ಪೋಸ್ಟ್‌ಗಳು

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ ಭ್ರಷ್ಟಾಚಾರದಲ್ಲಿ ಪಾಲ್ಗೊಂಡವರಿಗೆ ಶಿಕ್ಷೆ ಆಗಲೇಬೇಕು : ನಿರುಪಾದಿ.ಕೆ.ಗೋಮರ್ಸಿ

ಇಮೇಜ್
ಸಿಂಧನೂರು : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಇರುವುದು ಬಡವರ ಕಲ್ಯಾಣಕ್ಕೆ ವಾಲ್ಮೀಕಿ ನಾಯಕ ಸಮುದಾಯದ ಜನರ ಅಭಿವೃದ್ಧಿಗೆ. ಆದರೆ ಈ ನಿಗಮದಲ್ಲಿ ಬಡವರ ಕಲ್ಯಾಣಕ್ಕೆ ಸಿಗುವ ನೂರಾರು ಕೋಟಿ ಅನುದಾನದ ಹಣವನ್ನು ಭ್ರಷ್ಟ ಅಧಿಕಾರಿಗಳು ಭ್ರಷ್ಟ ಕೆಲವು ರಾಜಕಾರಣಿಗಳ ಜೊತೆ ಸೇರಿ ಹಣವನ್ನು ಲೂಟಿ ಹೊಡೆದು ವಾಲ್ಮೀಕಿ ನಾಯಕ ಸಮುದಾಯದ ಜನರಿಗೆ ಅನ್ಯಾಯ ಮಾಡುತ್ತಿರುವುದು ನಾಚಿಕೆಗೇಡಿನ ಕೆಲಸ ಇದು ಖಂಡನೀಯ ಎಂದು ಕೆ ಆರ್ ಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿರುಪಾದಿ.ಕೆ.ಗೋಮರ್ಸಿ ಅವರು ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ  ಪತ್ರಿಕಾ ಹೇಳಿಕೆ ನೀಡಿದ ಕೆ ಆರ್ ಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿರುಪಾದಿ.ಕೆ.ಗೋಮರ್ಸಿ ಅವರು  ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಇರುವುದು ಬಡವರ ಕಲ್ಯಾಣಕ್ಕೆ ವಾಲ್ಮೀಕಿ ನಾಯಕ ಸಮುದಾಯದ ಜನರ ಅಭಿವೃದ್ಧಿಗೆ. ಆದರೆ ಈ ನಿಗಮದಲ್ಲಿ ಬಡವರ ಕಲ್ಯಾಣಕ್ಕೆ ಸಿಗುವ ನೂರಾರು ಕೋಟಿ ಅನುದಾನದ ಹಣವನ್ನು ಭ್ರಷ್ಟ ಅಧಿಕಾರಿಗಳು ಭ್ರಷ್ಟ ಕೆಲವು ರಾಜಕಾರಣಿಗಳ ಜೊತೆ ಸೇರಿ ಹಣವನ್ನು ಲೂಟಿ ಹೊಡೆದು ವಾಲ್ಮೀಕಿ ನಾಯಕ ಸಮುದಾಯದ ಜನರಿಗೆ ಅನ್ಯಾಯ ಮಾಡುತ್ತಿರುವುದು ನಾಚಿಕೆಗೇಡಿನ ಕೆಲಸ ಇದು ಖಂಡನೀಯ. ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ ಚಂದ್ರಶೇಖರ್ ರವರಿಗೆ ಎಲ್ಲ ಮಾಹಿತಿ ಗೊತ್ತಿದ್ದರೂ ಮೌನವಾಗಿ ಉಳಿದು ಕೊನೆಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ಹೇಡಿತನದ ಕೆ

ಮಾಜಿ ಸಚಿವ ಎಚ್.ಆಂಜನೇಯರಿಗೆ ಪರಿಷತ್ ಸ್ಥಾನ ಸಿಗಲಿ : ಸಿದ್ದು ಮುರಾರಿ

ಇಮೇಜ್
ಮಸ್ಕಿ : ವಿಧಾನ ಸಭೆಯಿಂದ ವಿಧಾನ ಪರಿಷತ್ ಅವಧಿ ಜೂನ್ 17ರಂದು 11 ವಿಧಾನ ಪರಿಷತ್ ಸದಸ್ಯರು ನಿವೃತ್ತಿ ಹೊಂದಲಿರುವ ಹಿನ್ನೆಲೆಯಲ್ಲಿ ಶೋಷಿತ ಸಮುದಾಯದ ಧ್ವನಿಯಾಗಿರುವ ಮಾಜಿ ಸಚಿವ ಎಚ್.ಆಂಜನೇಯ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕು' ಎಂದು ಮಾದಿಗ ಸಮುದಾಯದ ಯುವ ಮುಖಂಡ ಸಿದ್ದು ಮುರಾರಿ ಯವರು ಮನವಿ ಮಾಡಿದರು. ಇದೇ ಜೂನ್ 13ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಎಚ್.ಆಂಜನೇಯ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು ಎಂದು ಪಟ್ಟಣದಲ್ಲಿ ಪತ್ರಿಕೆಯ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. "ಎಚ್.ಆಂಜನೇಯ ಸಚಿವರಾಗಿದ್ದ ಅವಧಿಯಲ್ಲಿ ಮಾಜಿ ದೇವದಾಸಿಯರಿಗೆ ಮಾಸಾಶನ, ಅವರ ಮಕ್ಕಳ ಮದುವೆಗೆ ಪ್ರೋತ್ಸಾಹ ಧನ, ಹೆಚ್ಚಿನ ವಿದ್ಯಾಭ್ಯಾಸ ಮಾಡಲು ವಿದೇಶಕ್ಕೆ ಹೋಗಲು ಪ್ರೋತ್ಸಾಹ ಧನ ಸೇರಿ ಅನೇಕ ಐತಿಹಾಸಿಕ ಯೋಜನೆ ಜಾರಿಗೆ ತಂದಿದ್ದಾರೆ ". ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು ಪ್ರತಿ ಗ್ರಾಮಗಳಲ್ಲಿ ಸಮುದಾಯ ಭವನಗಳ ನಿರ್ಮಾಣ, ಅಭಿವೃದ್ಧಿ ನಿಗಮಗಳಿಗೆ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ. ಹೀಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ್ ಅವರು ಆಂಜನೇಯ ಅವರನ್ನು ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು ಎಂದು ಸಿದ್ದು ಮುರಾರಿ ದಲಿತ ಮುಖಂಡರು ಪತ್ರಿಕೆ ಹೇಳಿಕೆ ಮೂಲಕ ಒ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಹಸೀಲ್ದಾರ್ ಗೆ ಮನವಿ

ಇಮೇಜ್
ಮಸ್ಕಿ : ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಈಗ ಮುಂಗಾರು ಪ್ರಾರಂಭಗೊಂಡಿದ್ದು ರೈತರ ತಮ್ಮ ಹೊಲ ಗದ್ದೆಗಳಲ್ಲಿ ಬೆಳೆ ಮಾಡಲು ವ್ಯವಸ್ಥೆ ಮಾಡಿಕೋಳ್ಳಬೇಕಾಗಿದ್ದು, ಇಂದಿನ ವರ್ಷ ಬರಗಾಲದಿಂದ ರೈತರ ಕೈಗೆ ಬೆಳೆ ಸಿಗದೇ ನಷ್ಟದಲ್ಲಿ ಇರುತ್ತಾನೆ. ಈಗ ರೈತರ ಬಳಿ ಬೆಳೆ ಮಾಡಲು ಹಣ ಇರುವುದಿಲ್ಲ, ಇಂದಿನ ವರ್ಷ ಬೆಳೆ ಮಾಡಲು ರೈತ ಮಾಡಿದ್ದ ಸಾಲ ಹಾಗೆ ಇರುತ್ತದೆ. ಬರಗಾಲ ಪರಿಹಾರ ಬಿಡುಗಡೆ ಮಾಡಲು ಸರ್ಕಾರ ಕಾಲಹರಣ ಮಾಡುತ್ತಿದ್ದು, ಇದರಿಂದ ರೈತರಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು ತಹಶೀಲ್ದಾರರಾದ ಸುಧಾ ಅರಮನೆ ಅವರಿಗೆ ಸೋಮವಾರ ಮನವಿ ಪತ್ರವನ್ನು ಸಲ್ಲಿಸಿದರು. ಈಗಾಗಲೇ ಮುಂಗಾರು ಪ್ರಾರಂಭಗೊಂಡಿದ್ದು ರೈತರ ತಮ್ಮ ಹೊಲ ಗದ್ದೆಗಳಲ್ಲಿ ಬೆಳೆ ಮಾಡಲು ವ್ಯವಸ್ಥೆ ಮಾಡಿಕೋಳ್ಳಬೇಕಾಗಿದ್ದು, ಇಂದಿನ ವರ್ಷ ಬರಗಾಲದಿಂದ ರೈತರ ಕೈಗೆ ಬೆಳೆ ಸಿಗದೇ ನಷ್ಟದಲ್ಲಿ ಇರುತ್ತಾನೆ. ಈಗ ರೈತರ ಬಳಿ ಬೆಳೆ ಮಾಡಲು ಹಣ ಇರುವುದಿಲ್ಲ, ಇಂದಿನ ವರ್ಷ ಬೆಳೆ ಮಾಡಲು ರೈತ ಮಾಡಿದ್ದ ಸಾಲ ಹಾಗೆ ಇರುತ್ತದೆ. ಬರಗಾಲ ಪರಿಹಾರ ಬಿಡುಗಡೆ ಮಾಡಲು ಸರ್ಕಾರ ಕಾಲಹರಣ ಮಾಡುತ್ತಿದ್ದು, ಇದರಿಂದ ರೈತರಿಗೆ ತುಂಬಾ ತೊಂದರೆ ಆಗುತ್ತಿದೆ ಅದ್ದರಿಂದ ಸರ್ಕಾರ ಕೂಡಲೇ ಎಲ್ಲಾ ರೈತರಿಗೆ ಬರಗಾಲದ ಪರಿಹಾರವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸುತ್ತದೆ. ತಪ್ಪಿದಲ್ಲಿ ರೈತರ ಒಳಗೊಂಡು ಪ್ರತಿಭಟನೆ ನಡೆಸಲಾಗುವುದೆಂದು ತಮ್ಮ ಗಮ

*ಜನಸ್ನೇಹಿ ಕಾರ್ ರೆಂಟಲ್ ಆ್ಯಪ್ ಬಿಡುಗಡೆ*

ಇಮೇಜ್
ಬೆಂಗಳೂರು:  ಬೆಂಗಳೂರಿನವರದ್ದೇ ಆದ ಕಂಪನಿ ಇದೀಗ ಜನಸ್ನೇಹಿ ಆನ್ಲೈನ್ ಕಾರು ಬಾಡಿಗೆ ಸೇವೆ ಆರಂಭಿಸಿದೆ.  ' ರೆಂಟ್ ಎನ್ ಗೋ' ಕಂಪನಿಯ ಆಪ್ಯ ಸದ್ಯ ಸೇವೆ ನೀಡುತ್ತಿರುವ ಕಂಪನಿಗಳಿಗಿಂತ ಹೆಚ್ಚು ಸರಳ ಮತ್ತು ಸುರಕ್ಷಿತವಾಗಿದೆ.   ಕಾರು ಬಾಡಿಗೆಯ ಸೇವೆಯನ್ನು 'ಶೇರಿಂಗ್' ಆಧಾರದ ಮೇಲೆ ಕೂಡ ನೀಡಬಹುದು. ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಸಮಾರಂಭದಲ್ಲಿ ಅವಧೂತರಾದ ವಿನಯ್ ಗುರೂಜಿ ಈ ನೂತನ ಸೇವೆಯನ್ನು ಲೋಕಾರ್ಪಣೆ ಮಾಡಿದರು. ಕಳೆದ ಹತ್ತು ವರ್ಷಗಳಿಂದ ಸಾರಿಗೆ ಉದ್ಯಮದಲ್ಲಿರುವ 'ಇ-ಟ್ರಾವೆಲ್ ಮೇಟ್' ಕಂಪನಿಯ ಹೊಸ ಸೇವೆ ಇದಾಗಿದ್ದು, ಇದು ಅತ್ಯಂತ ಗ್ರಾಹಕ-ಸ್ನೇಹಿಯಾಗಿದೆ ಎಂದು ವಿನಯ್ ಗುರೂಜಿ ಕಂಪನಿ ಹೇಳಿದರು. ಬೆಂಗಳೂರಿನ ತೀವ್ರ ಒತ್ತಡದ ಸಂಚಾರ ದಟ್ಟಣೆಗೆ ಈ ಆ್ಯಪ್ ಪರಿಹಾರ ನೀಡುವಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ವಿನಯ್ ಗುರೂಜಿ ಅಭಿಪ್ರಾಯ ಪಟ್ಟರು. ವಯಕ್ತಿಕ ಕಾರುಗಳನ್ನು ಆನ್ಲೈನ್ ಮೂಲಕ ಬಾಡಿಗೆ ನೀಡಿದಲ್ಲಿ ಸುರಕ್ಷಿತವಾಗಿ ಹಾಗೂ ಸುಲಭವಾಗಿ ಹಣ ಗಳಿಸಬಹುದು. ಇದು ನಗರ ಸಾರಿಗೆ ಒತ್ತಡ ನಿಯಂತ್ರಣಕ್ಕೆ ನೆರವಾಗುತ್ತದೆ ಎಂದು ಗುರೂಜಿ ಅಭಿಪ್ರಾಯ ಪಟ್ಟರು. 'ಇ-ಟ್ರಾವೆಲ್ ಮೇಟ್' ಸಂಸ್ಥೆ ಮುಖ್ಯಸ್ಥ ಸಂತೋಷ್ ಮಾತನಾಡಿ, 'ರೆಂಟ್ ಆಂಡ್ಯ್ ಗೋ' ಆ್ಯಪ್ ಸುಲಭ ಬಳಕೆಯ ಸುರಕ್ಷಿತ ಸಾಧನವಾಗಿದೆ ಎಂದರು. ಚಾಲಕರು ತಮಗೆ ಬೇಕಾದ ರೀತಿಯಲ್ಲಿ ಮಾರ್ಗ ಬದಲಾವಣೆಗೆ ಅವಕಾಶ ಇರುವುದಿಲ್ಲ. ಜ

ಪ್ರತಾಪ್ ಗೌಡ ಪಾಟೀಲ್ ಅವರಿಗೆ MLC ಸ್ಥಾನ ನೀಡಿ : ಬಿಜೆಪಿ ತಾಲೂಕು ಯುವ ಮೋರ್ಚಾ ಕಾರ್ಯದರ್ಶಿ ಬಸವರಾಜ ಒತ್ತಾಯ

ಇಮೇಜ್
ಮಸ್ಕಿ :   ಮಸ್ಕಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರಿಗೆ ಎಂಎಲ್ಸಿ ಸ್ಥಾನ ನೀಡಬೇಕು ಎಂದು ತಾಲೂಕಿನ ದೀನಸಮುದ್ರ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಮಸ್ಕಿ ಬಿಜೆಪಿ ತಾಲೂಕು ಯುವ ಮೋರ್ಚಾ ಕಾರ್ಯದರ್ಶಿ ಬಸವರಾಜ ರವರು ಒತ್ತಾಯ ಮಾಡಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಹಾಗೂ ಇಂದಿನ ಸರ್ಕಾರ ರಚನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರತಾಪ್ ಗೌಡ ಪಾಟೀಲ್ ಅವರು ಕೂಡ ಒಬ್ಬರಾಗಿದ್ದಾರೆ. ಸೋಲು ಗೆಲುವು ಎರಡನ್ನು ಸಮಾನ ರೀತಿಯಲ್ಲಿ ಸ್ವೀಕರಿಸಿದ್ದಾರೆ. ನಿರಂತರವಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಅವರ ಪರಿಶ್ರಮವನ್ನು ಪರಿಗಣಿಸಿ ರಾಜ್ಯದ ಬಿಜೆಪಿ ನಾಯಕರು ಹಾಗೂ ವರಿಷ್ಠರು ಪ್ರತಾಪ್ ಗೌಡ ಪಾಟೀಲ್ ಅವರಿಗೆ ಎಂ.ಎಲ್ಸಿ ಸ್ಥಾನವನ್ನು ನೀಡಬೇಕು ಎಂದು ಬಸವರಾಜ ದೀನಸಮುದ್ರ ರವರ ಪತ್ರಿಕೆ ಮ‌ೂಲಕ ಒತ್ತಾಯಿಸಿದರು.

ಮುದಬಾಳ ಗ್ರಾಮದಲ್ಲಿ ಎಸ್ಸಿ ಎಸ್ಟಿ ಸಭೆ ಯಶಸ್ವಿ

ಇಮೇಜ್
ಮಸ್ಕಿ : ತಾಲೂಕಿನ ಮುದಬಾಳ ಗ್ರಾಮದಲ್ಲಿ ಮಸ್ಕಿ ಪೋಲಿಸ್ ಠಾಣೆಯ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ (ಎಸ್ಸಿ -ಎಸ್ಟಿ) ತಿಳುವಳಿಕೆ ಸಭೆಯೂ ಎ.ಎಸ್.ಐ.ಹುಲಗಪ್ಪ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು. ಮುದಬಾಳ ಗ್ರಾಮದ ಸಾರ್ವಜನಿಕ ಕಟ್ಟೆಯ ಬಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ತಿಳುವಳಿಕೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎ.ಎಸ್. ಐ.ಹುಲುಗಪ್ಪ ರವರು ಸಮುದಾಯಗಳಿಗೆ ಸಂಭಂದಿಸಿದ ಕಾನೂನು ಕಾಯ್ದೆ ಗಳ ಬಗ್ಗೆ ಹಾಗೂ ಪರಿಶಿಷ್ಟ ವರ್ಗಗಳ ರಕ್ಷಣೆಯ ವಿಷಯದ ಕುರಿತು ಸ್ವ ವಿಸ್ತಾರವಾಗಿ ನೆರೆದ ಸಾರ್ವಜನಿಕರ ಮನ ಮುಟ್ಟುವ ರೀತಿಯಲ್ಲಿ ಕಾನೂನು ಅರಿವು ತಿಳುವಳಿಕೆಯ ಜಾಗೃತಿ ಮೂಡಿಸಿದರು. ಇದೇ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿ ಜಡೆಯಪ್ಪ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಹಿರಿಯರು ಹಾಗೂ ಯುವಕರು ಸೇರಿದಂತೆ ಇನ್ನಿತರರು ಇದ್ದರು.

ಹದಗೆಟ್ಟ ರಸ್ತೆ ತಗ್ಗು ಗುಂಡಿಗಳು ಸವಾರರ ಜೀವ ತೆಗೆಯಲಿಕ್ಕೆ ಸ್ವಾಗತಿಸುತ್ತೆವೆ...!

ಇಮೇಜ್
ಕೊಟ್ಟೂರು: ನಾಡಿನ ಆರಾಧ್ಯ ದೈವನಾದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಪುಣ್ಯ ಕ್ಷೇತ್ರವಾದ ಕೊಟ್ಟೂರಿಗೆ ಪ್ರತಿದಿನ ನೂರಾರು ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಬರುತ್ತಾರೆ. ಜನಸಾಮಾನ್ಯರ ಮಧ್ಯಮ ವರ್ಗದ ಜನರ ಜೀವನಾಡಿ ಎಂದರೆ ಅದುವೇ ರೈಲು ಸಂಚಾರವಾಗಿದೆ. ಕೊಟ್ಟೂರು ರೈಲ್ವೆ ನಿಲ್ದಾಣಕ್ಕೆ ಬಂದರೆ ಪ್ರಯಾಣಿಕರನ್ನು ಹದಗೆಟ್ಟಿರುವ ರಸ್ತೆಗಳು ಸ್ವಾಗತಿಸುತ್ತದೆ. ಕೊಟ್ಟೂರಿಗೆ ರೈಲು ನಿಲ್ದಾಣ ಆಗಬೇಕೆಂದು ಈ ಭಾಗದ ಜನರ ಬಹುದಿನದ ಬೇಡಿಕೆ ಹಾಗೂ ಕೊಟ್ಟೂರು ರೈಲ್ವೆ ಸಮಿತಿ ಹೋರಾಟಗಾರರ ಶ್ರಮದ ಪ್ರತಿಫಲವೇ ಇಂದು ಕೊಟ್ಟೂರಿನಲ್ಲಿ ರೈಲು ನಿಲ್ದಾಣವಾಗಿದೆ.  ರೈಲು ನಿಲ್ದಾಣಕ್ಕೆ ಬಂದು ಇಳಿದರೆ ಪ್ರಯಾಣಿಕರನ್ನು ಹದಗೆಟ್ಟಿರುವ ರಸ್ತೆಗಳು ಸ್ವಾಗತಿಸುತ್ತದೆ. ಈ ರಸ್ತೆಯಲ್ಲಿ ಬರುವ ಪ್ರಯಾಣಿಕರು, ಭಕ್ತರು , ಬೈಕ್ ಸವಾರರು ವಿದ್ಯಾರ್ಥಿಗಳು, ಈ ಮಾರ್ಗದಲ್ಲಿ ಬರುವ ಗ್ರಾಮದ ರೈತರು  ಈ ಹದಗೆಟ್ಟಿರುವ ರಸ್ತೆಗಳ ಗುಂಡಿಗೆ ಬಿದ್ದು ಕೈ ಕಾಲು ಮುರಿದು ಕೊಂಡಿರುವ ಎಷ್ಟೋ ಪ್ರಸಂಗಗಳು ನಡೆದಿದೆ ಎಂದು ಬೈಕ್ ಸವಾರ  ಪ್ರವೀಣ್ ಆಕ್ರೋಶ ವ್ಯಕ್ತಪಡಿಸಿದರು. ರಾತ್ರಿ ವೇಳೆ ರೈಲ್ವೆ ಸ್ಟೇಷನ್ ಗೆ ಹೋಗಬೇಕಾದರೆ ಒಂದು ಕ್ಷಣ ಭಯ ಉಂಟಾಗುತ್ತದೆ.  ಯಾಕೆ ಎಂದರೆ ಸರಿಯಾದ ಬೀದಿ ದೀಪಗಳ ವ್ಯವಸ್ಥೆ ಇಲ್ಲ ಬರುವ ಭಕ್ತಾದಿಗಳು ಕತ್ತಲನಲ್ಲೇ ಹೋಗಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.  ದಿನನಿತ್ಯ ಈ ಮಾರ್ಗದಲ್ಲಿ ನೂರಾರು ವಾಹನಗಳು ಸಂಚರಿಸುತ್ತದೆ ಆದರೆ ಪಕ್ಕದಲ್ಲಿರುವ