ಶಿಕ್ಷಣ ಪ್ರೇಮಿ ಸಾಮಾಜಿಕ ಕಳಕಳಿಯ ಸರಳ ಸಜ್ಜನಿಕೆಯ ವ್ಯಕ್ತಿ ಮೌನುದ್ದಿನ್ ಬೂದಿನಾಳ .

ಲಿಂಗಸ್ಗೂರು : ತಾಲೂಕಿನ ಹಟ್ಟಿ ಸಮೀಪದ ಹಿರೇನಗನೂರು ಚುಕನಟ್ಟಿ ಗ್ರಾಮದ ಯುವಕರ ಕಣ್ಮಣಿ ಸಮಾಜ ಸೇವೆಯಲ್ಲಿ ಸದಾ ಮುಂದೆ ಬರುವ,ಶಿಕ್ಷಣ ಪ್ರೇಮಿ ಮೌನುದ್ದಿನ್ ಬೂದಿನಾಳ.ರವರು ತಮ್ಮ ಹುಟ್ಟು ಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿ ಕೊಂಡರು. ಜೂನ್ 05 ತಾರೀಕು ಆದ ಅಂದು ವಿಶ್ವ ಪರಿಸರ ದಿನಾಚರಣೆ ಕೂಡ ಇರುವುದು ವಿಶೇಷ.

ಈ ದಿನ ತಮ್ಮ ಹುಟ್ಟು ಹಬ್ಬವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಚುಕನಟ್ಟಿ ಯಲ್ಲಿ ಶಾಲಾ ಮಕ್ಕಳೊಂದಿಗೆ ವಿಶೇಷವಾಗಿ ಒಂದನೇ ತರಗತಿಗೆ ದಾಖಲಾದ ಮಕ್ಕಳಿಗೆ ಶಾಲಾ ಬ್ಯಾಗ್, ನೋಟ್ ಪುಸ್ತಕಗಳು ಮತ್ತು ಕಲರ್ ಪೆನ್ಸಿಲ್‌ಗಳನ್ನು ನೀಡುವ ಮೂಲಕ ಅಲ್ಲದೆ ಉಳಿದ ಎಲ್ಲಾ ತರಗತಿಯ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿ ಅಲ್ಲದೆ ಶಾಲೆಗೆ ಪ್ರತಿ ದಿನ ಒಂದು ಕನ್ನಡ ದಿನಪತ್ರಿಕೆ ಶೈಕ್ಷಣಿಕ ವರ್ಷ ಪೂರ್ತಿ ನೀಡುವುದಾಗಿ ಹೇಳಿ ಸಾಂಕೇತಿಕವಾಗಿ ನೀಡಿ ಚಾಲನೆ ಮಾಡಿ ತಮ್ಮ ಸಾಮಾಜಿಕ ಸೇವೆಯನ್ನು ಹುಟ್ಟು ಹಬ್ಬದ ಪ್ರಯುಕ್ತವು ಶಾಲಾ ಮಕ್ಕಳಿಗೆ ಅನುಕೂಲಕರವಾಗಲೆಂದು ಚಿಂತನೆ ಮಾಡಿ ಆಚರಿಸಿಕೊಂಡ ಸರಳ ವ್ಯಕ್ತಿ ಶ್ರೀಯುತ ಮೌನದಿನ್ ಬೂದಿಹಾಳ.

ತದನಂತರ ಸರಕಾರಿ ಪ್ರೌಢಶಾಲೆ ಹಿರೇನಗನೂರು ಶಾಲಾ ಆವರಣದಲ್ಲಿ ಪರಿಸರ ದಿನಾಚರಣೆ ನಿಮಿತ್ತ ಹಾಗೂ ತಮ್ಮ ಹುಟ್ಟು ಹಬ್ಬದ ಪ್ರಯುಕ್ತವಾಗಿ ಸಸಿ ನೆಡುವ ಮೂಲಕ ವಿಶೇಷವಾಗಿ ಆಚರಿಸಿಕೊಂಡು ಅಲ್ಲದೆ ಪ್ರೌಢಶಾಲೆಯ 10 ನೇ ತರಗತಿಯ 27 ವಿದ್ಯಾರ್ಥಿಗಳಿಗೆ ಜಾಣರ ಗುರು ಎಂಬ ದಿನ ಪತ್ರಿಕೆ ಪ್ರತಿ ವಿದ್ಯಾರ್ಥಿಗೆ ಒಂದರಂತೆ ತಿಂಗಳಿಗೆ ರೂ 730 ರೂಪಾಯಿಯಂತೆ ಪ್ರಸಕ್ತ ಶೈಕ್ಷಣಿಕ ವರ್ಷ ಪೂರ್ತಿಯಾಗಿ ವಿತರಣೆ ಮಾಡುವುದಾಗಿ ತಿಳಿಸಿ ಸಾಂಕೇತಿಕವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಪತ್ರಿಕೆಯನ್ನು ನೀಡುವ ಮೂಲಕ ಅತ್ಯಂತ ಅರ್ತಪೂರ್ಣವಾಗಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಇಷ್ಟೇ ಅಲ್ಲದೆ ಬೇರೆ ಬೇರೆ ಊರುಗಳಲ್ಲಿ ಹಟ್ಟಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮತ್ತು ರಾಯಚೂರು ಜಿಲ್ಲೆಗಳ ಬೇರೆ ಬೇರೆ ಹಳ್ಳಿಗಳಲ್ಲಿ ತಮ್ಮದೇ ಆದಂತಹ ಸಮಾಜ ಸೇವೆಯನ್ನು ಮಾಡಿ ಸೈ ಅನ್ಸಿಕೊಂಡಿದ್ದಾರೆ ಇವರ ಸಮಾಜ ಸೇವೆಯನ್ನು ಗುರುತಿಸಿ ಈಗಾಗಲೇ ಹತ್ತು ಹಲವು ಪ್ರಶಸ್ತಿಗಳು ಬಂದಿದ್ದು 10 ಹಲವು ಕಾರ್ಯಕ್ರಮಗಳಲ್ಲಿ ಸನ್ಮಾನಿಸಿ ಗೌರವಿಸಿದ್ದು ಉಂಟು.ಕಳೆದ ವರ್ಷ ಸಮಾಜ ಸೇವೆಯಲ್ಲಿ ಉತ್ತಮ ಸಾಧನೆಗಾಗಿ ರಾಜ್ಯಮಟ್ಟದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡು ತನ್ನದೇ ಆದ ಶೈಲಿಯಲ್ಲಿ ಸಮಾಜ ಸೇವೆಯನ್ನು ಮಾಡುತ್ತ ಸಮಾಜದಲ್ಲಿ ಹಾಗೂ ಅವುಗಳನ್ನು ವೀಕ್ಷಿಸಿ ಸರಿಯಾದ ಮಾರ್ಗದಲ್ಲಿ ಮುನ್ನಡೆಯಲು ಅದೆಷ್ಟು ಯುವಕರಿಗೆ ಗ್ರಾಮದ ಬಳಗಕ್ಕೂ ಸಹಾಯವನ್ನು ಚಾಚಿ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ.

ಬಾಕ್ಸ್ 1

ನಮ್ಮೂರಿನ ಶ್ರೀಯುತ ಮೌನೌದ್ದಿನ್ ಬೂದಿನಾಳ ರವರು ಕಳೆದ ವರ್ಷ ಕೂಡ ಸ ಕಿ ಪ್ರಾ ಶಾಲೆ ಚುಕನಟ್ಟಿಯಲ್ಲಿ ಒಂದನೇಯ ತರಗತಿಗೆ ದಾಖಲಾದ ಮಕ್ಕಳಿಗೆ ಶಾಲಾ ಬ್ಯಾಗ್ ನೋಟ್ ಪುಸ್ತಕಗಳು ಮತ್ತು ಕಲರ್ ಪೆನ್ವಿಲ್ಸ್ ಗಳನ್ನು ಕೊಡುಗೆಯಾಗಿ ನೀಡಿದ್ದರು ಅಲ್ಲದೆ ಉನ್ನತಿಕರಿಸೀದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇನಗನೂರು ನಲ್ಲಿ ಒಂದನೇಯ ತರಗತಿಗೆ ದಾಖಲಾದ ಸುಮಾರು 30 ಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಬ್ಯಾಗ್ ನೋಟ್ ಪುಸ್ತಕಗಳು ನೀಡಿದ್ದರು ಇವರ ಸಾಮಾಜಿಕ ಕಳಕಳಿಯ ಸೇವೆ ಹೀಗೆ ಮುಂದುವರಿಯಲಿ .

ಪಿ ಎಸ್.ಚುಕನಟ್ಟಿ 

ಎಸ್ ಡಿ ಎಂ ಸಿ ಅದ್ಯಕ್ಷರು .

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ