ಬೆಲ್ಲದಮರಡಿ : ಅಮೃತ ಸರೋವರ ದಡದಲ್ಲಿ ವಿಶ್ವ ಯೋಗ ದಿನಾಚರಣೆ

ಮಸ್ಕಿ : ದೇಶದ ಅನೇಕ ಋಷಿ ಮುನಿಗಳು, ಸಾಧಕರಿಂಧ ಸಿದ್ಧಿಸಿದ ಯೋಗಾಭ್ಯಾಸವು ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಕೊಡುಗೆ ಎಂದು ಅಡವಿಬಾವಿ (ಮಸ್ಕಿ) ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಸಂತೋಷ್ ಹೇಳಿದರು.

ಅಡವಿಬಾವಿ (ಮಸ್ಕಿ) ಗ್ರಾ.ಪಂ ಯ ಬೆಲ್ಲದಮರಡಿ ಗ್ರಾಮದ ಹೊರ ವಲಯದಲ್ಲಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿದ ಅಮೃತ ಸರೋವರ ಕೆರೆ ದಡದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ

ಕೇಂದ್ರ ಸರಕಾರ ಆದೇಶದ ಮೇರೆಗೆ ವಿಶ್ವ ಸಂಸ್ಥೆ ಸೇರಿ ವಿಶ್ವದ ಅನೇಕ ದೇಶಗಳು ಇಂದು ಯೋಗ ದಿನ ಆಚರಿಸುತ್ತಿವೆ. ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಯೋಗಾಭ್ಯಾಸ ಸಹಕಾರಿಯಾಗಿದೆ ಎಂದರು.

ಸ್ಥಳೀಯ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ವಿರುಪನಗೌಡ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕಾಗಿ ಯೋಗ ಎಂಬ ಧ್ಯೇಯವಾಕ್ಯದಡಿ ಈ ವರ್ಷ ಯೋಗ ದಿನ ಆಚರಿಸಲಾಗುತ್ತಿದೆ. ದಿನಪೂರ್ತಿ ಕುಟುಂಬ ನಿರ್ವಹಣೆ, ದುಡಿಮೆ, ಮಕ್ಕಳ ಲಾಲನೆ ಪಾಲನೆಯಲ್ಲಿ ನಿರತರಾಗಿರುವ ಮಹಿಳೆಯರು ಸದಾ ಒತ್ತಡದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ನಾವು ದಿನ ಪೂರ್ತಿ ದುಡಿಯುತ್ತೇವೆ ನಮಗೇಕೆ ಯೋಗ ಎಂದು ಉದಾಸೀನ ಮಾಡದೇ ಪ್ರತಿ ದಿನ ಬೆಳಗ್ಗೆ ಅಥವಾ ಸಂಜೆ ಒಂದರ್ಧ ಗಂಟೆ ಯೋಗಭ್ಯಾಸಕ್ಕೆ ಮೀಸಲಿಟ್ಟರೆ, ದೈಹಿಕ ಸದೃಢತೆ ಜೊತೆಗೆ ನೆಮ್ಮದಿ ಕಂಡುಕೊಳ್ಳಬಹುದಾಗಿದೆ. ಬದಲಾದ ಆಹಾರ ಶೈಲಿ, ಜೀವನ ಕ್ರಮದಿಂದ ಇಂದು ಅನೇಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಅದರಲ್ಲಿ ಮಹಿಳೆಯರಲ್ಲಿ ಅತಿ ಹೆಚ್ಚು ಕ್ಯಾನ್ಸರ್ ಕಂಡುಬರುತ್ತಿದ್ದು, ಮುಂಜಾಗ್ರತೆ ವಹಿಸುವುದು ತುಂಬಾ ಅವಶ್ಯವಾಗಿದೆ‌. ದುಶ್ಚಟಗಳನ್ನು ತ್ಯಜಿಸಿ, ಉತ್ತಮ ಆಹಾರ, ಗಾಳಿ ಸೇವಿಸುವುದರ ಮೂಲಕ ಆರೋಗ್ಯ ಕ್ಷಮತೆ ಸಾಧಿಸಬಹುದು. ಗ್ರಾಮೀಣರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯೋಗ ದಿನಾಚರಣೆ ಏರ್ಪಡಿಸಿರುವುದು ಶ್ಲಾಘನೀಯ ‌ಕಾರ್ಯ ಎಂದರು.

ಇದೇ ವೇಳೆಅಮೃತ ಸರೋವರ ದಡದಲ್ಲಿ ಸಸಿ ನೆಟ್ಟು ಪರಿಸರ ದಿನ ಆಚರಿಸಲಾಯಿತು.

ಈ ವೇಳೆಯಲ್ಲಿ ಗ್ರಾ.ಪಂ ಅಧ್ಯಕ್ಷರಾದ ಸೋಮಲೆವ್ವ, ತಾಪಂ ಸಿಬ್ಬಂದಿ ಅರ್ಜುನ, ಸತೀಶ್, ಗ್ರಾಪಂ ಸಿಬ್ಬಂದಿ ಅಮರೇಗೌಡ, ಗಣೇಶ್, ದುರ್ಗೇಶ್, ಕುಮಾರ್ ನರೇಗಾ ಯೋಜನೆಯ ಮೇಟಿಗಳು, ಕೂಲಿಕಾರರು ಸೇರಿದಂತೆ ಇನ್ನಿತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ