ಪೋಸ್ಟ್‌ಗಳು

ನವೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

75ನೇ ಸಂವಿಧಾನ ಸಮರ್ಪಣಾ ದಿನಾಚರಣೆ- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಕೀಲರ ಸಂಘದ ನೂತನ ಸಂಘದ ಉದ್ಘಾಟನೆ

ಇಮೇಜ್
ಬೆಂಗಳೂರು; 75ನೇ ಸಂವಿಧಾನ ಸಮರ್ಪಣಾ ದಿನಾಚರಣೆಯ ಅಂಗವಾಗಿ 26 ರಂದು ಬೆಂಗಳೂರು ಯುವನಿಕ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಕೀಲರ ಸಂಘದ ನೂತನ ಸಂಘದ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ  ಮೈಸೂರು ಉರಿಲಿಂಗಪೆದ್ದಿ ಮಠದ ಸ್ವಾಮೀಜಿ ಶ್ರೀ ಪರಮಪೂಜ್ಯ ಜ್ಞಾನಪ್ರಕಾಶ ಅವರುಗಳು ಉದ್ಘಾಟನೆ ಮಾಡಲಿದ್ದಾರೆ ಕ.ರಾ.ಪ.ಟಾ ಪ.ಪಂ.ವ.ಸಂ(ರಿ). ಅಧ್ಯಕ್ಷರಾದ ಎಂ. ಮುನಿಯಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಛನ್ಯಾಯಾಲಯ, ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್‌, ಕೃಷ್ಣ ಎನ್ ದೀಕ್ಷಿತ್‌ ಗೃಹ ಸಚಿವ ಜಿ. ಪರಮೇಶ್ವರ್‌ ಸಚಿವರುಗಳಾದ ಡಾ| ಹೆಚ್.ಸಿ. ಮಹದೇವಪ್ಪ, ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷ ಭಕ್ತವಚ್ಚಲರ, ಕರ್ನಾಟಕ ಉಚ್ಚ ನ್ಯಾಯಾಲಯ ಅಡಿಷನಲ್ ಅಡ್ವಕೇಟ್ ಜನರಲ್ ಎಸ್.ಎ. ಅಹಮದ್‌ ಅವರುಗಳು ಭಾಗವಹಿಸಲಿದ್ದಾರೆ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷರಾದ ಎಂ.ಮುನಿಯಪ್ಪ, ಶ್ರೀ.ಭಕ್ತವತ್ಸಲ, ಎಂ.ಕುಂಭಯ್ಯ, ಎಸ್.ಬಿ.ಸುರೇಶ್, ಮುನಿರಾಜು, ಕೆ.ಪಿ.ವೆಂಕಟೇಶ್, ಗೋಪಾಲ್, ಟಿ.ಎಲ್.ನಾಗರಾಜ್, ಚಂದ್ರಶೇಖ‌ರ್, ಮಾರಪ್ಪ, ಸಂಪತ್ ಕುಮಾರ್ ಭಾಗವಹಿಸಿದ್ದರು

*ಶ್ರೀ ಕ್ಷೇತ್ರ ಸಿರಸಂಗಿ ಶ್ರೀ ಕಾಳಿಕಾದೇವಿ ದೇವಸ್ಥಾನಕ್ಕೆ ಪಾದಯಾತ್ರೆ ಜಾಲಿಹಾಳ ವಿಶ್ವಕರ್ಮ ಬಂಧುಗಳಿಂದ ಸನ್ಮಾನ,ಹಣ್ಣು,ಹಂಪಲು ವಿತರಣೆ*

ಇಮೇಜ್
ಸಿಂಧನೂರು ತಾಲೂಕಿನ ಮುಕುಂದ ಗ್ರಾಮದ ಶ್ರೀ ಕಾಳಿಕಾದೇವಿ ದೇವಸ್ಥಾನದಿಂದ ಸಿರಸಂಗಿ ಶ್ರೀ ಕಾಳಿಕಾದೇವಿ ದೇವಸ್ಥಾನದವರೆಗೆ ಕಾರ್ತೀಕ ಮಾಸದ ಅಂಗವಾಗಿ ಇಂದು ನಾಡಿನ ಹಾಗೂ ವಿಶ್ವಕರ್ಮ ಸಮಾಜದ ಒಳಿತಿಗಾಗಿ ಮುಕ್ಕುಂದ ಶ್ರೀ ಕಾಳಿಕಾದೇವಿ ದೇವಸ್ಥಾನದ ಅರ್ಚಕರಾದ ಬಸವರಾಜ ಆಚಾರಿ ಇವರ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.ಈ ಪಾದಯಾತ್ರೆ ಅತ್ಯಂತ ಯಶಸ್ವಿಯಾಗಲೆಂದು ಚನ್ನಳ್ಳಿ ಕ್ರಾಸ್ ಬಳಿ ಜಾಲಿಹಾಳ ಹೋಬಳಿ ವಿಶ್ವಕರ್ಮ ಬಂಧುಗಳು ಪಾದಯಾತ್ರೆ ನೇತೃತ್ವ ವಹಿಸಿದ ಶ್ರೀ ಬಸವರಾಜ ಆಚಾರಿ ಅವರಿಗೆ ಸನ್ಮಾನಿಸಿ,ಗೌರವಿಸಿ ಹಣ್ಣು, ಹಂಪಲುಗಳನ್ನು ನೀಡಿ ಪಾದಯಾತ್ರೆಗೆ ಚಾಲನೆ ನೀಡಿದರು. ಈ ಪಾದಯಾತ್ರೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದಿಂದ ಪ್ರಾರಂಭವಾಗಿ ಕಾರಟಗಿ,ನಾಗನಕಲ್ಲು(ಲಕ್ಷೀ ದೇವಸ್ಥಾನದಲ್ಲಿ ರಾತ್ರಿ ವಿಶ್ರಾಂತಿ),ತಾವರಗೇರ(ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ರಾತ್ರಿ ವಿಶ್ರಾಂತಿ),ಗಜೇಂದ್ರಗಡ ಪಟ್ಟಣದ(ಮೌನೇಶ್ವರ ದೇವಸ್ಥಾನದಲ್ಲಿ ರಾತ್ರಿ ವಿಶ್ರಾಂತಿ),ಬೇವಿನಹಾಳ(ಉಚ್ಚೀರಪ್ಪ ಅಜ್ಜ ದೇವಸ್ಥಾನದಲ್ಲಿ ರಾತ್ರಿ ವಿಶ್ರಾಂತಿ)ಸುರೇಬಾನ (ಶರಣರ ಮಠದಲ್ಲಿ ರಾತ್ರಿ ವಿಶ್ರಾಂತಿ) ನಂತರ ಈ ಮಾರ್ಗವಾಗಿ ವಿಶ್ವಕರ್ಮರ ಅಧಿದೇವತೆ ಶ್ರೀ ಕ್ಷೇತ್ರ ಸಿರಸಂಗಿ ಶ್ರೀ ಕಾಳಿಕಾದೇವಿ ದೇವಸ್ಥಾನವನ್ನು ತಲುಪಲಿದೆ.ಈ ಪಾದಯಾತ್ರೆ ಯಶಸ್ವಿಗಾಗಲೆಂದು ಈ ನಾಡಿಗೆ ಹಾಗೂ ವಿಶ್ವಕರ್ಮ ಸಮಾಜಕ್ಕೆ ತಾಯಿ ಕಾಳಿಕಾದೇವಿ ಕೃಪೆ ದೊರೆಯಲೆಂದು ಸಿಂಧ

*ಯುನಿಕ್ ಚಾರಿಟಬಲ್ ಸಮಾಜಮುಖಿ ಸೇವೆ ಶ್ಲಾಘನೀಯ : ಷ ||ಬ್ರ||ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು*

ಇಮೇಜ್
ಕೊಟ್ಟೂರು : ಪಟ್ಟಣದ ಯುನಿಕ್ ಚಾರಿಟಬಲ್ ಟ್ರಸ್ಟ್ ಸಮಾಜಮುಖಿ ಕಾರ್ಯಕ್ರಮವನ್ನು ಷ ||ಬ್ರ||ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಿ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇನೆ. ಸಮಾಜಕ್ಕೆ ಉಪಯುಕ್ತವಾದ ಸೇವಾ ಯೋಜನೆಗಳನ್ನು ರೂಪಿಸಿ ಜನರ ಸೇವೆಗೆ ಇದೆ. ಸಂಘಟನೆ ಕಟ್ಟುವ ಮನಸ್ಸು , ಜನಸೇವೆ ಮಾಡುವ ಕನಸು ಸಂಘಟಕರಲ್ಲಿರಬೇಕು. ಯುನಿಕ್ ಟ್ರಸ್ಟ್ ನವರು ತಮ್ಮ ದುಡಿಮೆಯ ಉಳಿತಾಯದಲ್ಲಿ ಇಂಥಾ ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು  ಸೇವಾ ಟ್ರಸ್ಟ್‌ಗಳು ಈ ರೀತಿಯ ಜನ ಉಪಯೋಗಿ ಆರೋಗ್ಯ ಕೇಂದ್ರವನ್ನು ಮಾಡುತ್ತಿರುವುದು ಮೆಚ್ಚುವುದು, ನೇತ್ರ ತಪಾಸಣೆ ಹಾಗೂ ಉಚಿತ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವವರನ್ನು ಮೆಚ್ಚಿಕೊಳ್ಳುವುದು ಬಡವರಿಗೆ ಉಚಿತ ಕನ್ನಡಕ ಕೊಡುವಂತಹ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ರೂಪಿಸಲು ಟ್ರಸ್ಟ್ ಸದಸ್ಯರಿಗೆ ಕೊಟ್ಟೂರು ಸಮುದಾಯ ಆರೋಗ್ಯ ವೈದ್ಯಾಧಿಕಾರಿ ಬದ್ಯಾನಾಯ್ಕ್ ಟ್ರಸ್ಟ್ ಸದಸ್ಯರಿಗೆ ಸಲಹೆ ನೀಡಿದರು ಯುನಿಕ್ ಚಾರಿಟಬಲ್ ಟ್ರಸ್ಟ್ ಸದಸ್ಯರು ತಮ್ಮ ದುಡಿಮೆಯ ಉಳಿತಾಯ ಹಣದಲ್ಲಿ ಸಮಾಜ ಸೇವೆ ನಡೆಯುತ್ತಿದೆ. ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತರು ಹಾಗೂ ಟ್ರಸ್ಟ್ ಸದಸ್ಯರ ಅಭಿಲಾಷೆ ಆರೋಗ್ಯ ಇಲಾಖೆ ವಿಜಯನಗರ ಮತ್ತು ಸಮುದಾಯ ಕೊಟ್ಟೂರು ಹಾಗೂ ಆರೋಗ್ಯ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರಲ್ಲಿ ಈ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರವನ್ನು ಆಯ

ಜೀವನಶೈಲಿಯನ್ನು ಬದಲಾಯಿಸಿ ಸಾವಯವ ಕೃಷಿಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ : ತಹಸೀಲ್ದಾರ್ ಡಾ:ಮಲ್ಲಪ್ಪ. ಕೆ.ಯರಗೋಳ ಕರೆ

ಇಮೇಜ್
  ಮಸ್ಕಿ : ಪಟ್ಟಣದ ಅಮರ ಪ್ರೇಮ ಕಾನ್ವೆಂಟ್ ನಲ್ಲಿ ಬಳ್ಳಾರಿ ಧರ್ಮ ಪ್ರಾಂತ್ಯ ಅಭಿವೃದ್ಧಿ ಸಂಸ್ಥೆಯ ಸಹಕಾರದಲ್ಲಿ ಉಜ್ಜೀವನ ಯೋಜನೆಯ ಸಾವಯವ ಕೃಷಿಯ ಕುರಿತು ಇಲಾಖೆಗಳ ಅಧಿಕಾರಿಗಳ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಜೀವನ ಶೈಲಿಯನ್ನು ಬದಲಾಯಿಸಿ ಸಾವಯ ಕೃಷಿಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ ಎಂದು ತಹಶೀಲ್ದಾರರಾದ ಡಾ : ಮಲ್ಲಪ್ಪ.ಕೆ.ಯರಗೋಳ ಕಾರ್ಯಕ್ರಮವನ್ನು ಉದ್ಘಾಟಿಸಿ ಕರೆ ನೀಡಿದರು.  ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಅಮರೇಗೌಡ ತಾಲೂಕ ಪಶು ವೈದ್ಯಾಧಿಕಾರಿಗಳು ಮಸ್ಕಿ ಇವರು ಪಶು ಇಲಾಖೆಯಿಂದ ದೊರೆಯುವ ಸೌಕರ್ಯಗಳ ಕುರಿತು ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿಗಳಾದ ಶ್ರೀ ಮಲ್ಲಪ್ಪ ಕೆ ವ್ಯವಸ್ಥಾಪಕರು ನೀರಾವರಿಯಲಕ್ಕೆ ಮಸ್ಕಿ ಇವರು ಸಾವಯವ ಕೃಷಿಯ ಮಹತ್ವದ ಕುರಿತು ಮಾತನಾಡಿದರು. ಅತಿಥಿಗಳಾದ ಶ್ರೀ ಅರಳಪ್ಪ ಹಾಗೂ ಯೋಜನಾ ಸಂಯೋಜಕರಾದ ಶಾಂತಪ್ಪ ಸೋಮನಮರಡಿ ಇವರು ಸಾವಯವ ಕೃಷಿಯ ಕುರಿತು ಮಾಹಿತಿಯನ್ನು ತಿಳಿಸಿದರು. ಈ ಕಾರ್ಯಗಾರದಲ್ಲಿ ನೂರಾರು ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡರು.   ಈ ಕಾರ್ಯಕ್ರಮದಲ್ಲಿ ಅಮರ ಪ್ರೇಮ ಕಾನ್ವೆಂಟಿನ ಸಿಸ್ಟರ್ ದೀಪ, ಶ್ರೀ ಮುದುಕಪ್ಪ ಪರಾಪೂರ, ವಿಜಯಕುಮಾರ್ ಕಾಟಿಗಲ್, ಹನುಮಂತ ಬೆನಕನಾಳ ಉಪಸ್ಥಿತರಿದ್ದು ಯಶಸ್ವಿಗೊಳಿಸಿದರು.

ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಿ –ವಿಜ್ಞಾನಿ ಪ್ರೊ.ಎಸ್ ಎಂ ಶಿವಪ್ರಸಾದ್

ಇಮೇಜ್
  ಕೊಟ್ಟೂರು: ನಿಸರ್ಗದ ಬಗ್ಗೆ ಅರ್ಥೈಸಿಕೊಳ್ಳುವುದರ ಜೊತೆಯಲ್ಲಿ ಕುತೂಹಲ ಗುಣ ಬೆಳೆಸಿಕೊಂಡವರು ವಿಜ್ಙಾನಿಗಳಾಗಲು ಸಾಧ್ಯ ಎಂದು ಧಾರವಾಡ ಐಐಟಿ ಪ್ರಾಧ್ಯಾಪಕ  ಹಾಗೂ ವಿಜ್ಞಾನಿ ಪ್ರೊ. ಎಸ್.ಎಂ.ಶಿವಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಗೊರ್ಲಿ ಶರಣಪ್ಪ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ  ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿವಿಧ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶನಿವಾರ ಏರ್ಪಡಿಸಿದ್ದ  ಸಂವಾದ ಕಾರ್ಯಕ್ರಮದಲ್ಲಿ  ‘ ವಿಜ್ಞಾನ  ಅರಿವು ಮತ್ತು ಜಾಗೃತಿ ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಸಂವಾದ ನಡೆಸಿದರು.    ವಿಜ್ಙಾನ ಎಂಬುದು ಸತ್ಯವಾದ ಮತ್ತು ಸುಂದರವಾದ ವಿಷಯವಾಗಿದೆ. ವಿದ್ಯಾರ್ಥಿಗಳು ಕೇವಲ ಪಠ್ಯಕ್ರಮಕ್ಕೆ ಸೀಮಿತವಾಗದೇ ಅದರಾಚೆಗೂ ವ್ಯಾಪಕ ಕಲಿಕೆಗೆ ಒತ್ತು ನೀಡುವತ್ತ ಗಮನ ಹರಿಸಬೇಕು ಹಾಗೂ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳನ್ನು ವೈಜ್ಞಾನಿಕ ಚಿಂತನೆಗೆ ಪ್ರಚೋದಿಸುವ ಹಾಗೂ  ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ    ಉಪನ್ಯಾಸಕರ ಪಾತ್ರ ಮುಖ್ಯವಾಗಿದೆ ಎಂದರು. ಕೇವಲ ಅಂಕಗಳ ಮಾನದಂಡದಿಂದ ವಿದ್ಯಾರ್ಥಿಗಳ ಜಾಣತನ ಅಳೆಯಬಾರದು ಅವರಲ್ಲಿ ಅಡಗಿರುವ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹಿಸುವ ನಿಟ್ಟಿನತ್ತ ಪಾಲಕರು ಹಾಗೂ ಶಿಕ್ಷಕರು ಮುಂದಾಗಬೇಕೆಂದರು.  ಯಂತ್ರಗಳ ಸಹಾಯದಿಂದ ಜಗತ್ತು ಮುನ್ನಡೆಯುವುದರ ಜೊತೆಯಲ್ಲಿ ವಯಸ್ಸನ್ನು ತಡೆಗಟ್ಟುವಂತಹ ತಂತ್ರ

"ಕರ್ನಾಟಕ ಸಂಸ್ಕೃತಿ ನಾಡಿನ ಪರಂಪರೆಯ ತಾಣ"

ಇಮೇಜ್
ಕೊಟ್ಟೂರು: ರಾಜ್ಯ ಸೇರಿ ಪಕ್ಕದ ರಾಜ್ಯಗಳಲ್ಲಿಯೂ ಹರಿದು ಹಂಚಿ ಹೋಗಿದ್ದ ಕನ್ನಡ ಭಾಷೆ ನೆಲಗಳನ್ನು ಒಗ್ಗೂಡಿಸುವ ಉದ್ದೇಶದಿಂದ ನಡೆದ ಕರ್ನಾಟಕ ಏಕೀಕರಣ ಹೋರಾಟ ಕನ್ನಡಿಗರಿಗದು ಎಂದಿಗೂ ಅಸ್ಮಿತೆಯಾಗಿದೆ ಎಂದು ಹಿರಿಯ ವಿದ್ವಾಂಸ ಡಾ.ಕೆ.ರವೀಂದ್ರನಾಥ ಹೇಳಿದರು. ಪಟ್ಟಣದ ಡಾ.ಎಚ್.ಜಿ.ರಾಜ್ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಆಯೋಜಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಕರ್ನಾಟಕ ಏಕೀಕರಣದ ಮಹತ್ವ ಕುರಿತು ಶನಿವಾರ ವಿಶೇಷ ಉಪನ್ಯಾಸ ನೀಡಿದರು. ಬ್ರಿಟಿಷ್ ಆಡಳಿತದಲ್ಲಿ ೨೦ಕ್ಕೂ ಹೆಚ್ಚು ಪ್ರಾಂತ್ಯಗಳಾಗಿ ಕನ್ನಡ ನಾಡು ಹರಿದು ಹಂಚಿ ಹೋಗಿತ್ತು. ನಮ್ಮ ಭಾಷಿಕರೇ ಅಧಿಕವಾಗಿದ್ದ ಪ್ರದೇಶಗಳಲ್ಲಿದ್ದ ಕನ್ನಡಿಗರಿಗೆ ಭಾಷಿಕವಾಗಿ, ಸಾಮಾಜಿಕವಾಗಿ, ಆಡಳಿತಾತ್ಮಕವಾಗಿ ಅನೇಕ ವಿಭಿನ್ನ ಸಮಸ್ಯೆಗಳು ಎದುರಾಗಿದ್ದವು. ಇಂತಹ ಸಮಸ್ಯೆಗಳಿಗೆ ಮುಕ್ತಿ ಕಾಣಿಸುವ ಉದ್ದೇಶಕ್ಕಾಗಿ, ಕನ್ನಡ ಭಾಷೆಯ ಆಧಾರದ ಮೇಲೆ ಅಖಂಡ ಕರ್ನಾಟಕ ನಾಡನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ನಾಡಿನ ಸಾಹಿತಗಳು, ಕಲಾವಿದರು, ಪತ್ರಿಕೆಗಳು, ಸಂಘ ಸಂಸ್ಥೆಗಳು ನಡೆಸಿದ ಏಕೀಕರಣ ಹೋರಾಟ ಕನ್ನಡಿಗರ ಅಸ್ಮಿತೆ ಕಥೆಯಾಗಿದೆ ಎಂದರು. ಕರ್ನಾಟಕ ಸಂಸ್ಕೃತಿಕೆ ನಾಡಿನ ಅರಸರು ಬಹು ದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ. ಏಕೀಕರಣದ ನಂತರ ಭಾಷಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಕನ್ನಡದ ಪ್ರತಿನಿಧಿಕತೆಯನ್ನು ಪುನರಾವಲೋಕನ ಮಾಡಿಕೊಳ್ಳುವುದ ಅವಶ್ಯವಾಗಿದೆ. ರಾಜ್ಯದಲ್ಲಿ ನ

ಮಸ್ಕಿ ಪುರಸಭೆ ಉಪಚುನಾವಣೆ ಶೇಕಡ 68 ರಷ್ಟು ಮತದಾನ

ಇಮೇಜ್
  ಮಸ್ಕಿ : ಸ್ಥಳೀಯ ಪುರಸಭೆ 3 ನೇ ವಾರ್ಡ್ ಅಭ್ಯರ್ಥಿ ಒಬ್ಬರು ಅಕಾಲಿಕ ಮರಣ ಹೊಂದಿದ್ದರಿಂದ ಮಸ್ಕಿ ಪುರಸಭೆ ಮೂರನೇ ವಾರ್ಡ್ ಗೆ ಉಪಚುನಾವಣೆ ಶನಿವಾರ ನಡೆಯಿತು . ಬೆಳಗ್ಗೆ ಆರಂಭವಾದ ಮತದಾನ ಸಂಜೆವರೆಗೂ ಶಾಂತಿಯುತವಾಗಿ ಮತದಾನ ನಡೆಯಿತು. ಇದೀಗ ಸ್ಥಳೀಯ ಪುರಸಭೆ ಮೂರನೇ ವಾರ್ಡ್ ಉಪಚುನಾವಣೆ ಶೇಕಡ 68% 03ರಷ್ಟು ಮತದಾನವಾಗಿದೆ. ಪುರುಷರ ಮತದಾರ 445 ಮಹಿಳೆ ಮತದಾರರು 509 ಒಟ್ಟು 954 ಮತದಾರರಿದ್ದು ಇದರಲ್ಲಿ 329 ಮಹಿಳೆಯರು ಮತದಾನ ಮಾಡಿದ್ದು, ಇನ್ನುಳಿದ ಪುರುಷ ಮತದಾನ320 ಮತದಾನ ಚಲಾಯಿಸಿದ್ದಾರೆ , ಒಟ್ಟು 649 ಮತದಾನವಾಗಿದ್ದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.ಪೋಲಿಸ್ ಬಿಗಿ ಬಂದೋಬಸ್ತ್ ನಲ್ಲಿ ಶಾಂತಿಯುತ ಮತದಾನ ಜರುಗಿತು. ಮತದಾನದ ನಡುವೆ ಸ್ವಲ್ಪ ಸಮಯ 3 ನೇ ವಾರ್ಡಿನ ಮತದಾರರ ಪಟ್ಟಿಯ ಪರಿಷ್ಕರಣೆಯಿಂದ 70 ರಿಂದ 80 ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ವಾದ ವಿಗ್ವಾದ ಜರುಗಿತು. ಇಂದಿನ ಚುನಾವಣೆ ಆದಂತೆ ಮುಂಬರುವ ಚುನಾವಣೆಗೆ 3 ನೇ ವಾರ್ಡಿನ ಮತದಾರರ ಹೆಸರನ್ನು ಸೇರಿಸುವ ಮೂಲಕ ಸರಿಪಡಿಸಿ ಎಂದು ಪುರಸಭೆ ಮಸ್ಕಿ ಚುನಾವಣಾ ಅಧಿಕಾರಿ ಮತ್ತು ತಾಲ್ಲೂಕ ದಂಡಾಧಿಕಾರಿ ಗಳಿಗೆ ಬಿಜೆಪಿ ಮಂಡಲ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ ಇವರ ನೇತೃತ್ವದಲ್ಲಿ ಕಾರ್ಯಕರ್ತರು ಮನವಿ ಪತ್ರವನ್ನು ಸಲ್ಲಿಸಿದರು.

ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಚುನಾವಣೆಗೆ ಅಭ್ಯರ್ಥಿಗಳ ಅರ್ಜಿಗೆ ಮನವಿ

ಇಮೇಜ್
  ಮಸ್ಕಿ : ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ 5 ವರ್ಷಗಳ ಅವಧಿಗೆ ಏರ್ಪಡಿಸುವ ತಾಲ್ಲೂಕು ಮತ್ತು ಜಿಲ್ಲಾ ಕೃಷಿಕ ಸಮಾಜಗಳ ಚುನಾವಣೆಯನ್ನು ಮಾನ್ಯ ಉಚ್ಚ ನ್ಯಾಯಾಲಯ ಆದೇಶದ ಅನ್ವಯ ಘೋಷಣೆ ಮಾಡಲಾದ ಚುನಾವಣೆ ಪ್ರಯುಕ್ತ ಜರುಗುವ 2024 ನೇ ಸಾಲಿನ ಚುನಾವಣೆಗೆ ಅರ್ಜಿ ಸಲ್ಲಿಸಲು ಮನವಿ. 2024 -25 ನೇ ಸಾಲಿನಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ 5 ವರ್ಷಗಳ ಅವಧಿಗೆ ಏರ್ಪಡಿಸುವ ತಾಲ್ಲೂಕು ಮತ್ತು ಜಿಲ್ಲಾ ಕೃಷಿಕ ಸಮಾಜಗಳ ಚುನಾವಣೆ ಯೂ  ಡಿರಸೆಂಬರ್ ಹಾಗೂ ಭಾನುವಾರ ರಂದು ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 3:00 ಗಂಟೆವರೆಗೆ ಮಸ್ಕಿ ತಾಲ್ಲೂಕು ಕೃಷಿಕ ಸಮಾಜದ ಚುನಾವಣೆಯನ್ನು ನಿಗಧಿಪಡಿಸಿರುತ್ತಾರೆ. ತಾಲ್ಲೂಕಿನ ಎಲ್ಲಾ ಸದಸ್ಯರ ಪಟ್ಟಿಯನ್ನು ರೈತ ಸಂಪರ್ಕ ಕೇಂದ್ರ ಮಸ್ಕಿಯಲ್ಲಿ ಹಾಗೂ ಮಸ್ಕಿ ತಾಲ್ಲೂಕಿನ ಆಯಾ ರೈತ ಸಂಪರ್ಕ ಕೇಂದ್ರಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿರುತ್ತದೆ. ತಾಲ್ಲೂಕು ಕೃಷಿಕ ಸಮಾಜದ ಚುನಾವಣೆ ನಾಮಪತ್ರಗಳನ್ನು ಅರ್ಜಿ ಮೂಲಕ ರೂ. 250/- ಗಳ ಠೇವಣಿ ಪಾವತಿಸಿದ ಮೂಲ ರಸೀದಿ, ಪಹಣಿ ಪ್ರತಿಕೆಯೊಂದಿಗೆ ಸಲ್ಲಿಸಬೇಕು. ಚುನಾವಣೆಯ ಪ್ರಕ್ರಿಯೆಯು ನವೆಂಬರ್ 30 ರಿಂದ ಡಿಸೆಂಬರ್ 6 ರವರೆಗೆ ಪ್ರಾರಂಭಗೊಂಡು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ ನಾಮ ಪತ್ರ ಸಲ್ಲಿಸುವುದು. ಡಿಸೆಂಬರ್ 07 ರಂದು ಬೆಳಿಗ್ಗೆ 11-00 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ ನಾಮ ಪತ್ರಗಳನ್ನು ಪರಿಶೀಲಿಸುವ

ಶಿವಪುತ್ರಪ್ಪ ಜಾಲಹಳ್ಳಿ ರವರಿಗೆ ಕರ್ನಾಟಕ"ರತ್ನಶ್ರೀ"ಪ್ರಶಸ್ತಿ.

ಇಮೇಜ್
  ಜಾಲಹಳ್ಳಿ:ಬೆಂಗಳೂರು ಸ್ನೇಹ ಯುವ ಸಾಂಸ್ಕೃತಿಕ ಸಂಘ (ರಿ)ಬೆಂಗಳೂರು ಇವರು ನೀಡುವ ವಾರ್ಷಿಕ ಪ್ರಶಸ್ತಿ ಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಸಾಧಕರಿಗೆ ನೀಡುವ ಕರ್ನಾಟಕ ರತ್ನ ಶ್ರೀ ಪ್ರಶಸ್ತಿ ಗೆ ಭಾಜನರಾಗಿದ್ದರು ಶ್ರೀಯುತರಿಗೆ ತಮ್ಮ ಜವಾಬ್ದಾರಿಯನ್ನು ಮತ್ತಷ್ಟು ಎಚ್ಚಿಸಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಬೆಂಗಳೂರಿನ ರಾಜಾಜಿನಗರದ ಯಕ್ಷಿತ್ ರಾಯಲ್ ಅಕಾಡೆಮಿ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಡೆದ ಬಾರಿಸು ಕನ್ನಡ ಡಿಂಡಿಮವ ಕಾರ್ಯಕ್ರಮದಲ್ಲಿ ಶ್ರೀ ಶಿವಪುತ್ರಪ್ಪ ಇವರಿಗೆ ಕರ್ನಾಟಕ ರತ್ನ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಶಿವಪುತ್ರಪ್ಪ ಇವರು.ಸಮೀಪದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸೋಮನಮರಡಿಯಲ್ಲಿ ಕಾರ್ಯ ನಿರ್ವಹಿಸುತ್ತ ಸರಕಾರಿ ಸೇವೆಯಲ್ಲಿ ಸುಧೀರ್ಘ 35 ವರ್ಷಗಳ ಕಾಲ ತಮ್ಮ ಜೀವನ ಪಯಣ ನಡೆಸಿ ಸಾರ್ವಜನಿಕ ಶಿಕ್ಷಣ ಇಲಾಖೆ ನೀಡಿರುವ ವಿವಿಧ ಜವಾಬ್ದಾರಿಗಳಾದ ಸಿ ಆರ್ ಪಿ,ತಾಲೂಕ ಪಂಚಾಯತನಲ್ಲಿ ಕಲಾ ಜಾತಾ ನಾಯಕರಾಗಿ, ವಯಸ್ಕ ಶಿಕ್ಷಣ ಕೇಂದ್ರದ ತಾಲೂಕ ನೋಡಲ್ ಅಧಿಕಾರಿಯಾಗಿ ಹೀಗೆ ಹತ್ತು ಹಲವು ಹುದ್ದೆಗಳನ್ನು  ಸಮರ್ಥವಾಗಿ ನಿಭಾಯಿಸಿದ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ ಹಿರಿಯ ಬಡ್ತಿ ಮುಖ್ಯೋಪಾಧ್ಯಾಯರಾಗಿ ಸ ಮಾ.ಹಿ ಪ್ರಾ ಶಾಲೆ ಸೋಮನಮರಡಿ ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಅವರ ಮುಂದಿನ ವೃತ್ತಿ ಜೀವನ ಸುಖಕರವಾಗಿರಲಿ ಮತ್ತು ಇನ್ನೂ ಅನೇಕ ಪ್ರಶ

ಪ್ರತಿಭಾ ದಿನಾಚರಣೆ "ಕಲರವ - 2024" : ಬದುಕಿನ ಉತ್ತಮ ಅಂಶಗಳು ಸ್ಫೂರ್ತಿಯಾಗಬೇಕು – ಪಟ್ ಪಟ್ ಪಟಾಕಿ ಶೃತಿ

ಇಮೇಜ್
  ಬೆಂಗಳೂರು, ನ, 22; ನಗರದ ಎ.ಪಿ.ಎಸ್. ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆಯ ಪ್ರಯುಕ್ತ "ಕಲರವ 2024" - ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.  ಪ್ರಾಂಶುಪಾಲರಾದ ಪ್ರೊ. ಬಿ. ಜಯಶ್ರೀ ವಿವಿಧ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಪ್ರತಿಭೆ ಯಾರಲ್ಲೂ ಮೇಲ್ಮುಖವಾಗಿ ಗೋಚರಿಸುವುದಿಲ್ಲ. ಅದು ಸದಾ ಅಂತರ್ಮುಖಿ. ಹಾಗಾಗಿ ಅವಕಾಶ ದೊರೆತಾಗ ಸದುಪಯೋಗಪಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿರಬೇಕು ಎಂದರು.  ರೇಡಿಯೋ ಮತ್ತು ಟಿ.ವಿ. ನಿರೂಪಕಿ ಪಟ್ ಪಟ್ ಪಟಾಕಿ ಶ್ರುತಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬಾಲ್ಯ ಹಾಗೂ ಕಾಲೇಜು ದಿನಗಳನ್ನು ಸದಾ ಸ್ಮರಿಸಿಕೊಳ್ಳಬೇಕು. ಬದುಕಿನ ಉತ್ತಮ ಅಂಶಗಳು ಮುಂದಿನ ಹಾದಿಗೆ ಸ್ಪೂರ್ತಿಯಾಗಬೇಕು ಎಂದರು.  ಎ.ಪಿ.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಸಿಎ ವಿಷ್ಣುಭರತ್ ಎ. ಎಸ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಇದೊಂದು ಸೂಕ್ತ ವೇದಿಕೆಯಾಗಿದೆ. ಎಲ್ಲಾ ವಿದ್ಯಾರ್ಥಿಗಳು ಪ್ರತಿಭಾ ದಿನಾಚರಣೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.  ಎ.ಪಿ.ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಸ್. ನಾಗರಾಜ್, ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ. ಎ. ಪ್ರಕಾಶ್, ಜಂಟಿ ಕಾರ್ಯದರ್ಶಿ ಪಿ. ಕೃಷ್ಣಸ್ವಾಮಿ ಮತ್ತು ಟ್ರಸ್ಟಿಗಳಾದ ಪ್ರೊ. ಎ. ರಾಮಪ್ರಸಾ

ಆಂಬುಲೆನ್ಸ್ ನ ಶಬ್ದದಿಂದ ರೋಗಿಗಳ ಯೋಗಕ್ಷೇಮದ ಮೇಲಾಗುವ ಪರಿಣಾಮಗಳು : ಹಾಗೂ ಪರಿಹಾರೋಪಾಯಗಳು

ಇಮೇಜ್
  ಬೆಂಗಳೂರು :ಆಂಬ್ಯುಲೆನ್ಸ್‌ಗಳು,ಮೂಲತಃ ತುರ್ತು ಪರಿಸ್ಥಿತಿಗಳಿಗಾನುಗುಣವಾಗಿ ವಿನ್ಯಾಸಗೊಳಿಸಲಾದ ವಾಹನಗಳಾಗಿವೆ, ಮತ್ತು ಅವುಗಳು ಸಾಮಾನ್ಯವಾಗಿ ತುರ್ತುಸ್ಥಿತಿಯನ್ನು ಸೂಚಿಸಲು ಮತ್ತು ವಾಹನ ದಟ್ಟಣೆಯ ಮೂಲಕ ಮಾರ್ಗವನ್ನು ತೆರವುಗೊಳಿಸಲು ಸೈರನ್‌ಗಳನ್ನು ಹೊಂದಿರುತ್ತವೆ. ಆಂಬ್ಯುಲೆನ್ಸ್ ಸೈರನ್‌ನ ಧ್ವನಿಯು ಸೂಕ್ಷ್ಮ ಕಾರ್ಯವನ್ನು ನಿರ್ವಹಿಸುತ್ತದೆ: ಇದು ಇತರ ಚಾಲಕರು ಮತ್ತು ಪಾದಚಾರಿಗಳನ್ನು ಎಚ್ಚರಿಸುತ್ತದೆ, ತುರ್ತು ವಾಹನಕ್ಕೆ ದಾರಿ ಮಾಡಿಕೊಡಲು ತಕ್ಷಣದ ಕ್ರಮದ ಅಗತ್ಯವನ್ನು ಸೂಚಿಸುತ್ತದೆ. ಆದಾಗ್ಯೂ, ದಟ್ಟಣೆಯನ್ನು ಸರಾಗಗೊಳಿಸುವ ಮತ್ತು ಆಸ್ಪತ್ರೆಗೆ ರೋಗಿಯನ್ನೂ ತ್ವರಿತವಾಗಿ ಸಾಗಿಸಲು ಸಕ್ರಿಯಗೊಳಿಸಲು ಈ ಧ್ವನಿಯು ಅತ್ಯಗತ್ಯವಾಗಿದ್ದರೂ, ಸಾಮಾನ್ಯವಾಗಿ ಈ ಶಬ್ದವನ್ನು ಯಾರು ಕಡೆಗಣಿಸುವುದಿಲ್ಲ. ಆಂಬ್ಯುಲೆನ್ಸ್‌ನಲ್ಲಿರುವ ರೋಗಿಯು ಸಾಮಾನ್ಯವಾಗಿ ಗಂಭೀರ ಸ್ಥಿತಿಯಲ್ಲಿದ್ದಾಗ, ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. ಅಂತಹ ರೋಗಿಗಳು ಶಾಂತ ಮತ್ತು ಸ್ಥಿರ ಮನಸ್ಥಿತಿಲ್ಲಿರುವುದು ಅವರ ಯೋಗಕ್ಷೇಮಕ್ಕೆ ಒಳ್ಳೆಯದು. ಆದಾಗ್ಯೂ, ಜೋರಾಗಿ, ಮೊಳಗುವ ಸೈರನ್ ಪ್ರಯಾಣದ ಉದ್ದಕ್ಕೂ ನಿರಂತರ ಅಡಚಣೆ ಉಂಟಾಗಿ , ಇದು ರೋಗಿಗೆ ಮತ್ತಷ್ಟು ಒತ್ತಡವನ್ನು ಮತ್ತು ಅಸ್ವಸ್ಥತೆಯನ್ನು ಉಂಟುಮಾಡಬಹುದು ಮತ್ತು ಪ್ರಾಯಶಃ ಅವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲೂಬಹುದು. ತುರ್ತುಸ್ಥಿತಿಯನ್ನು ತಿಳಿಸುವ ಅಗಾಧವಾದ ಧ್ವನಿಯನ್ನೂ, ರೋಗಿಯು ಸಂಪ

ಜ್ಞಾನಾಕ್ಷಿ ರಾಜರಾಜೇಶ್ವರಿ ಮ್ಯೂಸಿಕ್ ವಿಡಿಯೋ ಆಲ್ಬಮ್ ಶೀರ್ಷಿಕೆ ಅನಾವರಣ

ಇಮೇಜ್
  ಬೆಂಗಳೂರಿನ ಸುಪ್ರಸಿದ್ದ ಐತಿಹಾಸಿಕ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಸ್ಥಾನ, ಶ್ರೀ ಕೈಲಾಸ ಆಶ್ರಮದಲ್ಲಿ ಪರಮಪೂಜ್ಯ ಪರಮಾಚಾರ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿಯವರ 64 ನೇ ಜಯಂತಿ ಮಹೋತ್ಸವ ಸಲುವಾಗಿ ಹಲವಾರು ಸಾಂಸ್ಕೃತಿಕ ಆಚರಣೆಗಳು ಅಪಾರ ಭಕ್ತಸಮೂಹದೊಂದಿಗೆ ಅದ್ದೂರಿಯಾಗಿ ನಡೆದವು. ಈ ಸಂದರ್ಭದಲ್ಲಿ ದೇವಿ ಶ್ರೀ ರಾಜರಾಜೇಶ್ವರಿಯನ್ನು ಸ್ತುತಿಸುವ “ಜ್ಞಾನಾಕ್ಷಿ ರಾಜರಾಜೇಶ್ವರಿ” ಎಂಬ ಬಹುಭಾಷಾ ಮ್ಯೂಸಿಕಲ್ ವಿಡಿಯೋ ಆಲ್ಬಮ್ ಶೀರ್ಷಿಕೆಯನ್ನು ಜಗದ್ಗುರು ಶ್ರೀ ಶ್ರೀ ಜಯೇಂದ್ರಪುರಿ ಮಹಾಸ್ವಾಮೀಜಿಯವರು ಅನಾವರಣಗೊಳಿಸಿದರು.  ಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಸಂಸ್ಕೃತ, ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ಆರು ಭಾಷೆಗಳಲ್ಲಿ ಈ ಆಲ್ಬಮ್ ತಯಾರಾಗುತ್ತಿದ್ದು ಸಾಂಪ್ರದಾಯಿಕ ಸ್ತೋತ್ರಗಳು, ಶಾಸ್ತ್ರೀಯ ಕೃತಿಗಳು, ಹಾಡುಗಳು ಮತ್ತು ಭಜನೆಗಳನ್ನು ಒಳಗೊಂಡಿದೆ. ಈ ಆಲ್ಬಂ ಅನ್ನು ಖ್ಯಾತ ಸಂಗೀತ ಸಂಯೋಜಕ ಮಹೇಶ್ ಮಹದೇವ್ ಸಂಗೀತ ಸಂಯೋಜನೆ ಮಾಡಿ ನಿರ್ದೇಶನ ಮಾಡಿದ್ದು ಖ್ಯಾತ ಬಹುಭಾಷಾ ಹಿನ್ನೆಲೆ ಗಾಯಕಿ ಡಾ.ಪ್ರಿಯದರ್ಶಿನಿ ಮತ್ತು ಇತರರು ಹಾಡಿದ್ದಾರೆ. ಮಲಯಾಳಂ ಸಾಹಿತ್ಯವನ್ನು ಸಿಜು ತುರವೂರ್, ಸಂಸ್ಕೃತ, ಹಿಂದಿ ಮತ್ತು ಕನ್ನಡ ಸಾಹಿತ್ಯವನ್ನು ಮಹೇಶ್ ಮಹದೇವ್ ರಚಿಸಿದ್ದಾರೆ.  ಇನ್ನೊಂದು ವಿಶೇಷವೆಂದರೆ ಸಂಗೀತ ಸಂಯೋಜಕ ಮಹೇಶ್ ಮಹದೇವ್ ಅವರು ದೇವಿಯ ಮೇಲೆ ಸೃಷ್ಟಿಸಿರುವ ಹೊಸ ರಾಗವ

ಭತ್ತ,ತೊಗರಿ ಕೇಂದ್ರ ತೆರೆದು, ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಬೇಕು ಎಂದು ತಹಶೀಲ್ದಾರ್ ಅವರಲ್ಲಿ ಕರ್ನಾಟಕ ರೈತ ಸಂಘ ಮನವಿ

ಇಮೇಜ್
ಮಸ್ಕಿ : ಪಟ್ಟಣದ ಬಸವೇಶ್ವರ ನಗರದ ತಹಶೀಲ್ದಾರರ ಕಚೇರಿಯಲ್ಲಿ ಭತ್ತ, ತೊಗರಿ ಖರೀದಿ ಕೇಂದ್ರ ಶೀಘ್ರಗತಿಯಲ್ಲಿ ತೆರೆಯಬೇಕು ಹಾಗು ದಿ:14-11-2024 ಕ್ಕೆ ಸುರಿದ ಭಾರಿ ಮಳೆಗೆ ಭತ್ತದ ಬೆಳೆ ನೆಲಕಚ್ಚಿದ್ದು, ಭತ್ತ ಹಾನಿಯಾದ ರೈತರಿಗೆ ಬೆಳೆ ನಷ್ಟ ಪರಿಹಾರ ಒದಗಿಸಿ ಮತ್ತು ರೈತರ ಕೃಷಿ ಉತ್ಪನ್ನಗಳ ಮಾರಾಟಗಳಿಗೆ ಅನುಕೂಲ ಕಲ್ಪಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ತಹಶೀಲ್ದಾರ್ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ತುಂಗಭದ್ರ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ರಾಯಚೂರು ಮತ್ತು ಕೊಪ್ಪಳ ಬಳ್ಳಾರಿ ಜಿಲ್ಲೆಗಳಲ್ಲಿ ಕಳೆದ 20 ದಿನಗಳಿಂದ ಭತ್ತ ಕಟಾವು ಪ್ರಾರಂಭಗೊಂಡಿದೆ. ಸರ್ಕಾರ ಅತ್ಯಂತ ತೀವ್ರ ಗತಿಯಲ್ಲಿ ಭತ್ತ ಹಾಗು ತೊಗರಿ ಖರೀದಿ ಕೇಂದ್ರ ತೆರೆಯಬೇಕು. ಸರ್ಕಾರ ಪ್ರತಿ ವರ್ಷ ರೈತರ ಭತ್ತ, ತೊಗರಿ ಖಾಲಿಯಾದ ಮೇಲೆ ಖರೀದಿ ಕೇಂದ್ರ ತೆರೆದು ವರ್ತಕರಿಗೆ ಹಾಗು ದಲ್ಲಾಳಿಗಳಿಗೆ ಅನುಕೂಲ ಮಾಡಿದಂತೆ ಆಗುತ್ತದೆ. ತಾವುಗಳು ಈ ರೈತ ವಿರೋಧಿ ಧೋರಣೆಗಳಿಗೆ ಕಡಿವಾಣ ಹಾಕಬೇಕಾಗಿದೆ. ಸ್ಥಳೀಯ ಅಧಿಕಾರಿಗಳು ದಲ್ಲಾಳಿಗಳೊಂದಿಗೆ ಶಾಮೀಲಾಗಿ ರೈತರಿಗೆ ನಷ್ಟವುಂಟು ಮಾಡುತ್ತಾರೆ. ದಿನಾಂಕ: 04-11-2024 ರಂದು ರಾಯಚೂರಿನಲ್ಲಿ ನಡೆದ ಕೆ.ಡಿ.ಪಿ. ಸಭೆಯಲ್ಲಿ ಭತ್ತ ತೊಗರಿ ಖರೀದಿ ಕೇಂದ್ರತೆರೆಯುವ ಕುರಿತು ನಮ್ಮ ಜಿಲ್ಲೆಯ ಉಸ್ತುವಾರಿ ಮಂತ್ರಿ ಶರಣು ಪ್ರಕಾಶ ಪಾಟೀಲ್ ಮತ್ತು ಸಣ್ಣ ನೀರಾವರಿ ಸಚಿವರಾದ ಎನ್.ಎಸ್. ಬೋಸರಾಜ್ ಮಾತನಾಡದಿರುವುದು ಅತ್ಯಂತ ನ

ಹಡಗಲಿ ಗ್ರಾಮದ ಸಾರ್ವಜನಿಕ ಸ್ಮಶಾನ ಜಾಗದ ಹದ್ದುಬಸ್ತ್ ಗೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ

ಇಮೇಜ್
  ಮಸ್ಕಿ : ತಾಲೂಕಿನ ಹಡಗಲಿ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಜಾಗದ ಹದ್ದುಬಸ್ತು ಮಾಡಿ, ಮೃತರ ಗೌರವಯುತ ಅಂತ್ಯಕ್ರಿಯೆಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿ, ಗ್ರಾಮಸ್ಥರು ತಹಸೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ ಅವರ ಮೂಲಕ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಹಡಗಲಿ ಸೀಮಾದಲ್ಲಿ ಬರುವ ಸರ್ವೆ ನಂ.04*/2 ವಿಸ್ತೀರ್ಣ 27 ಗುಂಟೆ ಜಮೀನಿನಲ್ಲಿ ನೂರಾರು ವರ್ಷಗಳಿಂದ ಗ್ರಾಮದ ಎಲ್ಲ ಸಮುದಾಯದವರು ಶವ ಸಂಸ್ಕಾರ ಮಾಡುತ್ತ ಬಂದಿದ್ದಾರೆ. ಆದರೆ, ಸ್ಮಶಾನ ಜಾಗದ ಪಕ್ಕದಲ್ಲಿ ಜಮೀನು ಹೊಂದಿರುವ ಅಮರಮ್ಮ ಬಸಪ್ಪ ಎಂಬುವವರು ಇತ್ತೀಚಿಗೆ ನಾಲ್ಕೈದು ವರ್ಷಗಳಿಂದ ಸ್ಮಶಾನದ ಭೂಮಿಯನ್ನು ಅತಿಕ್ರಮಿಸಿ ಶವ ಸಂಸ್ಕಾರಕ್ಕೆ ಅವಕಾಶ ಕೊಡದೇ ವಿನಾಕಾರಣ ಅಡ್ಡಿಪಡಿಸುತ್ತಿದ್ದಾರೆ. ಈ ಕುರಿತು ತಹಸೀಲ್ದಾರ್ ಅವರಿಗೆ ನವೆಂಬರ್ 6, 2023ರಂದು ಮನವಿ ಸಲ್ಲಿಸಿ, ವಿವಾದವನ್ನು ಪರಿಹರಿಸಲು ಸಾರ್ವಜನಿಕ ಸ್ಮಶಾನ ಜಾಗದ ಹದ್ದುಬಸ್ತು ಮಾಡಿಕೊಡುವಂತೆ ಒತ್ತಾಯಿಸಲಾಗಿತ್ತು. ಆದರೆ, ಇಲ್ಲಿಯವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದ ಗ್ರಾಮದಲ್ಲಿ ಯಾರೇ ಮೃತಪಟ್ಟರೂ ಅಂತ್ಯಕ್ರಿಯೆ ನೆರವೇರಿಸಲು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ತಹಸೀಲ್ದಾರ್ ಅವರ ಗಮನ ಸೆಳೆದರು.   ಆದಷ್ಟು ಶೀಘ್ರ ಹದ್ದುಬಸ್ತು ಕಾರ್ಯ ಪೂರ್ಣಗೊಳಿಸಿ ಸಾರ್ವಜನಿಕ ಸ್ಮಶಾನ ಜಾಗದ ವಿವಾದವನ್ನು ಸುಖಾಂತ್ಯಗೊಳಿಸಬೇಕು, ಒಂದು ವೇಳೆ ನಿರ್ಲಕ್ಷ ಮುಂದುವರಿಸಿದ್ದೇ ಆದಲ್ಲಿ ತಹಸ

ಆಶ್ರಯ ನೀಡಿದ ಮರಗಳು ಇಲ್ಲದೆ ರಸ್ತೆಗಳು ಖಾಲಿ ಖಾಲಿ : ಗಿಡಗಳ ನೆಟ್ಟು ಪರಿಸರ ಉಳಿಸಿ ಪ್ರಕೃತಿ ಫೌಂಡೇಶನ್ ಶಿವಮೂರ್ತಿ ಗದ್ಗಿಮಠ ಮನವಿ

ಇಮೇಜ್
  ಮಸ್ಕಿ : ಪಟ್ಟಣದಲ್ಲಿ ಶತಮಾನಗಳ ಕಾಲ ನೆರಳನ್ನು ನೀಡಿ, ಸಾವಿರಾರು ಜನರಿಗೆ ಆಶ್ರಯ ನೀಡಿದ ಗಿಡಗಳನ್ನು ರಸ್ತೆ ಅಗಲೀಕರಣಕ್ಕಾಗಿ ಕಡಿದು ಪುನಃ ಮರಗಳನ್ನು ನೆಡದೇ ಮಸ್ಕಿ ಪಟ್ಟಣದ ಹಸಿರು ಗಿಡಗಳನ್ನು ಉಳಿಸಿ ಬೆಳೆಸುವ ಅಧಿಕಾರಿಗಳು ಮಾತ್ರ ಮೌನಕ್ಕೆ ಜಾರಿದ್ದಾರೆ. ಹಿಂದೆ  ಪಟ್ಟಣದ ಗಳೇ ಬಸ್‌ನಿಲ್ದಾಣದೊಳಗಿದ್ದ ಮರಗಳು ಬಹು ಕಾಲದಿಂದ ಸಾರ್ವಜನಿಕರಿಗೆ ಹಾಗೂ ಶಾಲೆಯ ಮಕ್ಕಳಿಗೆ,ಪ್ರಯಾಣಿಕರಿಗೆ ಆಶ್ರಯವಾಗಿದ್ದ ಮರಗಳೇ ಇಲ್ಲದೆ ರಸ್ತೆಗಳು ಅನಾಥವಾಗಿವೆ.ಹಿಂದೆ ತಾಲ್ಲೂಕಿನ ವಿವಿಧ ಸರ್ಕಾರಿ ಕಚೇರಿ, ಬ್ಯಾಂಕ್‌ಗಳಿಗೆ ಮರದ ಕೆಳಗೆ ನೆರಳಿನಲ್ಲಿ ವಿಶ್ರಮಿಸುತ್ತಿದ್ದರು. ಆದರೆ ಇಂದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಇಚ್ಚಾಸಕ್ತಿ ಕೊರತೆ ಯಿಂದ ತಾಲ್ಲೂಕಿನ ವಿವಿಧ ಪ್ರಮುಖ ರಸ್ತೆಯ ಎರಡೂ ಬದಿ ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಮರಗಳು ಇಲ್ಲವಾದ್ದರಿಂದ ರಸ್ತೆಗಳು ಬೋಳು ಬೋಳಾಗಿ ಕಾಣುತ್ತಿದೆ. ಸರ್ಕಾರ ಗಿಡ ನೆಡಿ, ಪರಿಸರ ಉಳಿಸಿ, ಪರಿಸರವಿದ್ದರೆ ನಾಡಿಗೆ ಮಳೆ, ಮಳೆ ಇದ್ದರೆ ಬೆಳೆ ಎಂದು ಪ್ರಚಾರ ಮಾಡುತ್ತದೆ. ಇನ್ನೊಂದೆಡೆ ಗಿಡ-ಮರಗಳನ್ನು ಪರೋಕ್ಷವಾಗಿ ಕಡಿಸುತ್ತಿದೆ ಎಂಬ ಆರೋಪವು ಕೇಳಿಬರುತ್ತದೆ. ಹೀಗಾಗಿ ರಸ್ತೆ ಬದಿಯಲ್ಲಿ ನೆರಳು ಮಾಯವಾಗುತ್ತಿದೆ. ಮರಗಳನ್ನು ಕಡಿದ ಪ್ರಮಾಣದಲ್ಲೇ ಪಟ್ಟಣದಲ್ಲಿ ಬೇರೆ ಸಸಿಗಳನ್ನು ನೆಡುವುದು ಅಗತ್ಯವಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಇನ್ನಾದೂರು ಸಂಬಂಧಿಸಿದ ಅಧಿಕಾರಿಗಳು ಹಾಗೂ ಪರಿಸರ

ಕೃಷ್ಣಾ ಬಿ ಸ್ಕೀಮ್ ತಕ್ಷಣ ಜಾರಿ ಮಾಡಿ - ಕರ್ನಾಟಕ ರೈತ ಜನ ಸಂಘ ಹಾಗೂ ಹಸಿರು ಸೇನೆ ಆಗ್ರಹ!

ಇಮೇಜ್
ವರದಿ - ಮಂಜುನಾಥ ಕೋಳೂರು ಕೊಪ್ಪಳ  ಕೊಪ್ಪಳ:ನ,19: -ಜಿಲ್ಲೆಯಲ್ಲಿ ಕೃಷ್ಣಾ ಬಿ ಸ್ಕೀಮ್ ತಕ್ಷಣ ಜಾರಿ ಮಾಡಿ ಕೊಪ್ಪಳ,ಕುಷ್ಟಗಿ, ಯಲಬುರ್ಗಾ, ಕನಕಗಿರಿ,ಎಲ್ಲಾ ತಾಲೂಕುಗಳು ಸಂಪೂರ್ಣ ನೀರಾವರಿ ಪ್ರದೇಶಗಲಾಗುತ್ತವೆ ಎಂದು ರಾಜ್ಯಾಧ್ಯಕ್ಷ ವೀರನಗೌಡ ಮಾಲಿಪಾಟೀಲ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಜಿಲ್ಲೆಯಲ್ಲಿ ತುಂಗಭದ್ರಾ ಯೋಜನೆ ವ್ಯಾಪ್ತಿಯಲ್ಲಿ ಸ್ವಲ್ಪ ಪ್ರಮಾಣದ ಭೂಮಿ ನೀರಾವರಿಯಾಗಿದೆ ಅಷ್ಟೇ ಅಲ್ಲದೆ 70% ಒಣ ಭೂಮಿ ಇದೆ , ಈ ಭೂಮಿಯು ಮಳೆಯ ಆಧಾರಿತ ಪ್ರದೇಶಗಳಾಗಿವೆ ಮಳೆಬಂದ್ರು   ಬೆಳೆ ಇಲ್ಲಾ , ಬೆಂಗಳೂರು, ಮಂಗಳೂರು,ಮುಂಬೈಗೆ ದುಡಿಯಲು ವಲಸೆ ಹೋಗಬೇಕಾಗುತ್ತದೆ. ಕೃಷ್ಣ ಬಿ ಸ್ಕೀಮ್ ಯೋಜನೆ ಹೋರಾಟ ಪ್ರಾರಂಭವಾಗಿ ಸುಮಾರು 10-12 ವರ್ಷಗಳಾಗಿವೆ ಇನ್ನು ಯೋಜನೆ ಪರಿಪೂರ್ಣ ಆಗಿಲ್ಲ , ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆ ಸಂದರ್ಭದಲ್ಲಿ ಈ ಯೋಜನೆ ಅನುಷ್ಠಾನಕ್ಕಾಗಿ ಬೇವೂರಿನಲ್ಲಿ ಒಂದು ಕಾರ್ಯಕ್ರಮ ಮಾಡಲಾಗಿತ್ತು. ಈ ಯೋಜನೆ ಸಂಪೂರ್ಣ ಅನುಷ್ಠಾನವಾದರೆ, ಸುಮಾರು 2.701% ಲಕ್ಷ ಎಕರೆ ಭೂಮಿ ನೀರಾವರಿ ಪ್ರದೇಶವಾಗಿ ಮಾರ್ಪಾಡಾಗುತ್ತದೆ . ರೈತರು, ಕಾರ್ಮಿಕರು , ಬಡವರು ಗುಳೇ ಹೋಗುವುದು ತಪ್ಪುತ್ತದೆ ಇದರಿಂದ ಜನ ಇಲ್ಲಿ ಬದುಕನ್ನು ಕಟ್ಟಿಕೊಳ್ಳಲು ಈ ಯೋಜನೆ ಆದಷ್ಟು ಬೇಗ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಜನ ಪ್ರತಿನಿಧಿಗಳಿಗೆ ಸಚಿವರಿಗೆ

537ನೇ ಕನಕದಾಸರ ಜಯಂತಿ ಆಚರಣೆ

ಇಮೇಜ್
  ಮಸ್ಕಿ : ತಾಲೂಕಿನ ಬುದ್ದಿನ್ನಿ ಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 537ನೇ ಕನಕದಾಸರ ಜಯಂತಿ ಅಂಗವಾಗಿ ಭಕ್ತ ಕನಕದಾಸರ ಫೋಟೋಗೆ ಮಾಲಾರ್ಪಣೆ ಮಾಡುವ ಮೂಲಕ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ನಾಗರೆಡ್ಡೆಪ್ಪ ದೇವರಮನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.  ನಂತರ ಶಾಲೆಯ ಅತಿಥಿ ಶಿಕ್ಷಕಿ ರಾಚಮ್ಮ ಸಾರಂಗಮಠ ಕನಕದಾಸರ ಜೀವನ ಚರಿತ್ರೆಯ ಕುರಿತು ಮಕ್ಕಳಿಗೆ ಉಪನ್ಯಾಸ ನೀಡಿದರು. ಹಿರಿಯ ಶಿಕ್ಷಕಿ ಪ್ರೇಮಾ ಸ್ವಾಗತಿಸಿ ನಿರೂಪಿಸಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ಹೊಳೆಬಸಪ್ಪ ಸಜ್ಜನ್,ಹಿರಿಯ ಶಿಕ್ಷಕರಾದ ಆದೇಶ ಸಾನಬಾಳ, ಅತಿಥಿ ಶಿಕ್ಷಕರಾದ ಸಿದ್ದಪ್ಪ ಹೂವಿನಭಾವಿ, ಹನುಮಂತ ಭಜಂತ್ರಿ ,ಆರೋಗ್ಯಮೇರಿ ಹೂವಿನಭಾವಿ, ಸವಿತಾ ಮಸ್ಕಿ,ಎಲ್ ಕೆ ಜಿ ಯುಕೆಜಿ ಸಹಾಯಕಿ ಹುಲಿಗೆಮ್ಮ ದೇವರಮನಿ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.

"ರೈತರಿಗೆ ವಕ್ಫ್ ನೀಡಿರುವ ನೋಟೀಸ್‌ಗಳನ್ನು ವಾಪಸ್ಸು ಪಡೆಯಲು ಸಿ.ಎಂ. ಸಿದ್ದರಾಮಯ್ಯ ಸೂಚಿನೆ"

ಇಮೇಜ್
  *ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಎಬಿಡಿಎಂಟ್ ಕಂಪನಿ ಇಂದ ಪರ್ಸೆಂಟ್ ಕಮಿಷನ್ ದಂದೆ.... ಮಾಜಿ ಶಾಸಕ ಭೀಮನಾಯ್ಕ ಆರೋಪ* "ಕೆ.ಎಂ.ಎಫ್.ನ ಘಟಕವೊಂದು 21 ರಂದು ದೆಹಲಿಯಲ್ಲಿ ಚಾಲನೆ" ಕೊಟ್ಟೂರು: ಪಟ್ಟಣದಲ್ಲಿ ಶ್ರೀ ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಸೋಮವಾರ ಆಗಮಿಸಿ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರು ಹಾಗೂ ಕೆಎಂಎಫ್ ಅಧ್ಯಕ್ಷರಾದ ಎಸ್ ಭೀಮನಾಯ್ಕ್ ಅವರು ಮಾತನಾಡಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಸರ್ಕಾರಕ್ಕೆ ಕೊಟ್ಟಂತಹ ಅನುದಾನಗಳನ್ನು ಈಗ ಶಾಸಕ ನೇಮಿರಾಜ್ ನಾಯ್ಕ ಅವರು ರಾಜ್ಯ ಸರ್ಕಾರಕ್ಕೆ ಗುತ್ತಿಗೆ ನೀಡಿ ಆ ಕಂಪನಿಯಿಂದ ಶೇ.60ರಷ್ಟು ಕಮಿಷನ್ ಕೇಳಿದರು. ಕ್ಷೇತ್ರದ ತುಂಬೆಲ್ಲ ಕಳಪೆ ಮಟ್ಟದ ಕಾಮಗಾರಿಗಳನ್ನು ನಾನು ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ ನಿರ್ದೇಶಕರಿಗೆ ಪತ್ರ ಬರೆದಿದ್ದೇನೆ ಅಂತಹ ಕಂಪನಿಗಳಿಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗುತ್ತೇನೆ. ಹಾಗೂ ನನ್ನ 10 ವರ್ಷಗಳ ಕಾಮಗಾರಿಗಳಿಗೆ ಅನುದಾನ ತಂದು ಕಾರ್ಯರೂಪಕ್ಕೆ ಬರುವಂತೆ ಶ್ರಮಪಟ್ಟಿದ್ದೇನೆ. ಕಮಿಷನ್ ದಂಧೆ ಹಾಗೂ ಈ ಕ್ಷೇತ್ರದಲ್ಲಿ ಕಳಪೆಯಾಗಿ ನಡೆಸುತ್ತಿರುವ ಅಧಿಕಾರಿಗಳು ಹಾಗೂ ಶಾಸಕರ ಆಪ್ತ ಸಹಾಯಕರು ಹಾಗೂ ಅವರೇ ಅವರೇ ಕ್ಷೇತ್ರದಲ್ಲಿ ಪ್ರತಿಯೊಂದು ಕಾಮಗಾರಿಗಳನ್ನು ನಡೆಸುತ್ತಿದ್ದಾರೆ.ಇವರ ಜೈಲಿಗೆ ಕಳಿಸಲು ಪುರಾವೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಗುಡಿಗಿದರು. ಸೊಂಡೂರು ಕ್ಷೇತ್ರ ಕಾಂಗ್ರೆ

ಹದಗೆಟ್ಟ ರಸ್ತೆ ದುರಸ್ತಿ ಮಾಡಿಸಿದ ಬಿ.ಮೌನೇಶ್

ಇಮೇಜ್
  ಮಸ್ಕಿ : ತಾಲ್ಲೂಕಿನ ಬಳಗಾನೂರ ಪಟ್ಟಣದ ಮಸ್ಕಿ ಮುಖ್ಯ ರಸ್ತೆ ಬಸವೇಶ್ವರ ಸಂಯುಕ್ತ ಪ್ರೌಢಶಾಲೆಯ ಹತ್ತಿರ ಒಂದು ಕಿಲೋಮೀಟರ್ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದುದ ರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು,ರೈತರು, ವಾಹನ ಸವಾರರು ಹದಗೆಟ್ಟ ರಸ್ತೆ ಕುರಿತು ಸ್ಥಳೀಯ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆಯೇ ಸುದ್ದಿ ತಿಳಿಯುತ್ತಲೇ ಸುಮ್ಮನಿರದೆ ಬಳಗಾನೂರ ಪಟ್ಟಣದ ರೈತ ಹಾಗೂ ದಲಿತ ಸಂರಕ್ಷ ಸಮಿತಿಯ ಕಲಬುರಗಿ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಬಿ. ಮೌನೇಶ ಬಳಗಾನೂರ ರವರು ಬಾರಿ ಪ್ರಮಾಣದ ಮರಳು ಹಾಗೂ ಮರಮ್ ಟಿಪ್ಪರ್ ಓಡಾಟದಿಂದ ಹದಗೆಟ್ಟ ರಸ್ತೆಯ ತಗ್ಗು ದಿಣ್ಣೆಗೆ ಮರಂ ಹಾಕಿಸಿ ಮಾನವೀಯತೆ ಮೆರೆದರು.ಅವರ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ಮಚ್ಚೆಗೆಗೆ ಪಾತ್ರರಾಗಿದ್ದಾರೆ. ಆದರೇ ಸಂಭಂದಪಟ್ಟ ಮಾತೃ ಇಲಾಖೆಗಳ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತನೆ ಸಾರ್ವಜನಿಕ ವಲಯದಲ್ಲಿ ತುಂಬಾ ಚರ್ಚೆಯಾಗುತ್ತಿದೆ.ರಾಜಧನ ಇಲ್ಲದೇ ಓಡಾಟ ಹಾಗೂ ಒಂದೇ ರಾಜಧನ ಇಟ್ಟುಕೊಂಡು ಸಂಜೆವರೆಗೂ ಮರಳನ್ನು ಸಾಗಾಣಿಕೆ ಮಾಡುತ್ತಿರುವ ಟಿಪ್ಪರ್ ಮೇಲೆ ಹಾಗೂ ಮಾಲೀಕರ ಮೇಲೆ ಸಂಭಂದಪಟ್ಟ ಅಧಿಕಾರಿಗಳು ಕ್ರಮ ಜರುಗಿಸುವರೇ ಕಾದು ನೋಡಬೇಕಿದೆ.

ಹಟ್ಟಿ ಚಿನ್ನದ ಗಣಿಯ ಯೇಸುವಿನ ಪವಿತ್ರ ಹೃದಯ ದೇವಾಲಯದಲ್ಲಿ ಸುವಾರ್ತೆ ಪ್ರಚಾರ ಭಾನುವಾರ ಆಚರಣೆ.

ಇಮೇಜ್
  ಹಟ್ಟಿ ಚಿನ್ನದ ಗಣಿ:ಯೇಸುವಿನ ಪವಿತ್ರ ಹೃದಯದ ದೇವಾಲಯ ಹಟ್ಟಿ ಚಿನ್ನದ ಗಣಿಯಲ್ಲಿ ಇಂದು ಮುಂಜಾನೆ ಚರ್ಚಿನ ಆವರಣದಲ್ಲಿ ಪ್ರತಿ ವರ್ಷ ಅಕ್ಟೋಬರ್ ಆಗು ನವೆಂಬರ್ ತಿಂಗಳಲ್ಲಿ ಆಚರಿಸುವ(ಮಿಷನ್ ಸಂಡೇ)ಸುವಾರ್ತ ಪ್ರಚಾರ ಭಾನುವಾರವನ್ನು ಹಟ್ಟಿ ಚಿನ್ನದ ಗಣಿಯ ಗಾಂಧಿ ಮೈದಾನ.ಜತ್ತಿ ಲೈನ್.ಜಿ ಆರ್.ಜೆ ಪಿಕಾಲೋನಿ. ಅಬ್ದುಲ್ಲ ಕಾಲೋನಿ. ರಾಮ್ ರಹೀಮ್ ಕಾಲೋನಿ.ಹಾಗೂ ಹಟ್ಟಿ ವಿಲೇಜ್.ನ ಯೇಸುವಿನ ಪವಿತ್ರ ಹೃದಯದ ದೇವಾಲಯದ ಕ್ರೈಸ್ತರು ಚರ್ಚಿನ ಆವರಣದಲ್ಲಿ ಅನೇಕ ಪೆಂಡಾಲ್ ಗಳನ್ನು ಹಾಕಿ ವಿಧವಿಧವಾದ ತಿಂಡಿ ತಿನಿಸುಗಳನ್ನು ಸಿದ್ಧಪಡಿಸಿರುತ್ತಾರೆ ಕ್ರೈಸ್ತರು ಹಾಗೂ ಸರ್ವಜನಿಕರು ಗುಂಪು ಗುಂಪಾಗಿ ಬಂದು ಆಟಗಳಲ್ಲಿ ಭಾಗವಹಿಸಿ ಸಂತೋಷ ವ್ಯಕ್ತಪಡಿಸುತ್ತಾರೆ. ಸುವಾರ್ತೆ ಪ್ರಚಾರ ಭಾನುವಾರವನ್ನು ಕುರಿತು.ವಂದನೆಯ ಸ್ವಾಮಿ ಡಾ|| ವಿಜಯಕುಮಾರ್ ಪಿ. ಮಾತನಾಡಿ1926ರಲ್ಲಿ ಅಂದಿನ ವಿಶ್ವ ಗುರುಗಳಾಗಿದ್ದ11ನೇ ಪಾಯಸ್ ರವರು ಮೊದಲ ಬಾರಿಗೆ ಪ್ರಾರಂಭಿಸಿದರು. ಇದು 98ನೇ ವರ್ಷದ ಸುವಾರ್ತೆ ಭಾನುವಾರ ಪ್ರಭು ಯೇಸುವಿನ ಪ್ರೀತಿ.ಕ್ಷಮೆ. ಸಮಾನತೆಯನ್ನು ಸಾರುವುದೇ ಇದರ ಪ್ರಮುಖ ಉದ್ದೇಶ. ಹಾಗೂ ವಿಶ್ವದಲ್ಲಿ ಇರುವ ಪ್ರತಿ ಮಾನವನು ಭ್ರಾತೃತ್ವವನ್ನು ಬೆಳಗಿಸುವುದು ಜೀವಿಸುವಂತಹ ಪ್ರಭು ಕ್ರೈಸ್ತರ ಕರುಣೆಯನ್ನು ಜಗತ್ತಿಗೆ ಸಾರುವುದೇ ಇದರ ಉದ್ದೇಶ.ಈ ಸುವಾರ್ತೆ ಜಾರ ಭಾನುವಾರವನ್ನು ಪ್ರತಿವರ್ಷ ಅಕ್ಟೋಬರ್ ಅಥವಾ ನವಂಬರ್ ತಿಂಗಳಲ್ಲಿ ಆಚರಿಸಲಾಗುವುದು. ಈ ವರ್ಷ ವಿಶ

ಮಸ್ಕಿ ಮಂಡಲ ಸಂಘಟನಾ ಪರ್ವ ಕಾರ್ಯಗಾರ ಭಾರತ್ ಮಾತೆಗೆ ಪುಷ್ಪಾರ್ಚನೆ

ಇಮೇಜ್
  ಮಸ್ಕಿ : ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಮಸ್ಕಿ ಮಂಡಲ ಸಂಘಟನಾ ಪರ್ವ ಕಾರ್ಯಗಾರ ಭಾರತ್ ಮಾತೆಗೆ ಪುಷ್ಪಾರ್ಚನೆ ಮಾಡುವ ಮುಖಾಂತರ ಸಂಘಟನಾ ಪರ್ವ ಕಾರ್ಯಗಾರ ಉದ್ಘಾಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ ರಾಜಗುರು ಅವರು ಉದ್ಘಾಟನೆ ಮಾಡಿದರು.  ಮಸ್ಕಿಮಂಡಲ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ ಸಂಘಟನಾ ಪರ್ವ ಕಾರ್ಯಗಾರ ಕುರಿತು ಪ್ರತಿ ಮೂರು ವರ್ಷಕ್ಕೊಮ್ಮೆ ವಿಶೇಷವಾಗಿ ಬಿಜೆಪಿ ಪಕ್ಷದಲ್ಲಿ ಸಂಘಟನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ ಹಾಗೂ ಪ್ರತಿ ಬೂತಿನಲ್ಲಿ ಬೂತಿನ ಅಧ್ಯಕ್ಷರು ಪಕ್ಷದ ಹಿರಿಯ ಮುಖಂಡರು ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿ ಸದಸ್ಯತ್ವ ಅಭಿಯಾನ ಮಾಡಿದ್ದೀರಿ ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ನಮ್ಮ ಭಾರತದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರು ಮಾಡಿರುವ ಕೆಲಸ ಕಾರ್ಯಗಳನ್ನು ಪ್ರತಿ ಬೂತಿನಲ್ಲಿ ಹೇಳಬೇಕು ಮುಂಬರುವ ತಾಲೂಕ ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಯ ಚುನಾವಣೆ ದೃಷ್ಟಿಯಿಂದ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಂಪರ್ಕ ಇಟ್ಟುಕೊಂಡು ಪಕ್ಷದ ಕೆಲಸವನ್ನು ಮಾಡಬೇಕೆಂದು ಮಾತನಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಯಲ್ಲೋ ಜಿ ರಾವ್ ಕೋರೇಕರ್ ಪಕ್ಷದ ಹಿರಿಯ ಮುಖಂಡರಾದ ಮಲ್ಲಪ್ಪಣ್ಣ ಅಂಕುಶದೊಡ್ಡಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ್ ಗುಡಿಹಾಳ, ಶಿವಕುಮಾರ್ ವಟಗಲ್, ಪುರಸಭಾ ಸದಸ್ಯರಾದ ಮೌನೇಶ ಮುರಾರ

*ಮುಕ್ಕುಂದ ಕಾಳಿಕಾದೇವಿ ದೇವಸ್ಥಾನದಲ್ಲಿ 1001ದೀಪೋತ್ಸವ ಕಾರ್ಯಕ್ರಮ*

ಇಮೇಜ್
*ಸಿಂಧನೂರು : ತಾಲೂಕಿನ ಮುಕ್ಕುಂದ ಗ್ರಾಮದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ 1001 ದೀಪೋತ್ಸವ ಕಾರ್ಯಕ್ರಮ ಹಾಗೂ ಗೌರಿ ಪೂಜೆ ಮಾಡಿ ಮಹಿಳೆಯರು ಆರತಿ ಬೆಳಗುವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.* ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಶ್ರೀ ಕಾಳಿಕಾದೇವಿಗೆ ವಿಶೇಷ ಪೂಜೆ,ಅಭಿಷೇಕ ಹಾಗೂ ಪುಷ್ಪಾಲಂಕಾರ ನಡೆಯಿತು.ಸಾಯಂಕಾಲ ಮಹಿಳೆಯರಿಂದ ಗೌರಿ ಪೂಜೆ ಹಾಗೂ ಆರತಿ ಬೆಳಗುವುದು ಹಾಗೂ 1001 ದೀಪಾಲಂಕಾರ ಗೊಳಿಸುವ ಮೂಲಕ ದೀಪೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ನಂತರ ಗ್ರಾಮದ ಸಕಲ ಸದ್ಭಕ್ತರಿಗೆ ಪ್ರಸಾದ ವ್ಯವಸ್ಥೆ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜ ಸದಸ್ಯರು ಹಾಗೂ ದೇವಸ್ಥಾನದ ಅರ್ಚಕರಾದ ಬಸವರಾಜ ಆಚಾರಿ,ಜೀವಣ್ಣ ನಾಗನಕಲ್ಲು,ವೀರೇಶ ಕಾರಟಗಿ,ಶರಣಬಸವ ಆಚಾರಿ,ಶರಣೇಗೌಡ ಸಿರಿಗೇರಿ,ಗೋಪಾಲರಡ್ಡಿ, ಮಲ್ಲೇಶಪ್ಪ ಸಾಹುಕಾರ, ಹೋಟೆಲ್ ಮೂಕಪ್ಪ ಸಾಹುಕಾರ,ಈರಣ್ಣ ಬಡಿಗೇರ ಹಾಗೂ ಮಹಿಳೆಯರು ಊರಿನ ಸಕಲ ಸದ್ಭಕ್ತರು ಭಾಗವಹಿಸಿದ್ದರು.

ಮನೆ ಮನೆಗೆ ಬಿಜೆಪಿ ಮತ ಯಾಚನೆ

ಇಮೇಜ್
  ಮಸ್ಕಿ : ಪಟ್ಟಣದ ಪುರಸಭೆ ವ್ಯಾಪ್ತಿಯ 3ನೇ ವಾರ್ಡಿನ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಭಾಗ್ಯಶ್ರೀ ಕೇಶವಮೂರ್ತಿ ಪರವಾಗಿ ಮನೆ ಮನೆ ಪ್ರಚಾರಕ್ಕೆ ಮಾಜಿ ಶಾಸಕರಾದ ಶ್ರೀ ಪ್ರತಾಪ್ ಗೌಡ ಪಾಟೀಲ್, ಅವರು ಮನೆ ಮನೆಗೆ ಮಾದರಿ ಪತ್ರವನ್ನು ನೀಡಿ ಚಾಲನೆ ನೀಡಿ ನೀಡಿ ಮಾತನಾಡಿದ ಅವರು ನಮ್ಮ ಬಿಜೆಪಿ ಅಭ್ಯರ್ಥಿ ಭಾಗ್ಯಶ್ರೀ ಕೇಶವಮೂರ್ತಿ ದಾಸರ್ ಅವರು ಕಳೆದ ಬಾರಿ ಪುರಸಭೆ ಚುನಾವಣೆಯಲ್ಲಿ ಕಡಿಮೆ ಮತಗಳಿಂದ ಸೋಲು ಕಂಡಿದ್ದರು ಈ ಬಾರಿ ವಾರ್ಡಿನ ನಿವಾಸಿಗಳು ಭಾಗ್ಯಶ್ರೀ ಅವರನ್ನು ಗೆಲ್ಲಿಸಿ ಕೊಡಬೇಕೆಂದು ಮತದಾರರಿಗೆ ಮನೆ ಮನೆಗೆ ಭೇಟಿ ನೀಡಿ ಮನವಿ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ ಮಸ್ಕಿ, ಪುರಸಭೆ ಅಧ್ಯಕ್ಷರಾದ ಮಲ್ಲಯ್ಯ ಅಂಬಾಡಿ, ಡಾ. ಬಿ. ಎಚ್. ದಿವಟರ,ರಾಜ ನಾಯಕ್, ಪ್ರಸನ್ನ ಪಾಟೀಲ್, ಯಲ್ಲೋ ಜಿ ರಾವ್ ಕೊರೇಕರ್, ಪುರಸಭೆ ಸದಸ್ಯರಾದ ಸುರೇಶ್ ಹರಸೂರ, ಚೇತನ್ ಪಾಟೀಲ್, ಮಲ್ಲಿಕಾರ್ಜುನ್ ಬ್ಯಾಳಿ, ಮಂಜುನಾಥ್ ನಂದ್ಯಾಳ, ಭರತ್ ಕುಮಾರ್, ರಮೇಶ್ ಗುಡಿಸಲಿ, ಮೌನೇಶ್ ನಾಯಕ್, ಮಸೂದ್ ಪಾಷ, ಅಜ್ಮೀರ್,ಹನುಮಂತಪ್ಪ ಮೋಚಿ, ಶಾಮಿದ್ ಸಾಬ್,  ಡಾ. ಮಲ್ಲಿಕಾರ್ಜುನ, ಮಲ್ಲಯ್ಯ ಡಿಶ್ ,ಆದಪ್ಪ ಮೇದಾರ್, ಸಂತೋಷ್ ಬಳೆಗಾರ, ಉಸ್ಮನ್ ಪಾಷ, ರಜಾಕ್, ಶ್ರೀನಿವಾಸ್, ಯಮನೂರು ಗೊನ್ವಾರ್, ಕಾಳಪ್ಪ ಪತ್ತಾರ್, ದೇವಪ್ಪ ಗೊನ್ವಾರ್,  ಪಕ್ಷದ ಮುಖಂಡರು, ಪಕ್ಷದ ಪದಾಧಿಕಾರಿಗಳು, ಮೂರನೇ ವಾರ್ಡಿನ ಕಾರ್ಯಕರ್ತರು

ಅರೋಗ್ಯ ರಕ್ಷಣೆಯಲ್ಲಿ ಖಾಸಗಿ ವಲಯದ ಪಾತ್ರ ಅನನ್ಯ - ಸಚಿವ ದಿನೇಶ್ ಗುಂಡೂರಾವ್

ಇಮೇಜ್
  ಬೆಂಗಳೂರು, ನ, 16; ಅರೋಗ್ಯ ರಕ್ಷಣೆಯಲ್ಲಿ ಖಾಸಗಿ ವಲಯದ ಪಾತ್ರ ಅನನ್ಯವಾಗಿದ್ದು, ಸರ್ವರಿಗೂ ಆರೋಗ್ಯ ಒದಗಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಗರದ ಅರಮನೆಯಲ್ಲಿ ಪ್ರತಿಧೀ ಫೌಂಡೇಶನ್ ನಿಂದ “ಸ್ವಸ್ಥ ಕರ್ನಾಟಕ 2024” ಬೃಹತ್ ರಾಷ್ಟ್ರ ಮಟ್ಟದ ಉಚಿತ ಸಮಗ್ರ ಆರೋಗ್ಯ ಹಾಗೂ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು,  ಸಮಗ್ರ ಆರೋಗ್ಯ ಕ್ಷೇತ್ರವನ್ನು ಜನ ಸಾಮಾನ್ಯರಿಗೆ ಪರಿಚಯಿಸುವ ಜೊತೆಗೆ ಆರೋಗ್ಯ ವಲಯದವರಿಗಾಗಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಇಂತಹ ಆರೋ ಮೇಳಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು ಎಂದು ಹೇಳಿದರು. ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣೆ, ಉಚಿತ ಸಮಾಲೋಚನೆಗೆ ವ್ಯವಸ್ಥೆ ಮಾಡಿದ್ದು, ಇಸಿಜಿ, ಇಕೋ ಜೊತೆಗೆ ನುರಿತ ಹೃದಯ ತಜ್ಞರಿಂದ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ. ಉಚಿತ ಕಣ್ಣಿನ ಪರೀಕ್ಷೆ, ಶಸ್ತ್ರ ಚಿಕಿತ್ಸೆ ಮತ್ತು ಕನ್ನಡಕ ವಿತರಣೆ, ಇ.ಎನ್.ಟಿ ಪರೀಕ್ಷೆ ಮತ್ತು ಆಡಿಯೋಮೆಟ್ರಿ ಮತ್ತು ತಜ್ಞ ವೈದ್ಯರಿಂದ ತಪಾಸಣೆಗೆ ವ್ಯವಸ್ಥೆ ಮಾಡಲಾಗಿತ್ತು.  ಗರ್ಭ ಕಂಠದ ಕ್ಯಾನ್ಸರ್ ಪರೀಕ್ಷೆಗಳು, ಗುದ ದ್ವಾರದ ತೊಂದರೆಗಳ ಪರೀಕ್ಷೆ ಮತ್ತು ಸ್ಥನ ಕ್ಯಾನ್ಸರ್ ಪತ್ತೆ ಹಚ್ಚಲು ಮ್ಯಾಮೋಗ್ರಾಮ್, ಇತರೆ ಕ್ಯಾನ್ಸರ್ ಪತ್ತೆ ಮಾಡುವ ವಿವಿಧ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತದೆ. ಗುದದ್ವಾರದ ಸಮಸ್ಯೆಗಳಿಗೆ ಪರಿಹಾರ, ಚರ್ಮ ರೋಗ

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಕಾರ್ಯಕ್ರಮ

ಇಮೇಜ್
  ಬೆಂಗಳೂರು: ವಿಜಯನಗರ ಹಿರಿಯ ನಾಗರೀಕ ವೇದಿಕೆಯಿಂದ ವಿಜಯನಗರ ಬಿಬಿಎಂಪಿ,ಕಚೇರಿಯಲ್ಲಿಂದು 14 ನವೆಂಬರ್ 2024 ರಂದು ನಡೆದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷರಾದ ಡಾ. ಹುಲಿಕಲ್ ನಟರಾಜ್ ಅವರಿಂದ ಪವಾಡಗಳ ಅನಾವರಣ ಕಾರ್ಯಕ್ರಮ ನಡೆಯಿತು ಗೋವಿಂದರಾಜ ನಗರ ಶಾಸಕರಾದ ಪ್ರಿಯಾಕೃಷ್ಣ , ಬಿಬಿಎಂಪಿ ಮಾಜಿ ಸದಸ್ಯರಾದ ಡಿ. ಉಮಾಶಂಕರ್, ಬಿಬಿಎಂಪಿ ಮಾಜಿ ಸದಸ್ಯರಾದ ಶಕುಂತಲಾ ದೊಡ್ಡಲಕ್ಕಪ್ಪ ವಿಜಯನಗರ ಹಿರಿಯ ನಾಗರೀಕ ವೇದಿಕೆಯ ಅಧ್ಯಕ್ಷರಾದ ದೇವರಾಜ್, ಉಪಾಧ್ಯಕ್ಷ ರವೀಂದ್ರ, ಕಾರ್ಯದರ್ಶಿ ಎಸ್.ವೇಣುಗೋಪಾಲ್, ಜಂಟಿ ಕಾರ್ಯದರ್ಶಿ ಸಿ. ರುದ್ರೇಶ್, ಖಜಾಂಚಿ ಕೆ.ಸಿದ್ದಪ್ಪ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

ಕಲಿಕೆ ಮೇಲೆ ಸಾಮಾಜಿಕ ಮಾಧ್ಯಮ, ತಂತಜ್ಞಾನದ ದುಷ್ಪರಿಣಾಮ : ಶಿಕ್ಷಣ ತಜ್ಞರಿಂದ ನಾನಾ ಆಯಾಮಗಳ ಕುರಿತು ಚರ್ಚೆ

ಇಮೇಜ್
  ಬೆಂಗಳೂರು; “ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮ ಮತ್ತು ತಂತ್ರಜ್ಞಾನದಿಂದ ಆಗುತ್ತಿರುವ ದುಷ್ಪರಿಣಾಮ”ದ ಬಗ್ಗೆ ವಿವಿಧ ವಲಯದ ಗಣ್ಯರು ವ್ಯಾಪಕವಾಗಿ ಬೆಳಕು ಚೆಲ್ಲಿದರು. ನಗರದ ರಿಟ್ಸ್-ಕಾರ್ಲ್ಟನ್ ಹೋಟೆಲ್ ನಲ್ಲಿ ಆಯೋಜಿಸಲಾದ ಕ್ಯೂಎಸ್ ಐ - ಗೆಜ್ "ಇನ್ಸ್‌ಟಿಟ್ಯೂಟ್ ಆಫ್ ಹ್ಯಾಪಿನೆಸ್ ಕನ್ಕ್ಲೇವ್ 2024" ನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಇಡೀ ದಿನ ನಡೆದ ವಿವಿಧ ಗೋಷ್ಠಿಗಳಲ್ಲಿ ತಜ್ಞರು ನಾನಾ ವಿಷಯಗಳನ್ನು ಅನಾವರಣಗೊಳಿಸಿದರು. “ವಿದ್ಯಾರ್ಥಿ ಮಾನಸಿಕ ಆರೋಗ್ಯಕ್ಕಾಗಿ ಸಾಮಾಜಿಕ ಮಾಧ್ಯಮದ ಅಪಾಯಗಳು ಮತ್ತು ಪ್ರತಿಕೂಲ ಪರಿಸ್ಥಿತಿಯನ್ನು ಸಮತೋಲನಗೊಳಿಸುವುದು” “ಸಾಮಾಜಿಕ ಭಾವನಾತ್ಮಕ ಕಲಿಕೆ – ಸಂತಸಕ್ಕೆ ಮಾರ್ಗ” “ಶಿಕ್ಷಕರ ಸಬಲೀಕರಣ: ತರಗತಿಗಳಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ” ಹಾಗೂ “ಸ್ಪರ್ಧಾತ್ಮಕ ಶೈಕ್ಷಣಿಕ ಪರಿಸರದಲ್ಲಿ ಯಶಸ್ಸನ್ನು ಮರು ವ್ಯಾಖ್ಯಾನಿಸುವ” ವಿಷಯಗಳ ಕುರಿತು ಶಿಕ್ಷಣ ತಜ್ಞರು ಬೆಳಕು ಚೆಲ್ಲಿಸಿದರು. ಶಿಕ್ಷಣ ತಜ್ಞ ಮತ್ತು ಸಿಬಿಎಸ್ಸಿ ಮಾಜಿ ನಿರ್ದೇಶಕ ಡಾ. ಜಿ. ಬಾಲಕೃಷ್ಣ ಮಾತನಾಡಿ, ಸಾಮಾಜಿಕ ಮಾಧ್ಯಮ ಮತ್ತು ತಂತ್ರಜ್ಞಾನ ಶಿಕ್ಷಣದ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿದ್ದು, ಸೂಕ್ತ ಮಾರ್ಗದರ್ಶನವಿಲ್ಲದಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗುತ್ತದೆ. ವಾಟ್ಸ್ ಅಪ್ ವಿವಿಗಳು ವಿದ್ಯಾರ್ಥಿಗಳನ್ನು ಗೊಂದಲಕ್ಕೆ

ಸರಕಾರಿ ಶಾಲೆಯಲ್ಲಿ ಅದ್ಧೂರಿ ಮಕ್ಕಳ ದಿನಾಚರಣೆ ಕಾರ್ಯಕ್ರಮ

ಇಮೇಜ್
  ಮಸ್ಕಿ : ಪಟ್ಟಣದ ಧನಗರವಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಅದ್ಧೂರಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರಾದ ಶ್ರಿಕಾಂತಮ್ಮ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದ ಮುಖ್ಯ ಘಟ್ಟ ಉದ್ಘಾಟನೆ ಉದ್ಘಾಟಕರಾಗಿ ಆಗಮಿಸಿದ್ದ ತಹಶೀಲ್ದಾರ್ ಡಾ.ಮಲ್ಲಪ್ಪ.ಕೆ.ಯರಗೋಳ ರವರು ವೇದಿಕೆಯು ಗಣ್ಯರೊಂದಿಗೆ ಸಸಿಯ ಕುಂಡಲಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ನಂತರ  ಪವಿತ್ರಾ ಶಿಕ್ಷಕಿ ಇವರಿಂದ ಪ್ರಾರ್ಥನಾ ಗೀತೆ ಹಾಡುವ ಮೂಲಕ ಕಾರ್ಯಕ್ರಮ ಪ್ರಾರಂಭ ತದ ನಂತರ ಶಾಲಾ ಮಕ್ಕಳಿಂದ ಮಕ್ಕಳ ದಿನಾಚರಣೆಯ ಗೀತೆ ಹಾಡಲಾಯಿತು. ಮಮತಾ ತಂಡದವರಿಂದ ತಮ್ಮ ಶಕ್ತಿ ಮೀರಿ ಮಧುರ ಕಂಠದಿಂದ ದೇಶಭಕ್ತಿ ಗೀತೆ ಹಾಡಿದರು. ಮಕ್ಕಳ ದಿನಾಚರಣೆ ಪ್ರಯುಕ್ತ ಶಿಕ್ಷಣದ ಮಹತ್ವದ ಕುರಿತು ಶಾಲಾ ಅವಧಿಯಲ್ಲಿ ಶಿಕ್ಷಕರು ಹೇಳಿದ ಪಾಠವನ್ನು ಅಂದೇ ಮುಗಿಸಿ ಅವರು ಕೊಟ್ಟ ಮನೆ ಕೆಲಸವನ್ನು ಅಂದೇ ಮಾಡಿ ಮುಗಿಸಿ ಬೆಳಗ್ಗೆ ಅವರಿಗೆ ಒಪ್ಪಿಸುವ ಮೂಲಕ ಸೈ ಎನಿಸಿಕೊಂಡು ಮುಂದೆ ಒಬ್ಬ ಒಳ್ಳೆ ನಾಗರೀಕ ವ್ಯಕ್ತಿ ಅಗಿಯೋ ಅಥವಾ ಒಬ್ಬ ಅಧಿಕಾರಿಯೋ ಆದರೆ ನಿಮ್ಮ ಮನೆಯರಿಗಿಂತ ಮೊದಲು ಶಿಕ್ಷಕರು ಸಂತೋಷಪಡುತ್ತಾರೆ.ಆದ್ದರಿಂದ ಎಲ್ಲಾ ಮಕ್ಕಳು ಶಿಕ್ಷಕರು ಹೇಳಿದ ಎಲ್ಲವನ್ನೂ ಚಾಚೂ ತಪ್ಪದೇ ಮಾಡುವ ಮೂಲಕ ಒಳ್ಳೆಯ ವಿದ್ಯಾರ್ಥಿಯಾಗಿ ಜೀವಿಸಿ ಜೀವನದಲ್ಲಿ ಸಾಧಿಸಿ ಎಂದರು ಹಾಗಾಯೇ ಇಲ್ಲಿ ವೇದಿಕೆಯ ಮೇಲೆ ಕುಳಿತ ಶ

ಕರ್ನಾಟಕಕ್ಕೆ ಕಾಲಿಟ್ಟ ಎಬಿಡಿ ಐಕಾನಿಕ್ ವೈಟ್ ವಿಸ್ಕಿ ಪ್ರೀಮಿಯಂ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವ ಮೂಲಕ ಪೋರ್ಟ್ಫೋಲಿಯೋ ವಿಸ್ತರಣೆ ಮುಂದುವರಿಕೆ

ಇಮೇಜ್
  ಬೆಂಗಳೂರು, ಕರ್ನಾಟಕ, 15 ನವೆಂಬರ್ 2024: ಭಾರತದ 3ನೇ ಅತಿದೊಡ್ಡ ಸ್ಪಿರಿಟ್ಸ್ ಕಂಪನಿ ಅಲೈಡ್ ಬ್ಲೆಂಡರ್ಸ್ ಆಂಡ್ ಡಿಸ್ಟಿಲ್ಲರ್ಸ್ ಲಿಮಿಟೆಡ್ (ಎಬಿಡಿಎಲ್) ತನ್ನ ಐಕಾನಿಕ್ ವೈಟ್ ವಿಸ್ಕಿ ಅನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವ ಘೋಷಣೆ ಮಾಡಿದೆ. ಐಕಾನಿಕ್ ವೈಟ್ ಅನ್ನು ವಿಶ್ವದ ಅತಿವೇಗವಾಗಿ ಬೆಳೆಯುತ್ತಿರುವ ಸ್ಪಿರಿಟ್ಸ್ ಬ್ರ್ಯಾಂಡ್ ಎಂದು ಪರಿಗಣಿಸಲಾಗಿದೆ. ಇದೇ ವೇಳೆ, ಇಡೀ ದೇಶದ ವಿವಿಧ ಭಾಗದಲ್ಲಿರುವ ವಿಸ್ಕಿ ಪ್ರಿಯರ ಪ್ರೀತಿಯನ್ನೂ ಇದು ಗಳಿಸುತ್ತಿದೆ. ಕರ್ನಾಟಕದ P&A ಸ್ಪಿರಿಟ್ ಮಾರ್ಕೆಟ್ನಲ್ಲಿ ಗಮನಾರ್ಹ ಪಾಲನ್ನು ಪಡೆದುಕೊಳ್ಳಲು ಐಕಾನಿಕ್ ವೈಟ್ ವಿಸ್ಕಿ ಸೂಕ್ತ ಅವಕಾಶವನ್ನು ಹೊಂದಿದ್ದು, ಗ್ರಾಹಕರಿಗೆ ವಿಸ್ಕಿ ಕುಡಿಯುವ ಅನುಭವವನ್ನೂ ಇದು ಉದ್ದೀಪಿಸುತ್ತಿದೆ. ವಿಸ್ಕಿ ಅನುಭವದಲ್ಲಿ ಸೊಫಿಸ್ಟಿಕೇಶನ್ ಮತ್ತು ರಿಫೈನ್ಮೆಂಟ್ ಅನ್ನು ಬಯಸುವವರಿಗೆಂದು ಐಕಾನಿಕ್ ವಿಸ್ಕಿ ಅನ್ನು ರೂಪಿಸಲಾಗಿದೆ. ಬೋರ್ಬನ್ ಓಕ್ ಕ್ಯಾಸ್ಕ್ಗಳಲ್ಲಿ ಹಳೆಯದಾಗಿಸಿದ, ಆಮದು ಮಾಡಿದ ಸ್ಕಾಚ್ ಮಾಲ್ಟ್ ಮತ್ತು ಭಾರತೀಯ ಧಾನ್ಯದ ಸ್ಪಿರಿಟ್ಸ್ನ ಮಿಶ್ರಣ ಇದಾಗಿದೆ. ಉನ್ನತ ಗುಣಮಟ್ಟ ಮತ್ತು ಉತ್ತಮ ಸ್ವಾದವನ್ನು ಒದಗಿಸುವ ರೀತಿಯಲ್ಲಿ ಈ ಮಿಶ್ರಣವನ್ನು ರೂಪಿಸಲಾಗಿದ್ದು, ಸ್ಫರ್ಧಾತ್ಮಕ P&A ವಿಭಾಗದಲ್ಲಿ ವಿಭಿನ್ನವಾಗಿ ನಿಲ್ಲುತ್ತದೆ. ಕರ್ನಾಟಕದಲ್ಲಿ ಸ್ಪಿರಿಟ್ ಉದ್ಯಮದಲ್ಲಿ 80% ಕ್ಕೂ ಹೆಚ್ಚನ್ನು ವಿಸ್ಕಿ ಹೊಂದಿದ್ದು, ಐಕಾನಿಕ್ ವೈಟ್ ಅನ್ನು ಪರಿಚಯ

ಮಕ್ಕಳಿಗಾಗಿ ಆಸ್ತಿ ಮಾಡಬೇಡಿ,ಮಕ್ಕಳನ್ನೆ ಆಸ್ತಿ ಮಾಡಿ:ಸಿದ್ಧಲಿಂಗಪ್ಪ

ಇಮೇಜ್
  ಮಸ್ಕಿ : ತಾಲ್ಲೂಕಿನ ಹಾಲಾಪೂರ ಗ್ರಾಮದ ದಿ ಬೆಸ್ಟ್ ಪಬ್ಲಿಕ್ ಶಾಲೆಯಲ್ಲಿ ಮಾಜಿ ಪ್ರಧಾನಿ ಮಂತ್ರಿ ಜವಹರಲಾಲ್ ನೆಹರು ಹುಟ್ಟು ಹಬ್ಬದ ಅಂಗವಾಗಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು. ಈ ವೇಳೆ, ಶಾಲೆಯ ಕಾರ್ಯದರ್ಶಿ ಸಿದ್ಧಲಿಂಗಪ್ಪ ರವರು ಮಾತನಾಡಿ ಇಂದಿನ ಮಕ್ಕಳೇ ಭವ್ಯ ಭಾರತ ಭವಿಷ್ಯದ ಪ್ರಜೆಗಳು, ನಿಮ್ಮ ಮೇಲೆ ಬಹಳಷ್ಟು ಜವಾಬ್ದಾರಿ ಇದ್ದು ಅದನ್ನು ಸರಿಯಾಗಿ ಪಾಲಿಸಬೇಕು,ಶಾಲೆಯಲ್ಲಿ ಶಿಕ್ಷಕರು ಹೇಳುವ ಆಟ ಪಾಠ ಭಕ್ತಿಭಾವದಿಂದ ಕಲಿತು ತಂದೆ ತಾಯಿ ಮತ್ತು ಸಮಾಜಕ್ಕೆ ಹೆಸರು ತರುವ ಕೆಲಸ ಮಾಡಬೇಕು,ತಂದೆತಾಯಿಗಳು ಕೂಡ ಮಕ್ಕಳ ಕಲಿಕೆಯಲ್ಲಿ ಜವಾಬ್ದಾರಿ ಇರಬೇಕು,ಕೇವಲ ಶಾಲೆಗೆ ಸೀಮಿತ ಮಾಡದೇ ಪಾಲಕರು ಮಕ್ಕಳ ಬಗ್ಗೆ ಜಾಗೃತಿ ಇರಲಿ,ಮಕ್ಕಳಿಗಾಗಿ ಆಸ್ತಿ ಮಾಡಬೇಡಿ,ಮಕ್ಕಳನ್ನೆ ಆಸ್ತಿ ಮಾಡಿ ಎನ್ನುವ ಸೂಕ್ತಿಯೊ‌ಂದಿಗೆ ಪರಿಪಾಲಿಸಬೇಕು ಎಂದರು. ಈ ವೇಳೆ, ಕೆ ಶೆಖರಪ್ಪ ಯದ್ದಲದಿನ್ನಿ, ಮುಖ್ಯ ಗುರುಗಳಾದ ರವಿಕುಮಾರ್ ತೊರಣದಿನ್ನಿ, ಶಿಕ್ಷಕರಾದ ಕುಮಾರ ಮಸ್ಕಿ,ದೇವೆಂದ್ರಕುಮಾರ,ಕೃಷ್ಣಮೂರ್ತಿ, ಕುಪ್ಪಣ್ಣ ಹಾಗೂ ಶಿಕ್ಷಕಿಯರು ಇದ್ದರು. ನಂತರ ಮಕ್ಕಳಿಗೆ ವಿವಿಧ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಿದರು.