ಪೋಸ್ಟ್‌ಗಳು

ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಚುನಾವಣೆಗೆ ಅಭ್ಯರ್ಥಿಗಳ ಅರ್ಜಿಗೆ ಮನವಿ

ಇಮೇಜ್
  ಮಸ್ಕಿ : ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ 5 ವರ್ಷಗಳ ಅವಧಿಗೆ ಏರ್ಪಡಿಸುವ ತಾಲ್ಲೂಕು ಮತ್ತು ಜಿಲ್ಲಾ ಕೃಷಿಕ ಸಮಾಜಗಳ ಚುನಾವಣೆಯನ್ನು ಮಾನ್ಯ ಉಚ್ಚ ನ್ಯಾಯಾಲಯ ಆದೇಶದ ಅನ್ವಯ ಘೋಷಣೆ ಮಾಡಲಾದ ಚುನಾವಣೆ ಪ್ರಯುಕ್ತ ಜರುಗುವ 2024 ನೇ ಸಾಲಿನ ಚುನಾವಣೆಗೆ ಅರ್ಜಿ ಸಲ್ಲಿಸಲು ಮನವಿ. 2024 -25 ನೇ ಸಾಲಿನಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ 5 ವರ್ಷಗಳ ಅವಧಿಗೆ ಏರ್ಪಡಿಸುವ ತಾಲ್ಲೂಕು ಮತ್ತು ಜಿಲ್ಲಾ ಕೃಷಿಕ ಸಮಾಜಗಳ ಚುನಾವಣೆ ಯೂ  ಡಿರಸೆಂಬರ್ ಹಾಗೂ ಭಾನುವಾರ ರಂದು ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 3:00 ಗಂಟೆವರೆಗೆ ಮಸ್ಕಿ ತಾಲ್ಲೂಕು ಕೃಷಿಕ ಸಮಾಜದ ಚುನಾವಣೆಯನ್ನು ನಿಗಧಿಪಡಿಸಿರುತ್ತಾರೆ. ತಾಲ್ಲೂಕಿನ ಎಲ್ಲಾ ಸದಸ್ಯರ ಪಟ್ಟಿಯನ್ನು ರೈತ ಸಂಪರ್ಕ ಕೇಂದ್ರ ಮಸ್ಕಿಯಲ್ಲಿ ಹಾಗೂ ಮಸ್ಕಿ ತಾಲ್ಲೂಕಿನ ಆಯಾ ರೈತ ಸಂಪರ್ಕ ಕೇಂದ್ರಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿರುತ್ತದೆ. ತಾಲ್ಲೂಕು ಕೃಷಿಕ ಸಮಾಜದ ಚುನಾವಣೆ ನಾಮಪತ್ರಗಳನ್ನು ಅರ್ಜಿ ಮೂಲಕ ರೂ. 250/- ಗಳ ಠೇವಣಿ ಪಾವತಿಸಿದ ಮೂಲ ರಸೀದಿ, ಪಹಣಿ ಪ್ರತಿಕೆಯೊಂದಿಗೆ ಸಲ್ಲಿಸಬೇಕು. ಚುನಾವಣೆಯ ಪ್ರಕ್ರಿಯೆಯು ನವೆಂಬರ್ 30 ರಿಂದ ಡಿಸೆಂಬರ್ 6 ರವರೆಗೆ ಪ್ರಾರಂಭಗೊಂಡು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ ನಾಮ ಪತ್ರ ಸಲ್ಲಿಸುವುದು. ಡಿಸೆಂಬರ್ 07 ರಂದು ಬೆಳಿಗ್ಗೆ 11-00 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ ನಾಮ ಪತ್ರಗಳನ್ನು ಪರಿಶೀಲಿಸುವ

ಶಿವಪುತ್ರಪ್ಪ ಜಾಲಹಳ್ಳಿ ರವರಿಗೆ ಕರ್ನಾಟಕ"ರತ್ನಶ್ರೀ"ಪ್ರಶಸ್ತಿ.

ಇಮೇಜ್
  ಜಾಲಹಳ್ಳಿ:ಬೆಂಗಳೂರು ಸ್ನೇಹ ಯುವ ಸಾಂಸ್ಕೃತಿಕ ಸಂಘ (ರಿ)ಬೆಂಗಳೂರು ಇವರು ನೀಡುವ ವಾರ್ಷಿಕ ಪ್ರಶಸ್ತಿ ಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಸಾಧಕರಿಗೆ ನೀಡುವ ಕರ್ನಾಟಕ ರತ್ನ ಶ್ರೀ ಪ್ರಶಸ್ತಿ ಗೆ ಭಾಜನರಾಗಿದ್ದರು ಶ್ರೀಯುತರಿಗೆ ತಮ್ಮ ಜವಾಬ್ದಾರಿಯನ್ನು ಮತ್ತಷ್ಟು ಎಚ್ಚಿಸಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಬೆಂಗಳೂರಿನ ರಾಜಾಜಿನಗರದ ಯಕ್ಷಿತ್ ರಾಯಲ್ ಅಕಾಡೆಮಿ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಡೆದ ಬಾರಿಸು ಕನ್ನಡ ಡಿಂಡಿಮವ ಕಾರ್ಯಕ್ರಮದಲ್ಲಿ ಶ್ರೀ ಶಿವಪುತ್ರಪ್ಪ ಇವರಿಗೆ ಕರ್ನಾಟಕ ರತ್ನ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಶಿವಪುತ್ರಪ್ಪ ಇವರು.ಸಮೀಪದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸೋಮನಮರಡಿಯಲ್ಲಿ ಕಾರ್ಯ ನಿರ್ವಹಿಸುತ್ತ ಸರಕಾರಿ ಸೇವೆಯಲ್ಲಿ ಸುಧೀರ್ಘ 35 ವರ್ಷಗಳ ಕಾಲ ತಮ್ಮ ಜೀವನ ಪಯಣ ನಡೆಸಿ ಸಾರ್ವಜನಿಕ ಶಿಕ್ಷಣ ಇಲಾಖೆ ನೀಡಿರುವ ವಿವಿಧ ಜವಾಬ್ದಾರಿಗಳಾದ ಸಿ ಆರ್ ಪಿ,ತಾಲೂಕ ಪಂಚಾಯತನಲ್ಲಿ ಕಲಾ ಜಾತಾ ನಾಯಕರಾಗಿ, ವಯಸ್ಕ ಶಿಕ್ಷಣ ಕೇಂದ್ರದ ತಾಲೂಕ ನೋಡಲ್ ಅಧಿಕಾರಿಯಾಗಿ ಹೀಗೆ ಹತ್ತು ಹಲವು ಹುದ್ದೆಗಳನ್ನು  ಸಮರ್ಥವಾಗಿ ನಿಭಾಯಿಸಿದ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ ಹಿರಿಯ ಬಡ್ತಿ ಮುಖ್ಯೋಪಾಧ್ಯಾಯರಾಗಿ ಸ ಮಾ.ಹಿ ಪ್ರಾ ಶಾಲೆ ಸೋಮನಮರಡಿ ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಅವರ ಮುಂದಿನ ವೃತ್ತಿ ಜೀವನ ಸುಖಕರವಾಗಿರಲಿ ಮತ್ತು ಇನ್ನೂ ಅನೇಕ ಪ್ರಶ

ಪ್ರತಿಭಾ ದಿನಾಚರಣೆ "ಕಲರವ - 2024" : ಬದುಕಿನ ಉತ್ತಮ ಅಂಶಗಳು ಸ್ಫೂರ್ತಿಯಾಗಬೇಕು – ಪಟ್ ಪಟ್ ಪಟಾಕಿ ಶೃತಿ

ಇಮೇಜ್
  ಬೆಂಗಳೂರು, ನ, 22; ನಗರದ ಎ.ಪಿ.ಎಸ್. ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆಯ ಪ್ರಯುಕ್ತ "ಕಲರವ 2024" - ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.  ಪ್ರಾಂಶುಪಾಲರಾದ ಪ್ರೊ. ಬಿ. ಜಯಶ್ರೀ ವಿವಿಧ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಪ್ರತಿಭೆ ಯಾರಲ್ಲೂ ಮೇಲ್ಮುಖವಾಗಿ ಗೋಚರಿಸುವುದಿಲ್ಲ. ಅದು ಸದಾ ಅಂತರ್ಮುಖಿ. ಹಾಗಾಗಿ ಅವಕಾಶ ದೊರೆತಾಗ ಸದುಪಯೋಗಪಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿರಬೇಕು ಎಂದರು.  ರೇಡಿಯೋ ಮತ್ತು ಟಿ.ವಿ. ನಿರೂಪಕಿ ಪಟ್ ಪಟ್ ಪಟಾಕಿ ಶ್ರುತಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬಾಲ್ಯ ಹಾಗೂ ಕಾಲೇಜು ದಿನಗಳನ್ನು ಸದಾ ಸ್ಮರಿಸಿಕೊಳ್ಳಬೇಕು. ಬದುಕಿನ ಉತ್ತಮ ಅಂಶಗಳು ಮುಂದಿನ ಹಾದಿಗೆ ಸ್ಪೂರ್ತಿಯಾಗಬೇಕು ಎಂದರು.  ಎ.ಪಿ.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಸಿಎ ವಿಷ್ಣುಭರತ್ ಎ. ಎಸ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಇದೊಂದು ಸೂಕ್ತ ವೇದಿಕೆಯಾಗಿದೆ. ಎಲ್ಲಾ ವಿದ್ಯಾರ್ಥಿಗಳು ಪ್ರತಿಭಾ ದಿನಾಚರಣೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.  ಎ.ಪಿ.ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಸ್. ನಾಗರಾಜ್, ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ. ಎ. ಪ್ರಕಾಶ್, ಜಂಟಿ ಕಾರ್ಯದರ್ಶಿ ಪಿ. ಕೃಷ್ಣಸ್ವಾಮಿ ಮತ್ತು ಟ್ರಸ್ಟಿಗಳಾದ ಪ್ರೊ. ಎ. ರಾಮಪ್ರಸಾ

ಆಂಬುಲೆನ್ಸ್ ನ ಶಬ್ದದಿಂದ ರೋಗಿಗಳ ಯೋಗಕ್ಷೇಮದ ಮೇಲಾಗುವ ಪರಿಣಾಮಗಳು : ಹಾಗೂ ಪರಿಹಾರೋಪಾಯಗಳು

ಇಮೇಜ್
  ಬೆಂಗಳೂರು :ಆಂಬ್ಯುಲೆನ್ಸ್‌ಗಳು,ಮೂಲತಃ ತುರ್ತು ಪರಿಸ್ಥಿತಿಗಳಿಗಾನುಗುಣವಾಗಿ ವಿನ್ಯಾಸಗೊಳಿಸಲಾದ ವಾಹನಗಳಾಗಿವೆ, ಮತ್ತು ಅವುಗಳು ಸಾಮಾನ್ಯವಾಗಿ ತುರ್ತುಸ್ಥಿತಿಯನ್ನು ಸೂಚಿಸಲು ಮತ್ತು ವಾಹನ ದಟ್ಟಣೆಯ ಮೂಲಕ ಮಾರ್ಗವನ್ನು ತೆರವುಗೊಳಿಸಲು ಸೈರನ್‌ಗಳನ್ನು ಹೊಂದಿರುತ್ತವೆ. ಆಂಬ್ಯುಲೆನ್ಸ್ ಸೈರನ್‌ನ ಧ್ವನಿಯು ಸೂಕ್ಷ್ಮ ಕಾರ್ಯವನ್ನು ನಿರ್ವಹಿಸುತ್ತದೆ: ಇದು ಇತರ ಚಾಲಕರು ಮತ್ತು ಪಾದಚಾರಿಗಳನ್ನು ಎಚ್ಚರಿಸುತ್ತದೆ, ತುರ್ತು ವಾಹನಕ್ಕೆ ದಾರಿ ಮಾಡಿಕೊಡಲು ತಕ್ಷಣದ ಕ್ರಮದ ಅಗತ್ಯವನ್ನು ಸೂಚಿಸುತ್ತದೆ. ಆದಾಗ್ಯೂ, ದಟ್ಟಣೆಯನ್ನು ಸರಾಗಗೊಳಿಸುವ ಮತ್ತು ಆಸ್ಪತ್ರೆಗೆ ರೋಗಿಯನ್ನೂ ತ್ವರಿತವಾಗಿ ಸಾಗಿಸಲು ಸಕ್ರಿಯಗೊಳಿಸಲು ಈ ಧ್ವನಿಯು ಅತ್ಯಗತ್ಯವಾಗಿದ್ದರೂ, ಸಾಮಾನ್ಯವಾಗಿ ಈ ಶಬ್ದವನ್ನು ಯಾರು ಕಡೆಗಣಿಸುವುದಿಲ್ಲ. ಆಂಬ್ಯುಲೆನ್ಸ್‌ನಲ್ಲಿರುವ ರೋಗಿಯು ಸಾಮಾನ್ಯವಾಗಿ ಗಂಭೀರ ಸ್ಥಿತಿಯಲ್ಲಿದ್ದಾಗ, ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. ಅಂತಹ ರೋಗಿಗಳು ಶಾಂತ ಮತ್ತು ಸ್ಥಿರ ಮನಸ್ಥಿತಿಲ್ಲಿರುವುದು ಅವರ ಯೋಗಕ್ಷೇಮಕ್ಕೆ ಒಳ್ಳೆಯದು. ಆದಾಗ್ಯೂ, ಜೋರಾಗಿ, ಮೊಳಗುವ ಸೈರನ್ ಪ್ರಯಾಣದ ಉದ್ದಕ್ಕೂ ನಿರಂತರ ಅಡಚಣೆ ಉಂಟಾಗಿ , ಇದು ರೋಗಿಗೆ ಮತ್ತಷ್ಟು ಒತ್ತಡವನ್ನು ಮತ್ತು ಅಸ್ವಸ್ಥತೆಯನ್ನು ಉಂಟುಮಾಡಬಹುದು ಮತ್ತು ಪ್ರಾಯಶಃ ಅವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲೂಬಹುದು. ತುರ್ತುಸ್ಥಿತಿಯನ್ನು ತಿಳಿಸುವ ಅಗಾಧವಾದ ಧ್ವನಿಯನ್ನೂ, ರೋಗಿಯು ಸಂಪ

ಜ್ಞಾನಾಕ್ಷಿ ರಾಜರಾಜೇಶ್ವರಿ ಮ್ಯೂಸಿಕ್ ವಿಡಿಯೋ ಆಲ್ಬಮ್ ಶೀರ್ಷಿಕೆ ಅನಾವರಣ

ಇಮೇಜ್
  ಬೆಂಗಳೂರಿನ ಸುಪ್ರಸಿದ್ದ ಐತಿಹಾಸಿಕ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಸ್ಥಾನ, ಶ್ರೀ ಕೈಲಾಸ ಆಶ್ರಮದಲ್ಲಿ ಪರಮಪೂಜ್ಯ ಪರಮಾಚಾರ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿಯವರ 64 ನೇ ಜಯಂತಿ ಮಹೋತ್ಸವ ಸಲುವಾಗಿ ಹಲವಾರು ಸಾಂಸ್ಕೃತಿಕ ಆಚರಣೆಗಳು ಅಪಾರ ಭಕ್ತಸಮೂಹದೊಂದಿಗೆ ಅದ್ದೂರಿಯಾಗಿ ನಡೆದವು. ಈ ಸಂದರ್ಭದಲ್ಲಿ ದೇವಿ ಶ್ರೀ ರಾಜರಾಜೇಶ್ವರಿಯನ್ನು ಸ್ತುತಿಸುವ “ಜ್ಞಾನಾಕ್ಷಿ ರಾಜರಾಜೇಶ್ವರಿ” ಎಂಬ ಬಹುಭಾಷಾ ಮ್ಯೂಸಿಕಲ್ ವಿಡಿಯೋ ಆಲ್ಬಮ್ ಶೀರ್ಷಿಕೆಯನ್ನು ಜಗದ್ಗುರು ಶ್ರೀ ಶ್ರೀ ಜಯೇಂದ್ರಪುರಿ ಮಹಾಸ್ವಾಮೀಜಿಯವರು ಅನಾವರಣಗೊಳಿಸಿದರು.  ಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಸಂಸ್ಕೃತ, ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ಆರು ಭಾಷೆಗಳಲ್ಲಿ ಈ ಆಲ್ಬಮ್ ತಯಾರಾಗುತ್ತಿದ್ದು ಸಾಂಪ್ರದಾಯಿಕ ಸ್ತೋತ್ರಗಳು, ಶಾಸ್ತ್ರೀಯ ಕೃತಿಗಳು, ಹಾಡುಗಳು ಮತ್ತು ಭಜನೆಗಳನ್ನು ಒಳಗೊಂಡಿದೆ. ಈ ಆಲ್ಬಂ ಅನ್ನು ಖ್ಯಾತ ಸಂಗೀತ ಸಂಯೋಜಕ ಮಹೇಶ್ ಮಹದೇವ್ ಸಂಗೀತ ಸಂಯೋಜನೆ ಮಾಡಿ ನಿರ್ದೇಶನ ಮಾಡಿದ್ದು ಖ್ಯಾತ ಬಹುಭಾಷಾ ಹಿನ್ನೆಲೆ ಗಾಯಕಿ ಡಾ.ಪ್ರಿಯದರ್ಶಿನಿ ಮತ್ತು ಇತರರು ಹಾಡಿದ್ದಾರೆ. ಮಲಯಾಳಂ ಸಾಹಿತ್ಯವನ್ನು ಸಿಜು ತುರವೂರ್, ಸಂಸ್ಕೃತ, ಹಿಂದಿ ಮತ್ತು ಕನ್ನಡ ಸಾಹಿತ್ಯವನ್ನು ಮಹೇಶ್ ಮಹದೇವ್ ರಚಿಸಿದ್ದಾರೆ.  ಇನ್ನೊಂದು ವಿಶೇಷವೆಂದರೆ ಸಂಗೀತ ಸಂಯೋಜಕ ಮಹೇಶ್ ಮಹದೇವ್ ಅವರು ದೇವಿಯ ಮೇಲೆ ಸೃಷ್ಟಿಸಿರುವ ಹೊಸ ರಾಗವ

ಭತ್ತ,ತೊಗರಿ ಕೇಂದ್ರ ತೆರೆದು, ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಬೇಕು ಎಂದು ತಹಶೀಲ್ದಾರ್ ಅವರಲ್ಲಿ ಕರ್ನಾಟಕ ರೈತ ಸಂಘ ಮನವಿ

ಇಮೇಜ್
ಮಸ್ಕಿ : ಪಟ್ಟಣದ ಬಸವೇಶ್ವರ ನಗರದ ತಹಶೀಲ್ದಾರರ ಕಚೇರಿಯಲ್ಲಿ ಭತ್ತ, ತೊಗರಿ ಖರೀದಿ ಕೇಂದ್ರ ಶೀಘ್ರಗತಿಯಲ್ಲಿ ತೆರೆಯಬೇಕು ಹಾಗು ದಿ:14-11-2024 ಕ್ಕೆ ಸುರಿದ ಭಾರಿ ಮಳೆಗೆ ಭತ್ತದ ಬೆಳೆ ನೆಲಕಚ್ಚಿದ್ದು, ಭತ್ತ ಹಾನಿಯಾದ ರೈತರಿಗೆ ಬೆಳೆ ನಷ್ಟ ಪರಿಹಾರ ಒದಗಿಸಿ ಮತ್ತು ರೈತರ ಕೃಷಿ ಉತ್ಪನ್ನಗಳ ಮಾರಾಟಗಳಿಗೆ ಅನುಕೂಲ ಕಲ್ಪಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ತಹಶೀಲ್ದಾರ್ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ತುಂಗಭದ್ರ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ರಾಯಚೂರು ಮತ್ತು ಕೊಪ್ಪಳ ಬಳ್ಳಾರಿ ಜಿಲ್ಲೆಗಳಲ್ಲಿ ಕಳೆದ 20 ದಿನಗಳಿಂದ ಭತ್ತ ಕಟಾವು ಪ್ರಾರಂಭಗೊಂಡಿದೆ. ಸರ್ಕಾರ ಅತ್ಯಂತ ತೀವ್ರ ಗತಿಯಲ್ಲಿ ಭತ್ತ ಹಾಗು ತೊಗರಿ ಖರೀದಿ ಕೇಂದ್ರ ತೆರೆಯಬೇಕು. ಸರ್ಕಾರ ಪ್ರತಿ ವರ್ಷ ರೈತರ ಭತ್ತ, ತೊಗರಿ ಖಾಲಿಯಾದ ಮೇಲೆ ಖರೀದಿ ಕೇಂದ್ರ ತೆರೆದು ವರ್ತಕರಿಗೆ ಹಾಗು ದಲ್ಲಾಳಿಗಳಿಗೆ ಅನುಕೂಲ ಮಾಡಿದಂತೆ ಆಗುತ್ತದೆ. ತಾವುಗಳು ಈ ರೈತ ವಿರೋಧಿ ಧೋರಣೆಗಳಿಗೆ ಕಡಿವಾಣ ಹಾಕಬೇಕಾಗಿದೆ. ಸ್ಥಳೀಯ ಅಧಿಕಾರಿಗಳು ದಲ್ಲಾಳಿಗಳೊಂದಿಗೆ ಶಾಮೀಲಾಗಿ ರೈತರಿಗೆ ನಷ್ಟವುಂಟು ಮಾಡುತ್ತಾರೆ. ದಿನಾಂಕ: 04-11-2024 ರಂದು ರಾಯಚೂರಿನಲ್ಲಿ ನಡೆದ ಕೆ.ಡಿ.ಪಿ. ಸಭೆಯಲ್ಲಿ ಭತ್ತ ತೊಗರಿ ಖರೀದಿ ಕೇಂದ್ರತೆರೆಯುವ ಕುರಿತು ನಮ್ಮ ಜಿಲ್ಲೆಯ ಉಸ್ತುವಾರಿ ಮಂತ್ರಿ ಶರಣು ಪ್ರಕಾಶ ಪಾಟೀಲ್ ಮತ್ತು ಸಣ್ಣ ನೀರಾವರಿ ಸಚಿವರಾದ ಎನ್.ಎಸ್. ಬೋಸರಾಜ್ ಮಾತನಾಡದಿರುವುದು ಅತ್ಯಂತ ನ

ಹಡಗಲಿ ಗ್ರಾಮದ ಸಾರ್ವಜನಿಕ ಸ್ಮಶಾನ ಜಾಗದ ಹದ್ದುಬಸ್ತ್ ಗೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ

ಇಮೇಜ್
  ಮಸ್ಕಿ : ತಾಲೂಕಿನ ಹಡಗಲಿ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಜಾಗದ ಹದ್ದುಬಸ್ತು ಮಾಡಿ, ಮೃತರ ಗೌರವಯುತ ಅಂತ್ಯಕ್ರಿಯೆಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿ, ಗ್ರಾಮಸ್ಥರು ತಹಸೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ ಅವರ ಮೂಲಕ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಹಡಗಲಿ ಸೀಮಾದಲ್ಲಿ ಬರುವ ಸರ್ವೆ ನಂ.04*/2 ವಿಸ್ತೀರ್ಣ 27 ಗುಂಟೆ ಜಮೀನಿನಲ್ಲಿ ನೂರಾರು ವರ್ಷಗಳಿಂದ ಗ್ರಾಮದ ಎಲ್ಲ ಸಮುದಾಯದವರು ಶವ ಸಂಸ್ಕಾರ ಮಾಡುತ್ತ ಬಂದಿದ್ದಾರೆ. ಆದರೆ, ಸ್ಮಶಾನ ಜಾಗದ ಪಕ್ಕದಲ್ಲಿ ಜಮೀನು ಹೊಂದಿರುವ ಅಮರಮ್ಮ ಬಸಪ್ಪ ಎಂಬುವವರು ಇತ್ತೀಚಿಗೆ ನಾಲ್ಕೈದು ವರ್ಷಗಳಿಂದ ಸ್ಮಶಾನದ ಭೂಮಿಯನ್ನು ಅತಿಕ್ರಮಿಸಿ ಶವ ಸಂಸ್ಕಾರಕ್ಕೆ ಅವಕಾಶ ಕೊಡದೇ ವಿನಾಕಾರಣ ಅಡ್ಡಿಪಡಿಸುತ್ತಿದ್ದಾರೆ. ಈ ಕುರಿತು ತಹಸೀಲ್ದಾರ್ ಅವರಿಗೆ ನವೆಂಬರ್ 6, 2023ರಂದು ಮನವಿ ಸಲ್ಲಿಸಿ, ವಿವಾದವನ್ನು ಪರಿಹರಿಸಲು ಸಾರ್ವಜನಿಕ ಸ್ಮಶಾನ ಜಾಗದ ಹದ್ದುಬಸ್ತು ಮಾಡಿಕೊಡುವಂತೆ ಒತ್ತಾಯಿಸಲಾಗಿತ್ತು. ಆದರೆ, ಇಲ್ಲಿಯವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದ ಗ್ರಾಮದಲ್ಲಿ ಯಾರೇ ಮೃತಪಟ್ಟರೂ ಅಂತ್ಯಕ್ರಿಯೆ ನೆರವೇರಿಸಲು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ತಹಸೀಲ್ದಾರ್ ಅವರ ಗಮನ ಸೆಳೆದರು.   ಆದಷ್ಟು ಶೀಘ್ರ ಹದ್ದುಬಸ್ತು ಕಾರ್ಯ ಪೂರ್ಣಗೊಳಿಸಿ ಸಾರ್ವಜನಿಕ ಸ್ಮಶಾನ ಜಾಗದ ವಿವಾದವನ್ನು ಸುಖಾಂತ್ಯಗೊಳಿಸಬೇಕು, ಒಂದು ವೇಳೆ ನಿರ್ಲಕ್ಷ ಮುಂದುವರಿಸಿದ್ದೇ ಆದಲ್ಲಿ ತಹಸ