ವಿವಿಧ ಗ್ರಾಪಂಗಳಿಗೆ ಸಹಾಯಕ ನಿರ್ದೇಶಕರಾದ ಶಿವಾನಂದ ರಡ್ಡಿ ಭೇಟಿ

ಮಸ್ಕಿ : ತಾಲೂಕಿನ ಗುಡದೂರು, ಕೊಳಬಾಳ, ಗೌಡನಬಾವಿ ಗ್ರಾಮ ಪಂಚಾಯತಿಗೆ ಶುಕ್ರವಾರ ತಾ.ಪಂ ಸಹಾಯಕ ನಿರ್ದೇಶಕರಾದ (ಗ್ರಾಮೀಣ ಉದ್ಯೋಗ) ಶಿವಾನಂದರಡ್ಡಿ ಭೇಟಿ ನೀಡಿ ವಿವಿಧ ಕಾಮಗಾರಿ ಪರಿಶೀಲಿಸಿದರು.

ಬೇಸಿಗೆ ಅವಧಿಯಲ್ಲಿ ಸ್ಥಳೀಯ ಕೂಲಿಕಾರರ ಬೇಡಿಕೆ ಅನುಸಾರ ಕೂಲಿ ಕೆಲಸ ಒದಗಿಸಿ ಗುಳೆ ತಡೆಯುವಲ್ಲಿ ಗ್ರಾ.ಪಂಗಳ ಪಾತ್ರ ಮಹತ್ವದಾಗಿತ್ತು. ಕೆಲ ದಿನಗಳಿಂದ ತಾಲೂಕಿನಲ್ಲಿ ಮುಂಗಾರು ಮಳೆ ಚುರುಕು ಪಡೆದಿದ್ದು, ಕೂಲಿಕಾರರು ಹೊಲದ ಕೆಲಸಗಳಲ್ಲಿ ನಿರತರಾಗಿದ್ದಾರೆ. ಪ್ರಸಕ್ತ ವರ್ಷದ ಸಾಮಗ್ರಿ ಕಾಮಗಾರಿಗಳನ್ನು ಕೂಡಲೇ ಆರಂಭಿಸಿ, ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದರು. 

ಗುಡದೂರು ಗ್ರಾ.ಪಂ ಯ ಪರಾಪುರದಲ್ಲಿ ನಿರ್ಮಾಣ ಹಂತದಲ್ಲಿರುವ ದನದಶೆಡ್‌, ಹೈಟೆಕ್‌ ಟಾಯ್ಲೆಟ್‌, ಕೊಳಬಾಳ ಗ್ರಾ.ಪಂಯ ಕಣ್ಣೂರಿನ ಸ್ಮಶಾನ ಅಭಿವೃದ್ಧಿ ಕಾಮಗಾರಿ, ಕೊಳಬಾಳದ ಸಿಸಿ ರಸ್ತೆ, ಹೈಟೆಕ್‌ ಟಾಯ್ಲೆಟ್‌, ಗೌಡನಬಾವಿಯ ಸಿಸಿ ರಸ್ತೆ ಪರಿಶೀಲಿಸಿದರು.

ಈ ವೇಳೆಯಲ್ಲಿ ಗುಡದೂರು ಗ್ರಾಪಂ ಪಿಡಿಒ ಮಲ್ಲಯ್ಯ, ತಾಂತ್ರಿಕ ಸಂಯೋಜಕರಾದ ಅಶೋಕ್‌, ತಾಂತ್ರಿಕ ಸಹಾಯಕ ಅಭಿಯಂತರರಾದ ರಾಘವೇಂದ್ರ, ಬಿಎಫ್ಟಿಗಳು ಇತರರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*