ಪವಾಡಪುರುಷ ಗುಡ್ಡದ ಸಂತ ಅಂತೋಣಿಯವರ ಜಾತ್ರಾ ಮಹೋತ್ಸವ ಗುರುಗುಂಟ

ಲಿಂಗಸುಗೂರು ತಾಲೂಕಿನ ಗುರುಗುಂಟದ ಮೌಂಟ್ ಕಾರ್ಮೆಲ್ ದೇವಾಲಯದಲ್ಲಿ ಪವಾಡಪುರುಷ ಗುಡ್ಡದ ಸಂತ ಅಂತೋನಿಯವರ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಗುರುಗುಂಟ ಮೌಂಟ್ ಕಾರ್ಮೆಲ್ ದೇವಾಲಯದ ವಿಚಾರಣೆಯ ಗುರುಗಳಾದ ವಂದನೆಯ ಸ್ವಾಮಿ ರಾಬರ್ಟ್ ಪೌಲ್ ಅವರ ನೇತೃತ್ವದಲ್ಲಿ ಸಾಯಂಕಾಲ ನಾಲ್ಕು ಗಂಟೆಗೆ ಹಿರೇನಗನೂರು ಯುವಕರಿಂದ ಭಕ್ತಿಯ ಭಜನೆ ಹಾಡುಗಳಿಂದ ಪವಾಡಪುರುಷ ಗುಡ್ಡದ ಸಂತ ಅಂತೋಣಿಯವರ ಭವ್ಯ ತೇರು ಮೆರವಣಿಗೆ ಯೊಂದಿಗೆ ಹಬ್ಬವನ್ನುಆಚರಿಸಲಾಯಿತು.

ಗುಡ್ಡದ ಸಂತ ಅಂತೋಣಿಯವರ ಕೃಪಾ ಆಶೀರ್ವಾದವನ್ನು ಪಡೆಯಲು ಗುರಗುಂಟ,ಯರಡೋಣ,ಹಟ್ಟಿ,



ಹಿರೇನಗನೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಆಗಮಿಸಿದ್ದರು.ಗುರುಗುಂಟ ಧರ್ಮ ಕೇಂದ್ರದ ಕ್ಲೂನಿ ಮಠದ ಕನ್ಯಾಸ್ತ್ರಿಯರು ಗುನೇಲಿಯನ್ ಮಠದ ಕನ್ಯಾಸ್ತ್ರಿಯರು ಹಬ್ಬದ ದಿವ್ಯ ಬಲು ಪೂಜೆಯನ್ನು ಅರ್ಪಿಸಲು ಬಂದಂತಹ ಫಾದರ್ ಡಾಕ್ಟರ್ ಜಾನಪೀಟರ್ ಹಾಗೂ ಶಕ್ತಿನಗರದ ಧರ್ಮ ಕೇಂದ್ರ ಗುರುಗಳಾದ ಫಾದರ್ ಯಾಗಪ್ಪ ರವರು ಬಂದಂತಹ ಭಕ್ತಾದಿಗಳಿಗೆ 

ಸಂತ ಅಂತೋನಿಯವರ ಪವಾಡಗಳ ಬಗ್ಗೆ ಸೊಗಸಾಗಿ ಪ್ರಬೋಧನೆ ಮಾಡಿದರು.ಹಬ್ಬದಲ್ಲಿ ಪಾಲ್ಗೊಳ್ಳಲು ನೆರೆಹೊರೆಯ ಗ್ರಾಮಗಳಾದ 

ಯರಡೋಣ,ಹಟ್ಟಿ ಚಿನ್ನದ ಗಣಿ ಹಾಗೂ ಹಿರೇನಗನೂರು ಧರ್ಮ ಕೇಂದ್ರದ ಭಕ್ತಾದಿಗಳು ಸಂತ ಗುಡ್ಡದ ಅಂತೋನಿಯವರ ಮಹಾಪ್ರಸಾದವನ್ನು ಸ್ವೀಕರಿಸಿ ಆಶೀರ್ವಾದವನ್ನು ಪಡೆದು ಪುನೀತರಾದರು.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ