ಪೋಸ್ಟ್‌ಗಳು

Story

ಹರಪನಹಳ್ಳಿಯಿಂದ ಹೊರಟ ಬಸ್ಸು ಮಾಡ್ಲಗೇರಿ ತಾಂಡ, ಕಗ್ಗಲಕಟ್ಟೆ ತಾಂಡದ ಮೇಲೆ ನಮ್ಮೂರಿಗೆ ಬಂದು ನಿಲ್ಲುತ್ತಲೇ ಸಂಜೆ 5.45 ಗಂಟೆಯಾಗಿತ್ತು. ಮಾದರ ಕೇರಿ ದಾಟಿ ನಾವು ವಾಸಮಾಡುತ್ತಿದ್ದ ಮನೆಯ ಹಿಂಭಾಗದಿಂದ, ಆಸ್ಪತ್ರೆ ಮುಂದಾಸಿ ಸೀದಾ ತೇರುಗಡ್ಡಿಯ ಬಳಿ ನಿಂತಾಗ ಬಸ್ಸಿಳಿದೆ. 70 ಕಿಮೀ ದೂರದ ಪಯಣವದು, ಹರಪನಹಳ್ಳಿಯಿಂದ ನಮ್ಮೂರ ರಸ್ತೆ ತೀರಾ ಬಂಡಿಜಾಡಿನಂತಿತ್ತು. ಹೀಗಾಗಿ ಪ್ರಯಾಣದ ಆಯಾಸ ಮುಖದಲ್ಲಿ ಕಾಣುತ್ತಿತ್ತು. ಕೆಳದಗಿಳಿದವನೇ ಪ್ಯಾಂಟಿನ ಜೇಬಿನಲ್ಲಿದ್ದ ಬಾಚಾಣಿಕೆ ತೆಗೆದು ತಲೆ ಬಾಚಿಕೊಂಡು ನನ್ನೆದುರಿಗಿದ್ದ ಬೇವಿನ ಮರದ ಕಟ್ಟೆ ನೋಡಿದೆ. ರೈತಾಪಿ ಜನರೇ ಹೆಚ್ಚಾಗಿದ್ದ ಆ ಊರಿನಲ್ಲಿ ಸಂಜೆಯಾಗುತ್ತಲೇ ಹೊಲಗಳಿಂದ ಬಂದವರು ಕಟ್ಟೆ ಮೇಲೆ ಕುಳಿತು ಹರಟುವುದು ಸಹಜ. ಅಲ್ಲಿ ಎಲ್ಲಾ ರೀತಿಯ ಹರಟೆ ಇರುತ್ತದೆ. ಊರು, ರಾಜ್ಯ, ದೇಶ, ವಿದೇಶಗಳ ಬಗ್ಗೆ ಚಚೆ೯ಗಳು ಕಟ್ಟೆಯ ಮೇಲೆ ನಡೆಯುತ್ತವೆ. ಅಂತಹ ಚಚೆ೯ಯಲ್ಲಿ ಮಗ್ನರಾಗಿದ್ದ ಸುಮಾರು 50 ವಷ೯ದ ವ್ಯಕ್ತಿಯೋವ೯ ನನ್ನಡೆಗೆ ಬಂದ. ಹೆಗಲ ಮೇಲೆ ಟವೆಲ್್, ಕೈಯಲ್ಲಿ ಬೀಡಿ, ತುಂಬು ತೋಳಿನ ಬನಿಯನ್ ಮಧ್ಯಭಾಗದಲ್ಲೊಂದು ಜೇಬಿದೆ. ಆ ಜೇಬಿನಲ್ಲಿ ಮೊಬೈಲ್್ ಕಾಣುತ್ತಿತ್ತು. ನನ್ನ ಬಳಿ ಬರುತ್ತಲೇ "ಆರಾಮ ಗೌಡ್ರೆ? ಬಾಳ ದಿಸ ಆದ್ಮೇಲೆ ಊರಿನ ಕಡೆ ಮುಖ ಮಾಡಿದ್ದೀರಿ. ಮಸಲಾಡದ ಈರಣ್ಣ ಈಗಲಾದರೂ ನಿಮ್ಮನ್ನು ಕರೆಸ್ಕಂಡನಲ್ಲ" ಎನ್ನುತ್ತಾ ನನ್ನ ಕೈಲಿದ್ದ ಬ್ಯಾಗನ್ನು ಕೈಗೆತ್ತಿಕೊಂಡ. ಆತನ ನಡತೆ, ಮಾತು ಕ