ಸೇತುವೆ ನಿರ್ಮಾಣಕ್ಕೆ ೨ ಕೋಟಿ ರೂ ಅನುದಾನ -ಶಾಸಕ ಕೆ ನೇಮಿರಾಜ ನಾಯ್ಕ


ಕೊಟ್ಟೂರು ತಾಲೂಕಿನ ಮಲ್ಲನಾಯಕಹಳ್ಳಿ ಬಳಿ ಇರುವ ವಡ್ಡರ ಹಳ್ಳ ಪ್ರತಿ ಬಾರಿ ಮಳೆಗಾಲದಲ್ಲಿ ರಸ್ತೆ ಮೇಲೆ ತುಂಬಿ ಹರಿದು ಕೊಟ್ಟೂರು ಕೂಡ್ಲಿಗಿ ಮುಖ್ಯ ಹೆದ್ದಾರಿಯು ಸಂಚಾರ ಸ್ಥಗಿತಗೊಳ್ಳುತ್ತದೆ. ಇದರಿಂದ ವಾಹನ ಸವಾರರು ಗಂಟೆಗಟ್ಟಲೆ ಕಾಯುವಂತ ಪರಿಸ್ಥಿತಿ ನಿರ್ಮಾಣಗುತ್ತದೆ. ಸಣ್ಣ ಪುಟ್ಟ ಘಟನೆಗಳು ನಡೆದಿರುವ ಕಾರಣಕ್ಕಾಗಿ ಈ ಹಳ್ಳಕ್ಕೆ ಸೇತುವೆ ನಿರ್ಮಿಸುವ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ ಕೂಡಲೇ ಮುಂದಾಗಬೇಕೆAದು ಹಗರಿಬೊಮ್ಮನಹಳ್ಳಿ ಶಾಸಕ ಕೆ. ನೇಮಿರಾಜ ನಾಯ್ಕ ಸೂಚಿದರು.

ಬುದುವಾರ ಬಾರಿ ಮಳೆಯಿಂದಾಗಿ ವಡ್ರ ಹಳ್ಳ ತುಂಬಿ ಹರಿದು ಎರಡು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಈ ಹಿನ್ನಲೆಯಲ್ಲಿ ಶುಕ್ರವಾರದಂದು ಮಾನ್ಯ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಇಲ್ಲಿರುವ ಪರಿಸ್ಥಿತಿಯನ್ನು ಚರ್ಚಿಸಿದರು. ನೂತನ ಸೇತುವೆ ನಿರ್ಮಿಸುವ ಕಾರ್ಯ ಸುಮಾರು ನಾಲ್ಕು ದಶಕಗಳಿದಲೂ ಆಗದೇ ಇರುವುದು, ಈ ಭಾಗದ ಜನರಿಗೆ ಮಳೆ ಬಂದಾಗ ವಡ್ರಹಳ್ಳ ಸೇತುವೆ ಮೇಲೆ ಓಡಾಡಲು ತುಂಬ ಕಷ್ಟ ಅನುಭವಿಸುತ್ತಿದ್ದಾರೆ.

ಸೇತುವೆ ನಿರ್ಮಾಣ ಕಾರ್ಯ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಯವರಿಗೆ ಸೂಚಿಸಿರುವೆ ಈ ಹಿಂದೆ ಸೇತುವೆ ನಿರ್ಮಾಣಕ್ಕೆ ೨ ಕೋಟಿರೂಗಳ ಯೋಜನೆ ರೂಪಿಸಿದ್ದು ಸೇತುವೆಯನ್ನು ಮತ್ತೊಷ್ಟು ವಿಸ್ತಾರಗೊಳಿಸಿ ನಿರ್ಮಿಸಲು ಬೇಕಾಗುವ ಮತ್ತೊಷ್ಟು ಅನುದಾನವನ್ನು ಕೊಡುವಂತೆ ಸರ್ಕಾರಕ್ಕೆ ಒತ್ತಾಯ ಪಡಿಸುತ್ತೇನೆ ಎಂದು ತಿಳಿಸಿದರು.

ಅಭಿವೃದ್ದಿ ಕಾಮಗಾರಿಗಳನ್ನು ತಾಲೂಕನಲ್ಲಿ ಕೈಗೊಳ್ಳಲು ಈಗಿರುವ ಸರ್ಕಾರ ಅನುದಾನ ನೀಡಲು ಮೀನಾಮೇಷ ಎಣಿಸುತ್ತಿದೆ .ಈಗಿನ ಸರ್ಕಾರ ಅನುದಾನ  ನೀಡದಿದ್ದಲ್ಲಿ ಶಾಸಕರ  ನಿಧಿಯ ಅನುದಾನದಿಂದಲಾದರೂ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವೆ. ಪಟ್ಟಣದಲ್ಲಿ ಆಡಳಿತ ಸೌಧ, ೩.೫ ಕೋಟಿರೂ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ, ಪಟ್ಟಣದ ಹೊರ ಪ್ರದೇಶದಲ್ಲಿ ಬಸ್ ಡಿಪೋ , ಮತ್ತೊಂದು ದೊಡ್ಡದಾಗಿ ಬಸ್ ನಿಲ್ದಾಣವನ್ನು ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎಇಇ ವೆಂಕಟರಮಣ, ಜೆಇ ದೊಡ್ಡಮನಿ ಕೊಟ್ರೇಶ್, ಜಿ.ಪಂ ಮಾಜಿ ಸದಸ್ಯ ಎಂ.ಎಂ .ಜೆ. ಹರ್ಷವರ್ಧನ್, ಎಪಿಎಂ.ಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ್, ಮಹಾಂತೇಶ್, ಜೆಡಿಎಸ್ ಕ್ಷೇತ್ರ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಮತ್ತಿತರರು ಶಾಸಕರೊಂದಿಗೆ ಇದ್ದರು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ