಮವು ನಿಜಕ್ಕೂ ಯಶಸ್ವಿದಾಯಕ. ಈ ಸಂದರ್ಭದಲ್ಲಿ, ಶಾಲೆ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗದವರು, ಊರಿನ ಪ್ರಮುಖರು ಮತ್ತು ಮಕ್ಕಳು ಇದ್ದರು.

ಸಂವಿಧಾನದ ಆಶಯಗಳಿಗೆ ಸಮಾಧಿ ಕಟ್ಟುತ್ತಿರುವ ಎಲೆಕ್ಟ್ರಾನಿಕ್ ಮಾಧ್ಯಮಗಳು....

ಇಮೇಜ್
ತಮಗೆ ಅಂಟಿದ ರೇಬೀಸ್ ರೋಗವನ್ನು ಜನರಿಗೆ ಅಂಟಿಸುತ್ತಿರುವ ಕೆಲವು ನಕಲಿ ಪತ್ರಕರ್ತರು....... ಕ್ಷಮಿಸಿ,  ನಿಮ್ಮಲ್ಲಿ ಕೆಲವರ ಮನಸ್ಸುಗಳಿಗೆ ಬೇಸರವಾಗಬಹುದು, ನಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಮಾಡಬಹುದು. ಆದರೆ ಹುಚ್ಚುತನದ ಪರಮಾವಧಿ ತಲುಪುತ್ತಿರುವ ಕಪಟ ದೈವ ಭಕ್ತಿಯ ನಾಟಕ ಬಯಲು ಮಾಡಿ ದೇಶ ಭಕ್ತಿ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಜಾಗೃತಗೊಳಿಸಲು ಅಕ್ಷರಗಳ ಮೂಲಕ ಒಂದಷ್ಟು ಪ್ರಯತ್ನ ಮಾಡುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ....... ಮೊದಲಿಗೆ ‌ಈ ಮಾಧ್ಯಮಗಳು ನಮ್ಮ ಸಂವಿಧಾನದ ಮೂಲ ಆಶಯವನ್ನೇ ತಿಥಿ ಮಾಡುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾವಲುಗಾರರೇ ಕಳ್ಳತನ ಮಾಡುತ್ತಿದ್ದಾರೆ. ಅನ್ನವಿಟ್ಟ ಮನೆಗೆ ಕನ್ನ ಹಾಕುತ್ತಿದ್ದಾರೆ.... ಜನರ ಭಾವನೆಗಳನ್ನು ಗೌರವಿಸಬೇಕು ಎಂಬ ನೆಪದಲ್ಲಿ ತಮ್ಮ ನಿಜ ಮುಖವಾಡಗಳನ್ನು ತೋರಿಸಿ ಬೆತ್ತಲಾಗುತ್ತಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಜನರನ್ನು ಸಮೂಹ ಸನ್ನಿಯ ರೋಗವನ್ನು ಮತ್ತಷ್ಟು ಉಲ್ಬಣಗೊಳಿಸಿ ದೇಶವನ್ನು ಆತಂಕಕ್ಕೆ ದೂಡುತ್ತಿದ್ದಾರೆ...... ಕನ್ನಡದ ಟಿವಿ ಸುದ್ದಿ ವಾಹಿನಿಗಳ ಸಂಪಾದಕರು, ವರದಿಗಾರರು, ನಿರೂಪಕರು ತಮ್ಮ ವಾಹಿನಿಗಳಲ್ಲಿ ಮತ್ತು ಅಯೋಧ್ಯೆಯಿಂದ ಮಾತನಾಡುತ್ತಿರುವುದನ್ನು ಗಮನಿಸಿದರೆ ಬಹುಶಃ ಮಾಧ್ಯಮಲೋಕ ಸ್ವಾತಂತ್ರ್ಯ ನಂತರ ಇಷ್ಟೊಂದು ಅಧೋಗತಿ ಇಳಿದಿರುವುದು ಈಗ ದಾಖಲೆಯಾಗಿದೆ ಎಂದೆನಿಸುತ್ತದೆ..... ಎಷ್ಟೊಂದು ಅನುಭವ, ತಿಳಿವಳಿಕೆ,