ಪೋಸ್ಟ್‌ಗಳು

ನೆಲದ ಮೇಲೆ ಕುಳಿತು ಊಟ ಸವಿಯುವ ಮೂಲಕ ಸರಳತೆ ಮೆರೆದ ತಹಶೀಲ್ದಾರ್

ಇಮೇಜ್
  ಮಸ್ಕಿ : ತಹಶಿಲ್ದಾರರಾದ ಡಾ.ಮಲ್ಲಪ್ಪ.ಕೆ.ಯರಗೋಳ ರವರು ಪಟ್ಟಣದ ಧನಗರವಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೆ ಮಕ್ಕಳ ದಿನಾಚರಣೆ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು.  ಈ ವೇಳೆ,ಶಾಲೆಯ ಕಟ್ಟಡ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಪರಿಶೀಲನೆ ನಡೆಸಿ ಆದಷ್ಟೂ ಬೇಗನೇ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳಿಗೆ ತಿಳಿಸುವೆ ಎಂದರು. ಅದೇ ರೀತಿ ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಯವರು ಮಾತನಾಡಿ ನಮ್ಮ ವ್ಯಾಪ್ತಿಯಲ್ಲಿ ಬರುವ ಶಾಲೆಗಳ ಮೂಲಭೂತ ಸೌಕರ್ಯಗಳ ಒದಗಿಸಲು ಸಹಾಯ ಸಹಕಾರ ಇರುತ್ತದೆ ಎಂದು ಭರವಸೆ ನೀಡಿದರು.ನಂತರಶಾಲೆ ವಿದ್ಯಾರ್ಥಿಗಳ ಜತೆ ಕುಳಿತು ಬಿಸಿಯೂಟ ಸೇವಿಸಿದರು. ಇವರಿಗೆ ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಪ್ರಭಾರಿ ಮುಖ್ಯ ಗುರುಗಳಾದ ಶ್ರೀಕಾಂತಮ್ಮ,ಮಧುಮತಿ ಶಿಕ್ಷಕಿ,ಪತ್ರಕರ್ತರಾದ ಗ್ಯಾನಪ್ಪ ದೊಡ್ಡಮನಿ, ರವಿಕುಮಾರ್ ಚಿಗಿರಿ ಸೇರಿದಂತೆ ಇನ್ನಿತರರು ಸಾಥ್ ನೀಡಿದರು.

ಮಸ್ಕಿ : ನೀತಿ ಸಂಹಿತೆ ಜಾರಿ ಶುಭಾಷಯ ಬ್ಯಾನರ್ ಹಾರಾಟ

ಇಮೇಜ್
  ಮಸ್ಕಿ : ಪಟ್ಟಣದ ಪುರಸಭೆ ವ್ಯಾಪ್ತಿಯ ಮೂರನೇ ವಾರ್ಡಿನಲ್ಲಿ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಬೆಂಗಳೂರು ಘೋಷಣೆ ಮಾಡಿದ್ದು, ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಯಾವುದೇ ರೀತಿಯ ಶುಭಾಷಯ ಕೋರುವ ಮತ್ತು ಪ್ರಚಾರ ಮಾಡುವ ರಾಜಕೀಯ ಪಕ್ಷದ ಯಾವುದೇ ಬ್ಯಾನರ್ ಇರಬಾರದು ಎಂಬುದು ನಿಯಮ ಇದ್ದರು ಪುರಸಭೆ ಆಡಳಿತವು ತಮ್ಮ ಬೇಜವಾಬ್ದಾರಿತನದಿಂದ ಕನಕ ವೃತ್ತದ ಬಳಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ. ವೈ ವಿಜಯೇಂದ್ರ ರವರ ಹುಟ್ಟು ಹಬ್ಬದ ಶುಭಾಶಯ ಕೋರಿದ ಬ್ಯಾನರ್ ಒಂದು ಜಗಮಗಸುತ್ತಿದ್ದು ಕಣ್ಣಿದ್ದೂ ಕುರುಡಾದ ಪುರಸಭೆ ಆಡಳಿತ.ಇನ್ನಾದರೂ ಸಂಭಂದಪಟ್ಟ ಅಧಿಕಾರಿಗಳು ಕ್ರಮ ಜರುಗಿಸುವರೇ ಕಾದು ನೋಡಬೇಕಿದೆ.

ಮುಕ್ತ - ದೂರ ಶಿಕ್ಷಣ ಪ್ರವೇಶಗಳು ಪ್ರಾರಂಭ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಿ - ಶಶಿಧರ್ ಹಿರೇಮಠ

ಇಮೇಜ್
  ಸಿಂಧನೂರು ನ.14 ನಗರದ ಪಿಡಬ್ಲೂಡಿ ಕ್ಯಾಂಪ್ ನ ಬಿ.ಆರ್.ಸಿ‌ ಕಛೇರಿಯ ಹಿಂದುಗಡೆ ಸ್ವಾಮಿ ವಿವೇಕಾನಂದ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ( ಕೆ.ಎಸ್.ಒ.ಯು)ಅನುಮತಿ ಪಡೆದ ದೂರ ಶಿಕ್ಷಣ ಕೇಂದ್ರ ನಮ್ಮಲ್ಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಾತಿ ಪಡೆದು ಸದುಪಯೋಗ ಪಡಿಸಿಕೊಳ್ಳಿ ಎಂದು ಕಾಲೇಜು ಪ್ರಾಚಾರ್ಯರಾದ ಶಶಿಧರ ಹಿರೇಮಠ ಪತ್ರಿಕೆ ಮೂಲಕ‌ ತಿಳಿಸಿದರು.        ಸಿಂಧನೂರು ನಗರದಲ್ಲಿ ನಮ್ಮ ಸಂಸ್ಥೆ ಸತತ 18 ವರ್ಷಗಳಿಂದ ದೂರ ಶಿಕ್ಷಣ ಕಲಿಕಾರ್ಥಿಗಳಿಗೆ ಪ್ರವೇಶಾತಿ ನೀಡಿ  ಕ್ರಾಂತಿಯನ್ನೆ ಸೃಷ್ಟಿಸಿದೆ.ಸರ್ಕಾರಿ ಮತ್ತು ಅರೆ ಸರ್ಕಾರಿ ಹುದ್ದೆಗಳಿಗೆ ಮಾನ್ಯತೆ ಹೊಂದಿದೆ.ನಮ್ಮಲ್ಲಿ ಪರೀಕ್ಷಾ ಕೇಂದ್ರ ಕೂಡ ಇದೆ.ಈಗಾಗಲೇ ನಮ್ಮಲ್ಲಿ ಪ್ರವೇಶಾತಿ ಪಡೆದು ವಿವಿಧ ಇಲಾಖೆಗಳಲ್ಲಿ ಸರ್ಕಾರಿ/ ಅರೆ ಸರ್ಕಾರಿ ಹುದ್ದೆಯನ್ನು ಹಾಗೂ ಸೇವೆಯಿಂದ ಬಡ್ತಿ ಕೂಡ ಹೊಂದಿದ್ದಾರೆ.ಬಡ ಹಾಗೂ ಪ್ರತಿಭಾನ್ವಿತ ಪ್ರವೇಶಾತಿಗಳಿಗೆ ಶುಲ್ಕ ದಲ್ಲಿ ರಿಯಾಯಿತಿ ಕೊಡಲಾಗುತ್ತದೆ.ಪ್ರವೇಶ ಪಡೆಯಲು ನ.15 ಕೊನೆಯ ದಿನಾಂಕ ಆಗಿದ್ದು ಈ‌ ಕೂಡಲೆ ಪ್ರವೇಶ ಪಡೆದು ಉಜ್ವಲ ಜೀವನ ರೂಪಸಿಕೊಳ್ಳಿ ಎಂದರು.

ಶ್ರೀ ಶಿವಕುಮಾರೇಶ್ವರ ಗುರುಕುಲ ಎಚ್.ಪಿ. ಶಾಲೆಯಲ್ಲಿ ಇಂಟರ್ನೆಟ್ ಸುರಕ್ಷತೆ ಕುರಿತಂತೆ ತರಗತಿ

ಇಮೇಜ್
ಬೀದರ್, :  ಶ್ರೀ ಶಿವಕುಮಾರೇಶ್ವರ ಗುರುಕುಲ ಎಚ್.ಪಿ. ಶಾಲೆಯಲ್ಲಿ ಇತ್ತೀಚೆಗೆ "ಇಂಟರ್ನೆಟ್ ಸುರಕ್ಷತೆ" ವಿಷಯದಲ್ಲಿ ಒಂದು ಪ್ರಾಫೆಷನಲ್ ತರಗತಿ ನಡೆಸಲಾಯಿತು. ಈ ತರಗತಿಯನ್ನು ದಯಾನಂದ ಹಿರೇಮಠ ಹಾಗೂ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಮತ್ತು ಡೆಲ್ ಟೆಕ್ನೋಲಾಜೀಸ್ ಸಹಯೋಗದಲ್ಲಿ ಆಯೋಜಿಸಲಾಯಿತು. ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಬಳಕೆಯ ಸುರಕ್ಷತೆಯ ಮಹತ್ವ, ಆನ್ಲೈನ್ ಅಪಾಯಗಳು, ಸಾಮಾಜಿಕ ಮಾಧ್ಯಮದಲ್ಲಿ ಖಾಸಗಿ ಮಾಹಿತಿಯನ್ನು ಹೇಗೆ ರಕ್ಷಿಸಿಕೊಳ್ಳುವುದು, ಮತ್ತು ಆನ್ಲೈನ್ ಕ್ರೈಮ್‌ಗಳು ಕುರಿತು ಅಗತ್ಯ ಜಾಗೃತಿ ನೀಡಲಾಯಿತು. ದಯಾನಂದ ಹಿರೇಮಠ ಅವರು ಈ ವಿಷಯದಲ್ಲಿ ವಿಶಿಷ್ಟವಾದ ಮಾರ್ಗದರ್ಶನವನ್ನು ನೀಡಿ, ಇಂಟರ್ನೆಟ್ ಮತ್ತು ತಂತ್ರಜ್ಞಾನಗಳ ಸುರಕ್ಷಿತ ಬಳಕೆ ಕುರಿತು ಉಪಯುಕ್ತ ಮಾಹಿತಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ, ಡೆಲ್ ಟೆಕ್ನೋಲಾಜೀಸ್ ಮತ್ತು ಲರ್ನಿಂಗ್ ಲಿಂಕ್ಸ್ ಫೌಂಡೇಶನ್‌ನ ದಯಾನಂದ ಹಿರೇಮಠ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ರೈಂಗಳನ್ನು ಗುರುತಿಸಲು ಹಾಗೂ ಅದರಿಂದ ಹೇಗೆ ತಪ್ಪಿಸಿಕೊಳ್ಳಬಹುದು ಎಂಬ ಬಗ್ಗೆ ವಿವರಿಸಿದರು.  ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸೈಬರ್ ಜಾಗೃತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ, ಹಾಗೂ ಇಂಟರ್ನೆಟ್ ಅನ್ನು ಸುರಕ್ಷಿತವಾಗಿ ಬಳಸುವ ಕುರಿತು ಮಾರ್ಗದರ್ಶನ ನೀಡಿದುದರಿಂದ ಅವರ ವೈಯಕ್ತಿಕ ಮಾಹಿತಿ ಹಾಗೂ ಸುರಕ್ಷತೆ ಕಾಪಾಡುವ ಬಗ್ಗೆ ಮಹತ್ವದ ಅ

ನನ್ನ ಭವಿಷ್ಯ ನನ್ನ ಆಯ್ಕೆ "ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮ ಯಶಸ್ವಿ

ಇಮೇಜ್
  ವಿಜಯಪುರ  : ಸೋಮವಾರ  ಕರ್ನಾಟಕ ಸರಕಾರ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಹಾಗೂ ಅನಾಹತ ಯುನೈಟೆಡ್‌ ಎಫರ್ಟ್‌ ಪೌಂಡೆಶೆನ್‌ ಬೆಂಗಳೂರು ಇವರುಗಳ ಸಹಯೋಗದಲ್ಲಿ ಜಿಲ್ಲಾ ಹಂತದ “ನನ್ನ ಭವಿಷ್ಯ ನನ್ನ ಆಯ್ಕೆ” ಎಂಬ ಸಮಾರಂಭದ ಉದ್ಘಾಟನೆ ಕಾರ್ಯಕ್ರಮ ನಗರದ ಗಾಂಧಿ ಭವನದಲ್ಲಿ ಯಶಸ್ವೀಯಾಗಿ ಜರುಗಿತು. ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ. ಪುಂಡಲಿಕ್ ಮಾನವರ ಜಿಲ್ಲಾ ಉಪ-ನಿದೇರ್ಶಕರು ಸಮಾಜ ಕಲ್ಯಾಣ ಇಲಾಕ್ಯ  ವಿಜಯಪುರ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ.ಎಮ್.ಚಲವಾದಿ, ಜಿಲ್ಲಾ ಸಮನ್ವಯ ಅಧಿಕಾರಿಗಳು ಕ.ವ.ಶಿ.ಸ.ಸಂ.ವಿಜಯಪುರ, ಮುಖ್ಯ ಅಥಿತಿಗಳಾಗಿ ಅನೀಲ ಕುಮಾರ ಬಿ.ಎಮ್‌  ವಿಭಾಗೀಯ ಮುಖ್ಯಸ್ಥರು, ಅನಾಹತ ಯುನೈಟೆಡ್‌ ಎಫರ್ಟ್‌ ಪೌಂಡೆಶೆನ್‌ ಬೆಂಗಳೂರು. ಅಥಿತಿಗಳಾಗಿ ದೀಪಕ್‌ .ಎಸ್‌. ಜಿಲ್ಲಾಧಿಕಾರಿ ಹಿಂದೂಳಿದ ವರ್ಗಗಳ ಇಲಾಖೆ ವಿಜಯಪುರ, ಕಾರ್ಯಕ್ರಮದ ಕುರಿತು ಮಾತನಾಡಿದರೇ,ಪುಂಡಲಿಕ್ ಮಾನವರ ಜಿಲ್ಲಾ ಉಪ-ನಿದೇರ್ಶಕರು ಸಮಾಜ ಕಲ್ಯಾಣ ಇಲಾಖೆ  ವಿಜಯಪುರ ಗಿಡಕ್ಕೆ ನೀರು ಹಾಕುವುದರಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು ಮಕ್ಕಳ ಪ್ರತಿಭೆಯನ್ನು ಕಂಡುಕ್ಕೊಳ್ಳಲು ೨೧ನೇ ಶತಮಾನದ ಹೊಸ ಶಿಕ್ಷಣ ನೀತಿಯ ಕೌಶಲ್ಯಗಳ  ಪ್ರಕಾರ ಈ ಪಠ್ಯ ವಿಷಯವು ರಚಿತವಾಗಿರುವುದು. ಇದು ಪ್ರೌಢಶಾಲಾ ಮಕ್ಕಳಿಗೆ ಅತಿ ಮೌಲ್ಯಯುತ ವೃತ್ತಿ ಯೋಜನಾ ವಿಷಯವಾಗಿದ್ದು, ವಿಶೇಷವಾಗಿ ನಮ್ಮ ವಸತಿ ಶಾಲೆಗಳಲ್ಲಿ ಆರ್ಥಿಕವಾಗಿ ಹಿಂದೂಳ

ಒನಕೆ ಓಬವ್ವ ಮಹಿಳೆಯರಿಗೆ ಪ್ರೇರಕ ಶಕ್ತಿ: ವಕೀಲರು ಚೌಡಪ್ಪ ಸಿ

ಇಮೇಜ್
  ಕೊಟ್ಟೂರು : ಪಟ್ಣಣ ಪಂಚಾಯತಿಯಲ್ಲಿ ವೀರ ವನಿತೆ ಒನಕೆ ಓಬವ್ವನ ಜಯಂತೋತ್ಸವನ್ನು   ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ಸೋಮವಾರ ರಂದು ಆಚರಣೆ ಮಾಡಲಾಯಿತು. ಪಟ್ಟಣ ಪಂಚಾಯತಿಯ ಪದಾಧಿಕಾರಿಗಳಾದ ಮುಖ್ಯ ಅಧಿಕಾರಿ ಎ ನಸ್ರುಲ್ಲಾ ರವರು ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರೇಖಾ ರಮೇಶ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷವಾಗಿ ವಕೀಲರಾದ ಚೌಡಪ್ಪ.ಸಿ ಅವರನ್ನು  ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಸಿದ್ದಯ್ಯನವರು,ಸ್ಥಾಯಿ ಸಮಿತಿ ಅಧ್ಯಕ್ಷರು ಅಂಜಿನಮ್ಮ ವಿರುಪಾಕ್ಷಪ್ಪ, ಪಟ್ಟಣ ಪಂಚಾಯಿತಿ ಸದಸ್ಯ ಕೆಂಗರಾಜ್ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕರು ಅನುಷಾ, ವಿಜಯ್, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು

ಹಟ್ಟಿ ಪಟ್ಟಣ ಪಂಚಾಯಿತಿ ಉಪಚುನಾವಣೆ.ಬಿಜೆಪಿ ಪಕ್ಷದಿಂದ ಅಂಬಮ್ಮ ಶ್ರೀನಿವಾಸ್ ಮಧುಶ್ರೀ ನಾಮಪತ್ರ ಸಲ್ಲಿಕೆ.

ಇಮೇಜ್
ಹಟ್ಟಿ ಚಿನ್ನದ ಗಣಿ :ಹಟ್ಟಿ ಪಟ್ಟಣ ಪಂಚಾಯಿತಿ ಉಪಚುನಾವಣೆ ಘೋಷಣೆಯಾಗಿದ್ದು ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು 6 ಮತ್ತು 8ನೇ ವಾರ್ಡಿಗೆ ಅಭ್ಯರ್ಥಿಗಳ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು 8ನೇ ವಾರ್ಡಿನ ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರಕ್ಕೆ ಅಂಬಮ್ಮ ಶ್ರೀನಿವಾಸ್ ಮಧುಶ್ರೀ ಬಿಜೆಪಿ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ಗುರುಬಸಮ್ಮ ಗಂಡ ಅಮರಪ್ಪ. ಎಸ್ ಸಿ ಮೀಸಲು 6ನೇ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಜಿ ಶ್ರೀಕಾಂತ್ ತಂದೆ ಜಿ ಆದಪ್ಪ, ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಅಮರೇಶ್ ತಂದೆ ಹನುಮಂತ, ಸಿ ಪಿ ಐ (ಎಂ) ಪಕ್ಷದ ಅಭ್ಯರ್ಥಿಯಾಗಿ ಚನ್ನಬಸವ ತಂದೆ ಕರಿಯಪ್ಪ  ಒಟ್ಟು 8ನೇ ವಾರ್ಡಿಗೆ ಎರಡು ಅಭ್ಯರ್ಥಿಗಳು 6ನೇ ವಾರ್ಡಿಗೆ ಮೂರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಾಗಿದೆ ಎಂದು ಹಟ್ಟಿ ಪಟ್ಟಣ ಪಂಚಾಯತ್ ಉಪಚುನಾವಣೆಯ ಚುನಾವಣೆ ಅಧಿಕಾರಿಗಳು ತಿಳಿಸಿದರು.  ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಅಂಬಮ್ಮ ಶ್ರೀನಿವಾಸ್ ಮಧುಶ್ರೀ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಬಿಜೆಪಿ ಪಕ್ಷದ ತಾಲೂಕ ಅಧ್ಯಕ್ಷರಾದ ಅಯ್ಯಪ್ಪ ವಕೀಲರು, ಈಶ್ವರ್ ವಜ್ಜಲ್, ಶಂಕರಗೌಡ ಬಳಗನೂರ್,ಏನ್ ಸ್ವಾಮಿ ನಾಯ್ಕೋಡಿ, ಪರಮೇಶ್ ಯಾದವ್, ಹನುಮಂತ್ ರೆಡ್ಡಿ, ರಮೇಶ್ ಹುಳಿಮೇಶ್ವರ, ರವಿ, ಯಕೋಬ ಪವಡಿ,ಶಿವು ನಾಯಕ್ ತಬಲಾಜಿ, ಬಸವರಾಜ ಪೈ, ಭೀಮಣ್ಣ,ಬಸವರಾಜ್, ಶಿವು, ಮಹಾದೇವ್ ಮಧುಶ್ರೀ,ರೋಹನ್, ಬಸಮ್ಮ ಪರಮೇಶ್ ಯಾದವ್,ಪದ್ಮ