ಪೋಸ್ಟ್‌ಗಳು

15 ನೇ ಹಣಕಾಸು, ತೆರಿಗೆ ಸಂಗ್ರಹ ಮತ್ತು ನರೇಗಾ ಯೋಜನೆಯಡಿಯಲ್ಲಿ ಬಾರಿ ಭ್ರಷ್ಟಚಾರ : ಮನವಿ

ಇಮೇಜ್
ಮಸ್ಕಿ : ಕಾರ್ಯನಿರ್ವಾಹಕ ಅಧಿಕಾರಿಕಾರಿಗಳ ತಾಲೂಕ ಪಂಚಾಯತ ಅಧಿಕಾರಿಗಳಿಗೆ ಜಿಲ್ಲಾ ದಲಿತ ಸಂರಕ್ಷ ಸಮಿತಿ ಮನವಿ ಸಲ್ಲಿಸಿ, 15 ನೇ ಹಣಕಾಸು, ತೆರಿಗೆ ಸಂಗ್ರಹ ಮತ್ತು ನರೇಗಾ ಯೋಜನೆಯಡಿಯಲ್ಲಿ ಬಾರಿ ಭ್ರಷ್ಟಚಾರ.! ಮಾಡಿದ್ದಾರೆ ಎಂದು ಆರೋಪಿಸಿ  ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಮೇಲೆ ತನಿಖೆಗೆ ಒಳಪಡಿಸಿ ಕಾನೂನು ಕ್ರಮ ಕೈಗೊಳ್ಳಲು ಮನವಿ ಪತ್ರ ಸಲ್ಲಿಸುವ ಮೂಲಕ ಒತ್ತಾಯಿಸಿದರು.  ಜಿಲ್ಲಾ ಮತ್ತು ತಾಲೂಕು ದಲಿತ ಸಂರಕ್ಷ ಸಮಿತಿ ಸಂಘಟನೆ ವತಿಯಿಂದ ದಿನಾಂಕ 05/11/2024 ರಂದು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವು ದಾಗಿ ಮನವಿ ಸಲ್ಲಿಸಿದರು. ಮಸ್ಕಿ ತಾಲೂಕ ಪಂಚಾಯತ ವ್ಯಾಪ್ತಿಗೆ ಒಳಪಡುವ ಗ್ರಾಮ ಪಂಚಾಯತಿಗಳಾದ ಮೆದಿಕಿನಾಳ, ಅಂಕುಶದೊಡ್ಡಿ,ಪಾಮನಕಲ್ಲೂರು,ಸಂತೆಕೆಲ್ಲೂರು,ಮಟ್ಟೂರು,ತಲೇಖಾನ, ಮಾರಲದಿನ್ನಿ,ಅಡವಿಬಾವಿ ಇನ್ನಿತರ ಗ್ರಾಮ ಪಂಚಾಯತಿಗಳಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮನಸೋ ಇಚ್ಚೆ  15 ನೇ ಹಣಕಾಸು, ತೆರಿಗೆ ಸಂಗ್ರಹ, ನರೇಗಾ ಯೋಜನೆಯ ಅನುದಾನದಲ್ಲಿ ಬಾರಿ ಭ್ರಷ್ಟಾಚಾರ ಮಾಡಿರುವ ತಾಲೂಕ ಪಂಚಾಯತಿ ನರೇಗಾ ಅಧಿಕಾರಿಯಾದ ಶಿವಾನಂದ ರೆಡ್ಡಿ ಯವರು ತಮ್ಮ ಅಧೀನದಲ್ಲಿರುವ ಅಧಿಕಾರಿಗಳಿಗೆ ಭ್ರಷ್ಟಚಾರ ಮಾಡಲು ಕುಮ್ಮಕ್ಕು ನೀಡಿದ್ದು ಇವರಿಂದಲೇ ಬಾರಿ ಭ್ರಷ್ಟಚಾರ ನಡೆದಿರುತ್ತದೆ ಕಾರಣ ಇವರ ಮೇಲೆ ಕಾನೂನು ಕ್ರಮ ಕೈಗೊಂಡು ಅಮಾನತ್ತು ಮಾಡಲು ಒತ್ತಾಯಿಸಿ ಹಾಗೂ ಈಗಾಗಲೆ ಪಾಮನಕಲ್ಲೂರು ತಲೇಖಾನ, ಮಟ್ಟೂರು ಮತ್ತು ಸಂತೆಕೆಲ್ಲೂರ

ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆ

ಇಮೇಜ್
  ಮಸ್ಕಿ : ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಯನ್ನು ಅರ್ಥಪೂರ್ಣ ವಾಗಿ ಆಚರಣೆ ಮಾಡಲಾಯಿತು. ಈ ವೇಳೆ, ಬಿಜೆಪಿ ಮಂಡಲ ಅಧ್ಯಕ್ಷ ಶರಣಬಸವ ಸೊಪ್ಪಿಮಠ ಅವರು ಮಾತನಾಡಿ ಬ್ರಿಟಿಷರಿಗೆ ಸಿಂಹಸ್ವಪ್ನದಂತೆ ಕಾಡಿದ ವೀರ ವನಿತೆ, ಕಿತ್ತೂರು ರಾಣಿ ಚೆನ್ನಮ್ಮ ಸ್ವಾಭಿಮಾನದಿಂದ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ರಣಕಹಳೆಯೂದಿದ ಚೆನ್ನಮ್ಮನವರ ಛಲ, ನಿಷ್ಠೆ, ಧೈರ್ಯ ಹಾಗೂ ಸಾಹಸಗಳು ಕನ್ನಡ ನಾಡಿನ ಸಮಸ್ತ ಮಹಿಳೆಯರಿಗೆ ಸರ್ವಕಾಲಿಕ ಪ್ರೇರಣೆ ಎಂದರು. ಈ ಸಂದರ್ಭದಲ್ಲಿ,ಪಂಚಮಸಾಲಿ ಸಮಾಜದ ಅಧ್ಯಕ್ಷ ಚಿನ್ನನಗೌಡ ಗೋನಾಳ್, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಪುರಸಭೆ ಸದಸ್ಯ ಚೇತನ್ ಪಾಟೀಲ,ಮಲ್ಲಿಕಾರ್ಜುನ್ ಬ್ಯಾಳಿ, ಮೌನೇಶ್ ನಾಯಕ, ಶಿವರಾಜ್ ಬುಕ್ಕಣ್ಣ, ಅಶೋಕ್ ಠಾಕೂರ್, ಶರಣಬಸವ ವಕೀಲರು, ವೀರಭದ್ರಯ್ಯ ಜಂಗಮರಳ್ಳಿ, ಮಂಜುನಾಥ್ ನಾಯಕವಾಡಿ, ಹುಲಿಗೇಶ್ ಮುರಾರಿ, ಬಸವರಾಜಪ್ಪ ಮಿಟ್ಟಿಮನಿ, ಶಂಕ್ರಪ್ಪ ಬೈಲುಗುಡ್ಡ, ಸುರೇಶ್ ಪಲ್ಯದ, ಸಂಗನಗೌಡ ಸೇರಿದಂತೆ ಸಮಾಜದ ಹಿರಿಯರು ಯುವಕರು,ಪಕ್ಷದ ಕಾರ್ಯಕರ್ತರು ಇದ್ದರು.

ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆ

ಇಮೇಜ್
  ಮಸ್ಕಿ : ತಾಲೂಕಿನ ಹಾಲಾಪುರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಬುಧವಾರ ವೀರರಾಣಿ ಕಿತ್ತೂರು ಚೆನ್ನಮ್ಮ ರವರ ಜಯಂತಿಯನ್ನು ಊದು ಬತ್ತಿ ಹಚ್ಚಿ ಕರ್ಪೂರ ಇಟ್ಟು ಕಾಯಿ ಒಡೆದು ಸರಳತೆಯಿಂದ ಆಚರಣೆ ಮಾಡಿದರು. ಇದೇ ಸಂದರ್ಭದಲ್ಲಿ ಕಂಪ್ಯೂಟರ್ ಆಪರೇಟರ್ ರಂಗಪ್ಪ,ಶ್ರೀದೇವಿ ಬಿಎಫ್ಟ್,ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಹನುಮಂತ,ಗ್ರಂಥಪಾಲಕ ಗ್ಯಾನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

11ನೇ ಕೃಷಿಗಣತಿ ಎರಡನೇ ಹಂತದ ತರಬೇತಿ ಯಶಸ್ವಿ

ಇಮೇಜ್
ಮಸ್ಕಿ : 11ನೇ ಕೃಷಿಗಣತಿ ಎರಡನೇ ಹಂತದ ತರಬೇತಿಯನ್ನು ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು ಇದೇ ವೇಳೆ ಒಂದನೇ ಹಂತದ ಕೃಷಿ  ಗಣತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಗ್ರಾಮ ಆಡಳಿತ ಅಧಿಕಾರಿಗಳಿಗೆ ಹಾಗೂ ಕಂದಾಯ ನಿರೀಕ್ಷಕರಿಗೆ ಅಭಿನಂದನಾ ಪ್ರಮಾಣ ಪತ್ರವನ್ನು ಮಾನ್ಯ ಜಿಲ್ಲಾಧಿಕಾರಿಗಳ ಅನುಮತಿಯ ಮೇರೆಗೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಾದ ಡಾ. ತಿಪ್ಪಣ್ಣ ಹಾಗೂ ತಹಶೀಲ್ದಾರ್ ಡಾ.ಮಲ್ಲಪ್ಪ. ಕೆ .ಯರಗೋಳ ಇವರುಗಳ ಅಧ್ಯಕ್ಷತೆಯಲ್ಲಿ ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿ ಶರಣಪ್ಪ, ಸಾಂಖ್ಯಿಕ ಇಲಾಖೆಯ ವರ್ಗದವರು ಹಾಗೂ ಇತರೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

"ವಿಜಯನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ "

ಇಮೇಜ್
ಕೂಡ್ಲಿಗಿ :- ವಿಜಯನಗರ ಜಿಲ್ಲೆ ಸಾಹಿತ್ಯಕ್ಕೆ,ಕಲೆ, ಸಂಸ್ಕೃತಿ ಇತಿಹಾಸ ಪರಂಪರೆ, ಕನ್ನಡ ಸಾಹಿತ್ಯಕ್ಕೆ ವಿಜಯನಗರ ಜಿಲ್ಲಾ ಸಾಹಿತಿಗಳ ಕೊಡುಗೆ ಅಪಾರ, ಆದಿಕವಿ ಪಂಪ ರನ್ನರ ನಂಟು, ಹರಿಹರ ರಾಘವಾಂಕರು ಹಂಪಿಯಲ್ಲಿ ನೆಲೆ ನಿಂತು ಕಾವ್ಯಗಳನ್ನು ರಚಿಸಿದ್ದರು ಎಂದು ಇದೇ ಸಂದರ್ಭದಲ್ಲಿ ಸ್ಮರಿಸಿದರು.  ವಿಜಯನಗರ ಸಾಮ್ರಾಜ್ಯದ ವೈಭವವನ್ನು ಮತ್ತು ಆಧುನಿಕ ಕಾಲಘಟ್ಟದ ಸಾಹಿತಿಗಳಾದ ಅಭಿನವ ಸರ್ವಜ್ಞರಿಂದ ಹೆಸರಾದ ರೇವರೆಂಡ್ ಉತ್ತಂಗಿ ಚನ್ನಪ್ಪನವರು, ಕರ್ನಾಟಕ ಏಕೀಕರಣದ ಹೋರಾಟಗಾರರ ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಯವರು, ಕೋ ಚನ್ನಬಸಪ್ಪನವರು, ಬಳ್ಳಾರಿಯ ರಾಘವರು , ಹಾಸ್ಯಕವಿ ಬೀಚಿ, ಖ್ಯಾತ ಪತ್ರಕರ್ತರಾದ ರವಿ ಬೆಳಗೆರೆ, ಸೇರಿದಂತೆ ಅನೇಕ ಸಾಹಿತಿಗಳನ್ನು ಇದೇ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮ್ಮೇಳನ ಅಧ್ಯಕ್ಷರಾದ ಎನ್ಎಂ ರವಿಕುಮಾರ್ ಸ್ಮರಿಸಿದರು.  ಕಾರ್ಯಕ್ರಮದ ಉದ್ಘಾಟಿಸಿ ಡಾ. ಕೆ ರವೀಂದ್ರನಾಥ ಮಾತನಾಡಿ ವಿಜಯನಗರ ಸಾಮ್ರಾಜ್ಯದಲ್ಲಿ ಆಸ್ಥಾನದ ಕವಿಗಳು ಪ್ರಾಚೀನ ಸಾಹಿತ್ಯ ಮಾತ್ರ ಬರೆಯಲಿಲ್ಲ ಬದಲಾಗಿ ಇತಿಹಾಸ ಕಟ್ಟಿಕೊಳ್ಳುವ ಪ್ರಯತ್ನ ಮಾಡಿ ಕಾವ್ಯ ಅಧ್ಯಯನ ಮೂಲಕ ತಿಳಿಸಬಹುದು ಎಂದರು.  ಲೇಖಕ ಭೀಮಣ್ಣ ಗಜಪುರ ಮಾತನಾಡಿ ಸಮ್ಮೇಳನ ಅಧ್ಯಕ್ಷರ ಕುರಿತು ಅಧ್ಯಕ್ಷರ ಸುದೀರ್ಘ ಜೀವನ ಅನುಭವವನ್ನು ತಿಳಿಸಿದರು. ಷ. ಬ್ರ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಡೊಣ್ಣೂರು ಚಾನು ಕೋಟಿ ಮಠ ಕೊಟ್ಟೂರು, ದಾ

*ಹೊಸಹಳ್ಳಿ ಗ್ರಾಮದಲ್ಲಿ ಕಿತ್ತೂರು ಚನ್ನಮ್ಮರ ಜಯಂತೋತ್ಸವ ಆಚರಣೆ*

ಇಮೇಜ್
ಕೂಡ್ಲಿಗಿ: ತಾಲೂಕಿನ ಕಾನಹೊಸಹಳ್ಳಿ ಪಟ್ಟಣದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಬುಧವಾರ ನಡೆದ ಕಿತ್ತೂರು ರಾಣಿ ಚನ್ನಮ್ಮಾಜಿಯ 200 ನೇ ವಿಜಯೋತ್ಸವ, 246 ನೇ ಜಯಂತಿ ಪ್ರಯುಕ್ತ ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಕೂಡ್ಲಿಗಿ ಶಾಸಕ ಡಾ ಎನ್.ಟಿ ಶ್ರೀನಿವಾಸ್ ಹಾಗೂ ದಾಸೋಹ ಮಠದ ಪೂಜ್ಯ ದಾ.ಮ. ಐಮಡಿ ಶರಣಾರ್ಯರು ಕಾನಮಡಗು ಮತ್ತು ಸಮಾಜದ ಮುಖಂಡರು ಪೂಜೆ ಗೌರವನಮನ ಸಲ್ಲಿಸಿದರು.   ಕೂಡ್ಲಿಗಿ ಶಾಸಕರದ ಡಾ. ಎನ್. ಟಿ. ಶ್ರೀನಿವಾಸ್ ಮಾತನಾಡಿ  ದೇಶದ ಮೊದಲ ಮಹಿಳಾ ಸ್ವತಂತ್ರ ಹೋರಾಟ ಗಾರ್ತಿ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ ಕನ್ನಡ ನಾಡಿನ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಧೈರ್ಯ ಸಾಹಸ ಹೋರಾಟ ತ್ಯಾಗ ಬಲಿದಾನ ಈ ನಾಡಿಗೆ ಮಾದರಿಯಾಗಿದೆ . ಇದೇ ಸಂದರ್ಭದಲ್ಲಿ ಈ ವೇಳೆ ಮಾಜಿ ಜಿ.ಪಂ ಸದಸ್ಯ ಕೆ ಎಂ ಶಶಿಧರ್ ಸ್ವಾಮಿ,ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಜಿ ಕುಮಾರ ಗೌಡ, ಸತೀಶ, ಕರಿವೀರಪ್ಪ, ಸಿದ್ದಣ್ಣ, ವೈ ಎಂ ವಿರೇಶ್ವರಯ್ಯ, ಸಣ್ಣ ಕೆಂಚಪ್ಪ, ಅಮ್ಮನ ಕೆರೆ ಕೊಟ್ರೇಶ, ಲೋಕೇಶ, ಎಸ್ ಪಿ ಸಿದ್ದನಗೌಡ, ಎಂಎಸ್ ಮಂಜುನಾಥ, ಎಚ್ ರಮೇಶ, ನಾಗರಾಜ ರಂಗನಾಥನಹಳ್ಳಿ, ಎರಿಸ್ವಾಮಿ ರೆಡ್ಡಿ,ಗ್ರಾ.ಪಂ ಸದಸ್ಯ ಸಿದ್ದನಗೌಡ, ಫೋಟೋ ಸಿದ್ದಲಿಂಗಪ್ಪ, ಬಿ ಜಗದೀಶ್, ಅಜ್ಜನಗೌಡ, ಕುಲುಮೆಹಟ್ಟಿ ವೆಂಕಟೇಶ, ಅಮಲಾಪುರದ ಮಂಜುನಾಥ, ವಿಭೂತಿ ಸಿದ್ದಪ್ಪ, ಹೆಚ್ ಜಿ ಬಸವನಗೌಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿನಯ್ ಕುಮ

ಟಿ ಓಂಕಾರಪ್ಪಗೆ ಪಿ ಎಚ್ ಡಿ

ಇಮೇಜ್
ಕೂಡ್ಲಿಗಿ :- ತಾಲೂಕಿನ ಹೊಸಹಳ್ಳಿ ಹೋಬಳಿಯ ಹುಲಿಕೆರೆ ಗ್ರಾಮದ ಟಿ ಓಂಕಾರಪ್ಪ ಅವರಿಗೆ ಹಂಪಿ ವಿಶ್ವ ವಿದ್ಯಾಲಯ ಪಿ ಎಚ್ ಡಿ ಪದವಿ ಘೋಷಿಸಿದೆ.  ವಿಶ್ವವಿದ್ಯಾಲಯ ಚರಿತ್ರೆ ವಿಭಾಗದ ಡಾ. ಬಿ. ಪಿ. ಕುಮಾರ್ ಮಾರ್ಗದರ್ಶನದಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಒಳಗೊಂಡಂತೆ "ತುಂಗಭದ್ರಾ ಅಣೆಕಟ್ಟು : ಸಮಾಜೋ ಆರ್ಥಿಕ ಅಧ್ಯಯನ" ಶೀರ್ಷಿಕೆ ಅಡಿಯಲ್ಲಿ ಮಹಾ ಪ್ರಬಂಧ ಮಂಡಿಸಿದ್ದಾರೆ.