ಬೆಸ್ಟ್ ಪಬ್ಲಿಕ್ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

 

ಮಸ್ಕಿ : ತಾಲ್ಲೂಕಿನ ಹಾಲಾಪೂರದ ಬೆಸ್ಟ್ ಪಬ್ಲಿಕ್ ಶಾಲೆಯಲ್ಲಿ ವೈದೇಹಿ ಆಸ್ಪತ್ರೆ ಬೆಂಗಳೂರು, ದಿ ಬೆಸ್ಟ್ ಎಜ್ಯುಕೆಷನ್ ಟ್ರಸ್ಟ್ ಹಾಗೂ ಮಾರುತಿ ಆಪ್ಟಿಕಲ್ಸ್ ಮಸ್ಕಿ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರುಗಿತು.

ನಂತರ ಮಾತನಾಡಿದ ವೈದೇಹಿ ಆಸ್ಪತ್ರೆ ಬೆಂಗಳೂರು ನ ವೈದ್ಯರಾದ ಮಲ್ಲಿಕಾರ್ಜುನ ಹಚ್ಚೊಳ್ಳಿ ಯವರು ಈ ಒಂದು ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಕಣ್ಣು, ನರರೋಗ, ಹೃದಯ ಸಂಬಂಧಿ ಖಾಯಿಲೆ, ಎಲುಬು ಕಿಲುಗಳ ಸಮಸ್ಯೆ, ಕಿಡ್ನಿಯಲ್ಲಿ ಕಲ್ಲು ಇನ್ನೂ ಮುಂತಾದ ಖಾಯಿಲೆ ಸಂಬಂಧಿಸಿದ ರೋಗಗಳ ಬಗ್ಗೆ ತಪಾಸಣೆ ಮಾಡಿ, ಹೆಚ್ಚಿನ ತೊಂದರೆ ಕಂಡುಬಂದರೆ ಬೆಂಗಳೂರು ನಲ್ಲಿ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುವುದು ಎಂದು ಹೇಳಿದರು, ನಂತರ ಶಿಬಿರದಲ್ಲಿ ನೂರಕ್ಕೂ ಅಧಿಕ ರೋಗಿಗಳು ತಪಾಸಣೆಗೆ ಒಳಗಾದರು.

ಈ ಸಂದರ್ಭದಲ್ಲಿ ಬೆಂಗಳೂರಿನ ವೈದೇಹಿ ಆಸ್ಪತ್ರೆ ವೈದರು,ಬಳ್ಳಾರಿ ಕಣ್ಣಿನ ವೈದ್ಯರಾದ ಡಾ.ವಿರೇಶ, ಬೆಸ್ಟ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಬಿ ಗದ್ದೆಪ್ಪ, ಆಡಳಿತಾದಿಕಾರಿ ಕೆ ಶೇಖರಪ್ಪ, ಕಾರ್ಯದರ್ಶಿ ಸಿದ್ಧಲಿಂಗಪ್ಪ,ಮುಖ್ಯಗುರು ರವಿಕುಮಾರ ತೋರಣದಿನ್ನಿ, ಕೃಷ್ಣಕುಮಾರ, ಕುಮಾರ ಮಸ್ಕಿ, ದೇವೆಂದ್ರಕುಮಾರ ಇನ್ನಿತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ