ಆರುಂಧತಿ ರಾಯ್ ಮತ್ತಿತರರನ್ನು ಸುಳ್ಳು ಕೇಸ್ ದಾಖಲಿಸುತ್ತಿರುವುದು ಸಿಪಿಐಎಂಎಲ್ ಲಿಬರೇಶನ್ ಪಕ್ಷ ಖಂಡನೆ
ಖ್ಯಾತ ಲೇಖಕಿ ಅರುಂಧತಿ ರಾಯ್ ಮತ್ತು ಶೇಕ್ ಶೋಖಾತ್ ಹುಸೇನ್ ಮಾಜಿ ಪ್ರಾಧ್ಯಾಪಕ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು (ಯುಎಪಿಎ) ಅಡಿಯಲ್ಲಿ ಕಾನೂನು ಕ್ರಮಕ್ಕೆ ಅವಕಾಶ ನೀಡಿರುವುದಕ್ಕೆ ಸಿಪಿಐ (ಎಂಎಲ್) ಲಿಬರೇಶನ್ ಖಂಡನೆ
ಕೊಟ್ಟೂರು: ಭಯೋತ್ಪಾದನಾ-ವಿರೋಧಿ ಪ್ರಕರಣದಲ್ಲಿ ಮಾನವ ಹಕ್ಕುಗಳ ಹೋರಾಟಗಾರರನ್ನು ದುರುದ್ದೇಶಪೂರ್ವಕವಾಗಿ ತಳುಕುಹಾಕಿ ಆರುಂಧತಿ ರಾಯ್ ಮತ್ತಿತರರನ್ನು ಸುಳ್ಳು ಕೇಸ್ ದಾಖಲಿಸುತ್ತಿರುವುದು ಸಿಪಿಐಎಂಎಲ್ ಲಿಬರೇಶನ್ ಬಲವಾಗಿ ಖಂಡಿಸಿ ಗುರುವಾರ ಕೊಟ್ಟೂರು ಉಪ ತಹಸಿಲ್ದಾರ್ ಅನ್ನದಾನೇಶ್ವರ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಆರುಂಧತಿ ರಾಯ್ ಅವರು ಸಂವಿಧಾನ ವಿರೋಧಿ, ಜನವಿರೋಧಿ ನೀತಿಗಳು, ಅನ್ಯಾಯಗಳ ವಿರುದ್ಧ ನಿರಂತರ ಧ್ವನಿ ಎತ್ತುತ್ತಾ ಬಂಧವರು, ದಮನಿತರ ಮೇಲೆ ದೇಶಾದ್ಯಂತ ನಡೆಯುತ್ತಿರುವ ದೌರ್ಜನ್ಯಗಳನ್ನು ಗುರುತಿಸಿ ಅವುಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿ ಜನವಿರೋಧಿ, ಅಪ್ರಜಾತಾಂತ್ರಿಕ ಆಳುವ ವರ್ಗಗಳ ನಿಜಬಣ್ಣವನ್ನು ಬಯಲುಗೊಳಿಸಿದ್ದಾರೆ.
ದೇಶದಲ್ಲಿ ಜನಪರ ಹೋರಾಟಗಳನ್ನು ಸಂಘಟಿಸುವ ಯತ್ನ ನಡೆಸಿದರೆ, ಅವರ ಸ್ಥಿತಿ ಏನಾಗುತ್ತದೆ ಎನ್ನುವುದನ್ನು ಜನಪರ ಚಳಿವಳಿಗಾರರಿಗೆ ಎಚ್ಚರಿಕೆಯ ರೂಪದಲ್ಲಿ ತಿಳಿಸುವ
ಉದ್ದೇಶದಿಂದ ಸರಣಿ ಬಂಧನ ನಡೆದಿದೆ. ಅಲ್ಲದೇ ದೇಶದ ಜನಪರವಾದ ಜನ ಚಳವಳಿಯನ್ನು ಬಗ್ಗು ಬಡಿಯುವುದು ಸರಕಾರಗಳ ದುರುದ್ದೇಶವಾಗಿದೆ.
14 ವರ್ಷಗಳ ಹಿಂದಿನ ಪ್ರಕರಣದಲ್ಲಿ ಲೇಖಕಿ ಅರುಂಧತಿ ರಾಯ್ ಮತ್ತು ಶಿಕ್ಷಣ ತಜ್ಞ ಶೇಖ್ ಶೌಕತ್ ಹುಸೇನ್ ಅವರನ್ನು ಯುಎಪಿಎ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲು ಅವಕಾಶ ನೀಡಿದ ನಿರ್ಧಾರವನ್ನು ಕೈಬೀಡಬೇಕು. ಚುನಾವಣಾ ಫಲಿತಾಂಶದ ನಂತರ ಈ ರೀತಿ ಮಾಡಿರುವುದನ್ನು ನೋಡಿದರೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ಪ್ರತೀಕಾರದ ಕ್ರಮ ಈ ಕ್ರಮದ ವಿರುದ್ಧ ಎಲ್ಲಾ ಪ್ರಜಾತಂತ್ರವಾದಿಗಳು ಧ್ವನಿ ಎತ್ತಬೇಕೆಂದು. ಯುಎಪಿಎಯಂತಹ ಗಂಭೀರವಾದ ಸೆಕ್ಷನ್ಗಳ ಅಡಿಯಲ್ಲಿ ಮೊಕದ್ದಮೆಗೆ ಅವಕಾಶ ನೀಡುವ ಮೂಲಕ ಬಿಜೆಪಿ ಸರ್ಕಾರವು ಜನರ ಪ್ರಜಾತಾಂತ್ರಿಕ ಹಕ್ಕುಗಳ ಧ್ವನಿಯನ್ನು ಹೊಸಕಿ ಹಾಕುವ ಉದ್ದೇಶವನ್ನು ಹೊಂದಿದೆ ಎಂಬುದು ಸ್ಪಷ್ಟವಾಗಿದೆ. ಅರುಂಧತಿರಾಯ್ ಅವರ ಮೇಲೆ ಯುಎಪಿಎ ಸೆಕ್ಷನ್ ಅಡಿಯಲ್ಲಿ ಕ್ರಮ ಜರುಗಿಸಲು ನೀಡಿರುವ ಅನುಮತಿಯನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಕಾಯ್ದೆ ರದ್ದುಗೊಳಿಸಬೇಕೆಂದು ಸಿಪಿಐಎಂಎಲ್ ಲಿಬರೇಶನ್ ಒತ್ತಾಯಿಸುತ್ತಿದೆ.
2010ರಲ್ಲಿ ನಡೆದಿದ್ದ ಸಮಾರಂಭವೊಂದರಲ್ಲಿ ಭಾಷಣಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಲೇಖಕಿ ಅರುಂಧತಿ ರಾಯ್ ವಿರುದ್ಧ ಭಯೋತ್ಪಾದನಾ-ವಿರೋಧಿ ಕಾನೂನು (ಯುಎಪಿಎ) ಅಡಿಯಲ್ಲಿ ತನಿಖೆ ನಡೆಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಿರ್ದೇಶನ ನೀಡಿರುವುದು ಖಂಡನೀಯ,
ಈ ಘಟನೆಯನ್ನೇ ನೆಪವಾಗಿಟ್ಟುಕೊಂಡು ಅತ್ಯಂತ ಕಠಿಣ ಕಾನೂನಿನಡಿಯಲ್ಲಿ ಯಾವುದೇ ಸಾಕ್ಷಾಧಾರಗಳಿಲ್ಲದೇ ಅವರ ವಿರುದ್ಧ ಸುಳ್ಳು ಕೇಸ್ ದಾಖಲಿಸಿರುವುದು ಇದರ ಉದ್ದೇಶ ಎಲ್ಲ ಮಾನವ ಹಕ್ಕು ಹೋರಾಟಗಾರರನ್ನು, ದಲಿತ ಚಿಂತಕರನ್ನು ಜೈಲಿಗಟ್ಟಿ ನ್ಯಾಯವನ್ನು ಶಾಶ್ವತವಾಗಿ ಸಮಾದಿ ಮಾಡುವುದಾಗಿದೆ. ಹಾಗಾಗಿ ಕೂಡಲೇ ಸುಳ್ಳು ಕೇಕ್ಗಳನ್ನು ವಜಾಗೊಳಿಸಿ, ಮಾನವ ಹಕ್ಕುಗಳ ಹೋರಾಟಗಾರರು, ದಲಿತ, ದಮನಿತರ ಪರ ಚಿಂತಕರನ್ನು ಬಿಡುಗಡೆಗೊಳಿಸುವ ಮೂಲಕ ನ್ಯಾಯಪರತೆ ಎತ್ತಿಹಿಡಿಯಬೇಕು ಆ ಮೂಲಕ ಜನವಿರೋಧಿ ನಿಲುವುಗಳಿಗೆ ಕಡಿವಾಣ ಹಾಕಬೇಕೆಂದು ಸಿಪಿಐಎಂಎಲ್ ಲಿಬರೇಶನ್ ಆಗ್ರಹಿಸುತ್ತೇವೆ.
ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ,ಕೆ ಪರಸಪ್ಪ ತಾಲೂಕು ಸಮಿತಿ ಸದಸ್ಯ,ಎಂ ಯು ಕರಿಬಸಯ್ಯ ಕೆ ಅಯ್ಯನಹಳ್ಳಿ ಗ್ರಾಮದ ಘಟಕದ ಅಧ್ಯಕ್ಷ,ಪಿ ಚಂದ್ರಶೇಖರ್ ಡಿಎಸ್ಎಸ್ ತಾಲೂಕ ಅಧ್ಯಕ್ಷರು ,ಮಲ್ಲನಾಯಕನಹಳ್ಳಿ ಅಂಜಿನಪ್ಪ ,ದುರ್ಗದಾಸ್ ಮಂಗನಹಳ್ಳಿ ,ಗಣೇಶ್ ,ಸಿದ್ದಲಿಂಗ ಸ್ವಾಮಿ ಗ್ರಾಮ ಪಂಚಾಯಿತಿ ಸದಸ್ಯರು, ಕರಿಮ್, ಅಬ್ದುಲ್ ಸಾಬ್, ಹಸೇನ್ ಜಿ ಶಾನ್, ಸಿಪಿಐ ವೆಂಕಟಸ್ವಾಮಿ , ಹಾಗೂ ಪೋಲಿಸ್ ಸಿಬ್ಬಂದಿಯ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ