ಸರ್ಕಾರ, ಜನಪ್ರತಿನಿಧಿಗಳು, ನಿರ್ಲಕ್ಷ್ಯಕ್ಕೆ ಗ್ರಾಮದ ಜನರು ಹಿಡಿಶಾಪ ! !

ಕೊಟ್ಟೂರು: ತಾಲೂಕಿನ ವ್ಯಾಪ್ತಿಗೆ ಬರುವ ಇಲ್ಲಿನ ಸುಂಕದ ಕಲ್ಲು ಗ್ರಾಮದ ಹೊಸ ಕ್ಯಾಂಪ್ ನಗರ ಜನರ ಗೋಳು ಕೇಳುವವರು ಯಾರು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ದಶಕಗಳೆ ಕಳೆದರೂ ಇನ್ನೂವರೆಗೆ ಗ್ರಾ ಪಂ ಮೂಲ ಸೌಲಭ್ಯ ಒದಗಿಸುವಲ್ಲಿ ಕೈಸೋತು ಕುಳಿತಿದೆ. ಸರಿಯಾದ ರಸ್ತೆ ಹಾಗೂ ಗಟಾರವಿಲ್ಲದ ಕಾರಣ ಈ ಭಾಗದ ಜನರು ರೋಸಿಹೋಗಿದ್ದಾರೆ.

ಭಾಗೀರಥಿ ಶಾಸಕರಾಗಿರುವಾಗ ಸುಂಕದಕಲ್ಲು ಗ್ರಾಮದ ಹೊಸ ಕ್ಯಾಂಪ್ ನಿರ್ಮಾಣವಾಗಿದೆ ಈ ವಾರ್ಡಿಗೆ ಸಂಬಂದಿಸಿದಂತೆ ಕಳಪೆಯಾಗಿರುವ ಚರಂಡಿ,ಸಿಸಿ ರಸ್ತೆ ಸರಿಯಾಗಿ ಇಲ್ಲ. ಕಳೆದ ಹತ್ತು ವರ್ಷಗಳಿಂದ ಇದೇ ಗೋಳು ಕೇಳುವವರಿಲ್ಲದಂತಾಗಿದೆ.ಎಂದರು

ಆದರೆ ಇದುವರೆಗೂ ಸರಿಯಾದ ಚರಂಡಿ ನಿರ್ಮಾಣ ಮಾಡಿಲ್ಲ. ರಸ್ತೆಯ ಎರಡು ಬದಿಯ ಹಳೆಯ ಗುಂಡಿಗಳಲ್ಲಿ ತುಂಬಿ ಕೊಂಡಿದ್ದರೂ ಹೂಳು ತೆಗೆಸಿಲ್ಲ. ಇದರಿಂದ ಮಳೆ ಬಂದಾಗ ಮಳೆಯ ನೀರು ಇಲ್ಲಿ ವಾಸಿಸುವ ಮನೆಗಳಿಗೆ ನೀರು ನುಗ್ಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಮತ್ತು ಇಲ್ಲಿಯ ಟಾಯ್ಲೆಟ್ ಗುಂಡಿಗಳಲ್ಲಿ ತುಂಬಿ ಬಿಡುತ್ತಿದೆ. ಎಂದು

ಗುಡ್ಡಪರ ಬಸವರಾಜ್, ನಾಗರಾಜ್, ಅಗ್ರಹಾರ ಮಂಜಣ್ಣ , ಕೊಡಿಹಳ್ಳಿ ನಾಗಮ್ಮ,ಗಂಗಮ್ಮನಹಳ್ಳಿ ಈರಯ್ಯ,ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಕೊಟ್ -1

ಅಲ್ಲದೆ ಸೊಳ್ಳೆಗಳ ಕಾಟದಿಂದ ಇಲ್ಲಿಯ ಜನರು ಪದೆ ಪದೆ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಮತ್ತೊಂದು ರಸ್ತೆಯು ಮಣ್ಣಿನಿಂದ ಕೂಡಿದ ಪರಿಣಾಮೆ ಮಳೆಗಾಲದಲ್ಲಿ ರಸ್ತೆಯು ಕೆಸರು ಗದ್ದೆಯಾಗಿ ಇಲ್ಲಿ ಓಡಾಡುವ ಹಾಗಿಲ್ಲ. ದ್ವಿಚಕ್ರ ವಾಹನ ಸವಾರರಂತೂ ಈ ರಸ್ತೆಯಲ್ಲಿ ಸಂಚರಿಸಲು ಮಾಡಬೇಕಾಗುತ್ತದೆ. ಈ ಬಗ್ಗೆ ಗ್ರಾ.ಪಂಗೆ ಎಷ್ಟು ಸಾರಿ ಮನವಿ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಈ ಭಾಗದ ಜನರು ಗೌಡ್ರು ಸುಬ್ರಹ್ಮಣ್ಯ ಆರೋಪಿಸುತ್ತಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ