ಪೋಸ್ಟ್‌ಗಳು

ಸೆಪ್ಟೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನುಡಿ ನಮನ ಕಾರ್ಯಕ್ರಮದಲ್ಲಿ ದಿ ಚಂದ್ರಶೇಖರ್ ಅವರನ್ನು : ಹಸಿರು ಹೊನಲು ಸೇವಾ ಸಂಸ್ಥೆಯ ತಂಡ ಸ್ಮರಿಸಿದರು

ಇಮೇಜ್
ಭೌತಿಕವಾಗಿ ಇಲ್ಲದಿದ್ದರೂ ಅವರು ಬಿಟ್ಟು ಹೋದ ಒಳ್ಳೆ ಕೆಲಸಗಳ ಮಾಡುವ ಮೂಲಕ ಸ್ಮರಿಸಿಕೊಳ್ಳುತ್ತಾ ದಿ. ಚಂದ್ರು ರವರು ಸಮಾಜ ಸೇವೆ ಮಾಡುತ್ತಾ  ಹಾಗೂ  ಹಸಿರು ಹೊನಲು ಸೇವಾ ಸಂಸ್ಥೆ ಹೆಮ್ಮೆಯ ಸದಸ್ಯರಾಗಿದ್ದರು ಎಂದು ಹಸಿರು ಹೊನಲು ತಂಡದ ಅಧ್ಯಕ್ಷರಾದ ಗುರುರಾಜ್ ಹೇಳಿದರು ಕೊಟ್ಟೂರು : ಪಟ್ಟಣದ ಗಂಗೋತ್ರಿ ಶಾಲೆಯಲ್ಲಿ ಹಸಿರು ಹೊನಲು ಸೇವಾ ಸಂಸ್ಥೆ ವತಿಯಿಂದ ಭಾನುವಾರದಂದು ಇತ್ತೀಚಿಗೆ ನಿಧನ ಹೊಂದಿದ ದಿವಂಗತ ಚಂದ್ರಶೇಖರ್ ಅವರಿಗೆ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಗಂಗೋತ್ರಿ ಶಾಲೆಯ ಮುಖ್ಯಸ್ಥರಾದ ಚಟ್ರಿ ಕಿ   ಬಸವರಾಜ್  ಹಾಗೂ ಹಸಿರು ಹೊನಲು ಸೇವಾ ಸಂಸ್ಥೆ ಗೌರವಾಧ್ಯಕ್ಷರಾದ ಸಿ ಬಸವರಾಜ್ ಅವರು ದಿವಂಗತ ಚಂದ್ರು ರವರ ಭಾವಚಿತ್ರಕ್ಕೆ ಪುಷ್ಪ ನಮನ  ಸಲ್ಲಿಸುವ ಮೂಲಕ  ಚಾಲನೆ ನೀಡಿದರು. ನಂತರ  ಹಸಿರು ಹೊನಲು  ಸಂಸ್ಥೆಯ ಸದಸ್ಯರಾದ ಬಿ. ಆರ್  ವಿಕ್ರಂ ಕುಮಾರ್  ಮಾತನಾಡಿದರು ದಿ.ಚಂದ್ರು ರವರು  ದೈಹಿಕವಾಗಿ  ಇಲ್ಲದಿದ್ದರೂ  ಅವರು ಬಿಟ್ಟು ಹೋದ  ಒಳ್ಳೆ ಕೆಲಸಗಳನ್ನು  ಮಾಡುವ ಮೂಲಕ ಅವರನ್ನು ಸ್ಮರಿಸಿಕೊಳ್ಳೋಣ.  ಹಾಗೂ  ಸಮಾಜ ಸೇವೆ, ರಾಜಕೀಯ ರಂಗದಲ್ಲೂ ಸಕ್ರಿಯವಾಗಿ  ಪಾಲ್ಗೊಳ್ಳುತ್ತಿದ್ದರು. ಚಂದ್ರು ಅವರಿಗೆ ಒಂದು ಒಳ್ಳೆಯ ಹವ್ಯಾಸ ಹೊಂದಿದ್ದರು  ಏನು ಎಂದರೆ ಎಲ್ಲರಿಗೂ ಪುಸ್ತಕವನ್ನು ನೀಡುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ   ದುಃಖ ಭರಿಸುವ ಶಕ್ತಿ ನೀಡಲಿ 

ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳ ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಹಗಲು ಇರುಳು ಶ್ರಮ : ಈರಮ್ಮ ಹಿರೇಮಠ

ಇಮೇಜ್
  ಮಸ್ಕಿ : ಖಾಸಗಿ ಶಿಕ್ಷಣ ಸಂಸ್ಥೆಗಳು ಬಹಳಷ್ಟು ಸಮಸ್ಯೆ ಹಾಗೂ ಕಷ್ಟ ಗಳು ಇದ್ದರೂ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಹಗಲು ಇರುಳು ಶ್ರಮ ವಹಿಸುತ್ತದೆ ಎಂದು ಈರಮ್ಮ ದಯಾನಂದ ಹಿರೇಮಠ ರವರು ಉಪನ್ಯಾಸ ನೀಡಿದರು. ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪದ ಆವರಣದಲ್ಲಿ ಜಿಲ್ಲಾ ವಿವಿಧ ಖಾಸಗಿ ಸಂಸ್ಥೆಗಳ ಒಕ್ಕೂಟ (ರಿ) ಹಾಗೂ ಮಸ್ಕಿ ತಾಲ್ಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರ ಸಂಘ (ರಿ) ವತಿಯಿಂದ 3 ನೇ ವರ್ಷದ ಶಿಕ್ಷಕರ ದಿನಾಚರಣೆ ಮತ್ತು ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ  ಖಾಸಗಿ ಶಾಲೆ ಸಂಸ್ಥೆಗಳ ಸೇವೆ ಅಪಾರವಾಗಿದೆ ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಬಹಳಷ್ಟು ಸಮಸ್ಯೆ ಹಾಗೂ ಕಷ್ಟ ಗಳು ಇದ್ದರೂ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಹಗಲು ಇರುಳು ಶ್ರಮ ವಹಿಸುತ್ತದೆ ಎಂದು ಶ್ರೀ ಮತಿ ಈರಮ್ಮ ದಯಾನಂದ ಹಿರೇಮಠ ರವರು ಉಪನ್ಯಾಸ ನೀಡಿದರು. ನಂತರ ಮಾತನಾಡಿ ಶಿಕ್ಷಕರು ಎಂದರೆ ಶಿಲ್ಪ ಇದ್ದಾಗೆ ಖಾಸಗಿ ಶಾಲೆ ಶಿಕ್ಷಕರು ಮಕ್ಕಳ ಭವಿಷ್ಯವನ್ನು ಬದಲಾಯಿಸುವ ಮೂಲಕ ಶಿಕ್ಷಣ ಕ್ರಾಂತಿಯನ್ನು ಮಾಡಿದ್ದಾರೆ ಎಂದು ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್ ಹೇಳಿದರು. ಸರಕಾರ ಮಾಡದ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡುತ್ತವೆ ಶಿಕ್ಷಣ ಬದುಕು ಗಟ್ಟಿ ಗೊಳಿಸುತ್ತದೆ. ಬದುಕನ್ನು ವಿಕಾಸ ಗೋಳಿಸುವ ವಿಧಾನ ಎಂದರೆ ಅದು ಶಿಕ್ಷಣ, ಬದುಕುವ ನಿಜವಾದ ಶಿಕ್ಷಣ ಎಂದು ಮಹಾತ್ಮಸ್ವಾಮಿಗಳು

ಛಾಯಾಗ್ರಾಹಕ ದೃಶ್ಯಗಳಿಗೆ ಜೀವ ತುಂಬುವ ಕಲೆಗಾರ : ಗಚ್ಚಿನ ಶ್ರೀಗಳು

ಇಮೇಜ್
  ಮಸ್ಕಿ : ಛಾಯಾಗ್ರಾಹಕ ದೃಶ್ಯಗಳಿಗೆ ಜೀವ ತುಂಬುವ ಕಲೆಗಾರ. ಛಾಯಾಚಿತ್ರ ಇತಿಹಾಸ ನೆನಪಿಸುವ ಮಹತ್ತರ ಕಲೆಯಾಗಿದೆ ಎಂದು ಗಚ್ಚಿನ ಹಿರೇಮಠದ ವರರುದ್ರಮುನಿ ಮಹಾಸ್ವಾಮಿಗಳು ರವರ ಹೇಳಿದರು. ಪಟ್ಟಣದ ಗಚ್ಚಿನ ಹಿರೇಮಠದ ಆವರಣದಲ್ಲಿ ರವಿವಾರ ಮಸ್ಕಿ ತಾಲ್ಲೂಕು ಫೋಟೋಗ್ರಾಫರ್ ವಿಡಿಯೋಗ್ರಾಫರ್ಸ ಸಂಘದ ವತಿಯಿಂದ ೧೮೫ ನೇ ವಿಶ್ವ ಛಾಯಾಗ್ರಹಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಶ್ರೀ ಗಳು ಮಾತನಾಡಿದರು. ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ ಮಾತನಾಡಿ,ಫೋಟೋ ಗ್ರಾಫರ್ ವಿಡಿಯೋ ಗ್ರಾಫರ್ಸ ಸಂಘಟಿತರಾಗುವ ಮೂಲಕ ಈ ಕ್ಷೇತ್ರದಲ್ಲಿ ಹೊಸತನಕ್ಕಾಗಿ ಹುಡುಕಾಟ ನಡೆಸುತ್ತಿರುವ ಛಾಯಾಗ್ರಾಹಕರ ಒಗ್ಗಟ್ಟು ಶ್ಲಾಘನೀಯವಾಗಿದೆ.ಸಂಘದ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡುತ್ತೇನೆ ಎಂದು ಭರವಸೆ ನೀಡಿದರು. ಈ ವೇಳೆ, ಸಂಘದ ಸದಸ್ಯರು ಮಾಜಿ ಶಾಸಕರಿಗೆ ಛಾಯಾಚಿತ್ರ ಭವನ ನಿಮಾರ್ಣ ಕ್ಕೆ ಮನವಿ ಸಲ್ಲಿಸಿದರು. ಹಿರಿಯ ಛಾಯಾಗ್ರಾಹಕರಾದ ಹುಸೇನಬಾಷಾ ಪಾಮನಕಲ್ಲೂರು,ಸತೀಶ್ ಹಿರೇಮಠ, ಚಾಂದಸಾಬ್ ಹಾಲಾಪುರ,ಇವರಿಗೆ ಸನ್ಮಾನ ಮಾಡಲಾಯಿತು. ಈ ವೇಳೆ,ಸಂಘದ ಅಧ್ಯಕ್ಷ ಅಮರೇಶ ನಾಯ್ಕ ಮಸ್ಕಿ ರಾಯಚೂರು ಸಿಟಿ ಫೋಟೋಗ್ರಾಫರ್ ಸಂಘದ ಅಧ್ಯಕ್ಷ ಅಕ್ಬರ್, ರವಿ ಗಡ್ಡದ್ ಮಾನವಿ,ಕರಿಯಪ್ಪ ಹೂಸೂರು ಸಿರಿವಾರ,ವಿರೇಶ್ ಮಸ್ಕಿ ದೇವದುರ್ಗ,ದೊಡ್ಡಪ್ಪ ಸಗರದ್  ಹಾಗೂ ಸಂಘದ ಪದಾಧಿಕಾರಿಗಳು ಮಹಿಳೆಯರು ಇದ್ದರು.

ಮಸ್ಕಿ : ಸ್ಮಶಾನ ಕ್ಕೇ ವಿದ್ಯುತ್ ಇಲ್ಲದೆ ಹೂಳಲು ಪರದಾಡಿದ ಕುಟುಂಬ

ಇಮೇಜ್
ಮಸ್ಕಿ : ಪಟ್ಟಣದ ಹಿರಿಯ ಜೀವ ಮಾನಯ್ಯ ಬಡಿಗೇರ ರವರು ಮರಣ ಹೊಂದಿದರು ಅವರ ಮಗಳು ಬೆಂಗಳೂರು ನಿಂದ ಬರುವುದು ತಡವಾದ ಕಾರಣ ಅಂತ್ಯಸಂಸ್ಕಾರ ಕ್ಕೆ ಎಂದು  ಸ್ಮಶಾನಕ್ಕೆ ಹೋದಾಗ ಅಲ್ಲಿ ವಿದ್ಯುತ್ ಇಲ್ಲದೇ ಪರದಾಡಿದ ಪರಿಸ್ಥಿತಿ ನಿರ್ಮಾಣವಾಗಿ ಕತ್ತಲಲ್ಲೇ ಅಂತ್ಯ ಸಂಸ್ಕಾರ ಮಾಡಿಮುಗಿಸಿದ ಘನ ಘೋರ ಘಟನೆ ತಡ ರಾತ್ರಿ ಜರುಗಿದ್ದು ಬಹಳ ನೋವಿನ ಸಂಗತಿ. ಹೌದು ಎಲ್ಲೆಂದರಲ್ಲಿ ಕಸ, ಕಾಲಿಟ್ಟರೆ ಮಳ್ಳು ಚುಚ್ಚುವ ಆತಂಕ, ಮಳೆ ಬಂದರಂತೂ ಆ ಪ್ರದೇಶವೆಲ್ಲ ಜಲಾವೃತ ಇಂಥಹ ಚಿತ್ರಣಗಳು ತಾಲ್ಲೂಕಿನ ಬಹುತೇಕ ಗ್ರಾಮಗಳ ಸ್ಮಶಾನಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಯಾವುದೇ ಸಮುದಾಯ, ಜಾತಿ, ಲಿಂಗವಿದಿದ್ದರೂ ಮರಣಾನಂತರ ಆ ವ್ಯಕ್ತಿಗೆ ಅತ್ಯಂತ ಗೌರವಯುತವಾಗಿ ಅಂತಿಮ ಸಂಸ್ಕಾರ ನೆರವೇರಿಸಬೇಕು ಎನ್ನುವುದು ಆಯಾ ಕುಟುಂಬಗಳ ಮತ್ತು ಬಂಧುಗಳ ಸಹಜ ಆಸೆ. ಆದರೆ, ಬಹಳಷ್ಟು ಕಡೆ ಸ್ಮಶಾನಗಳು,ಮೂಲ ಸೌಕರ್ಯ ಮತ್ತು ಸ್ವಚ್ಛತೆಯ ಸಮಸ್ಯೆ ಎದ್ದು ಕಾಣುತ್ತದೆ.ಅನೇಕ ಕಡೆ ರುದ್ರಭೂಮಿಗಳಿಗೆ ಸರಿಯಾದ ದಾರಿ ಇಲ್ಲ, ಮುಳ್ಳು ಕಂಟಿಗಳನ್ನು ದಾಟಿಕೊಂಡು ಹೋಗುವ ಅನಿವಾರ್ಯತೆ. ಶನಿವಾರ ಪಟ್ಟಣದಲ್ಲಿ ಹಿರಿಯ ಜೀವ ಮಾನಯ್ಯ ಬಡಿಗೇರ ರವರು ಮರಣ ಹೊಂದಿದರು ಅವರ ಮಗಳು ಬೆಂಗಳೂರು ನಿಂದ ಬರುವುದು ತಡವಾದ ಕಾರಣ ಅಂತ್ಯಸಂಸ್ಕಾರ ಕ್ಕೆ ಎಂದು  ಸ್ಮಶಾನಕ್ಕೆ ಹೋದಾಗ ಅಲ್ಲಿ ವಿದ್ಯುತ್ ಇಲ್ಲದೇ ಪರದಾಡಿದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ರಾಘವೇಂದ್ರ ಮೋಚಿ ಯವರು ಆಡಳಿತದ ಬಗ್ಗೆ ಪತ್ರಿಕೆ

ಭಾಗೀರಥಿ ರಾಜ್ಯಮಟ್ಟಕ್ಕೆ ಆಯ್ಕೆ ‌‌‌‌‌‌‌‌ ‌‌‌‌‌‌

ಇಮೇಜ್
  ಮಸ್ಕಿ: ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ರಾಯಚೂರು ಹಾಗೂ ಅನಿಕೇತನ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಸಿಂಧನೂರಿನಲ್ಲಿ ನಡೆದ ರಾಯಚೂರು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸ್ಥಳೀಯ ವೀರರಾಣಿ ಕಿತ್ತೂರು ಚನ್ನಮ್ಮ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಭಾಗೀರಥಿ ತಂದೆ ಶರಣಪ್ಪ ಬುದ್ದಿನ್ನಿ 3000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಎಂದು ಕಾಲೇಜಿನ ಪ್ರಾಚಾರ್ಯ ಲಕ್ಷ್ಮಣ ಕರ್ಲಿ ಪತ್ರಿಕೆಗೆ ತಿಳಿಸಿದ್ದಾರೆ. ವಿದ್ಯಾರ್ಥಿನಿಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಸುಭಾಷ್ ಕೊರೆಕರ್ ,ಕಾರ್ಯದರ್ಶಿ ಪಿ ರಾಮು,ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು, ಗೆಳೆಯರು ಅಭಿನಂದಿಸಿದ್ದಾರೆ.

ಅಜೀಂ ಪ್ರೇಮ್ ಜಿ ಅವರಿಗೆ ಶಾಲಾ ಆಡಳಿತ ಮಂಡಳಿ ಮತ್ತು ಗಣ್ಯರಿಂದ ಧನ್ಯವಾದ

ಇಮೇಜ್
ಮಸ್ಕಿ : ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಧನಗರವಾಡಿ ಶಾಲೆ ಆವರಣದಲ್ಲಿ ಅಜೀಂ ಪ್ರೇಮ್ ಜಿ ಪ್ರತಿಷ್ಠಾನ ರವರ ಪ್ರಾಯೋಜಕತ್ವದ ಪೂರಕ ಪೌಷ್ಟಿಕ ಆಹಾರ ಪೂರೈಕೆ ಅಡಿಯಲ್ಲಿ ವಾರದ ನಾಲ್ಕು ದಿನಗಳ ಕಾಲ ಮೊಟ್ಟೆ ಬಾಳೆಹಣ್ಣು ಶೇಂಗಾ ಚಿಕ್ಕಿ ವಿತರಣಾ ಕಾರ್ಯಕ್ರಮವನ್ನು ಡಿಸೆಂಬರ್ 25 ರಂದು ಸರ್ಕಾರ ದೊಂದಿಗೆ ಮೂರು ವರ್ಷಗಳ ಅವಧಿ ರೂ 1,591. ಕೋಟಿ ರೂಪಾಯಿಗಳ ವೆಚ್ಚದ ಒಪ್ಪಂದ ಮಾಡಿ ಕೊಂಡಿದ್ದು, ಈ ಕಾರ್ಯಕ್ರಮದ 2024 -25 ನೇ. ಸಾಲಿನ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನಗಳು ಪೂರಕ ಪೌಷ್ಟಿಕ ಆಹಾರವನ್ನು ಉಚಿತವಾಗಿ ವಿತರಿಸುವ ಅವರಿಗೆ ಧನ್ಯವಾದ ತಿಳಿಸುವ ಕಾರ್ಯಕ್ರಮ ಸರಳತೆಯಿಂದ ಜರುಗಿತು. ಪ್ರಧಾನ ಮಂತ್ರಿ ಪೋಷನ್ ಶಕ್ತಿ ನಿರ್ಮಾಣ ಮಧ್ಯಾಹ್ನದ ಉಪಹಾರ ಯೋಜನೆ ಅನ್ವಯ ಅಜೀಂ ಪ್ರೇಮ್ ಜಿ ಪ್ರತಿಷ್ಠಾನ ರವರ ಪ್ರಾಯೋಜಕತ್ವದ ಪೂರಕ ಪೌಷ್ಟಿಕ ಆಹಾರ ಪೂರೈಕೆ ಅಡಿಯಲ್ಲಿ ವಾರದ ನಾಲ್ಕು ದಿನಗಳ ಕಾಲ ಮೊಟ್ಟೆ ಬಾಳೆಹಣ್ಣು ಶೇಂಗಾ ಚಿಕ್ಕಿ ವಿತರಣಾ ಕಾರ್ಯಕ್ರಮವನ್ನು ಡಿಸೆಂಬರ್ 25 ರಂದು ಸರ್ಕಾರ ದೊಂದಿಗೆ ಮೂರು ವರ್ಷಗಳ ಅವಧಿ ರೂ 1,591. ಕೋಟಿ ರೂಪಾಯಿಗಳ ವೆಚ್ಚದ ಒಪ್ಪಂದ ಮಾಡಿ ಕೊಂಡಿದ್ದು, ಈ ಕಾರ್ಯಕ್ರಮದ 2024 -25 ನೇ. ಸಾಲಿನ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನಗಳು ಪೂರಕ ಪೌಷ್ಟಿಕ ಆಹಾರವನ್ನ

ಕೊಟ್ಟೂರು ರಾಮಪ್ಪ ಮೇಷ್ಟ್ರು ಶಿಕ್ಷಕರನ್ನು ಸ್ಮರಣೆ : ಕೆ ನೇಮಿರಾಜ ನಾಯ್ಕ್

ಇಮೇಜ್
ಕೊಟ್ಟೂರು: ಮಾನ್ಯ ಶಾಸಕರಾದ ಕೆ ನೇಮಿರಾಜ ನಾಯ್ಕ ರವರು ಕೊಟ್ಟೂರು ತಾಲೂಕು ಶಿಕ್ಷಕರ ಸಂಘದ ವತಿಯಿಂದ ಶ್ರೀ ಮರಳುಸಿದ್ದೇಶ್ವರ ಸಭಾಂಗಣದಲ್ಲಿ  ಸರ್ವಪಲ್ಲಿ ರಾಧಾಕೃಷ್ಣನ್ ಅವರ 136 ನೇ ಜಯಂತಿಯನ್ನು ಶನಿವಾರ ಆಚರಣೆ ಮಾಡಲಾಯಿತು.  ಈ ಕಾರ್ಯಕ್ರಮವನ್ನು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಕೆ ನೇಮಿರಾಜ್ ನಾಯ್ಕ್ ದೀಪ ಹಚ್ಚುವುದರ ಮೂಲಕ ಉದ್ಘಾಟನೆ ನೆರವೇರಿಸಿದರು. ನಂತರ  ಕೆ ನೇಮಿರಾಜ ನಾಯ್ಕ್ ಶಾಸಕರು ಮಾತನಾಡಿ ಹೆಸರುವಾಸಿಯಾದ ಮರಿಯಮ್ಮನಹಳ್ಳಿ ಬಾಗದಲ್ಲಿ ಕೊಟ್ಟೂರು ರಾಮಪ್ಪ ಮೇಷ್ಟ್ರು ಸ್ಮರಣೆ ಶಿಕ್ಷಕರ ಕೊಡುಗೆ ಅಪಾರವಾದದ್ದು ಶಿಕ್ಷಕರನ್ನು ದೇವರ ಸಮಾನವಾಗಿ ನೋಡುವ ಸಂಸ್ಕೃತಿ ನಮ್ಮದು ಶಿಕ್ಷಕರ ಗೌರವ ಹೆಚ್ಚಿಸುವಂತ ಕೆಲಸವನ್ನು ನಾವೆಲ್ಲರೂ ಮಾಡಬೇಕು  ಜಗತ್ತಿನಲ್ಲಿ ಗುರುವಿನ ಪಾತ್ರ ಬಹಳ ಮಹತ್ವದ್ದು. ಒಂದು ಮಗು ಸರ್ವತೋಮುಖ ಅಭಿವೃದ್ಧಿಗೆ ಕಾರಣ ಶಿಕ್ಷಕ ಪಾತ್ರ ದೊಡ್ಡದಾಗಿರುತ್ತದೆ. ಮಗುವಿನ ಭವಿಷ್ಯವನ್ನು ರೂಪಿಸುವ ಶಕ್ತಿ ಶಿಕ್ಷಕನ ಕೈಯಲ್ಲಿ ಇರುತ್ತದೆ. 24 ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರು 7ನೇ ಆಯೋಗವೇತನ ಅವರಿಗೂ ನೀಡುವಂತೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರುತ್ತೇನೆ ಹೇಳಿದರು. 24 ನೇ ಸಾಲಿನಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ 136 ನೇ ಜಯಂತಿಯ ಅಂಗವಾಗಿ ಶಾಸಕರು ನಿವೃತ್ತ ಶಿಕ್ಷಕರು ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು  ಈ ಸಂದರ್

1859 ನೆ ಮದ್ಯವರ್ಜನ ಶಿಬಿರ ಕಾರ್ಯಕ್ರಮ

ಇಮೇಜ್
  ಮಸ್ಕಿ : ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾಗೂ ಅಖಿಲ ಕರ್ನಾಟಕಜಿಲ್ಲಾ ಜನಜಾಗೃತಿ ವೇದಿಕೆ ರಾಯಚೂರು ಸಹ ಯೋಗದಲ್ಲಿ ನಡೆಯುತ್ತಿರುವ 1859 ನೆ ಮದ್ಯವರ್ಜನ ಶಿಬಿರ ಕಾರ್ಯಕ್ರಮ ವನ್ನು ಮಾಜಿ ಶಾಸಕರು ಪ್ರತಾಪ ಗೌಡ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಧ್ಯವರ್ಜನ ಶಿಬಿರ ಸಮಿತಿಯ ವ್ಯವಸ್ಥಾಪಕರಾದ ಹೆಚ್.ಬಿ ಮುರಾರಿ ವಹಿಸಿಕೊ0ಡಿದ್ದರು ಕಾರ್ಯಕ್ರಮ ದ ಮುಖ್ಯ ಅತಿಥಿಗಳು ಡಾ ಬಿ.ಹೆಚ್ ಡಿವಟರ ಡಾ ಮಾನ್ಯ ಜಿಲ್ಲಾ ನಿರ್ದೇಶಕ ರಾದ ಮೋಹನ ನಾಯ್ಕ ಅವರು ಹಾಗೂ ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ಯೋಜನಾಧಿಕಾರಿಗಳು ನಾಗೇಶ್ ಸರ್, ಅಂದಾನಪ್ಪ ಗುಂಡಳ್ಳಿ,  ಕೆ.ಅಪ್ಪಾಜಿಗೌಡ, ಶ್ರೀಮತಿ ಗೀತಾ ಶಿವರಾಜ್, ಎಮ್ ಅಂಬರೀಶ್, ವೀರೇಶ್ ಸೌದ್ರಿ, ಜಿ ಶಾಲಿನಿ ಇವರ ಉಪಸ್ಥಿತಿಯಲ್ಲಿ. ಈ ಕಾರ್ಯಕ್ರಮ ಸತತವಾಗಿ ಎಂಟು ದಿನಗಳ ಕಾಲ ನಡೆಯಲಿದ್ದು ಕಾರ್ಯಕ್ರಮ ಉದ್ದೇಶಿಸಿ ಮಾಜಿ ಶಾಸಕರು ಕುಡಿತ ಚಟದಿಂದ ವಯಕ್ತಿಕ ಜೀವನ ಅಷ್ಟೇ ಅಲ್ಲದೆ ಕುಟುಂಬವು ಕೂಡ ಬೀದಿಗೆ ಬರುತ್ತದೆ ಕುಡಿತದಂತಹ ಚಟಗಳಿಂದ ದೂರವಿರಿ ಎಂದು ಎಲ್ಲ ಶಿಬಿರಾರ್ಥಿಗಳಿಗೆ ತಿಳಿಸಿದರು. ಇಂಥ ಮದ್ಯ ವರ್ಜನ ಶಿಬಿರ ರಾಜ್ಯದಲ್ಲಿ 1 ಲಕ್ಷ 36 ಸಾವಿರ ಜನ ಇದರ ಪ್ರಯೋಜನವನ್ನು ಪಡೆದುಕೊಂಡು ಹೊಸ ಬದುಕನ್ನು ಕಟ್ಟಿಕೊಂಡಿದ್ದು ಸಮಾಜದಲ್ಲಿ ಗೌರವಯುತವಾಗಿ ಬದುಕುತ್

ದಲಿತ ಸಂಘರ್ಷ ಸಮಿತಿ ಸಂಯೋಜಕ ಸಂಘದ ಉಪಾಧ್ಯಕ್ಷರಾಗಿ ಈರಣ್ಣ ಸುಲ್ತಾನಪುರ ಆಯ್ಕೆ.

ಇಮೇಜ್
ಮಸ್ಕಿ : ದಲಿತ ಸಂಘರ್ಷ ಸಮಿತಿ ಸಂಯೋಜಕ ಸಂಘ ರಾಯಚೂರು ಉಪಾಧ್ಯಕ್ಷರನ್ನಾಗಿ ಈರಣ್ಣ ಸುಲ್ತಾನಪುರ ಅವರನ್ನು ಹಾಗೂ ಜಿಲ್ಲಾ ಸಂಘಟನೆಯ ಕಾರ್ಯದರ್ಶಿ ಯಾಗಿ ಹಸನಸಾಬ್ ಸಿ ಎಸ್ಎಫ್ ಕ್ಯಾಂಪ್ ಇವರನ್ನು ಇಂದು ಸಿಂಧನೂರು ನಗರದ ಐಬಿ ಯಲ್ಲಿ ನಡೆದ ಸರಳ ಕಾರ್ಯಕ್ರಮ ದಲ್ಲಿ ನೇಮಕ ಮಾಡಲಾಯಿತು. ಕೂಡಲೇ ತಾವು ಸಂಘಟನೆಯಲ್ಲಿ ತೊಡಗಿಕೊಂಡು ಸಂಘಟನೆ ಬಲವರ್ಧನೆಗಾಗಿ ಶ್ರಮವಹಿಸುವಂತೆ ತಿಳಿಸಿ ದಲಿತ ಸಂಘರ್ಷ ಸಮಿತಿ ಸಂಯೋಜಕ ಸಂಘ ರಾಯಚೂರು ಅಧ್ಯಕ್ಷರಾದ ಮಲ್ಲಪ್ಪ ಎಸ್ ಗೋನಾಳ್ಕರ ರವರು ನೇಮಕಗೊಳಿಸಿ ಆದೇಶ ನೀಡಿದ್ದಾರೆ.

ಮಸ್ಕಿ ರೈತ ಸಂಪರ್ಕ ಕೇಂದ್ರದ ಸಮಸ್ಯೆಗಳ ಪರಿಹಾರಕ್ಕೆ ರೈತ ಸಂಘ ಸಹಾಯಕ ಆಯುಕ್ತರಿಗೆ ಮನವಿ

ಇಮೇಜ್
  ಮಸ್ಕಿ : ಮಸ್ಕಿ ತಾಲೂಕ ರೈತ ಸಂಪರ್ಕ ಕೇಂದ್ರ ವಿವಿಧ ಸಮಸ್ಯೆಗಳ ಪರಿಹರಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮಾನ್ಯ ಸಹಾಯಕ ಆಯುಕ್ತರು ಕಾರ್ಯಾಲಯ ಲಿಂಗಸಗೂರು ಇವರಿಗೆ ತಾಲೂಕ ಅಧ್ಯಕ್ಷ ವಿಜಯ ಬಡಿಗೇರ ಮನವಿಯನ್ನು ಸಲ್ಲಿಸಲಾಯಿತು.  ನಂತರ ಮಾತನಾಡಿದ ಅವರು ಲಿಂಗಸೂರು ತಾಲೂಕಿನಲ್ಲಿ ಬಹುತೇಕ ಗೊಬ್ಬರದ ಅಂಗಡಿಗಲ್ಲಿ ರೈತರಿಗೆ ಗೋಬ್ಬರವನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತದೆ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮಸ್ಕಿ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸುಮಾರು ಮೂರು ವಾರ ಕಳೆದರೂ ವಿವಿಧ ಬೆಳೆಗೆ ಸಮಯಕ್ಕೆ ಔಷಧಿ ಇಲ್ಲದ ಕಾರಣ ಬೇಗನೆ ಔಷಧಿಯನ್ನು ತರಿಸಿಕೊಡಿ ಎಂದು ರೈತರು ಮೇಲಾಧಿಕಾರಿಗಳಿಗೆ ಅಧಿಕಾರಿಗಳಿಗೆ ಫೋನ್ ಕರೆ ಮಾಡಿದರೆ ಹಾರಿಕೆ ಉತ್ತರವನ್ನು ಕೊಡುತ್ತಿದ್ದಾರೆ ಅಂತವರನ್ನು ಕೂಡಲೇ ಅಮಾನತ್ತು ಮಾಡಬೇಕು. ತಾಲೂಕಿಗೆ ಕೃಷಿ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಒಂದು ವಾರದೊಳಗೆ ನೇಮಿಸಿದೆ ಹೋದರೆ ನಾವುಗಳು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಮಸ್ಕಿ ರೈತ ಸಂಪರ್ಕ ಕೇಂದ್ರದ ಮುಂದೆ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆಯಲ್ಲಿ ಮಹಾದೇವಯ್ಯ ತಾತನವರು, ಅವಮಲ್ಲಿನಾಥ ಆಶ್ರಮ, ಲಿಂಗಸೂರು,ಮಲ್ಲನಗೌಡ ಪಾಟೀಲ್, ರಾಂಪೂರು, ರಾಜ್ಯ ಉಪಾಧ್ಯಕ್ಷ,ಅಮರೇಶ ಸರ್ಕಾರ, ತಾಲೂಕ ಅಧ್ಯಕ್ಷರು, ಲಿಂಗಸೂರು ಡಾ.ಚಂದರಶೇಖರ ಸರ್ಜ

ರಾಜ್ಯದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಗಟ್ಟಲು ಮನವಿ

ಇಮೇಜ್
  ಮಸ್ಕಿ : ಕರ್ನಾಟಕದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಗಟ್ಟಬೇಕು ಹಾಗೂ ವಿಧವೆಯರು ಮತ್ತು ಹಿರಿಯ ನಾಗರೀಕರಿಗೆ ಸಿಗುತ್ತಿರುವ ಮಾಸಿಕ ವೇತನ ಹೆಚ್ಚಿಸಬೇಕು ಎಂದು ಮಸ್ಕಿ ಸಾಧನ ತಾಲೂಕು ಮಹಿಳಾ ಒಕ್ಕೂಟ ಮಾನ್ಯ ಉಪ ತಹಶೀಲ್ದಾರ ಪ್ರಕಾಶ್ ಬುಳ್ಳಾ ಇವರ ಮೂಲಕ ಸರಕಾರಕ್ಕೆ ಮನವಿಯನ್ನು ಸಲ್ಲಿಸಿತು. ಈ ವೇಳೆ,ಸಾಧನ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಮರಿಯಮ್ಮ ಎಂ ರಾಮಲದಿನ್ನಿ ರವರು ಮಾತನಾಡಿ,ಹೆಣ್ಣುಮಕ್ಕಳ ಅಪಹರಣ, ಅತ್ಯಾಚಾರ ಮತ್ತು ಕೊಲೆ ಹಾಗೂ ಕೆಲಸದ ಸ್ಥಳಗಳಲ್ಲಿ ಮತ್ತು ಮನೆಯ ಹೊರಗಡೆ ಮಹಿಳೆಯರಿಗೆ ಲೈಂಗಿಕ ಕಿರುಕುಳ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮತ್ತು ದುರ್ಬಳಕೆ, ಮಹಿಳೆಯರ ಕಳ್ಳ ಸಾಗಾಣಿಕೆಯಂತಹ ಕೃತ್ಯಗಳು ನಡೆದಿರುವ ಮತ್ತು ನಡೆಯುತ್ತಿರುವ ಅಪರಾಧಗಳು ಹೆಚ್ಚುತ್ತಲೇ ಇವೆ.  ಮಹಿಳೆಯರ ಮೇಲಿನ ಕೌರ್ಯದ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡದಂತೆ ಕಾನೂನಿನಲ್ಲಿ ಅಗತ್ಯ ಸುಧಾರಣೆಗಳನ್ನು ತರಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಬೆಳಕು, ಕಣ್ಣಾವಲು ಮತ್ತು ಭದ್ರತೆಯನ್ನು ಸುಧಾರಿಸಿ ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಿರ್ಣಾಯಕ ಕ್ರಮವನ್ನು ಸರಕಾರ ತೆಗೆದ ಕೊಳ್ಳಬೇಕು ಎಂದರು. ಸರ್ಕಾರದಿಂದ ವಿಧವೆಯರು ಮತ್ತು ಹಿರಿಯ ನಾಗರೀಕರಿಗೆ ಸಿಗುತ್ತಿರುವ ಮಾಸಿಕ ವೇತನದ ಅಲ್ಪ ಮೊತ್ತದಿಂದ ಕುಟುಂಬದ ನಿರ್ವಹಣೆ ಅತಿ ಕಷ್ಟಕರವಾಗುತ್ತಿದೆ.  ವಿಧವೆ

ಡಿವಿಪಿ ವತಿಯಿಂದ ತಹಶೀಲ್ದಾರ್ ಮುಖಾಂತರ ರಾಯಚೂರು ವಿ.ವಿ ಕುಲಪತಿಗಳಿಗೆ ಮನವಿ

ಇಮೇಜ್
ಮಸ್ಕಿ : ರಾಯಚೂರು ವಿಶ್ವವಿದ್ಯಾಲಯದ 2024/25 ನೇ ಸಾಲಿನ ಸ್ನಾತಕೋತ್ತರ ಪದವಿ ಪ್ರವೇಶ ಶುಲ್ಕವನ್ನು ಕಡಿಮೆ ಮಾಡಿ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗಳ ಅಂಕಪಟ್ಟಿ ಮುದ್ರಿಸಿ ಒದಗಿಸಲು ಒತ್ತಾಯಿಸಿ ಮನವಿ . ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕ ಸಮಿತಿ ಮಸ್ಕಿ ವತಿಯಿಂದ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ರಾಯಚೂರು ವಿಶ್ವವಿದ್ಯಾಲಯ 2024-25 ನೆಯ ಸಾಲಿನ ಶೈಕ್ಷಣಿಕ ವರ್ಷಕ್ಕಾಗಿ ಸ್ನಾತಕೋತ್ತರ ಪದವಿಗಳಿಗಾಗಿ ಪ್ರವೇಶಕ್ಕೆ ಪ್ರಕಟಣೆಯನ್ನು ಹೊರಡಿಸಿದೆ, ಇದರ ಪ್ರಕಾರ ಸಾಮಾನ್ಯ ವಿದ್ಯಾರ್ಥಿಗೆ ಪ್ರತಿ ವಿಭಾಗಕ್ಕೆ ಪ್ರವೇಶವನ್ನು ಸಲ್ಲಿಸಲು rs 800.00 ಹಾಗೂ ಎಸ್ಸಿ ಮತ್ತು ಎಸ್ ಟಿ ವರ್ಗದವರಿಗೆ Rs 400.00 ಅನ್ನು ನಿಗದಿಪಡಿಸಿದೆ.  ಒಂದು ವಿದ್ಯಾರ್ಥಿ ಹಲವು ವಿಭಾಗಗಳಿಗೆ ಅರ್ಜಿಯನ್ನು ಸಲ್ಲಿಸುವಾಗ ಪ್ರತಿ ಅರ್ಜಿಗೂ ಪ್ರತ್ಯೇಕವಾಗಿ ಶುಲ್ಕವನ್ನು ನಿಗದಿಪಡಿಸಲಾಗಿದೆ.  ಇದು ನಮ್ಮ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಆರ್ಥಿಕವಾಗಿ ಬಹಳ ಹೊರೆಯನ್ನು ಉಂಟುಮಾಡುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ಬೇರೆ ವಿಶ್ವವಿದ್ಯಾಲಯಗಳು ಇದೆ ಪ್ರವೇಶತಿಗಾಗಿ 200 ರಿಂದ400 ನಿಗದಿಪಡಿಸಿವೆ. ಆದರೆ ನಮ್ಮ ವಿಶ್ವವಿದ್ಯಾಲಯ ಅತಿ ಹೆಚ್ಚಿನ ಅರ್ಜಿ ಶುಲ್ಕವನ್ನು ನಿಗದಿ ಮಾಡಿದ್ದು ಸಮಂಜಸವಲ್ಲ.  ಆದ್ದರಿಂದ ತಾವುಗಳು ಈ ಕುರಿತಂತೆ ಗಮನವರಿಸಿ ವಿದ್ಯಾರ್ಥಿಗಳ ಹಿತ ದೃ

ವಿಭಾಗದ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಸರಕಾರಿ ಬಾಲಕಿಯರ ಆಯ್ಕೆ

ಇಮೇಜ್
  ಮಸ್ಕಿ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಯಚೂರು ಕರ್ನಾಟಕ ಕ್ರೀಡಾ ಪ್ರಾಧಿಕಾರ ಬೆಂಗಳೂರು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಯಚೂರು ಇವರ ಸಂಯುಕ್ತ ಆಶ್ರಯದಲ್ಲಿ ರಾಯಚೂರು ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ 2024 25 ಸಾಲಿನ ಮಹಿಳೆಯರಿಗೆ ಬಾಲ್ ಬ್ಯಾಡ್ಮಿಂಟನ್ ಸತತ ಎರಡನೇ ವಿಭಾಗದಲ್ಲಿ ಮಸ್ಕಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹಾಲಾಪೂರಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.ಈ ಸಾಧನೆ ಕ್ರೀಡಾ ಪಟುಗಳಿಗೆ ಮುಖ್ಯೋಪಾಧ್ಯಾಯರಾದ ಸುಭಾಸ್ ಸಿಂಗ್ ಹಜಾರೆ ಹಾಗೂ ಶಿಕ್ಷಕರು ಎಸ್‌. ಡಿ.ಎಂ.ಸಿ ಅಧ್ಯಕ್ಷರಾದ ಮಾಳಿಂಗರಾಯ, ಕ್ರೀಡಾಪಟುಗಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ರವೀಂದ್ರ, ಬಸವರಾಜಪ್ಪಗೌಡ ಪಾಟೀಲ್ ಸಿದ್ದಾರ್ಥ್ ಪೊಲೀಸ್ ಪಾಟೀಲ್,ವಿದ್ಯಾರ್ಥಿಗಳು ಕ್ರೀಡಾ ಪ್ರೇಮಿಗಳು ಊರಿನ ಪ್ರಮುಖರು ಅಭಿನಂದಿಸಿದ್ದಾರೆ.

ಗ್ರಾಮ ಆಡಳಿತಾಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ

ಇಮೇಜ್
ಮಸ್ಕಿ : ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಮೂಲಭೂತ ಸೌಕರ್ಯ ನೀಡದೆ ಒತ್ತಡ ಏರಿ ಕೆಲಸ ಮಾಡಿಸುತ್ತಿರುವುದನ್ನು ವಿರೋಧಿಸಿ ಹಾಗೂ ಸಂಘದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಗ್ರಾಮ ಆಡಳಿತ ಅಧಿಕಾರಿಗಳ ತಾಲೂಕು ಸಂಘದ ಅಧ್ಯಕ್ಷ ಮಹಾಂತೇಶ ತಿಳಿಸಿದರು. ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಧಿಕ ಕೆಲಸದ ಒತ್ತಡ ಹಾಗೂ ತಾಂತ್ರಿಕ ಕೆಲಸಗಳಿಗೆ ಮಾಹಿತಿ ನೀಡದೆ ಹಾಗೂ ಮೂಲಭೂತ ಸೌಕರ್ಯ ನೀಡದೆ ಒತ್ತಡ ಏರಿ ಕೆಲಸ ಮಾಡಿಸುತ್ತಿರುವುದನ್ನು ವಿರೋಧಿಸಿ ಹಾಗೂ ಸಂಘದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಗ್ರಾಮ ಆಡಳಿತ ಅಧಿಕಾರಿಗಳ ತಾಲೂಕು ಸಂಘದ ಕಾರ್ಯದರ್ಶಿ ನಿಂಗಪ್ಪ ತಿಳಿಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ತಾಲೂಕು ಸಂಘದಿಂದ ಏರ್ಪಡಿಸಲಾಗಿದ್ದ ಪ್ರತಿಭಟನೆಯಲ್ಲಿ ತಹಸೀಲ್ದಾರ್ ಡಾ.ಮಲ್ಲಪ್ಪ ಕೆ ಯರಗೋಳ ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮತನಾಡಿದರು. ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ೬ ಮೊಬೈಲ್ ಆ್ಯಪ್ ಗಳಲ್ಲಿ ಒಂದೇ ಬಾರಿಗೆ ಪ್ರಗತಿ ಸಾಧಿಸುವಂತೆ ಒತ್ತಡ ಏರಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಧಿಕ ಕೆಲಸದ ಒತ್ತಡ ಉಂಟಾಗಿದ್ದು ಅಧಿಕ ಕೆಲಸದ ಒತ್ತಡದಿಂದ ಕೆಲವು ಗ್ರಾಮ ಆಡಳಿತ ಅಧಿಕಾರಿಗಳು ಹೃದಯಾ

ಕುಂಚಿ ಕೊರವರ ಸಂಘಟನೆಗೆ ಹುಲಿಗಿ ಘಟಕದ ಅಧ್ಯಕ್ಷರಾಗಿ ಪನ್ನ ಗಂಗಪ್ಪ ಆಯ್ಕೆ

ಇಮೇಜ್
  ಹುಲಿಗಿ: ಕುಂಚಿ ಕೊರವರ ಸಂಘಟನೆಗೆ ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕಿನ  ಹುಲಿಗಿ ಘಟಕದ ಅಧ್ಯಕ್ಷ ,ಉಪಾಧ್ಯಕ್ಷ ,ಪದಾಧಿಕಾರಿಗಳ ನೇಮಕ ಆಯ್ಕೆ ಪ್ರಕ್ರಿಯೆ ನಡೆಯಿತು. ಕೊಪ್ಪಳ ,ಬಳ್ಳಾರಿ,ವಿಜಯನಗರ,ಜಿಲ್ಲೆಗಳ ಉಸ್ತುವಾರಿಯ ಕೆ ಕೊಟ್ರೇಶ್ ಕೊಟ್ಟೂರು  ಆದೇಶದಂತೆ ಗಂಗಾವತಿ ವೆಂಕಟೇಶ್ ನೇತೃತ್ವದಲ್ಲಿ ಗಂಗಾವತಿ ತಾಲೂಕಿನ ಹುಲಿಗಿ ಘಟಕ ರಚನೆ ಮಾಡಲಾಯಿತು. 26.09.2024 ಗುರುವಾರ ರಂದು ಹಾವುನೂರು ದ್ಯಾಮವ್ವ ದೇವಸ್ಥಾನದಲ್ಲಿ ಕುಂಚಿ ಕೊರವರ ಹುಲಿಗಿ ಘಟಕದ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಕುಂಚಿ ಕೊರವರ ಸಮುದಾಯದ ಅಭಿವೃದ್ಧಿಗೆ    ಹಾಗೂ ಸರ್ಕಾರದ ಸೌಲಭ್ಯಗಳನ್ನು ನಮ್ಮ ಸಮುದಾಯಕ್ಕೆ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುವೆ ಎಂದು ಗಂಗಾವತಿ ತಾಲೂಕಿನ ಹುಲಿಗಿ ಘಟಕದ ಅಧ್ಯಕ್ಷ ಪನ್ನ ಗಂಗಪ್ಪ ಮಾತನಾಡಿದರು. ಗಂಗಾವತಿ ತಾಲೂಕಿನ ಹುಲಿಗಿ ಘಟಕದ ಪದಾಧಿಕಾರಿಗಳ ವಿವರ  : ಗೌರವಾಧ್ಯಕ್ಷ ಮುತ್ತಣ್ಣ , ಉಪಾಧ್ಯಕ್ಷರನ್ನಾಗಿ ಈರಪ್ಪ, ಪ್ರಧಾನ ಕಾರ್ಯದರ್ಶಿ. ರವಿ, ಸಂಘಟನೆ ಕಾರ್ಯದರ್ಶಿ ಹುಲುಗಪ್ಪ, ಖಜಾಂಚಿ ವೆಂಕಟೇಶ್, ಸದಸ್ಯರು ಸಣ್ಣದ್ಯಾಮ, ಪರಶುರಾಮ್,ಗಾಳಪ್ಪ, ಶ್ರೀ ನಿವಾಸ,ಗಂಗಪ್ಪ, ದೊಡ್ಡ ದ್ಯಾಮ, ಮಂಜುನಾಥ್, ಸುರೇಶ್,ಅಣ್ಣಪ್ಪ, ದುರುಗಪ್ಪ,ಅಂಜಿನಿ,ಕೊಂಡಯ್ಯ,ದ್ಯಮಪ್ಪ,ಮುತ್ತಪ್ಪ,ವಿರೇಶ್,ಗಾಳಪ್ಪ,ನಾಗಪ್ಪ, ವೆಂಕಟೇಶ್,ಗೊಂಪಿ ,ಬೆನ್ನಪ್ಪ,ಮಾರಪ್ಪ, ಹುಲುಗಪ್ಪ,ಗಾಳಪ್ಪ, ಪರಶುರಾಮ್ ಸಮಾಜದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

*ಅಜೀಂ ಪ್ರೇಮ್ ಜಿ ಫೌಂಡೇಶನ್ ಬೆಂಗಳೂರು ಅವರ ಸಹ ಭಾಗಿತ್ವದಲ್ಲಿ ಶಾಲಾ ಮಕ್ಕಳ ಪೌಷ್ಟಿಕತೆ ವೃದ್ದಿಸಲು 6 ದಿನಗಳ ಪೂರಕ ಪೌಷ್ಟಿಕ ಆಹಾರ ವಿತರಣೆ.*

ಇಮೇಜ್
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಪಟ್ಟಣದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಧಾನ ಮಂತ್ರಿ ಪೋಷನ್ ಶಕ್ತಿ ನಿರ್ಮಾಣ ಮಧ್ಯಾಹ್ನದ ಉಪಹಾರ ಯೋಜನೆ ಅನ್ವಯ ಅಜೀಂ ಪ್ರೇಮ್ ಜಿ ಪ್ರತಿಷ್ಠಾನ ರವರ ಪ್ರಾಯೋಜಕತ್ವದ ಪೂರಕ ಪೌಷ್ಟಿಕ ಆಹಾರ ಪೂರೈಕೆ ಅಡಿಯಲ್ಲಿ ವಾರದ ನಾಲ್ಕು ದಿನಗಳ ಕಾಲ ಮೊಟ್ಟೆ ಬಾಳೆಹಣ್ಣು ಶೇಂಗಾ ಚಿಕ್ಕಿ ವಿತರಣಾ ಕಾರ್ಯಕ್ರಮವನ್ನು ಡಿಸೆಂಬರ್ 25 ರಂದು ಸರ್ಕಾರ ದೊಂದಿಗೆ ಮೂರು ವರ್ಷಗಳ ಅವಧಿ ರೂ 1,591. ಕೋಟಿ ರೂಪಾಯಿಗಳ ವೆಚ್ಚದ ಒಪ್ಪಂದ ಮಾಡಿ ಕೊಂಡಿದ್ದು, ಈ ಕಾರ್ಯಕ್ರಮದ 2024 -25 ನೇ. ಸಾಲಿನ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನಗಳು ಪೂರಕ ಪೌಷ್ಟಿಕ ಆಹಾರವನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ   ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎ.ಸಿ.ಚೇತನ್ ಮಾತನಾಡಿ ಮೊಟ್ಟೆ ತಿನ್ನುವಂತಹ ಮಕ್ಕಳಿಗೆ ಮೊಟ್ಟೆ ಹಾಗೂ ಮೊಟ್ಟೆ ತಿನ್ನದೇ ಇರುವಂಥ ಮಕ್ಕಳಿಗೆ ಮೊಟ್ಟೆ ಬದಲಾಗಿ ಬಾಳೆಹಣ್ಣು ವಿತರಣೆ ಮಾಡುವುದ ರೊಂದಿಗೆ ಶಾಲಾ ಮಕ್ಕಳೊಂದಿಗೆ ಶಾಲೆಯಲ್ಲಿ ತಯಾರಿಸಿದ ಬಿಸಿ ಊಟವನ್ನು ಮಕ್ಕಳ ಸಾಲಿನಲ್ಲಿ ಕೂತು ಬಿಸಿಯೂಟ ಸೇವಿಸಿದರು.  ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ರತ್ನಮ್ಮ, ಅಡಿವೆಜ್ಜರ್ ನಾಗೇಶ್.ಉನ್ನತಿಕರಿಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೊಸಹಳ್ಳಿ ಮುಖ್ಯಗು

*ರಕ್ತದಾನ ಮಹಾದಾನ ಗ್ರಾಮ ಪಂಚಾಯತಿ ಅಧ್ಯಕ್ಷ ಎ.ಸಿ.ಚೇತನ್*

ಇಮೇಜ್
ಕಾನ ಹೊಸಹಳ್ಳಿ: ಪಟ್ಟಣದ ಕೆಎಸ್ಆರ್.ಟಿ.ಸಿ ಬಸ್ ನಿಲ್ದಾಣ ಆವರಣದಲ್ಲಿ ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯನಗರ ಜಿಲ್ಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕಾನ ಹೊಸಹಳ್ಳಿ ಇವರ ನೇತೃತ್ವದಲ್ಲಿ ಸ್ವಯಂ ಪ್ರೇರಿತಾ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ಎ.ಸಿ ಚೇತನ್ ರಕ್ತದಾನ ಮಹಾದಾನ ವಾಗಿದೆ. ಅಪಘಾತ ಹಾಗೂ ಇತರ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ರೋಗಿಗೆ ರಕ್ತದ ಅವಶ್ಯಕತೆ ಬಹಳ ಇರುತ್ತದೆ. ಆ ಸಮಯ ರೋಗಿ ಪಾಲಿಗೆ ಪ್ರತಿ ನಿಮಿಷವೂ ಅಮೂಲ್ಯ. ರಕ್ತ ಕೊರತೆ ತಪ್ಪಿಸಿ, ಆತನ ಪ್ರಾಣ ಉಳಿಸಲು ರಕ್ತ ಅತ್ಯವಶ್ಯವಕವಾಗಿರುತ್ತದೆ ಎಂದರು.  ಈ ಸಂದರ್ಭದಲ್ಲಿ ಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಅಭಿಷೇಕ್ ಮಾತನಾಡಿ ಸಾಮಾನ್ಯವಾಗಿ ರಸ್ತೆ ಅಪಘಾತದಲ್ಲಿ ರಕ್ತಸ್ರಾವಗೊಂಡ ರೋಗಿಗಳು ಮತ್ತು ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಯರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಇಂಥ ಸಂದರ್ಭದಲ್ಲಿ ರಕ್ತದಾನಿಗಳು ನೀಡುವ ರಕ್ತ ಮಹತ್ವ ಪಡೆಯುತ್ತದೆ. ಒಬ್ಬರ ರಕ್ತದಾನದಿಂದ ಮೂರು ಜನರ ಪ್ರಾಣ ಉಳಿಸಬಹುದಾಗಿದೆ ಎಂದು ಹೇಳಿ ರಕ್ತದಾನದ ಮಹತ್ವವನ್ನು ವಿವರಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ನೇತ್ರಾವತಿ ಮಂಜುನಾಥ, ವೈದ್ಯಾಧಿಕಾರಿ ಡಾ ಅಭಿಷೇಕ್, ಎಲ್ಎಚ್.ವಿ ಭಾರತಿ, ರಾಘವರಡ್ಡಿ, ಕೃಷ್ಣ, ಮಹೇಂದ್ರ, ಕಿ.ಪ್ರ.ತಾ. ಅಧಿಕಾರಿ ಸೋಮಶೇಖರ್ ಕೆ.ಆರ್, ಪ್ರಸಾದ್,

ಮಲ್ಲಿಕಾರ್ಜುನ ವೀರಾಪುರ ರವರೆಗೆ ಛಾಯಾ ಸಾಧಕ ಪ್ರಶಸ್ತಿ ಪ್ರಧಾನ

ಇಮೇಜ್
ಮಸ್ಕಿ : ಪಟ್ಟಣದ ಯುವ ಉತ್ಸಾಹಿ ಸಮಾಜ ಸೇವಕ ರಾಗಿ ಹಾಗೂ ಫೋಟೋಗ್ರಾಫರ್ ವೃತ್ತಿ ಯಲ್ಲಿ ನಿಪುಣತೆಯನ್ನು ಹೊಂದಿರುವ ಶ್ರೀ ಮಲ್ಲಿಕಾರ್ಜುನ ಮಸ್ಕಿ ರವರಿಗೆ ಶನಿವಾರ ಛಾಯಾ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದೆ. ಸತತ 23 ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ.ಇವರ ಛಾಯಾಚಿತ್ರ ಹಾಗೂ ಫೋಟೋಗ್ರಾಫರ್ ರಂಗದಲ್ಲಿ ಸೇವೆ ಇಡೀ ಚಿತ್ರ ರಂಗದ ಮೆಚ್ಚುಗೆ ಪಾತ್ರರಾಗಿದ್ದಾರೆ. ಡಾ.ಶಿವ ರಾಜಕುಮಾರ ಅಭಿನಯದ ಜೋಡಿ ಹಕ್ಕಿ,ಇದ್ದಂತೆ ಪ್ರಮವಯ್ಯ,ಜಗತ್ತಿ ಕಿಲಾಡಿ,ಅಮೆರಿಕಾ ಅಮೆರಿಕಾ, ದರ್ಶನ ಅಭಿನಯದ ನಮ್ಮ ಪ್ರೀತಿಯ ರಾಮು, ಮುಂತಾದ ಇನ್ನೂ ಹಲವಾರು ಚಿತ್ರ ಗಳಲ್ಲಿ ಸ್ಥಿರ ಛಾಯ ಗ್ರಾಹಕರಾಗಿ ಸೇವೆ ಸಲ್ಲಿಸಿ‌ ಕಲಾ ದೇವಿಯ ಆರಾಧನಾ ಮಾಡುವ ಉದ್ದೇಶದಿಂದ ಮಸ್ಕಿ ಪಟ್ಟಣದಲ್ಲಿ ಪೋಟೋ ಶಾಪ್ ಇಟ್ಟುಕೊಂಡು ಜೀವನದ ಬಂಡಿ ಸಾಗಿಸುತ್ತಿದ್ದಾರೆ. ಇವರ ಮಸ್ಕಿ ಯಲ್ಲಿ ಎಲೆ ಮರೆ ಕಾಯಿಯಂತೆ ಕೆಲಸ ಮಾಡುವ ಮನಸ್ಸು ಸಾರ್ವಜನಿಕರ ಮುಚ್ಚುಗೆ ಪಾತ್ರವಾಗಿದೆ. ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘ ಬೆಂಗಳೂರು ನಗರದಲ್ಲಿ ನೆಡೆದ ಕಾರ್ಯಕ್ರಮ ದಲ್ಲಿ ಮಲ್ಲಿಕಾರ್ಜುನ ಮಸ್ಕಿ ಯವರಿಗೆ ಛಾಯಾ ಸಾಧಕ ಪ್ರಶಸ್ತಿಯನ್ನು ಇದೇ ಸೆ.21 ರಂದು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಛಾಯ ಸಾಧಕ ಪ್ರಶಸ್ತಿ ವಿಜೇತ ಮಲ್ಲಿಕಾರ್ಜುನ ರವರಿಗೆ ಗೆಳೆಯ ವೃಂದದವರು, ಸಾರ್ವಜನಿಕರು ಮಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅರಿವು ಕೇಂದ್ರದ ಮೇಲ್ವಿಚಾರಕರಿಗೆ ನಾಯಕತ್ವ ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿ

ಇಮೇಜ್
  ಕೊಟ್ಟೂರು ದಿನಾಂಕ 25/09/2024 ಬುಧುವಾರ ಶಿಕ್ಷಣ ಫೌಂಡೇಶನ್ ಸಂಸ್ಥೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ವಿಜಯನಗರ ಜಿಲ್ಲೆಯ 6 ತಾಲೂಕಿನ 40 ಗ್ರಾಮ ಪಂಚಾಯತ್ ಅರಿವು ಕೇಂದ್ರದ ಮೇಲ್ವಿಚಾರಕರಿಗೆ ನಾಯಕತ್ವ ಹಾಗೂ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಹೊಸಪೇಟೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು.   ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹೊಸಪೇಟೆ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀಯುತ ಕಾಂತರಾಜು ಡಿ ಮತ್ತು ಶಿಕ್ಷಣ ಫೌಂಡೇಶನ್ ಸಂಸ್ಥೆಯ ಉತ್ತರ ಕರ್ನಾಟಕ ವಿಭಾಗದ ಸಂಯೋಜರಾದ ಶ್ರೀಯುತ ಶರಣಪ್ಪ ಕಟ್ಟಿಮನಿ ಹಾಗೂ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ರಂಜನಿ ಬೆಂಗಳೂರು , ಇವರು ಉದ್ಘಾಟನೆ ಮಾಡಿದರು. ಶಿಬಿರಾರ್ಥಿಗಳಿಗೆ ಮೇಲ್ವಿಚಾರಕರಿಗೆ ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮವನ್ನು ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ತರಬೇತಿ ಕುರಿತು ಹಾಗೂ ಲೈಬ್ರರಿಯನ್ ಪೋರ್ಟಲ್ ನಲ್ಲಿ ಸ್ವಸಹಾಯ ಸಂಘದ ಸದಸ್ಯರನ್ನು ನೊಂದಣಿ ಮಾಡುವ ಕುರಿತು ಮಾಹಿತಿ ನೀಡಲಾಯಿತು. ಮತ್ತು ತರಬೇತಿಯಲ್ಲಿ ವಿನೂತನ ಚಟುವಟಿಕೆಗಳಲ್ಲಿ ಶಿಬಿರಾರ್ಥಿಗಳು ಆಸಕ್ತಿಯಿಂದ ಭಾಗವಹಿಸುವುದರ ಮೂಲಕ ತರಬೇತಿಯೂ ಸಂಪೂರ್ಣ ಹಾಜರಾತಿಯೊಂದಿಗೆ ಯಶಸ್ವಿಯಾಗಿ ನಡೆಯಿತು. ತರಬೇತಿಯಲ್ಲಿ ಜಿಲ್ಲಾ ಸಂಯೋಜಕರಾದ ಎಸ್.ಬಿ ಶ್ರೀಧರ್ ಹಾಗೂ ಬಸವರಾಜು ಬಿ. ಎ ಉಪಸ್ಥಿತರಿದ್ದರು

*ಕಾಂಗ್ರೆಸ್ ಸರ್ಕಾರ ಮುತುವರ್ಜಿ ವಹಿಸಿ ಒಳಮೀಸಲಾತಿ ನೀಡಲಿ: ದಲಿತರಿಂದ ಬೃಹತ್ ಸಮಾವೇಶ: ಸಂಸದ ಗೋವಿಂದ ಕಾರಜೋಳ*

ಇಮೇಜ್
ಕಾನ ಹೊಸಹಳ್ಳಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 50ರ ಬಳಿ ಗಾಣಿಗರ ಸಮುದಾಯ ಭವನದ ಮುಂಭಾಗದಲ್ಲಿ ಚಿತ್ರದುರ್ಗದ ಲೋಕಸಭಾ ಸದಸ್ಯರಾದ ಗೋವಿಂದ ಕಾರಜೋಳ ಇವರು ಚಿತ್ರದುರ್ಗ ಮಾರ್ಗದಿಂದ ಸಂಚರಿಸುವ ಮಾರ್ಗದ ಮಧ್ಯ ಕಾನ ಹೊಸಹಳ್ಳಿ ಹೋಬಳಿ ವ್ಯಾಪ್ತಿಯ ದಲಿತ ಮುಖಂಡರು ಭೇಟಿಯಾಗಿ ಒಳ ಮೀಸಲಾತಿ ಬಗ್ಗೆ ಚರ್ಚೆ ನಡೆಸಿದರು. ನಂತರ ಮಾತನಾಡಿದ ಅವರು ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಅಗತ್ಯ ಇದೆ. ಈ ಸಂಬಂಧ ಬೊಮ್ಮಾಯಿ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಅಡೆತಡೆಗಳೆಲ್ಲ ನಿವಾರಣೆಯಾಗಿವೆ. ಈಗಿನ ಸರ್ಕಾರ ಮುತುವರ್ಜಿ ವಹಿಸಿ ಒಳಮೀಸಲಾತಿ ನೀಡಬೇಕು‌. ದಲಿತ ಸಮುದಾಯದವರು ಒಳ ಮೀಸಲಿನ ಅನುಷ್ಠಾನಕ್ಕೆ ಶೀಘ್ರದಲ್ಲೇ ಸಮಾವೇಶ ನಡೆಸೋಣ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎನ್ ರವಿಕುಮಾರ್ ವಿಧಾನಪರಿಷತ್ ಸದಸ್ಯರು, ಚಿತ್ರದುರ್ಗ ದಲಿತ ಮುಖಂಡ ಮುರಾರ್ಜಿ ಡಿ ಓ, ಡಿಎಸ್ಎಸ್ ತಾಲೂಕ ಅಧ್ಯಕ್ಷ ಟಿ ಗಂಗಾಧರ್, ಗ್ರಾ.ಪಂ ಸದಸ್ಯ ಹೊನ್ನೂರ ಸ್ವಾಮಿ, ಕಾನಾಮಡುಗು ಎಚ್ ದುರುಗಪ್ಪ, ಡಿಎಸ್ಎಸ್ ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯ ಕಾನಮಡುಗು ದುರುಗಪ್ಪ, ಸಂಘಟನಾ ಸಂಚಾಲಕ ಎನ್. ಪಕೀರಪ್ಪ ಕಾನಮಡಗು, ನಡವಲುಮನೆ ತಿಪ್ಪೇಸ್ವಾಮಿ, ತಿಪ್ಪೇಸ್ವಾಮಿ, ಹೇಮಣ್ಣ, ನೀರಗುಂಟೆ ತಿಪ್ಪೇಶ್, ಮಾದಿಗ ದಂಡೋರ ಸಂಘದ ಹೋಬಳಿ ಅಧ್ಯಕ್ಷ ಎಂ ಬಸವರಾಜ್, ಸಣ್ಣ ನಾಗರಾಜ, ಮಂಜುನಾಥ, ದುರುಗೇಶ್, ಯಂಬಳಿ ಸಿದ್ದಪ್ಪ, ಕರಿಬಸಪ್ಪ ಸೇರಿದಂತೆ ದಲಿತ ಸಮುದಾಯ

**_ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಕೆ. ಎಂ.ಶಶಿಧರ_*

ಇಮೇಜ್
ಕಾನ ಹೊಸಹಳ್ಳಿ: ಮುಡಾ ಹಗರಣ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಲ್ಲೋಟ್ ಪ್ರಾಸಿಕ್ಯೂಷನ್‌ಗೆ ನೀಡಿದ್ದ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದ ಕ್ರಮವನ್ನು ಖಂಡಿಸಿ ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಸಂಜೆ ಕಾಂಗ್ರೆಸ್ ಕಾರ್ಯಕರ್ತರು ಮಾನವ ಸರಪಳಿ ಬಿಗಿದು ಪ್ರತಿಭಟನೆ ನಡೆಸಿದರು.  ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಜಿ.ಪಂ ಸದಸ್ಯ ಕೆಎಂ ಶಶಿಧರ್ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಅಣತಿಯಂತೆ ರಾಜ್ಯಪಾಲರು ರಾಜಕೀಯ ಪ್ರೇರಿತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ರೂಪಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಖಂಡನೀಯ ಇದಕ್ಕೆ ಕಾನೂನು ಮೂಲಕವೇ ನಮ್ಮ ಪಕ್ಷ ಉತ್ತರ ನೀಡಲಿದ್ದು, ಈಗಾಗಲೇ ಸಿದ್ದರಾಮಯ್ಯ ಅವರು‌ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಕಿಡಿ ಕಾರಿದ್ದರು. ಈ ವೇಳೆ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಪ್ರಕಾಶ್, ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಪಿಎಲ್ ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ಸತೀಶ್, ಲಕ್ಕಜ್ಜಿ ಮಲ್ಲಿಕಾರ್ಜುನ, ಡಿಎಸ್ಎಸ್ ಮುಖಂಡರಾದ ಟಿ ಗಂಗಾಧರ, ಬಿ.ಟಿ ಗುದ್ದಿ ದುರುಗೇಶ್, ಫೋಟೋ ಸಿದ್ದಲಿಂಗಣ್ಣ, ಸಿದ್ದನಗೌಡ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಬೋರೆಯ್ಯ, ಕಾಂಗ್ರೆಸ್ ಮುಖಂಡ ಪಾಲಾಕ್ಷಿ, ಕಾಂಗ್ರೆಸ್ ಪಕ್ಷದ ಯುವ ಮುಖಂಡ ಎಂ.ಎಸ್ ಮಂಜುನಾಥ್, ಸೇರಿದಂತೆ ಕಾಂಗ್ರೆಸ್

*ಸರ್ ಎಂ ವಿಶ್ವೇಶ್ವರಯ್ಯ ಜನ್ಮದಿನದ ಅಂಗವಾಗಿ ಪ್ರಬಂಧ ಸ್ಪರ್ಧೆ*

ಇಮೇಜ್
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹೂಡೇo ಅರಿವು ಕೇಂದ್ರ ಗ್ರಂಥಾಲಯ ಮಾಹಿತಿ ಕೇಂದ್ರದಲ್ಲಿ ಪ್ರಬಂಧ ಸ್ಪರ್ಧೆ.  ಸರ್ ಎಂ ವಿಶ್ವೇಶ್ವರಯ್ಯ ಇಂಜಿನಿಯರ್ ದಿನದ ಪ್ರಯುಕ್ತ ಇವರ ಬಗ್ಗೆ ಪ್ರಬಂಧ ಸ್ಪರ್ಧೆ ಮಾಡಿಸಲಾಯಿತು ಹಾಗೂ ಅರಿವು ಕೇಂದ್ರ ಗ್ರಂಥಾಲಯದಲ್ಲಿ ಮಕ್ಕಳು ಗ್ರಂಥಾಲಯದಲ್ಲಿ ನಾನು ಓದಿದ ಪುಸ್ತಕ ಅಭಿಯಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ತಾಯಕನಹಳ್ಳಿ ಹಾಗೂ ಶ್ರೀ ಗುರು ಕನಕ ವಿದ್ಯಾ ಕೇಂದ್ರದ ಮಕ್ಕಳು ನಮ್ಮ ಊರಿನ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮಕ್ಕಳು ಅವರಿಗೆ ಇಷ್ಟವಾಗುವಂತಹ ಪುಸ್ತಕಗಳನ್ನು ಓದಿದರು ಹಾಗೂ ನಾನು ಓದಿದ ಪುಸ್ತಕ ಎಂದು ಗಟ್ಟಿಯಾಗಿ ಓದಿದರು ಮಕ್ಕಳು ಓದುವ ಬೆಳಕು ಕಾರ್ಯಕ್ರಮದಲ್ಲಿ ನಮಗೆ ಅರಿವು ಕೇಂದ್ರ ಗ್ರಂಥಾಲಯ ಬಹಳ ಉಪಯೋಗವಾಗುತ್ತಿದೆ ಎಂದು ತಿಳಿಸಿದರು ಹಾಗೂ ಇನ್ನುಳಿದ ವಿದ್ಯಾರ್ಥಿಗಳು ಬಸವಣ್ಣನ ವಚನ ಅಕ್ಕಮಹಾದೇವಿ ವಚನಗಳನ್ನು ಹೇಳಿದರು ಕೆಲ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು ಈ ದಿನ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಹೆಣ್ಣು ಮಕ್ಕಳ ಬಗ್ಗೆ ಗ್ರಂಥಾಲಯ ಮೇಲ್ವಿಚಾರಕರು ತಿಳಿಸಿದರು ಮಕ್ಕಳಿಗೆ ಸಿಹಿ ಹಂಚುವುದರ ಮೂಲಕ ನಾನು ಓದುವ ಪುಸ್ತಕ ಅಭಿಯಾನದ ಅಭಿಯಾನ ಮಾಡಲಾಯಿತು. ಅರಿವು ಕೇಂದ್ರ ಗ್ರಂಥಾಲಯ ಬಂದ ಮಕ್ಕಳಿಗೆ ಸಾರ್ವಜನಿಕರಿಗೆ ಗ್ರಂಥಾಲಯ ಓದುಗರಿಗೆ ಅಭಿನಂದನೆಗಳನ್ನು ತಿಳಿಸಲಾಯಿತು. ಕಾರ್ಯಕ್ರಮ ಯ

ವಿಜಯನಗರ ಹಿರಿಯ ನಾಗರೀಕ ವೇದಿಕೆ ಗ್ರಂಥಾಲಯಕ್ಕೆ ಶಾಸಕ ಕೃಷ್ಣಪ್ಪ ಚಾಲನೆ

ಇಮೇಜ್
ಬೆಂಗಳೂರು: ವಿಜಯನಗರ ಬಿಬಿಎಂಪಿ, ವಿಜಯನಗರ ಹಿರಿಯ ನಾಗರೀಕ ವೇದಿಕೆ ಕಚೇರಿಯಲ್ಲಿಂದು ಹಿರಿಯ ನಾಗರೀಕರ ಅನುಕೂಲಕ್ಕಾಗಿ ಗ್ರಂಥಾಲಯ ಮತ್ತು ವಾಚನಾಲಯ, ಕೇರಮ್ ಮತ್ತು ಚೆಸ್ ಗಳಿಗೆ ವಿಜಯನಗರ ಶಾಸಕ ಕೃಷ್ಣಪ್ಪ ಚಾಲನೆ ನೀಡಿದರು. ವಿಜಯನಗರ ಹಿರಿಯ ನಾಗರೀಕ ವೇದಿಕೆಯ ಅಧ್ಯಕ್ಷ ದೇವರಾಜ್, ಉಪಾಧ್ಯಕ್ಷ ರವೀಂದ್ರ, ಕಾರ್ಯದರ್ಶಿ ಎಸ್.ವೇಣುಗೋಪಾಲ್, ಜಂಟಿ ಕಾರ್ಯದರ್ಶಿ ರುದ್ರೇಶ್, ಖಜಾಂಚಿ ಕೆ.ಸಿದ್ದಪ್ಪ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

" ತಾಲೂಕು ಮಟ್ಟದ ದಸರಾ ಕ್ರೀಡಾಕೂಟ"

ಇಮೇಜ್
ಕೊಟ್ಟೂರು:ಕ್ರೀಡೆ ಪ್ರಶಸ್ತಿಯನ್ನು ಮೀರಿದ ವ್ಯವಸ್ಥೆ ಇಲ್ಲಿ ಭಾಗವಹಿಸುವ ಎಲ್ಲ ಸ್ಪರ್ಧಿಗಳಿಗೆ ಬಹುಮಾನ ಸಿಗದೆ ಇರಬಹುದು, ಆದರೆ ಅವರಿಗೆಲ್ಲ ಪ್ರಶಸ್ತಿಗಿಂತ ಮುಖ್ಯವಾದ ಆರೋಗ್ಯ ಭಾಗ್ಯ ಸಿಗುತ್ತದೆ.ಎಂದು ಯುವಜನ ಸೇವಾ ಇಲಾಖೆ ಅಧಿಕಾರಿ ಜಗದೀಶ್  ಅವರು ಹೇಳಿದರು. ಕ್ರೀಡಾ ಇಲಾಖೆ ಬಳ್ಳಾರಿ ವತಿಯಿಂದ ದಸರಾ ಕ್ರೀಡಾ ಕೂಟ ಬುಧವಾರ ಏರ್ಪಡಿಸಲಾಗಿತ್ತು.ರಾಷ್ಟ್ರಮಟ್ಟದ ಖೋ ಖೋ ಕ್ರೀಡಾಪಟು ಪ್ರತಿಕ್ಷಾ ಸಸಿಗೆ  ನೀರು ಹಾಕುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಮೈದೂರು  ಶಶಿಧರ್ ಹಾಗೂ ಅಜಯ್ ತಳವಾರ್ ಮಾತನಾಡಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕೊಟ್ಟೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ದೈಹಿಕವಾಗಿ ಸದೃಢ ವಾಗಿದ್ದರೆ ಜೀವನ ಸುಗಮವಾಗಿ ಸಾಧ್ಯವಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವ ಆಸಕ್ತಿ ಕಡಿಮೆ ಆಗುತ್ತಿದ್ದು ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು ಎಂದರು.  ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ ಕೊಟ್ರೇಶ್ ಮಾತನಾಡಿ ಕ್ರೀಡಾ ಸ್ಫೂರ್ತಿ, ಶಿಸ್ತಿನಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ಸಾಧನೆ ತೋರಬೇಕು ಯುವ ಸಮುದಾಯಕ್ಕೆ ತನ್ನ ಸಾಮರ್ಥ್ಯ ಸಾಬೀತು ಪಡಿಸಲು ದಸರಾ ಕ್ರೀಡಾಕೂಟ ಒಂದು ಉತ್ತಮ ವೇದಿಕೆ ಎಂದರು. ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಾಲಿಬಾಲ್‌, ಖೋ-ಖೋ, ಕಬಡ್ಡಿ, ಥ್ರೋಬಾಲ್, ಕ್ರೀಡೆಗ

ಆನ್ವರಿ ವಲಯದ ಪೋಷಣ್ ಮಾಸಚರಣೆ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ.

ಇಮೇಜ್
  ಹಟ್ಟಿ ಚಿನ್ನದ ಗಣಿ :ಪಟ್ಟಣದ ಸಮೀಪದ ಆನ್ವರಿ ಗ್ರಾಮದಲ್ಲಿ.24.09.2024 ರಂದು. ಆನ್ವರಿ ವಲಯದಲ್ಲಿ ಒಟ್ಟು 20 ಅಂಗನವಾಡಿ ಕೇಂದ್ರಗಳಿದ್ದು. ಇಂದು ಆನ್ವರಿ ಗ್ರಾಮದ 6ನೇ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಚರಣೆ ಕಾರ್ಯಕ್ರಮನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು. ವೈದ್ಯಾಧಿಕಾರಿಗಳು. ಹಾಗೂ ಸಿಬ್ಬಂದಿಗಳು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ಚಾವಾರಕಿಯರು.ವಲಯ ಮೇಲ್ಚಾರಕಿ. ಸ್ತ್ರೀ ಶಕ್ತಿ ಗುಂಪಿನ ಪ್ರತಿನಿಧಿ ಸದಸ್ಯರು ಸೇರಿ.ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಮೇಲ್ಚರಕಿ ಗುರು ಬಸಮ್ಮ ಇವರು ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ರಕ್ತ ಹೀನತೆ ಬಗ್ಗೆ ಮಾತನಾಡಿ. ಉತ್ತಮವಾದ ಆಹಾರ ಸೇವನೆ ಮಾಡಬೇಕು. ಹಾಗೂ ಏಕದಳ ಮತ್ತು ದ್ವಿದಳ ಕಾಳುಗಳನ್ನು ಸಸಿ ಬಂದ ನಂತರ ತಿನ್ನಬೇಕು.ಹಾಗೂ ಎಲ್ಲಾ ತರಹದ ತರಕಾರಿ ಹಾಗೂ ಎಲ್ಲಾ ತರದ ಹಣ್ಣುಗಳನ್ನು ಸೇವನೆ ಮಾಡಬೇಕು. ವಿಟಮಿನ್ ಎ ಬಿ ಸಿ ಡಿ ಮಿನರಲ್ಸ್ ಕಬ್ಬಿಣಾಂಶ ಹೆಚ್ಚಾಗಿ ದೊರೆಯುತ್ತದೆ. ಆರೋಗ್ಯವಂತ ಮಗು ದೇಶದ ಸಂಪತ್ತು ಹಾಗೂ ತಾಯಿ ಮತ್ತು ಮಗುವು ಉತ್ತಮವಾಗಿರಬೇಕು. ಅದೇ ರೀತಿ ಗರ್ಭಿಣಿಯರು ಹಾಗೂ ಬಾಣಂತಿಯರು ಅಂಗನವಾಡಿ ಕೇಂದ್ರದಲ್ಲಿ ಮಾತೃಪೂರ್ಣ ಯೋಜನೆಯು ದಿನನಿತ್ಯ ಅಂಗನವಾಡಿ ಕೇಂದ್ರಕ್ಕೆ ಬಂದು ಊಟ ಮಾಡಬೇಕು.ಎಂದು ತಿಳಿಸಿದರು.  ವೈದ್ಯಾಧಿಕಾರಿಗಳಾದ ಕುಮಾರಿ ಡಾಕ್ಟರ್ ಸುರ

ಜಾನಪದ ಸೇನೆಗೆ ಜಿಲ್ಲಾಧ್ಯಕ್ಷರಾಗಿ ಶಿವರಾಜ್ ಮೋತಿ ಆಯ್ಕೆ...!

ಇಮೇಜ್
  ರಾಯಚೂರು: ಕರ್ನಾಟಕ ಜಾನಪದ ಕಲೆಗಳ ಮತ್ತು ಕಲಾವಿದರ ಕ್ಷೇಮಾಭಿವೃದ್ಧಿ ಸಂಸ್ಥೆಯ ಜಿಲ್ಲಾಧ್ಯಕ್ಷರನ್ನಾಗಿ ಹಟ್ಟಿ ಪಟ್ಟಣದ ಯುವ ಬರಹಗಾರ, ಕಲಾ ಸಂಘಟಕ ಶಿವರಾಜ್ ಮೋತಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಾಮಾಣಿಕವಾಗಿ ಜಾನಪದ ಕಲಾವಿದರ ನೋವು, ದುಃಖಕ್ಕೆ ಸ್ಪಂದಿಸಲೆಂದೆ ಸಂಘಟಿತವಾಗಿರುವ ನೂತನ ನಮ್ಮ ಎಲ್ಲಾ ಜಾನಪದ ಸೇನೆಗೆ ಆಯ್ಕೆಯಾದವರಿಗೆ ಅಭಿನಂದನೆಗಳು ಎಂದು ಜನಪದ ಸಿರಿಯ ಜರಗನಹಳ್ಳಿ ಕಾಂತರಾಜು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು. ಮೂಲ ಜನಪದ ಕಲಾವಿದರು ಸಂಘಟಿತರಾಗಬೇಕಿದೆ ಆ ಉದ್ದೇಶದಿಂದ ಜನಪದ ಸಿರಿ ಕನ್ನಡ ಎಂಬ ನಮ್ಮ ಪ್ರಖ್ಯಾತ ದೇಸಿ ವಾಹಿನಿಯ ಮೂಲಕ ಈಗಾಗಲೇ ರಾಜ್ಯಾದ್ಯಾಂತ ಕಲಾವಿದರನ್ನು ಹುಡುಕಿಕೊಂಡು ಪರ್ಯಟನೆ ಮಾಡುತ್ತಾ, ಅವರ ಜೀವನದ ಕುರಿತು ನಾಡಿನ ಮುಂದೆ ತೆರೆದಿಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ. ಅದರ ಮುಂದುವರಿದ ಭಾಗವಾಗಿ ಸಂಸ್ಥೆಯ ಮೂಲಕ ಕೆಲಸ ಮಾಡಲು ಈಗಾಗಲೇ ಕಾರ್ಯೋನ್ಮುಖರಾಗಿದ್ದೇವೆ. ಜನಪದಗೋಸ್ಕರ ಮಾತನಾಡುವುದು, ಕೆಲಸ ಮಾಡುವುದು ಅಂದರೆ ನಮಗೆ ಇನ್ನೆಲ್ಲೂ ಇಲ್ಲದ ಆನಂದ. ಕಲೆಗಾರರನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಅವರು ಸಹ ಈ ದೇಶದ ಹೆಮ್ಮೆ, ಆಸ್ತಿ ಅನ್ನುವಂತಹ ಅಭಿಪ್ರಾಯ ರೂಪಿಸಬೇಕಿದೆ ಎಂದರು.  ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಜಾನಪದ ದಿನಾಚರಣೆ ದಿನದಂದು ನಾಡಿನ ಸಮಸ್ತ ಜಾನಪದ ಕಲಾವಿದರ ಏಳಿಗೆಗಾಗಿ ಇರುವಂತಹ ನಮ್ಮ ಸಂಸ್ಥೆಯ ಲಾಂಛನ ಬೆಂಗಳೂರಿನಲ್ಲಿ ಬಿಡುಗಡ

ಮುಡಾ ಹಗರಣ ತನಿಖೆಗೆ ಹೈ ಕೋರ್ಟ್ ಆದೇಶದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಪ್ರತಿಭಟನೆ

ಇಮೇಜ್
ಮಸ್ಕಿ : ಮುಡಾ ಹಗರಣ ತನಿಖೆಗೆ ಹೈ ಕೋರ್ಟ್ ಆದೇಶದ ಹಿನ್ನೆಲೆ ಪಟ್ಟಣದ ಬಸವೇಶ್ವರ ನಗರದ ಬಿಜೆಪಿ ಪಕ್ಷದ ಕಾರ್ಯಾಲಯದಿಂದ ಪಕ್ಷದ ವತಿಯಿಂದ ಹಳೇ ಬಸ್ ನಿಲ್ದಾಣದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೃತ್ತದ ವರೆಗೆ ಕಾಲ್ನಡಿಗೆ ಜಾಥಾ ಮೂಲಕ ಪ್ರತಿಭಟನೆ ನಡೆಸಲಾಯಿತು. ಮುಡಾ ಹಗರಣ ಹೈ ಕೋರ್ಟ್ ನಲ್ಲಿ ವಾದ ಮಂಡನೆ ಹಂತದಲ್ಲಿದ್ದ ಕೇಸ್ ಈಗ ತನಿಖೆಗೆ ಹೈ ಕೋರ್ಟ್ ಆದೇಶ ನೀಡಿದ್ದರಿಂದ ಬಸವೇಶ್ವರ ನಗರದ ಬಿಜೆಪಿ ಪಕ್ಷದ ಕಾರ್ಯಾಲಯದಿಂದ ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ವತಿಯಿಂದ ಹಳೇ ಬಸ್ ನಿಲ್ದಾಣದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೃತ್ತದ ವರೆಗೆ ಕಾಲ್ನಡಿಗೆ ಜಾಥಾ ಮೂಲಕ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗುತ್ತಾ ರಾಜೀನಾಮೆ ನೀಡಿ ಎಂಬ ಘೋಷಣೆ ಮಾತ್ರ ಸದ್ದು ಮಾಡಿತು. ಇದೇ ಸಂದರ್ಭದಲ್ಲಿ ಪ್ರತಾಪ್ ಗೌಡ ಪಾಟೀಲ್ ಮಾಜಿ ಶಾಸಕರು,ಶರಣ ಬಸವ ಸೊಪ್ಪಿಮಠ ಮಂಡಲ ಅಧ್ಯಕ್ಷ,ಬಾಳೆಕಾಯಿ ಸೂಗಣ್ಣ, ಮಲ್ಲಯ್ಯ ಅಂಬಾಡಿ ಪುರಸಭೆ ಅಧ್ಯಕ್ಷರು, ರಮೇಶ್ ಉದ್ಭಾಳ ಪ್ರಧಾನ ಕಾರ್ಯದರ್ಶಿ,ವೀರೇಶ್ ಕಮತರ, ಭರತ್ ಶೇಟ್,ಬಸವರಾಜ್ ಬುಕ್ಕಣ್ಣ,ವೆಂಕಟೇಶ್ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇನ್ನಿತರರು ಉಪಸ್ಥಿತರಿದ್ದರು.

ಮನೆ ಮನೆಗೆ ಹೋಗಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ

ಇಮೇಜ್
  ಮಸ್ಕಿ : ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಮಂಗಳವಾರ ಮನೆ ಮನೆಗೆ ಹೋಗಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ನಡೆಯಿತು.  ಶ್ರೀ ಪ್ರತಾಪ್ ಗೌಡ ಪಾಟೀಲ್ ಜನಪ್ರಿಯ ನಾಯಕರು ಮಾಜಿ ಶಾಸಕರು ಮಸ್ಕಿ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷರಾದ ಶರಣಬಸವ ನೇತೃತ್ವದಲ್ಲಿ ಮಸ್ಕಿಯ ವಿವಿಧ ವಾರ್ಡ್ ಗಳಲ್ಲಿ ಮಂಗಳವಾರ ಮನೆ ಮನೆಗೆ ಹೋಗಿ ಬಿಜೆಪಿ ಆ್ಯಪ್ ನಲ್ಲಿ ಸದಸ್ಯತ್ವ ಮಾಡಿಸುವ ಮೂಲಕ ಅಭಿಯಾನ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಡಾಕ್ಟರ್ .ಬಿ ಎಚ್.ದಿವಟರ, ಶಿವಶಂಕರಪ್ಪ ಹಳ್ಳಿ, ಡಾಕ್ಟರ್ ಪಂಚಾಯಸ್ವಾಮಿ, ಪ್ರಸನ್ನ ಪಾಟೀಲ್,ಎಲ್ಲೋ ಜಿ ರಾವ್ ಕೊರೇಕರ್, ಬಸವರಾಜ್ ಗುಡಿಹಾಳ, ಸೂಗಣ್ಣ ಬಾಳೆಕಾಯಿ, ಮಸ್ಕಿ ಪುರಸಭೆ ಅಧ್ಯಕ್ಷರಾದ ಮಲ್ಲಯ್ಯ ಅಂಬಾಡಿ, ರವಿ ಗೌಡ ಪಾಟೀಲ್, ಚೇತನ್ ಪಾಟೀಲ್, ಸುರೇಶ್ ಅರಸೂರ್, ಮೌನೇಶ್ ಮುರಾರಿ, ಭರತ್ ಕುಮಾರ್ ,ಮಂಜುನಾಥ್ ನಂದ್ಯಾಳ್, ಡಾಕ್ಟರ್ ಸಂತೋಷ್ ಪತ್ತಾರ್, ಶಿವರಾಜ್ ಬುಕ್ಕಣ್ಣ,ಮಸೂದ್ ಪಾಷಾ, ಹಾಗೂ ಬಿಜೆಪಿಯ ಮುಖಂಡರು ಕಾರ್ಯಕರ್ತರು ಯುವಕರು ಇದ್ದರು .

ಮಣ್ಣು ಪರೀಕ್ಷೆ ಆರೋಗ್ಯ ಕಾರ್ಡ್ ವಿತರಣೆ

ಇಮೇಜ್
  ಮಸ್ಕಿ : ತಾಲೂಕಿನ ಗುಡದೂರು ಗ್ರಾಮ ಪಂಚಾಯತಿಯಲ್ಲಿ ಮಂಗಳವಾರ ಮಹತ್ವಕಾಂಕ್ಷೆ ತಾಲೂಕು ಕಾರ್ಯಕ್ರಮದಡಿ ಸಂಪೂರ್ಣತ ಅಭಿಯಾನದ ಭಾಗವಾಗಿ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸಲಾಯಿತು.  ಸ್ಥಳೀಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅನ್ನಪೂರ್ಣ ಮಾತನಾಡಿ, ಕೃಷಿ ಉತ್ಪನ್ನದಲ್ಲಿ ಮಣ್ಣು ಪ್ರಮುಖ ಪಾತ್ರ ವಹಿಸಲಿದೆ. ಹೀಗಾಗಿ ರೈತರು ಮಣ್ಣಿನ ಪರೀಕ್ಷೆ ಕೈಗೊಂಡು, ಮಣ್ಣಿಗೆ ಅವಶ್ಯ ಇರುವ ಗೊಬ್ಬರವನ್ನಷ್ಟೇ ಪೂರೈಸಿದಾಗ ಮಣ್ಣಿನ ಆರೋಗ್ಯ ಸ್ಥಿರವಾಗಿರುತ್ತದೆ. ಅನವಶ್ಯಕ ವೆಚ್ಚವೂ ತಗ್ಗುತ್ತದೆ. ಈ ಹಿನ್ನಲೆಯಲ್ಲಿ ಮಹತ್ವಕಾಂಕ್ಷೆ ತಾಲೂಕು ಕಾರ್ಯಕ್ರಮದಡಿ ಗುಡದೂರು ಹೋಬಳಿಯ ಪ್ರತಿಯೊಬ್ಬ ರೈತರು ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ, ಮಣ್ಣಿನ ಪರೀಕ್ಷೆ ಕೈಗೊಳ್ಳಬೇಕು ಎಂದರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀಕಾಂತ ಮಾತನಾಡಿ, ಮಹತ್ವಕಾಂಕ್ಷೆ ತಾಲೂಕು ಕಾರ್ಯಕ್ರಮ ಯಶಸ್ಸಿಗೆ ಪ್ರತಿಯೊಬ್ಬ ರೈತರು ಕೈಜೋಡಿಸಬೇಕು. ಸ್ವ ಆಸಕ್ತಿಯಿಂದ ಮುಂದೆ ಬಂದು ಮಣ್ಣಿನ ಪರೀಕ್ಷೆ ಮಾಡಿಸಿ, ಕೃಷಿ ಉತ್ಪನ್ನ ಹೆಚ್ಚಳದತ್ತ ಗಮನ ಹರಿಸಿ, ಇಲಾಖೆಯ ಉದ್ದೇಶವನ್ನು ಸಕಾರಗೊಳಿಸಬೇಕು ಎಂದರು. ಈ ವೇಳೆ ಕೃಷಿ ತಾಂತ್ರಿಕ ವ್ಯವಸ್ಥಾಪಕರಾದ ಲೋಕೇಶ್ವರಿ, ಗ್ರಾಪಂ ಸಿಬ್ಬಂದಿ ಇದ್ದರು.

ಸೆ. 27 ರಂದು ವೈಭವದ ವಿಶ್ವಕರ್ಮ ಮಹೋತ್ಸವಮ – ಡಾ. ಬಿ.ಎಂ. ಉಮೇಶ್ ಕುಮಾರ್

ಇಮೇಜ್
ಬೆಂಗಳೂರು; ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದಿಂದ ಇದೇ 27ರಂದು ರಾಜ್ಯ ಮಟ್ಟದ ವಿರಾಟ್ ವಿಶ್ವಕರ್ಮ ಮಹೋತ್ಸವವನ್ನು ವೈಭವದಿಂದ ಆಚರಿಸಲಾಗುತ್ತಿದೆ. ಸಾಧಕರಿಗೆ ವಿಶ್ವಕರ್ಮ ಶ್ರೀ, ವಿಶ್ವಕರ್ಮ ಸೇವಾ ರತ್ನ ಸೇರಿ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ, ವಿಶ್ವಕರ್ಮ ನಾಡೋಜ ಡಾ. ಬಿ.ಎಂ. ಉಮೇಶ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ರಾಜ್ಯಸಭಾ ಸದಸ್ಯ, ಚಿತ್ರನಟ ಜಗ್ಗೇಶ್ ಮಹೋತ್ಸವವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಮ್ಮ ಸಂದೇಶದ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಶುಭ ಕೋರಿದ್ದಾರೆ ಎಂದರು.  ಆಡಳಿತ ಕ್ಷೇತ್ರದಲ್ಲಿ ಭಾರತೀಯ ಸಮಾಚಾರ ಸೇವೆ ಅಧಿಕಾರಿ ಸುಹಾಸ್ ರಾಮಚಂದ್ರಚಾರ್, ಕೆ.ಎ.ಎಸ್ ಅಧಿಕಾರಿ ಆರ್. ಉಮಾದೇವಿ, ರಾಜಕೀಯದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾ ಪೌರ ರಾಮಪ್ಪ ಬಡಿಗೇರ್, ಚಲನಚಿತ್ರದಲ್ಲಿ ಚಲನಚಿತ್ರ ಕಲಾವಿದೆ ವೀಣಾ ಸುಂದರ್, ಸಮುದಾಯ ಸೇವಾ ಕ್ಷೇತ್ರದಲ್ಲಿ ಬಿ.ಎನ್.ವಿ. ರಾಜಶೇಖರ್ ಅವರಿಗೆ ವಿಶ್ವಕರ್ಮ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.    ವಿಶ್ವಕರ್ಮ ಸೇವಾ ರತ್ನ ಪ್ರಶಸ್ತಿಗೆ ಮಾಧ್ಯಮ ಕ್ಷೇತ್ರದಲ್ಲಿ ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್, ಸಂಗೀತ ಕ್ಷೇತ್ರದಲ್ಲಿ ರಾಜೇಶ್ ಕೃಷ್ಣನ್, ಶಾಸ್ತ್ರೀಯ

ಶೌಚಾಲಯಕ್ಕಾಗಿ ಮೆದಿಕಿನಾಳ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದ ಮಹಿಳಾ ಮಣಿಗಳು

ಇಮೇಜ್
  ಮಸ್ಕಿ : ತಾಲೂಕಿನ ಮೆದಿಕಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆದಿಕಿನಾಳ ಗ್ರಾಮದ ದ್ಯಾವಮ್ಮ ಗುಡಿಯ ಹತ್ತಿರದ ಹಳೆಯ ಸಾರ್ವಜನಿಕ ಶೌಚಾಲಯ ಕಛೇರಿ ನಿಯಮ ಪಾಲನೆ ಮಾಡದೇ ತೆರವುಗೊಳಿಸಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಕರವೇ ಮುಂದಾಳತ್ವದಲ್ಲಿ ಗ್ರಾಮದ ಮಹಿಳೆಯರು ಮನವಿ ಮಾಡಿದರು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ವಾರ್ಡ್ ಗಳಲ್ಲಿ ಶೌಚಾಲಯ ಕೊರತೆ ಇದ್ದು ಇದನ್ನು ನೀಗಿಸಲು ಗ್ರಾಮ ಪಂಚಾಯಿತಿ ಮುಂದಾಗುತ್ತಿಲ್ಲ ಕೆಲವು ಶೌಚಾಲಯ ಇದ್ದರೂ ಇಲ್ಲದಂತಾಗಿದೆ ಹಳೆಯ ಶೌಚಾಲಯದಲ್ಲಿ ಗೋಡೆಗಳು ಬಿದ್ದಿದ್ದು ಅದರಲ್ಲಿ ದಿನನಿತ್ಯ ಹಾಗೂ ಚೋಳು ಗೂಡಾಗಿ ಮಾರ್ಪಟ್ಟಿದೆ ಹೀಗಾಗಿ ಮಹಿಳೆಯರು ಬಯಲು ಶೌಚಾಲಯ ಹೋಗಿ ಬೇಸತ್ತು ಸೋಮವಾರ ಬೆಳಗ್ಗೆ ಮಹಿಳೆಯರು ಲೋಟ (ಚಂಬು)ಸಮೇತ ಮೆದಿಕಿನಾಳ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಗ್ರಾಮ ಪಂಚಾಯಿತಿಗೆ ಎಷ್ಟೋ ಸಾರಿ ಶೌಚಾಲಯ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು ಅಧಿಕಾರಿಗಳು ಮಾತ್ರ ಮೌನ ಮುರಿದಿದ್ದಾರೆ . ಶೌಚಾಲಯಕ್ಕಾಗಿ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಯೋಜನೆಗಳು ಬಂದರೂ ಕೂಡ ಇಲ್ಲೇ ದುರುಪಯೋಗ ಆಗುತ್ತದೆ ಎಂದು ಆರಪಿಸಿದರು. ಕೂಡಲೇ ಶೌಚಾಲಯ ನಿರ್ಮಾಣ ಮಾಡಬೇಕು ಇಲ್ಲದಿದ್ದರೆ ತಾಲೂಕ ಪಂಚಾಯಿತಿಗೆ ಮುತ್ತಿಗೆ ಹಾಕ್ತಿವಿ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಪರವಾನಗಿ ತೆಗೆದುಕೊಂಡಿಲ