ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆದ ಬಹುಕೋಟಿ ಹಗರಣ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ.
ಕೊಪ್ಪಳ: ಆ. 29.ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 5000 ಮತ್ತು 3000 ಸಾವಿರ ರೂಪಾಯಿ ಕೋವಿಡ್ ಸಹಾಯ ಧನ. ಆಹಾರ ಕಿಟ್. ಬೂಸ್ಟರ್ ಕಿಟ್. ಮೇಷನ್ ಕಿಟ್. ಕಾರ್ಪೆಂಟರ್ ಕಿಟ್.ಪ್ಲಂಬರ್ ಕಿಟ್. ಪೇಂಟ್ ಕಿಟ್.ಬಾರ್ ಬೇಂಡರ್ ಕಿಟ್. ಕೌಸಲ್ಯ ಅಭಿವೃದ್ಧಿ ತರಬೇತಿ. ವೈದ್ಯಕೀಯ ಪರೀಕ್ಷೆ. 1 ರಿಂದ 12 ಸ್ಕೂಲ್ ಕಿಟ್ ವಿತರಣೆ ನೆಪದಲ್ಲಿ ಬಹು ಕೋಟಿ ಹಗರಣ ಕೇಳಿ ಬಂದಿದ್ದು ನ್ಯಾಯಾಂಗ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಾಗ್ಯನಗರದ ಶ್ರೀ ಮರಿಯಮ್ಮ ದೇವಿ ಕಟ್ಟಡ ಕಾರ್ಮಿಕರ ಹಾಗೂ ಇತರೆ ಕಾರ್ಮಿಕರ ಹಿತರಕ್ಷಣಾ ಸಂಘ (ರಿ)(ಎ.ಐ.ಟಿ.ಯು.ಸಿ.ಸಂಯೋಜಿತ) ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ನಡೆದ ಭಾಗ್ಯನಗರ ಪಟ್ಟಣ ಪಂಚಾಯತ್ ಮುಂಭಾಗದಿಂದ ಪ್ರಾರಂಭಿಸಿದ ಬೃಹತ್ ಪ್ರತಿಭಟನಾ ಮೆರವಣಿಗೆ ಕಾರ್ಮಿಕ ವೃತ್ತ ದಿಂದ ಅಶೋಕ್ ವೃತ್ತ ಸೇರಿದಂತೆ ಬಸವೇಶ್ವರ ವೃತ್ತ ಬಳಸಿಕೊಂಡು ರಾಷ್ಟ್ರೀಯ ಹೆದ್ದಾರಿ ಮೂಲಕ ಜಿಲ್ಲಾ ಆಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯ ರಾಣಿ.ಕೆ.ವಿ. ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಅರ್ಪಿಸಲಾಯಿತು. ಮನವಿಯಲ್ಲಿ ಕೊಳಚೆ ನಿರ್ಮೂಲನಾ ಮಂ