ಹೊಸಕೇರಪ್ಪ ಕೆ ಪೊಲೀಸ್ ಇನ್ಸ್ಪೆಕ್ಟರ್ ಹಟ್ಟಿ ಠಾಣೆ ವತಿಯಿಂದ ಮಾದಕ ವಸ್ತು ದುರುಪಯೋಗ ಮತ್ತು ಸಾಗಾಣಿಕೆ ವಿರೋಧಿ ದಿನಾಚರಣೆ.ಜಾಗೃತಿ ಕಾರ್ಯಕ್ರಮ.
ಹಟ್ಟಿ ಚಿನ್ನದ ಗಣಿ : ರಾಯಚೂರು ಜಿಲ್ಲಾ ಪೊಲೀಸ್.ಹಾಗೂ ಲಿಂಗಸ್ಗೂರು ಉಪ ವಿಭಾಗ ಹಟ್ಟಿ ಪೊಲೀಸ್ ಠಾಣೆ ವತಿಯಿಂದ ಅಂತರಾಷ್ಟ್ರೀಯ ಮಾದಕ ವಸ್ತು ದುರುಪಯೋಗ ಮತ್ತು ಸಾಗಾಣಿಕೆ ವಿರೋಧಿ ದಿನಾಚರಣೆ ದಿನವಾದ ಇಂದು ಹಟ್ಟಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹೊಸಕೇರಪ್ಪ ಕೆ ನೇತೃತ್ವದಲ್ಲಿ ಬೆಳಿಗ್ಗೆ ಜಾತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮವು ಹಟ್ಟಿ ಪಟ್ಟಣದ ಪಾಮನ ಕಲ್ಲೂರ್ ಕ್ರಾಸ್ ಮುಖ್ಯ ರಸ್ತೆಯ ಮೂಲಕ ನೂರಾರು ವಿದ್ಯಾರ್ಥಿಗಳ ಜೊತೆಗೂಡಿ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದೊಂದಿಗೆ ಮಾದಕ ವಸ್ತು ಮಾರಕ, ಹೆಂಡ ಸಾರಾಯಿ ಸಾವಾಸ.ಹೆಂಡರ ಮಕ್ಕಳು ಉಪವಾಸ,
ಬಿ ಡಿ.ಸಿಗರೇಟ್.ಗುಟ್ಕಾ. ಕ್ಯಾನ್ಸರ್ ಗೆ ಆಹ್ವಾನ, ಎಂದು ಘೋಷಣೆ ಕೂಗುತ್ತಾ ವಿದ್ಯಾರ್ಥಿಗಳ ಜೊತೆಗೂಡಿ.ಹಟ್ಟಿ ಚಿನ್ನದ ಗಣಿಯ ಶ್ರೀವಿನಾಯಕ ವಿದ್ಯಾಸಂಸ್ಥೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾಕ್ಟರ್ ಮಾವಿನಕಟ್ಟಿ ಎಚ್ ಜಿ ಎಂ, ಡಾಕ್ಟರ್ ಸಾಜಿದ ಎಚ್ ಜಿ ಎಂ, ಪೋಲಿಸ್ ಇನ್ಸ್ಪೆಕ್ಟರ್ ಹೊಸಕೆರಪ್ಪ ಕೆ, ಹಟ್ಟಿ ಪೊಲೀಸ್ ಠಾಣೆ
ಶ್ರೀ ವಿನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ನರಸಪ್ಪ ಯಾದವ್,ಶಂಶುದ್ದೀನ್ ವಕೀಲರು, ಶಿಕ್ಷಕಿಯರಾದ ಶ್ರೀಮತಿ ಭಾಗಿರಥಿ,ಶ್ರೀಮತಿ ಮಹಾದೇವಿ, ಉಪಸ್ಥಿತರಿದ್ದರು
ಶಿಕ್ಷಕರಾದ ಮಹಾಂತೇಶ್ ಅತಿಥಿಗಳಿಗೆ ಸ್ವಾಗತ ಮತ್ತು ಸನ್ಮಾನ ಮಾಡುವ ಮೂಲಕ ಕಾರ್ಯಕ್ರಮ ಚಾಲನೆ ನೀಡಲಾಗಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಹಟ್ಟಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹೊಸಕೇರಪ್ಪ ಕೆ.ಮಾತನಾಡಿ ನಮ್ಮ ದೇಶದಲ್ಲಿ ಯುವ ಪೀಳಿಗೆ.ಸುಭದ್ರವಾದ ಭಾರತ ದೇಶವನ್ನು ಕಟ್ಟಲು ಈ ದೇಶದ ಭವಿಷ್ಯದಲ್ಲಿ ವಿದ್ಯಾರ್ಥಿನಿಯರೇ ಬಹು ಮುಖ್ಯವಾದ ಪಾತ್ರ. ದೇಶದಲ್ಲಿ ಗಂಡು ಮಕ್ಕಳಷ್ಟೇ ಅಲ್ಲ ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಸಹ ದುರ್ಚಟಗಳಿಗೆ ದಾಸರಾಗಿ.ಬಿಡಿ. ಸಿಗರೇಟ್.ಮಧ್ಯಪಾನ. ಗಾಂಜಾ.ಆಫೀಮ್. ಸೇವಿಸುವುದಲ್ಲದೆ. ನಿಮ್ಮ ತಂದೆ ತಾಯಿ ನಿಮ್ಮ ಮೇಲೆ ಅತಿಯಾದ ನಂಬಿಕೆ ಇಟ್ಟುಕೊಂಡಿದ್ದಾರೆ ಹಗಲಿರುಳು ದುಡಿಯುತ್ತಾ ನಮ್ಮ ಮಕ್ಕಳು ಭವಿಷ್ಯ ರೂಪಿಸಬೇಕೆಂದು ಕನಸು ಕಾಣುತ್ತಾರೆ.ವಿದ್ಯಾರ್ಥಿ ವಿದ್ಯಾರ್ಥಿನಿಯರು ಎಸ್ ಎಸ್ ಎಲ್ ಸಿ ಮುಗಿದ ತಕ್ಷಣ ಏಳು ವರ್ಷ ತಮ್ಮ ಜೀವನವನ್ನು ವಿದ್ಯಾಭ್ಯಾಸದ ಕಡೆ ಗಮನ ಕೊಟ್ಟು ತಮ್ಮ ಜೀವನವನ್ನು ಕಾಪಾಡಿಕೊಂಡರೆ ಸಾಕು ಅವರು ಜೀವನದಲ್ಲಿ ಬಯಸಿದ್ದನ್ನು ಪಡೆಯಬಲ್ಲರು ಇದನ್ನೆಲ್ಲ ಬಿಟ್ಟು ದುರ್ಚಟಗಳಿಗೆ ಮಾದಕ ವಸ್ತುಗಳಿಗೆ ಮತ್ತು ಪ್ರೀತಿ ಪ್ರೇಮದ ಬಲೆಗೆ ಬಿದ್ದು.ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ. ತಂದೆ ತಾಯಿ ಗುರುವಿನ ಮಾತು ಕೇಳಿ ಎಂದು ಕಿವಿಮಾತು ಹೇಳುವ ಮೂಲಕ ಉತ್ತಮ ಭವಿಷ್ಯ ನಿಮ್ಮ ಕೈಯಲ್ಲಿದೆ ಉತ್ತಮ ನಾಗರಿಕರಾಗಿ ಬಾಳಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು
ಕಾರ್ಯಕ್ರಮವನ್ನು ಉದ್ದೇಶಿಸಿ ಡಾ!!ಮಾವಿನಕಟ್ಟಿ ಡಾ!!ಸಾಜಿದ ಹಾಗೂ ವಿನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ನರಸಪ್ಪ ಯಾದವ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ನಂತರ ಶಮ್ಶುದ್ದೀನ್ ವಕೀಲರು ಮಾತನಾಡಿ ನಮ್ಮ ಜೀವನದಲ್ಲಿ ಗುರಿ ಮುಟ್ಟಲು ಜ್ಞಾನದ ದಾಹ ಇರಬೇಕು ಜೀವನವನ್ನು ಹಾಳುಮಾಡಿಕೊಳ್ಳಲು ಮಾದಕ ವಸ್ತುಗಳಾದ ಗುಟ್ಕಾ ಮಧ್ಯಪಾನ ಬಿ ಡಿ ಸಿಗರೇಟ್ ಸೇದಬಾರದು ಎಂದು ಹೇಳಿದರು.
ಅಂತರಾಷ್ಟ್ರೀಯ ಮಾದಕ ವಸ್ತುಗಳು ದುರುಪಯೋಗ ಮತ್ತು ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮ ಶ್ರೀವಿನಾಯಕ ವಿದ್ಯಾ ಸಂಸ್ಥೆಯಲ್ಲಿ
ಆಯೋಜನೆ ಮಾಡಲಾಯಿತು ಇದರಲ್ಲಿ ಪಾಲ್ಗೊಂಡ ಶಿಕ್ಷಕರಿಗೂ ಮತ್ತು ವಿದ್ಯಾರ್ಥಿನಿಯರಿಗೆ ಹಟ್ಟಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹೊಸಕೇರಪ್ಪ ಕೆ ಇವರು ಉಪ್ಪಿಟ್ ಹಾಗೂ ಸಿರಾ ಉಪಹಾರದ ವ್ಯವಸ್ಥೆ ಮಾಡಿಸಿದ್ದರು.ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ತಾವೇ ಉಪಹಾರ ಬಡಿಸುವ ಮೂಲಕ ವಿದ್ಯಾರ್ಥಿ ವಿದ್ಯಾರ್ಥಿನಿಯರ ಪ್ರೀತಿಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಹಟ್ಟಿ ಪೊಲೀಸ್ ಸಿಬ್ಬಂದಿಯಾದ ವಿಜಯಕುಮಾರ್. ಹುಚುರೆಡ್ಡಿ.ಬಸವರಾಜ್ ನಾರಾಯಣ್.ಸೇರಿದಂತೆ ವಿನಾಯಕ ವಿದ್ಯಾ ಸಂಸ್ಥೆಯ ಎಲ್ಲಾ ಶಿಕ್ಷಕರು ಶಿಕ್ಷಕಿಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ