ಸಸಿ ನೆಡುವ ಮೂಲಕ ವಿಶೇಷವಾಗಿ ಹುಟ್ಟು ಹಬ್ಬ ಆಚರಣೆ

ಮಸ್ಕಿ : ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಗುರುವಾರ ಶ್ರೀ ಬಸವ ಸಂಸ್ಥೆ ಮಸ್ಕಿ ಅಧ್ಯಕ್ಷರಾದ ಯಂಕಪ್ಪ ಬಸಾಪುರ (ಸಿವಿಲ್ ಇಂಜಿನಿಯರ್ ) ಮತ್ತು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಮಸ್ಕಿ ತಾಲೂಕ ಸಮಿತಿಯಾ ಅಧ್ಯಕ್ಷರಾದ ಬಾಲರಾಜ ವಿರೂಪಾಪುರ ಇವರ ಹುಟ್ಟುಹಬ್ಬದ ನಿಮಿತ್ತ ಹಸಿರು ಮರಗಳನ್ನು ನೆಡುವ ಮೂಲಕ ವಿಶೇಷವಾಗಿ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು.

 ಶ್ರೀ ಬಸವ ಸಂಸ್ಥೆ ಮಸ್ಕಿ ಅಧ್ಯಕ್ಷರಾದ ಯಂಕಪ್ಪ ಬಸಾಪುರ (ಸಿವಿಲ್ ಇಂಜಿನಿಯರ್ ) ಮತ್ತು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಮಸ್ಕಿ ತಾಲೂಕ ಸಮಿತಿಯಾ ಅಧ್ಯಕ್ಷರಾದ ಬಾಲರಾಜ ವಿರೂಪಾಪುರ ಇವರ ಹುಟ್ಟುಹಬ್ಬದ ನಿಮಿತ್ತ ಶ್ರೀ ಪ್ರಕೃತಿ ಫೌಂಡೇಶನ್ ಮಸ್ಕಿ ಇವರ ಸಂಯುಕ್ತಾ ಆಶ್ರಯದಲ್ಲಿ ಬಿಸಿಲ ನಾಡೇ ಎಂದು ಹೆಸರಾದ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಡಾ!! ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಹಾಸ್ಟೆಲ್ ನಲ್ಲಿ ಸುಮಾರು 25 ಕ್ಕೂ ಹೆಚ್ಚು ಹಸಿರು ಗಿಡಗಳನ್ನು ನೆಡುವ ಮೂಲಕ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳಲಾಯಿತು.


 ನಂತರ ಮಾತನಾಡಿದ ಎಸ್ ಎಫ್ ಐ ತಾಲೂಕ ಅಧ್ಯಕ್ಷ ಬಸವಂತ ಹಿರೇಕಡಬೂರು ಶ್ರೀ ಬಸವ ಸಂಸ್ಥೆ ಮಸ್ಕಿ ಅಧ್ಯಕ್ಷರಾದ ಯಂಕಪ್ಪ ಬಸಾಪುರ ಇವರು ಇಲ್ಲಿಯತನಕ ಯಾವುದೇ ರೀತಿಯ ಸರಕಾರಿ ಸೌಲಭ್ಯವನ್ನು ಪಡೆಯದೆ, ಯಾವುದೇ ರೀತಿ ಒಂದು ರೂಪಾಯಿ ದೇಣಿಗೆ ಸಹ ಪಡೆಯದೆ, ಸ್ವತಹ ತಾವು ಗಳಿಸಿದ ದುಡಿಮೆಯಲ್ಲಿ ಸುಮಾರು 320ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ಕೊಡುವ ಮೂಲಕ ಮಸ್ಕಿ ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ವಿಶೇಷ ಕಾಳಜಿಯನ್ನು ವಹಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾದ ಉಪಾಧ್ಯಕ್ಷರಾದ ಚನ್ನಬಸವ ಮೂಡಲದಿನ್ನಿ, ಖಜಾಂಚಿಯಾದ ಶಿವರಾಜ್ ಗುಡಗಲದಿನ್ನಿ, ಸದಸ್ಯರಾದ ಹುಚ್ಚಪ್ಪ ಬಸಾಪುರ, ಬಸವಂತ ಹಿರೇಕಡೂಬೂರ್ (SFI ಅಧ್ಯಕ್ಷರು), ಶಿವಮೂರ್ತಿ ಬಳಗಾನೂರ ( ಅಧ್ಯಕ್ಷರು ಶ್ರೀ ಪ್ರಕೃತಿ ಫೌಂಡೇಶನ ಮಸ್ಕಿ ) ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ