ಈಚನಾಳ ಗ್ರಾಮದ *ಅಮೃತ ಸರೋವರ* ಕೆರೆಯ ದಡದಲ್ಲಿ *ಅಂತರಾಷ್ಟ್ರೀಯ ಯೋಗ ದಿನಾಚರಣೆ*

ಲಿಂಗಸ್ಗೂರು-21 ಈಚಿನಾಳ ಗ್ರಾಮ ಪಂಚಾಯತಿಯ ಅಮೃತ ಸರೋವರ ಕೆರೆ ದಡದಲ್ಲಿ

ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ.

ಮಾನ್ಯ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರು ರವರು ಮಾತನಾಡಿ ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಜೂನ್ 21ರಂದು ವಿಶ್ವದಾದ್ಯಂತ ಬಹಳ ಅದ್ದೂರಿಯಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ಹೆಚ್ಚಿನ ಜನರು ತಮ್ಮ ಮಾನಸಿಕ ಒತ್ತಡ ಮತ್ತು ದೈಹಿಕ ಸೌಂದರ್ಯಕ್ಕಾಗಿ ಯೋಗದ ಮೊರೆ ಹೋಗುತ್ತಿದ್ದಾರೆ.ಯೋಗ ಮನಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆಯಾಗಿದೆ.ಭಾರತವು ಜಗತ್ತಿಗೆ ನೀಡಿದ ಒಂದು ದೊಡ್ಡ ಕೊಡುಗೆ ಯೋಗವಾಗಿದೆ. ಯೋಗವು 6000 ವರ್ಷಕ್ಕೂ ಹಳೆಯದಾದ ಭೌತಿಕ,ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ.ಪ್ರತಿ ವರ್ಷ ಯೋಗದ ದಿನಾಚರಣೆಯ ಯೋಗ ಧ್ಯಾನ ಸಭೆಗಳು, ಚರ್ಚೆಗಳು ಸಂಸ್ಕೃತಿಕ ಪ್ರದರ್ಶನಗಳು ಇತ್ಯಾದಿಗಳನ್ನು ಅಭ್ಯಾಸಿಸೋದರ ಮೂಲಕ ವಿಶ್ವದ ಬಹುತೇಕ ರಾಷ್ಟ್ರಗಳು ಯೋಗ ದಿನವನ್ನು ಆಚರಿಸಲಾಗುತ್ತಿದೆ.

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ,ಭಾರತದ ಕಾಯಂ ಪ್ರತಿನಿಧಿಯಾಗಿರುವ ಅಶೋಕ್ ಕುಮಾರ್ ಮಂಡಿಸಿದ್ದರು. ವಿಶ್ವಸಂಸ್ಥೆಗೆ ಇದು ಇತಿಹಾಸದ ಕ್ಷಣವಾಗಿದ್ದು,ಅದರ ಸದಸ್ಯ ರಾಷ್ಟ್ರಗಳು ಅಭೂತ ಪೂರ್ವ ಬೆಂಬಲ ಸೂಚಿಸಿದ್ದು ವಿಶ್ವಸಂಸ್ಥೆಯ ೧೯೪೩ ರಾಷ್ಟ್ರಗಳ ಪೈಕಿ ೧೭೭ ದೇಶಗಳು ಅನುಮೋದನೆಯನ್ನು ನೀಡಿದ್ದವು.2015 ಜೂನ್ 21ರಂದು ಚೊಚ್ಚಲ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಆಯುಷ್ ಸಚಿವಾಲಯದ ನೇತೃತ್ವದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಯ್ಕೆ ಮಾಡಲಾಗಿದೆ. ಈ ದಿನವನ್ನು ಬೇಸಿಗೆ ಆಯನ ಸಂಕ್ರಾಂತಿ ದಿನವೆಂದು ಅಂದರೆ ವರ್ಷದಲ್ಲೇನಾ ಅತ್ಯಂತ ಹೆಚ್ಚು ಹಗಲುಳ ದಿನವೆಂದು ಕರೆಯಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ.ಇದು ದಕ್ಷಣೆಯಾನಕ್ಕೆ ಪರಿವರ್ತನೆ ಎಂದು ಗುರುತಿಸಲಾಗುತ್ತದೆ. ಆದಿ ಕಾಲದಲ್ಲಿ ಸೂರ್ಯಭಿಮುಖವಾಗಿ ದೃಷ್ಟಿ ನಿಟ್ಟು ದಿವ್ಯಶಕ್ತಿ ಉದ್ವಿಪನಗೋಳಿಸುತ್ತದೆ ಎಂದು ಈ ದಿನವನ್ನು ನಂಬಲಾಗಿದೆ. ಹಾಗಾಗಿ ಈ ಪರಿವರ್ತನೆಯ ಯೋಗ ಅಭ್ಯಾಸಿಗರಿಗೆ ಬೆಂಬಲಿಸಲಾಗುತ್ತದೆ ಎಂಬ ನಂಬಿಕೆ ಇದೆ. ಬೇಸಿಗೆ ಆಯನ ಸಂಕ್ರಾಂತಿ ಬಳಿಕ ಮೊದಲ ಹುಣ್ಣುಮೆಯನ್ನು ಗುರುಪೂರ್ಣಿ ಮೆ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಅಶೋಕ್ ಬಿಜಾಪೂರ ಯೋಗ ಗುರುಗಳು, ಶ್ರೀಮತಿ ಗಂಗಮ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷರು ,ಅಮರಪ್ಪ ಉಪಾಧ್ಯಕ್ಷರು, ಮರಿಯಪ್ಪ ಸದಸ್ಯರು,ಶಿವಪ್ಪ ಕಾರ್ಯದರ್ಶಿ,ಬಾಲಪ್ಪ ತಾಲೂಕು ಐ.ಇ.ಸಿ. ಸಂಯೋಜಕರು, ಪಾರ್ವತರಡ್ಡಿ, ಮಂಜುನಾಥ್,ಪ್ರಕಾಶ್ ವಿ.ಏನ್. ಪಾಟೀಲ್ ತಾಂತ್ರಿಕ ಸಹಾಯಕರು,ಸಂಜೀವಿನಿ ತಾಲೂಕು ವಲಯ ಮೇಲ್ವಿಚಾರಕರು ಬಸವರಾಜ್,ಮಲ್ಲಪ್ಪ, ರಾಘವೇಂದ್ರ,ತಾಲೂಕಿನ ಎಲ್ಲಾ ಬಿ.ಎಫ್.ಟಿ ಗಳು, ತಾಲೂಕಿನ ಎಲ್ಲಾ ಗ್ರಾಮ ಕಾಯಕ ಮಿತ್ರರು, ತಾಂಡಾ ರೋಜಗಾರ ಮಿತ್ರರು,ಸ್ವಸಹಾಯ ಸಂಘದ ಸದಸ್ಯರು, ನರೇಗಾ ಕೂಲಿ ಕಾರರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ