ಬೀಳುವ ಹಂತದ ಕಟ್ಟಡದಲ್ಲಿ ಪಾಠ -ಪ್ರವಚನ,ವಿದ್ಯಾರ್ಥಿಗಳ ಸಾವು ನೋವಿಗೆ ಹೊಣೆ ಯಾರು ?
ವರದಿ : ಗ್ಯಾನಪ್ಪ ದೊಡ್ಡಮನಿ
ಮಸ್ಕಿ: ಪಟ್ಟಣದಲ್ಲಿರುವ ಸರ್ಕಾರಿ ಐಟಿಐ ಕಾಲೇಜು10ವರ್ಷಗಳಿಂದ ಕಟ್ಟಡ ಇಲ್ಲದೆ ಶಾಲೆ ಯಿಂದ ಶಾಲೆಗೆ ಸ್ಥಳ ಬದಲಾವಣೆ ಮಾಡುವ ಪರಿಸ್ಥಿತಿ ಬಂದಿದೆ ಮೊದಲು ಕೇಂದ್ರ ಶಾಲೆ ಯಲ್ಲಿ ಇದ್ದ ಕಾಲೇಜು ಈಗ
ಬಾಲಕರ ಪ್ರೌಢಶಾಲೆ ಕಟ್ಟಡದಲ್ಲಿ ನಡೆಯುತ್ತಿದ್ದು, ಇದುವರೆಗೆ ವಿದ್ಯಾರ್ಥಿಗಳಿಗೆ ಸ್ವಂತ ಕಟ್ಟಡದ ಭಾಗ್ಯ ದೊರೆತಿಲ್ಲ.ಇದರಿಂದ ವಿದ್ಯಾರ್ಥಿಗಳ ಸಾವು - ನೋವಿಗೆ ಹೊಣೆ ಯಾರು ? ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ಬಡ ವಿದ್ಯಾರ್ಥಿಗಳು ತಾಂತ್ರಿಕ ತರಬೇತಿ ಪಡೆದು ಸರ್ಕಾರಿ, ಖಾಸಗಿ ಇಲ್ಲವೇ ಸ್ವಂತ ಉದ್ಯೋಗ ಅವಕಾಶ ಹೊಂದಲಿ ಎನ್ನುವ ಸದಾಸೆಯಿಂದ ಸರ್ಕಾರವು ತಾಲ್ಲೂಕಿಗೆ ಕೈಗಾರಿಕಾ ತರಬೇತಿ ಕೇಂದ್ರ ನೀಡಿದೆ. ಆದರೆ, ಕೇಂದ್ರಕ್ಕೆ ಇರಲೇಬೇಕಾದ ಮೂಲಸೌಕರ್ಯ ಗಳಾದ
ಶುಚಿ ಕೊಠಡಿ, ಶುದ್ಧ ಕುಡಿಯುವ ನೀರು, ಶೌಚಾಲಯ ಇತ್ಯಾದಿ ಸೌಕರ್ಯಗಳಿಲ್ಲ. ಈ ಕಟ್ಟಡ ಮೇಲ್ಚಾವಣಿ ಉದುರುವುದರಿಂದ
ಯಾವಾಗ ಗೋಡೆ ಬೀಳುವುದೋ ಮತ್ತು ಮೇಲ್ಚಾವಣಿ ಬೀಳುವದು ಎಂಬ ಜೀವ ಭಯದಲ್ಲೇ ಉಪನ್ಯಾಸಕರು ಪಾಠ ಮಾಡಬೇಕು. ವಿದ್ಯಾರ್ಥಿಗಳು ಜೀವ ಭಯದಲ್ಲೇ ಪಾಠ ಕೇಳುವಂಥ ಪರಿಸ್ಥಿತಿ ಉಂಟಾಗಿದೆ.
ಕಾಲೇಜಿನ ಅವ್ಯವಸ್ಥೆಯಿಂದ ಕಾಲೇಜಿಗೆ ವಿದ್ಯಾರ್ಥಿಗಳು ದಾಖಲಾಗುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಇದರಿಂದಾಗಿ ತಾಲ್ಲೂಕಿನ ವಿದ್ಯಾರ್ಥಿಗಳು ಐಟಿಐ ಕಲಿಕೆಯಿಂದ ವಂಚಿತರಾಗುವ ಸಾಧ್ಯತೆ ಇದೆ.
ಉಪನ್ಯಾಸಕರ ಕೊರತೆ : ಮಸ್ಕಿ ಐಟಿಐ ಕಾಲೇಜಿನಲ್ಲಿ ಒಟ್ಟು 04 ಜನ ಇದ್ದು, ಒಬ್ಬರು ಕಾಯಂ ಉಪನ್ಯಾಸಕರಿದ್ದಾರೆ, ಮೂರು ಜನ ಅತಿಥಿ ಉಪನ್ಯಾಸಕರು ಇದ್ದು,
ಒಟ್ಟು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇನ್ನು ಮೂರು ಜನ ಖಾಯಂ ಉಪನ್ಯಾಸಕರ ಕೊರತೆ ಯಿಂದ ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿದೆ.
ಅಷ್ಟು ಅಲ್ಲದೇ ತರಬೇತಿ ಯಂತ್ರಗಳಿಗೆ ಭದ್ರತೆಯಿಲ್ಲ ತರಬೇತಿ ನೀಡಲು ಕೋಟ್ಯಂತರ ರೂಪಾಯಿ ಮೌಲ್ಯದ ಯಂತ್ರಗಳಿದ್ದು ಅವುಗಳಿಗೆ ಸರಿಯಾದ ರೀತಿಯ ಭದ್ರತೆಯಿಲ್ಲ ಯಾವುದೇ ಸಿಸಿ ಕ್ಯಾಮೆರಾ ಕೂಡಾ ಅಳವಡಿಸಿಲ್ಲ ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬಡ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಾಯವಾಗಲಿರುವ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅಣಿಯಾಗಬೇಕು ಎಂದು ಸಾರ್ವಜನಿಕರ ಒತ್ತಾಯ ವಾಗಿದೆ.
ಹೇಳಿಕೆ -೧
ನಾನು ಕಾಲೇಜಿಗೆ ಬಂದಾಗಿನಿಂದ ಸ್ವಂತ ಕಟ್ಟಡಕ್ಕೆ ಅನೇಕ ಪತ್ರ ಬರೆದಿದ್ದೇನೆ ಹಾಗೂ ಅಧಿಕಾರಿಗಳಿಗೆ ಹಾಗೂ ಶಾಸಕರನ್ನು ಸಂಪರ್ಕಿಸಿದ್ದೇನೆ. ಶೀಘ್ರದಲ್ಲೇ ಖಾಯಂ ಕಟ್ಟಡದ ಆರಂಭಿಸುವ ಭರವಸೆ ನೀಡಿದ್ದಾರೆ.ರಮೇಶ ಕುಮಾರ ಪ್ರಭಾರಿ ಪ್ರಾಂಶುಪಾಲ ಸರ್ಕಾರಿ ಐಟಿಐ ಕಾಲೇಜು ಮಸ್ಕಿ.
ಹೇಳಿಕೆ ೨
ಮಸ್ಕಿಹೊಸ ತಾಲ್ಲೂಕು ಆದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಬೀಳುವ ಹಂತದಲ್ಲಿರುವ ಕಟ್ಟಡದಲ್ಲಿ ಬಡಮಕ್ಕಳು ಓದುವ ಐಟಿಐ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಿಸಬೇಕು.
ಬಸವರಾಜ ದೀನ ಸಮುದ್ರ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ