ಕಾನೂನು ಎಲ್ಲರೂ ಗೌರವಿಸಿ,ಜೀವನದಲ್ಲಿ ಅಳವಡಿಸಿಕೊಳ್ಳಿ : ವೆಂಕಟೇಶ ನಾಯಕ ಪಿಎಸ್ಐ
*ಮಸ್ಕಿ* ತಾಲ್ಲೂಕಿನ ಹಾಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಜಂಗಮರಹಳ್ಳಿಯಲ್ಲಿ ನಡೆದ ಮಸ್ಕಿ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನಿಂದ ಎನ್ ಎಸ್ ಎಸ್ ಶಿಬಿರದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು, ಪ್ರಥಮದಲ್ಲಿ ಪ್ರಾಸ್ತಾವಿಕ ನುಡಿಯನ್ನು ಎನ್ ಎಸ್ ಎಸ್ ಅದಿಕಾರಿ ಶಿವಗ್ಯಾನಪ್ಪ ಮಾತನಾಡಿದರು. ನಂತರ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಕವಿತಾಳ ಪೊಲೀಸ್ ಠಾಣಿ ಪಿಎಸ್ಐ ವೆಂಕಟೇಶ ನಾಯಕ ರವರು ಕಾನೂನು ಅರಿವು ಮತ್ತು ನೆರವು ಎಂಬ ವಿಷಯದ ಕುರಿತು ಮಾತನಾಡುತ್ತಾ ನಮ್ಮ ದೇಶದ ಕಾನೂನು ಬಹಳಷ್ಟು ವಿಶೇಷವಾದ ಕಾನೂನುನಾಗಿದ್ದು, ಪ್ರತಿಯೊಬ್ಬ ಭಾರತೀಯರು ಕಾನೂನು ಚೌಕಟ್ಟನ್ನು ಮೀರದಂತೆ ಕೆಲಸ ಮಾಡಬೇಕು,ಯಾರು ಕಾನೂನಿನ ವಿರುದ್ದ ಕೆಲಸ ಮಾಡಿದರೆ ಯಾರೆ ಆಗಲಿ ಶಿಕ್ಷೆ ತಪ್ಪಿದ್ದಿಲ್ಲ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ರಾಮಣ್ಣ.ಎ ಸಹ ಪ್ರಾಧ್ಯಾಪಕರು ಮಾತನಾಡಿ ಎನ್ ಎಸ್ ಎಸ್ ಶಿಬಿರದಲ್ಲಿ ವಿದ್ಯಾರ್ಥಿಗಳು ಶಿಸ್ತು, ನಾಯಕತ್ವ, ಗ್ರಾಮೀಣ ಜನರ ಬದುಕಿನ ಸಮಸ್ಯೆ ಇನ್ನಿತರ ಎಲ್ಲಾ ಸಂಗತಿಗಳು ಶಿಬಿರದಲ್ಲಿ ಕಾಣುತ್ತಿರಿ ಇದೊಂದು ಭವಿಷ್ಯದಲ್ಲಿ ಅನುಭವ ತರುವ ಮಹತ್ವಪೂರ್ಣ ಕಾರ್ಯಕ್ರಮ ಎಂದು ಹೇಳಿದರು.ಕಾರ್ಯಕ್ರಮ ಸಾನಿದ್ಯವನ್ನು ಶ್ರೀ ದಂಡಗುಂಡಪ್ಪತಾತ , ಶ್ರೀ ಬಸವಲಿಂಗತಾತ, ಅತಿಥಿಗಳಾಗಿ ಎರಿತಾತ ಪಾಟೀಲ್, ಬಸವರಾಜ ರಾಮತ್ನಾಳ,ಮಹಾಂತೇಶ ಅಂಗಡಿ,ನಾಗೇಶ ಪ್ರಚಾರ್ಯರು,ಸಿದ್ದಾರ್ಥ ಪಾಟೀಲ್, ಬಸವರಾಜ ,ವೆಂಕಟೇಶ ಸಾಹುಕಾರ್, ಚಂದ್ರಶೇಖರ, ಉಪನ್ಯಾಸಕರಾದ ಡಾ.ಪಂಪಾಪತಿ, ಡಾ.ವಿರುಪನಗೌಡ, ಸುರೇಶ ಬಳಗನೂರು,ವಿರೇಶ, ಚಿದಾನಂದ ಇದ್ದರು ನಂತರ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಕಿರು ನಾಟಕ ನಡೆಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ