ಸರ್ವಧರ್ಮ ಸೇವಾ ವೆಲ್ಪೇರ್ ಟ್ರಸ್ಟ್ (ರಿ) ವತಿಯಿಂದ ಉಚಿತವಾಗಿ ಚರ್ಮ ಶಿಲ್ಪಗಳಿಗೆ ನೆರಳಿನ ಚತ್ರಿ ಶಾಲೆ ಮಕ್ಕಳಿಗೆ ನೋಟ್ ಬುಕ್ ವಿತರಣೆ
ಮಸ್ಕಿ : ಸರ್ವಧರ್ಮ ಸೇವಾ ವೆಲ್ಪೇರ್ ಟ್ರಸ್ಟ್ (ರಿ)ಮಾನವಿ ಇವರ ವತಿಯಿಂದ ಪಟ್ಟಣದ ಅಂಬೇಡ್ಕರ್ ವೃತ್ತದ ಹತ್ತಿರ ಇಂದು ಉಚಿತವಾಗಿ
ಚರ್ಮ ಶಿಲ್ಪಗಳಿಗೆ ನೆರಳಿನ ಚತ್ರಿ ವಿತರಣೆ ಹಾಗೂ,ಶಾಲೆ ಮಕ್ಕಳಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮ ನೆಡೆಯಿತು.
ಸರ್ವಧರ್ಮ ಸೇವಾ ವೆಲ್ಪೇರ್ ಟ್ರಸ್ಟ್ (ರಿ) ಸಂಘದ ಸಂಸ್ಥಾಪಕರಾದ ಹನುಮಂತ ಕೋಟೆ ಮಾನ್ವಿ ರವರು ಮಾತನಾಡಿ ದಿನ ದಲಿತರು ಬಡವರ ಹೀಗೆ ಅನೇಕ ಅನಾಥ,ಅಂಗವಿಕಲರ ಸೇವೆ ಮಾಡುವ ಅವಕಾಶ ಸಿಕ್ಕಿದು ನನ್ನ ಪುಣ್ಯವಾಗದೆ ಎಂದರು.
ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಶಾಲಾ ಬ್ಯಾಗ್‌ನ್ನು ದಲಿತ ಸಾಹಿತಿಗಳಾದ ದಾನಪ್ಪ ನೀಲೋಗಲ್
ವಿತರಿಸಿದರು ನಂತರ ಮಾತನಾಡಿದ ಅವರು ಸಾಕಷ್ಟು ಜನ ಹಣವಂತರಿದ್ದರೂ ಕೊಡುವ ಮನಸ್ಸಿರುವುದಿಲ್ಲ. ಆದರೆ ಹನುಮಂತಪ್ಪ ಕೋಟೆ ಮಾನ್ವಿ ರವರ ಸೇವೆ ನಿಸ್ವಾರ್ಥ ಸೇವೆಯಾಗಿದ್ದು, ಅವರು ಗಳಿಸಿದ ಹಣದಲ್ಲಿ ಸ್ವಲ್ಪ ಬಾಗವನ್ನು ಸಮಾಜ ಸೇವೆಗೆ ಮೀಸಲಿರಿಸುವ ಮೂಲಕ ತಮ್ಮ ಜೀವನವನ್ನು ಸಾರ್ಥಕ ಪಡೆಸಿಕೊಳ್ಳುತ್ತಿದ್ದಾರೆ. ಆ ದೇವರು ಅವರಿಗೆ ಆಯೂರಾರೋಗ್ಯ ಸಿರಿ ಸಂಪತ್ತು ಕರುಣಿಸಿ ಇನ್ನು ಹೆಚ್ಚಿನ ಸಮಾಜ ಸೇವೆ ಮಾಡಲು ಶಕ್ತಿ ನೀಡಲಿ ಎಂದು ಹರಸಿದರು.
ಅದೇ ರೀತಿ, ದಲಿತ ಮುಖಂಡರಾದ ದೊಡ್ಡಪ್ಪ ಮುರಾರಿ ಮಾತನಾಡಿ,ಇಂದಿನ ಜಾಗತಿಕ ಯುಗದಲ್ಲಿ ವಿಶ್ವ ಒಂದು ಹಳ್ಳಿಯಾಗುತ್ತಿದ್ದರೂ ಬಡವರು ಕಡುಬಡತನದಲ್ಲಿಯೇ ಜೀವನ ಸವೆಸುತ್ತಿದ್ದಾರೆ. ಇಂತಹ ಕುಟುಂಬಗಳ
ವಿದ್ಯಾರ್ಥಿಗಳು ಇಂದಿಗೂ ಸಹ ನೋಟ್ ಪುಸ್ತಕ ಮತ್ತಿತರ ಸಲಕರಣೆಗಳನ್ನು ಕೊಳ್ಳುವುದು ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ಸರ್ವಧರ್ಮ ಸೇವಾ ವೆಲ್ಪೇರ್ ಟ್ರಸ್ಟ್ (ರಿ)ಮಾನವಿ ಇವರ ವತಿಯಿಂದ ಚರ್ಮ ಶಿಲ್ಪಗಳಿಗೆ
ಉಚಿತವಾಗಿ ನೆರಳಿನ ಚತ್ರಿವಿತರಣೆ ಹಾಗೂ ಗ್ರಾಮೀಣ ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗಾಗಿ ನೋಟ್ ಪುಸ್ತಕ, ಬ್ಯಾಗ್ ವಿತರಿಸುತ್ತಿರುವುದು ಶ್ಲಾಘನೀಯ ಎಂದರು.
ಈ ವೇಳೆ, ದಲಿತ ಸಾಹಿತ್ಯ ದಾನಪ್ಪ ನಿಲೋಗಲ್ , ದೊಡ್ಡಪ್ಪ ಮುರಾರಿ,ಯೇಸುರಾಜ್ ಗುತ್ತಿದಾರರು, ಕೆ.ರಾಮಚಂದ್ರ,ಸಿದ್ದು ಮುರಾರಿ, ಮಲ್ಲಪ ಎಸ್ ಗೋನಾಳ, ಮಹಿಬೂಬು ಹಣಿಗಿ,ರಾಮಚಂದ್ರ, ದೇವರಾಜ್ ಮಾರಲದಿನ್ನಿ,ಸಚಿನ್ ಮುರಾರಿ ಮೌನೇಶ್ ಹಸ್ಮಕಲ್,ಹುಸೇನ್ ನಾಗಲಾಪುರ,ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ