ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಆಹ್ವಾನ : ಹನುಮಂತಪ್ಪ ಕೌದಿ

ವರದಿ - ಮಂಜುನಾಥ್ ಕೋಳೂರು ಕೊಪ್ಪಳ

ಕೊಪ್ಪಳ, :- ಹಾಲುಮತ ಮಹಾಸಭಾದಿಂದ ಕೊಪ್ಪಳ ತಾಲೂಕಿನ ಕುರುಬ ಸಮಾಜದ ಪ್ರತಿಭಾನ್ವಿತ 2023- 24ನೇ ಸಾಲಿನ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ ಹೇಳಿದರು.

ಅವರು ಮಂಗಳವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ಕೊಪ್ಪಳ ತಾಲೂಕಿನ ಕುರುಬ ಸಮಾಜದ ಪ್ರತಿಭಾನ್ವಿತ 2023-24 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಶೇ. 85%ಕ್ಕಿಂತ ಹೆಚ್ಚು ಅಂಕ ಪಡೆದ ಮತ್ತು ದ್ವಿತೀಯ ವರ್ಷದ ಪಿಯುಸಿಯ ವಾಣಿಜ್ಯ.ಕಲಾ & ಶಿಕ್ಷಣ ವಿಭಾಗದಲ್ಲಿ ಶೇ. 85%ಕ್ಕಿಂತ ಹೆಚ್ಚು ಅಂಕ ಪಡೆದ ಮತ್ತು ವಿಶೇಷವಾಗಿ ದ್ವಿತೀಯ ವರ್ಷದ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಶೇ. 80%ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತರು ಅರ್ಜಿ ಪ್ರತಿಯೊಂದಿಗೆ 1.ಅಂಕಪಟ್ಟಿ 2) ಜಾತಿ ಪ್ರಮಾಣ ಪತ್ರ ಅಥವಾ ವರ್ಗಾವಣೆ ಪ್ರಮಾಣ ಪತ್ರ 3) ಎರಡು ಪಾಸ್ ಪೋರ್ಟ್ ಫೋಟೋ ದೊಂದಿಗೆ ಅರ್ಜಿಯನ್ನು ಶ್ರೀಲಕ್ಷ್ಮೀನಾರಾಯಣ ಜೆರಾಕ್ಸ್ ಸೆಂಟರ್-9611083605. ತಿಕೋಟಿಕರ್ ವೆಟ್ರೋಲ್ ಬಂಕ್ ಹತ್ತಿರ ಸೆಂಟ್ರಲ್ ಬಸ್ ನಿಲ್ದಾಣ ಕೊಪ್ಪಳ ಇಲ್ಲಿಗೆ ಇದೇ ತಿಂಗಳು ಜೂನ್ 19 ರೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹಾಲುಮತ ಮಹಾಸಭಾ ಉಪಾಧ್ಯಕ್ಷರಾದ ಕುಬೇರ್ ಮಜ್ಜಿಗಿ,ಹನುಮಂತಪ್ಪ ಹನುಮಪುರ,ತಾಲೂಕು ಅಧ್ಯಕ್ಷ ಮುದ್ದಪ್ಪ ಬೇವಿನಹಳ್ಳಿ,ತಾಲೂಕ ನಗರ ಘಟಕದ ಉಪಾಧ್ಯಕ್ಷ ಮಂಜುನಾಥ್ ಮ್ಯಾಗಳ ಮನಿ ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ್ ಗುರಿಕಾರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪರುಶುರಾಮ್ ಅಣ್ಣಿಗೇರಿ ಉಪಸ್ಥಿತರಿದ್ದರು 

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : 9964461710, 9880498305 ಸಂಪರ್ಕಿಸಲು ತಿಳಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ