ಪೋಸ್ಟ್‌ಗಳು

ಕಲಾ ವೈಭವ-2024 ವಿಶ್ವಚೇತನ ರಾಷ್ಟ್ರೀಯ ಪ್ರಶಸ್ತಿಗೆ ಕುಮಾರ ಸ್ವಾಮಿ ಕಳ್ಳಿಮಠ.ಬಸವರಾಜ್ ಹೊರಪೇಟಿ.ಆಯ್ಕೆ.

ಇಮೇಜ್
ಲಿಂಗಸಗೂರು:ದರ್ಶನ್ ಸೋಶಿಯಲ್ ಹಾಗೂ ಕಲ್ಚರಲ್ ಅಕಾಡೆಮಿ(ರಿ) ಬೆಂಗಳೂರು ಹಾಗೂ ನೆಹರು ಯುವ ಕೇಂದ್ರ ಬೆಂಗಳೂರು ಇವರ ಸಂಯೋಗದಲ್ಲಿ  ಕಲಾ ವೈಭವ 2024 ದಿನಾಂಕ 28 -07- 2024 ಭಾನುವಾರ ಬೆಂಗಳೂರಿನ ಸಾಂಸ್ಕೃತಿಕ ಕಲಾಗ್ರಾಮ ಮಲ್ಲತಹಳ್ಳಿ ಅಡಿಟೋರಿಯಂನಲ್ಲಿ ನಡೆಯುವ ಕಲಾ ವೈಭವ-2024 ಕಾರ್ಯಕ್ರಮ.ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ವಿಶ್ವಚೇತನ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತದೆ. ಈ ವಿಶ್ವಚೇತನ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯ ಕುಮಾರಸ್ವಾಮಿ ಕಳ್ಳಿಮಠ ಅವರು ಸುಮಾರು 30 ವರ್ಷಗಳಿಂದ ಹಟ್ಟಿ ಚಿನ್ನದ ಗಣಿಯ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಇವರು ಚಿರಪಡಿಸಿದರು ವೃತ್ತಿಯಲ್ಲಿ ಜ್ಯೋತಿಷ್ಯ ಮತ್ತು ಪಾರಂಪರಿಕ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಇವರಿಗೆ ಆಯುರ್ವೇದ ಪಂಡಿತ ಎಂಬ ಬಿರುದು ಲಭಿಸಿದ್ದು ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತಿನಿಂದ ಇವರಿಗೆ ಪ್ರಮಾಣ ಪತ್ರ ಡಿ ಗೌರವಿಸಲಾಗಿದೆ. ಅದೇ ರೀತಿ ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಜನರ ಮಧ್ಯದಲ್ಲಿ ಗುರುಸಿಕೊಂಡ ಇವರ ವಿಶ್ವಚೇತನ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬಸವರಾಜ ಹೊರಪೇಟೆ. ಸರಳ ಜೀವಿ ಸಾಮಾಜಿಕ ಕಳಕಳಿಯ ವ್ಯಕ್ತಿ ವೃತ್ತಿಯಲ್ಲಿ ವಾಸ್ತು ಹಾಗೂ ಜ್ಯೋತಿಷ್ಯ ಹಾಗೂ ಪರಂಪರೆಕ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಬಸವರಾಜ ಹೊರಪೇಟಿ ಇವರು ಸುಮಾರು 20 ವರ್ಷಗಳಿಂದ ವಾಸ್ತು ಹಾ

ವಾರ್ಷಿಕ ವರದಿ ಮಹಾಸಭೆ ಯಶಸ್ವಿ

ಇಮೇಜ್
  ಮಸ್ಕಿ : ಪಟ್ಟಣದ 6ನೇ ವಾರ್ಡ್ ನ ತುಳಸಿ ಕ್ರೇಡಿಟ್ ಸೌಹಾರ್ದ ಸಹಕಾರಿ ಸಂಘದ ದ್ವಿತೀಯ ವಾರ್ಷಿಕ ಮಹಾಸಭೆಯು ಮಸ್ಕಿಯ ಸಹಕಾರಿಯ ಆವರಣದಲ್ಲಿ ಬುಧವಾರ ಜರುಗಿತು.  ಸಭೆಯ ಅಧ್ಯಕ್ಷತೆ ವಹಿಸಿದ್ದ ಭರತಕುಮಾರ್ ಮಾತನಾಡಿ 2023-24 ನೇ ಸಾಲಿನಲ್ಲಿ ಸಂಘವು ರೂ 2,71,299/- ಲಾಭಗಳಿಸಿದೆ ಎಂದು ತಿಳಿಸಿದರು. ನಂತರ ಮಾತನಾಡಿದ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಕೋರಿ ಅವರು ವಾರ್ಷಿಕ ವರದಿ ಮತ್ತು ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು. 2023-24 ನೇ ಸಾಲಿನಲ್ಲಿ sahkari ಬ್ಯಾಂಕ್ ನಲ್ಲಿ ಉತ್ತಮ ವ್ಯವಹಾರ ನಡೆಸಿದ ಸದಸ್ಯರಿಗೆ ಸಭೆಯಲ್ಲಿ ಗೌರವಿಸಲಾಯಿತು. ಈ ವೇಳೆ ಸಂಘದ ಉಪಾಧ್ಯಕ್ಷರಾದ ಬಸವರಾಜ ಬುಕ್ಕಣ್ಣ, ಆಡಳಿತ ಮಂಡಳಿಯ ಸದಸ್ಯರುಗಳು,ಷೇರುದಾರ ಸದಸ್ಯರು ಮತ್ತು ಸಿಬ್ಬಂದಿ ವರ್ಗರವರು ಸೇರಿದಂತೆ ಇನ್ನಿತರರು ಉಪಸ್ಥಿತಿ ಇದ್ದರು.

ಜಿಲ್ಲಾ ಮಟ್ಟದ ಪ್ರಶಸ್ತಿಗೆ ವಿಠ್ಠಲ ಕೆಳೂತ್ ಆಯ್ಕೆ

ಇಮೇಜ್
ಮಸ್ಕಿ : ಪತ್ರಿಕೋದ್ಯಮದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಕೊಡಮಾಡುವ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಮಸ್ಕಿ ತಾಲೂಕಿನ ಉದಯವಾಣಿ ವರದಿಗಾರ ವಿಠ್ಠಲ ಕೆಳೂತ್ ಅವರು ಆಯ್ಕೆಯಾಗಿದ್ದಾರೆ.  ವಸ್ತುನಿಷ್ಟ ಸುದ್ದಿ, ಬರಹಗಳ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸುವುದು ಜಿಲ್ಲಾ ಪತ್ರಕರ್ತರ ಸಂಘದಿಂದ ಮಾಡುತ್ತಿದ್ದು. ವಿಠ್ಠಲ ಕೆಳೂತ್ ಅವರು ಮೂಲತಃ ಮಸ್ಕಿ ತಾಲೂಕಿನ ಮಾರಲದಿನ್ನಿ ತಾಂಡದವರಾಗಿದ್ದು, ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಪತ್ರಿಕೋದ್ಯಮ ಕೋರ್ಸ್ ಮುಗಿಸಿರುವ ಇವರು 2015ರಲ್ಲಿ ಬೆಂಗಳೂರು ಆವೃತ್ತಿಯ ಹೊಸದಿಗಂತ ಪತ್ರಿಕೆಯಲ್ಲಿ ಉಪ ಸಂಪಾದಕನಾಗಿ ಕ್ಷೇತ್ರಕ್ಕೆ ಕಾಲಿಟ್ಟರು. 2016ರಿಂದ 2020ರವರೆಗೆ ಹೊಸದಿಗಂತ ಪತ್ರಿಕೆಯ ಮಸ್ಕಿ ತಾಲೂಕ ವರದಿಗಾರರಾಗಿ ಕಾರ್ಯ ನಿರ್ವಹಿಸಿದರು. 2021ರಿಂದ 2023ರವೆರೆಗೆ ಸಮರ್ಥವಾಣಿ ಪತ್ರಿಕೆಯ ವರದಿಗಾರನಾಗಿ ಕೆಲಸ ಮಾಡಿದರು. ಇದೀಗ ಉದಯವಾಣಿ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಖರ ಲೇಖನಗಳ ಮೂಲಕ ಈ ಭಾಗದ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತ ಅವುಗಳಿಗೆ ಪರಿಹಾರ ಕಲ್ಪಿಸುವ ಕಾರ್ಯ ನಿರಂತರ ಮಾಡುತ್ತಿದ್ದಾರೆ. ಕಳೆದ ಒಂಬತ್ತು ವರ್ಷದಿಂದ ನಿರಂತರ ಪತ್ರಿಕೋದ್ಯಮದಲ್ಲಿ ಉಪ ಸಂಪಾದಕ, ವರದಿಗಾರನಾಗಿ ಸೇವೆ ಸಲ್ಲಿಸುತ್ತಿರುವ ವಿಠ್ಠಲ ಕೆಳೂತ್ ಅವರು ಕಾಲೇಜು ವಿದ್ಯಾರ್ಥಿ ಜೀವನ

"ಅಂಬಳಿ ಗ್ರಾಮದಲ್ಲಿ ಕಿಡಿಗೇಡಿಗಳ ಹಾವಳಿ "

ಇಮೇಜ್
ಕೊಟ್ಟೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಅಂಬಳಿ ಗ್ರಾಮ ಪಂಚಾಯಿತಿಯ ಗ್ರಾಮದಲ್ಲಿ ಮಧ್ಯ ರಾತ್ರಿ ವೇಳೆಯಲ್ಲಿ ಪುಂಡು ಪೋಕ್ರಿಗಳಾವಳಿ ಹೆಚ್ಚಾಗಿದ್ದು. ಇಲ್ಲಿಯ ಅಂಬಳಿ ಗ್ರಾಮದಲ್ಲಿ  ಮನೆ ಬಾಗಿಲು ತಟ್ಟಿ ಜೀವ ಬೆದರಿಕೆ ಸನ್ನಿವೇಶಗಳು ಆಗುತ್ತಿದ್ದು. ಅಲ್ಲದೆ ಮಹಿಳೆಯರು ಧರಿಸುವ ಒಳ ಉಡುಪುಗಳನ್ನು ಕದ್ದು  ಅಸಭ್ಯ ವರ್ತನೆ ಕೆಲವು ಕಿಡಿಗೇಡಿಗಳು ಮಾಡಿದ್ದಾರೆ.ಎಂದು ಗ್ರಾಮ ಪಂಚಾಯತಿ ಸದಸ್ಯರಾದ ಬಿ ಲಲಿತಾ   ಕಳಚಾರಿ ಯವರು ತುರ್ತು ಕರೆ 112 ಗೆ ಕರೆ ಮಾಡಿ ತಿಳಿಸಿದ ಮೇರೆಗೆ ತತ್ಕ್ಷಣ ಪೊಲೀಸ್ ಇಲಾಖೆಯು ಸಾರ್ವಜನಿಕರ ರಕ್ಷಣೆಗೆ ಸ್ಪಂದಿಸಿ ಇನ್ನೂ ಮುಂದೆ ಇಂತಹ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.ಎಂದು ತಿಳಿಸಿದರು  ಕೊಟ್ -1 ಅಂಬಳಿ ಗ್ರಾಮ ಪಂಚಾಯಿತಿ ಯಲ್ಲಿ ವಿಶ್ವಕರ್ಮ ಸಮುದಾಯದ ಮಹಿಳೆ ರಾಜಕೀಯ ರಂಗದಲ್ಲಿ ಬರಬಾರದು ಅಂತ ಕೆಲವರು ರಾಜಕೀಯ ಪ್ರೇರಿತವಾಗಿ ತುಳಿಯುವ ಕೆಲಸ ಮಾಡುತ್ತಿದ್ದಾರೆ.ಎಂದು ಈ ಕ್ಷೇತ್ರದ ಶಾಸಕರಿಗೆ ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎನ್ ಎಫ್ ಐ ಡಬ್ಲ್ಯೂ ರಾಜ್ಯ ಕಾರ್ಯದರ್ಶಿ ಕೆ ರೇಣುಕಮ್ಮ ಒತ್ತಾಯಿಸಿದರು.

*ನಾಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಕೂಡ್ಲಿಗಿ ತಾಲೂಕು ಘಟಕದಿಂದ ವಿಶ್ವ ಪತ್ರಿಕಾ ದಿನಾಚರಣೆ*

ಇಮೇಜ್
 ಕೂಡ್ಲಿಗಿ:- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ತಾಲೂಕು ಘಟಕ ಕೂಡ್ಲಿಗಿ ವತಿಯಿಂದ ವಿಶ್ವ ಪತ್ರಿಕಾ ದಿನಾಚರಣೆ ಹಾಗೂ ಕ. ನಿ. ಪ.ಧ್ವನಿ ಸಂಘದ ಕಛೇರಿ ಉದ್ಘಾಟನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೆಯ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಜ್ಞಾನ ಮಂಟಪ ಶಾಲೆ ಗುಂಡಿನ ಹೊಳೆ ನಡೆಯಲಿದ್ದು. ದಿವ್ಯ ಸಾನಿಧ್ಯ ಷ.ಬ್ರ. ಪ್ರಶಾಂತ ಸಾಗರ ಶಿವಾಚಾರ್ಯ ಮಹಾಸ್ವಾಮಿಗಳು. ಶ್ರೀ ಐಮಡಿ ಶರಣಾರ್ಯರು ಧರ್ಮಾಧಿಕಾರಿಗಳು ದಾಸೋಹ ಮಠ ಕಾನಮಡಗು. ಹಾಗೂ ಕಾರ್ಯಕ್ರಮದ ಉದ್ಘಾಟನೆ ಸನ್ಮಾನ್ಯ ಡಾ. ಎನ್. ಟಿ. ಶ್ರೀನಿವಾಸ್ ಶಾಸಕರು ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ, ಜಿ ಉಮೇಶ್ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಸಂಸ್ಥಾಪಕರು ಹಾಗೂ ಅಧ್ಯಕ್ಷರು ಜ್ಞಾನ ಮಂಟಪ ಎಜುಕೇಶನ್ ಟ್ರಸ್ಟ್. ಅಧ್ಯಕ್ಷತೆ ತಾಲೂಕು ಘಟಕದ ಬಾಣದ ಶಿವಮೂರ್ತಿ, ವಿಶೇಷ ಉಪನ್ಯಾಸ ರೂಪ ಶಿoತ್ರಿ, ಚಿಕ್ಕೋಡಿ, ಸೇರಿದಂತೆ ಕೂಡ್ಲಿಗಿ ತಾಲೂಕಿನ ಎಲ್ಲ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು, ಸಮಾಜ ಸೇವಕರು, ಸುದ್ದಿ ಪತ್ರಿಕೆ ಓದುಗಾರರಿಗೆ, ಸುದ್ದಿ ಪತ್ರಿಕೆ ವಿತರಕರಿಗೆ ಸೇರಿದಂತೆ ಅನೇಕ ಸಾಧಕರಿಗೆ ಗೌರವಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷರಾದ ಬಾಣದ ಶಿವಮೂರ್ತಿ ತಿಳಿಸಿದ್ದಾರೆ.

ವಿಶ್ವ ಚೇತನ ರಾಷ್ಟ್ರೀಯ ಪ್ರಶಸ್ತಿಗೆ ಆಟೋ ಚಾಲಕರ ಸಂಘದ ಅಧ್ಯಕ್ಷ ಸಿದ್ದು ಮುರಾರಿ ಆಯ್ಕೆ

ಇಮೇಜ್
  ಮಸ್ಕಿ : ದರ್ಶನ ಸೋಶಿಯಲ್ ಹಾಗೂ ಕಲ್ಚರಲ್ ಅಕಾಡೆಮಿ (ರಿ)ಬೆಂಗಳೂರು ಮತ್ತು ನೆಹರು ಯುವ ಕೇಂದ್ರ ಬೆಂಗಳೂರು ಇವರ ಸಂಯೋಗದಲ್ಲಿ ಕಲಾ ವೈಭವ 2024 ರ ಕಾರ್ಯಕ್ರಮ ದಲ್ಲಿ ವಿಶ್ವ ಚೇತನ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿಗೆ ಮಸ್ಕಿ ಪಟ್ಟಣದ ಸಮಾಜ ಸೇವಕ ಹಾಗೂ ಮಸ್ಕಿ ತಾಲೂಕು ಆಟೋ ಚಾಲಕರ ಸಂಘಟನೆ ಅಧ್ಯಕ್ಷ ಸಿದ್ದು ಮುರಾರಿ ರವರಿಗೆ ವಿಶ್ವ ಚೇತನ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಮಾಜ ಸೇವೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕೋವಿಡ್ ಸಮಯದಲ್ಲಿ ಉಚಿತವಾಗಿ ಗರ್ಭಿಣಿಯರರಿಗೆ ಹಾಗೂ ಸಾರ್ವಜನಿಕರಿಗೆ ಆಟೋ ಸೇವೆ ಸೇರಿದಂತೆ ಸಮಾಜ ಸೇವೆ ಯಲ್ಲಿ ಗಣನೀಯ ಸಾಧನೆಯನ್ನು ಗುರುತಿಸಿ ಜು.28/07/2024 ರಂದು ಬೆಂಗಳೂರಿನ ಕಲಾಗ್ರಾಮ ಮಲ್ಲತ್ತಹಳ್ಳಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಶ್ವ ಚೇತನ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ದರ್ಶನ್ ಸೋಶಿಯಲ್ & ಕಲ್ಚರಲ್ ಅಕಾಡೆಮಿ (ರಿ) ಸಂಸ್ಥೆಯ ಅಧ್ಯಕ್ಷರು ಪತ್ರಿಕೆ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ವಿಕಲಚೇತನ ಮಂಜುನಾಥ್ ಇವರಿಗೆ ಶಾಸಕರಿಂದ ಅಭಿನಂದನೆ

ಇಮೇಜ್
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹಿರೇ ಹೆಗ್ಡಾಳ್ ಗ್ರಾಮದ ಕೆಎನ್ ಮಂಜುನಾಥ ತಾಯಿ ವಿಜಯಲಕ್ಷ್ಮಿ ಇವರು ವಿಶೇಷ ಎನೆಂದರೆ ವೀಲ್ ಚೇರ್ ಬಾಸ್ಕೆಟ್ ಬಾಲ್ ಪುರುಷ ಆಟಗಾರರ ರಾಜ್ಯಮಟ್ಟದ ತಂಡಕ್ಕೆ ತಾಲೂಕಿನ ಹಿರೇ ಹೆಗ್ಡಾಳ್ ಗ್ರಾಮದ ಮಂಜುನಾಥ್ ಇವರು ಆಯ್ಕೆಯಾಗಿದ್ದಾರೆ ತಮಿಳುನಾಡಿನಲ್ಲಿ ಜುಲೈ 25ರಂದು ನಡೆಯುವ ಸೌತ್ ಜೂನ್ ಚಾಂಪಿಯನ್ಶಿಪ್ ಎರಡನೇ ಬಾರಿ ಕ್ರೀಡಾಕೂಟದಲ್ಲಿ ರಾಜ್ಯ ವಿಶೇಷ ಚೇತನರ ಹತ್ತು ಆಟಗಾರರು ತಂಡವನ್ನು ಸ್ಟೇಟ್ ವಿಲ್ ಶೇರ್ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಪ್ರಕಟಿಸಿದ್ದು ಹತ್ತು ಆಟಗಾರರ ಪೈಕಿ ಗ್ರಾಮದ ವಿಶೇಷ ಚೇತನ ಮಂಜುನಾಥ್ ಆಯ್ಕೆಯಾಗಿದ್ದಾರೆ ಕೆ ಎನ್ ಮಂಜುನಾಥ್ ಇವರಿಗೆ ಸಾಕಷ್ಟು ಪ್ರಶಸ್ತಿಗಳು ಲಭಿಸಿದ್ದು ಕರಿಬಸವೇಶ್ವರ ಯುವಕಲಾ ಸಂಘದ ವತಿಯಿಂದ ಕ್ರೀಡೆ ಪ್ರಶಸ್ತಿ ಕಲಾಭಾರತಿ ಕಲಾ ಸಂಘದ ವತಿಯಿಂದ ಕ್ರೀಡೋತ್ಸವ ರಾಜ್ಯ ಪ್ರಶಸ್ತಿ ಹಾಗೂ ಇನ್ನು ಇತರ ಸಂಘ ಸಂಸ್ಥೆಗಳಿಂದ ಪ್ರಶಸ್ತಿಯನ್ನು ತೆಗೆದುಕೊಂಡಿರುವ ವೀಲ್ ಚೇರ್ ಆಟಗಾರರಾಗಿರುವ ಹೆಮ್ಮೆಯ ವಿಕಲಚೇತನ ಮಂಜುನಾಥ್ ಇವರಿಗೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ ಎನ್ ಟಿ ಶ್ರೀನಿವಾಸ್ ಇವರಿಂದ ಅಭಿನಂದಿಸಿ ಧನಸಹಾಯ ಮಾಡಲಾಯಿತು ಈ ಸಂದರ್ಭದಲ್ಲಿ ಶಾಸಕರು ಮಾತನಾಡಿದರು ಇಂಥ ಹೊಸ ಹೊಸ ಪ್ರತಿಭೆಗಳು ನಮ್ಮ ಕೂಡ್ಲಿಗಿಯಲ್ಲಿ ಅತಿ ಹೆಚ್ಚಾಗಿ ಹೊರಹೊಮ್ಮಲಿ ನನ್ನ ಆಸೆ ಒಂದೇ ಕೂಡ್ಲಿಗಿಯನ್ನು ಒಂದು ಸುಂದರ ಶಾಂತಿಯ ತೋಟ ಮಾಡುವುದು ಪ್ರತಿಭೆಯನ್ನು ಗುರುತ