ಯಲಗಟ್ಟಾ ಪ್ರೌಢಶಾಲಾ ಮುಖ್ಯಗುರು ನಾಗನಗೌಡ ಅಮಾನತ್ತು ಗೆ ಆಗ್ರಹ.

ಲಿಂಗಸ್ಗೂರು : ರೋಡಲಬಂಡ(ತಾವಗ) ಗ್ರಾಮ ಪಂಚಾಯಿತಿಯ ಯಲಾಗಟ್ಟಾ ಗ್ರಾಮದ  ಸರ್ಕಾರಿ ಪ್ರೌಢಶಾಲೆಯ  ಮುಖ್ಯ ಗುರುಗಳಾದ ನಾಗನಗೌಡ ಇವರು ಶಾಲೆಗೆ ನಿರಂತರ ಗೈರಾಗುತ್ತಿರುವ ನಾಗನಗೌಡ ಇವರನ್ನು ಸೇವೆಯಿಂದ ಅಮಾಮಾತಿಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಲಿಂಗಸ್ಗೂರು ತಾಲೂಕು ಸಮಿತಿ ನೇತೃತ್ವದಲ್ಲಿ  ಇಂದು ಶಾಲೆಯ ಮುಂದೆ ಅನಿರ್ಧಿಷ್ಟವಧಿ ಧರಣಿ ನಡೆಸಲಾಯಿತು.

ಧರಣಿ ಸ್ಥಳಕ್ಕೆ ಬಿಇಓ ಬೇಟೆ ನೀಡಿದರು.ನಾವು ಮನವಿ ಪತ್ರ  ನೀಡುವುದಿಲ್ಲ.ಬದಲಾಗಿ ಡಿಡಿಪಿಐ ಸ್ಥಳಕ್ಕೆ ಬರಲು ಪಟ್ಟು ಹಿಡಿಯಲಾಯಿತು. ಅಲ್ಲಿಯವರೆಗೆ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದರು.

ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಧರಣಿ ಕುರಿತು ಮಾತನಾಡಿ ಮುಖ್ಯಗುರುಗಳಾದ ನಾಗನಗೌಡ ಅವರು 2 ವರ್ಷಗಳಿಂದ  ಶಾಲೆಗೆ ನಿರಂತರವಾಗಿ ಅನಧಿಕೃತವಾಗಿ ಗೈರಾಗುತ್ತಿದ್ದು,ಶಾಲೆಯ ಮಕ್ಕಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಈ ಬಗ್ಗೆ ಅನೇಕ ಬಾರಿ ಎಸ್ಎಫ್ಐ,ಹಾಗೂ ಎಸ್ ಡಿಎಂಸಿ ಮತ್ತು ಅನೇಕ ಸಂಘಟನಗಳು ದೂರು ನೀಡಿದರೂ ಇಲಾಖೆ ರಾಜಕೀಯ ಒತ್ತಡಕ್ಕೆ ಮಣಿದು ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2 ವರ್ಷಗಳಿಂದಲೂ ಅವರು ಯಲಗಟ್ಟಾ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಮುಖ್ಯ ಗುರುಗಳಾಗಿ ಬಂದ ಮೇಲೆ ನಿರಂತರ ಗೈರಾಗಿದ್ದಾರೆ.ಕೇವಲ ಧ್ವಜಾರೋಹಣ ಹಾಗೂ ಕೆಲವೊಂದು ಜಯಂತಿಗಳ ಆಚರಿಸಲು ಮಾತ್ರ ಹಾಜರಿರುತ್ತಾರೆ. ಕೆಲ ಹೊತ್ತಿನಲ್ಲೇ ತರಾ ತುರಿಯಲ್ಲಿ ಜಾಗ ಖಾಲಿ ಮಾಡುತ್ತಾರೆ.ಇದರಿಂದ ಈ ಬಾರಿಯ ಎಸ್ ಎಸ್ ಎಲ್ ಸಿ ಫಲಿತಾಂಶ ದಲ್ಲಿ  68 ವಿದ್ಯಾರ್ಥಿಗಳಲ್ಲಿ 33 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ.ಇದರಿಂದ ಗ್ರಾಮದ ಶಾಲೆ ಅಳಿವಿನ ಅಂಚಿಗೆ ಹೋಗುತ್ತಿದೆ ಎಂದರು.

ಎಸ್ಎಫ್ಐ ತಾಲೂಕು ಕಾರ್ಯದರ್ಶಿ ಪವನ್ ಕಮದಾಳ ಮಾತನಾಡಿ ಈ ಹಿಂದೆ ಬಿಇಓ ಅವ್ರಿಗೆ ದೂರು ನೀಡಿದಾಗ ಆತನಿಗೆ ನಾವು ಏನು ಮಾಡೋಕೆ ಆಗೋಲ್ಲ. ಆತ ರಾಜಕೀಯ ಒತ್ತಡ ತರುತ್ತಾನೆ.ಆತನ ಸಮಸ್ಯೆ ಬಿಟ್ಟು ಬೇರೆ ಏನು ಬೇಕಾದ್ರೂ ಹೇಳಿ ಎಂದು ಉಡಾಫೆ ಉತ್ತರ ನೀಡಿದ್ದಾರೆ.ಇಂತಹ ಬೇಜವಾಬ್ದಾರಿ ಅಧಿಕಾರಿ ಯಿಂದ ನಮ್ಮ ತಾಲೂಕಿನಲ್ಲಿ ಶಿಕ್ಷಣ ವ್ಯವಸ್ಥೆ ಹದಗೆಟ್ಟು ಹೋಗಿದೆ.ಆದ್ದರಿಂದ ಈ ಕೂಡಲೇ 

ಮುಖ್ಯಗುರು ನಾಗನಗೌಡ ರನ್ನು ಸೇವೆಯಿಂದ ಅಮಾನತು ಮಾಡಬೇಕು.  ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಅಗತ್ಯ ಖಾಯಂ ಶಿಕ್ಷಕರನ್ನು ನೇಮಕ ಮಾಡಬೇಕು.ಶಾಲೆಗೆ ಬೇಕಾದ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಲಿಂಗಸ್ಗೂರು ತಾಲೂಕು ಸಮಿತಿ ಒತ್ತಾಯಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ತಾಲ್ಲೂಕು ಕಾರ್ಯದರ್ಶಿ ಪವನ್ ಕಮದಾಳ, ತಾಲೂಕು ಮುಖಂಡರಾದ ವಿನಯ್ ಕುಮಾರ,ಮಹಾಲಿಂಗ, ಬಸವರಾಜ,ಒಡಕೇಶ್, ಶ್ರೀನಿವಾಸ್,ಕರಿಯಪ್ಪ ವಾಡಿಗೇರಿ,ವಿನೋದ್ ರಾಜ್,ಕೆಪಿ ಆರ್ ಎಸ್ ತಾಲ್ಲೂಕು ಮುಖಂಡ ನಿಂಗಪ್ಪ ಎಂ., ವಿವಿಧ ಸಂಘಟನೆಗಳ ಮುಖಂಡರಾದ ಅಣ್ಣಯ್ಯ, ಶಿವಶಂಕರ, ರಾಜು ನಾಯಕ, ಅಮರೇಶ, ಗ್ರಾಮಸ್ಥರಾದ ವೆಂಕಣ್ಣ ಕೋಲ್ಕ್ ರ್,ಶಿವು ಪಿ ಜಿ. ಪ್ರೌಢಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮದ ಅನೇಕರು ಧರಣಿಯಲ್ಲಿ ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ