ರೇಣುಕ ಸ್ವಾಮಿ ಕೊಲೆಮಾಡಿರುವುದು ಖಂಡನಾರ್ಹ

ಕೊಟ್ಟೂರು : ಬೇಡ ಜಂಗಮ ಸಮಾಜದ ಚಿತ್ರದುರ್ಗದ ರೇಣುಕಸ್ವಾಮಿಯನ್ನು ಕಿಡ್ನಾಪ್ ಮಾಡಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್‌ನಲ್ಲಿ ಚಿತ್ರ ಹಿಂಸೆ ಮಾಡಿ ಹತ್ಯೆ ಮಾಡಿರುವುದು ಖಂಡನಾರ್ಹ. ರೇಣುಕಾ ಸ್ವಾಮಿ ಇವರನ್ನು ಕೊಲೆಮಾಡಿದ ಚಿತ್ರ ನಟ ದರ್ಶನ್ ಮತ್ತು ಅವರ ತಂಡದವರನ್ನು  ತ್ವರಿತ ಗತಿಯಲ್ಲಿ ಕಠಿಣ ಶಿಕ್ಷೆ ನೀಡಬೇಕು ಎಂದು ಕೊಟ್ಟೂರು ತಾಲೂಕು ಬೇಡ ಜಂಗಮ ಮತ್ತು ರೈತ ಸಂಘಟನೆಗಳವರು ಬುಧುವಾರ ಆಗ್ರಹಿಸಿದರು.

ಕೊಟ್ಟೂರು ತಾಲ್ಲೂಕು ಬೇಡ ಜಂಗಮ ಮತ್ತು ರೈತ ಸಂಘಟನೆಗಳವರು ಸರ್ಕಾರವನ್ನು ಒತ್ತಾಯಿಸುವ ಮನವಿ ಪತ್ರವನ್ನು ತಾಲ್ಲೂಕು ಆಡಳಿತದ ಉಪ ತಹಶೀಲ್ದಾರ್‌ರವರಿಗೆ ಸಲ್ಲಿಸಿ ನಂತರ ಅವರು ಮಾತನಾಡಿದರು.

ರೇಣುಕ ಸ್ವಾಮಿಯವರು ಕುಟುಂಬಕ್ಕೆ ಆದಾರವಾಗಿದ್ದರು. ಇವರನ್ನು ಕಳೆದುಕೊಂಡು ಅವರ ಕುಟುಂಬ ಕಂಗಲಾಗಿದೆ ಅವರ ಮನೆಯ ಸದಸ್ಯರಿಗೆ ನ್ಯಾಯ ಒದಗಿಸಿಬೇಕೆಂದರು . ರೇಣುಕಸ್ವಾಮಿ ಹತ್ಯೆ ಮಾಡಿರುವ ಆರೋಪಿಗಳಿಗೆ ತ್ವರಿತ ಗತಿಯಲ್ಲಿ ಖಠಿಣ ಶಿಕ್ಷೆ ಸಿಗುವತ್ತೆ ಆಗಬೇಕೆಂದು ಅವರ ಒತ್ತಾಯಿಸಿದರು.

ಎನ್. ಭರಮಣ್ಣ ಮಾತನಾಡಿ ಚಿತ್ರದುರ್ಗದ ಮೃತ ರೇಣುಕಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಆತನ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಮತ್ತು ಪವಿತ್ರಗೌಡ  ದರ್ಶನ್ ಮತ್ತು ಗ್ಯಾಂಗ್ ಕಾನೂನು ಪ್ರಕಾರ ___ ಸರ್ಕಾರ ಪಾರದರ್ಶಕವಾಗಿ ಮೃತ ರೇಣುಕಸ್ವಾಮಿ ಕುಟುಂಬಕ್ಕೆ ಬೆಂಬಲಿಸಿ ನ್ಯಾಯ ಒದಗಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಟ್ಟೂರು ಇವರ ಮನವಿ ಪತ್ರದ ಮೂಲಕ ಒತ್ತಾಯಿಸಿದರು.

ಪಂಡಿತಾರಾದ್ಯ ವಕೀಲರು ಕೊಟ್ಟೂರು, ಅಡಿಕೆ ಮಂಜುನಾಥ ಬೇಡ ಜಂಗಮ ಸಮಾಜದ ತಾಲ್ಲೂಕು ಅಧ್ಯಕ್ಷ, ಕೊಟ್ರೇಶ್, ಬಿ.ಎಂ. ಮರಳಸಿದ್ದಯ್ಯ, ಜಿ.ಸಿದ್ದಯ್ಯ, ಅಟವಾಳಿಗೆ ಭೋಜ ರಾಜ, ಕೆ.ಎಂ.ಎಸ್ ಶಾಸ್ತ್ರಿ, ಆಟೋ ಶಿವಯ್ಯ, ಕೆ ಎಂ ಚಂದ್ರಶೇಖರ್,ರೈತ ಸಂಘಟನೆಯ ಜಂಬೂರು ಮರಳುಸಿದ್ದಪ್ಪ, ಕೆ.ಶಾಂತ ಕುಮಾರ್, ಹೊನ್ನೂರು ಸಾಬ್ ಮರೂರು ನಾಗರಾಜ, ಇನ್ನು ಅನೇಕರು ಮನವಿ ಪತ್ರ ನೀಡಿಕೆಯಲ್ಲಿ ಪಾಲ್ಗೊಂಡಿದ್ದರು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ