ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿ ಐತಿಹಾಸಿಕ
೦೯ ಕೊಟ್ಟೂರು ೦೨
ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ೨೦೨೪ರ ಎನ್‌ಡಿಎ ಮೈತ್ರಿಕೂಟವು ೨೯೩ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದಿದ್ದು, ಟಿಡಿಪಿ, ಜೆಡಿಯು, ಎಲ್‌ಜೆಪಿ, ಜೆಡಿಎಸ್ ಸೇರಿ ಹಲವು ಮಿತ್ರಪಕ್ಷಗಳೊಂದಿಗೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತಿದೆ.
ಮೋದಿ ಪ್ರಮಾಣವಚನ ಕಾರ್ಯಕ್ರಮದ ನಿಮಿತ್ತ ಕೊಟ್ಟೂರಿನಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದರು. ಪಟ್ಟಣದ ಶ್ರೀಗುರು ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ದ್ವಾರಬಾಗಿಲಿನಿಂದ ಪ್ರಾರಂಭಿಸಿ ಮುಖ್ಯ ರಸ್ತೆ, ಉಜ್ಜಯಿನಿ ರಸ್ತೆ, ರೇಣುಕ ಟಾಕೀಸ್ ರಸ್ತೆ, ಬಸ್‌ನಿಲ್ದಾಣದ ಮುಂಬಾಗ , ಎಪಿಎಂಸಿ ಮುಖಾಂತರ ಮರಿಕೊಟ್ಟೂರೇಶ್ವರ ದೇವಸ್ಥಾನದವರೆಗೆ ಬೈಕ್ ರಾಲಿ ಕೈಗೊಂಡರು. ಮೋದಿ ಪ್ರಧಾನಿ ಮೂರನೇ ಅವಧಿಯ ವಿಜಯೋತ್ಸವ ಬಿಜೆಪಿ ಕಾರ್ಯಕರ್ತರು ಆಚರಿಸಿ ಸಹಿ ಹಂಚಿದರು..
ಸAದರ್ಭದಲ್ಲಿ ಬಿಜೆಪಿ ಘಟಕದ ಅಧ್ಯಕ್ಷ ಪಿ.ಭರಮನಗೌಡ , ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಕೆ.ಎಸ್.ಈಶ್ವರಗೌಡ, ಬೋರ್‌ವೆಲ್ ತಿಪ್ಪೇಸ್ವಾಮಿ, ಅಂಗಡಿ ಪಂಪಾಪತಿ, ಶಿವಪ್ರಕಾಶ್ , ಜಿ.ಸಿದ್ದಯ್ಯ, ಗುರ, ಅಭಿಷೇಕ್, ಡೊಂಬಳ ಮಲ್ಲಿಕಾರ್ಜುನ, ಕೊನಾಪುರ ಬಸವರಾಜ, ಸೋಮಶೇಖರಗೌಡ ಮತ್ತಿತರರು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಕೊಟ್ -೧
ಜವಾಹರಲಾಲ್ ನೆಹರೂ ನಂತರ ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದು, ಈ ಐತಿಹಾಸಿಕ ಸಮಾರಂಭಕ್ಕೆ ವಿವಿಧ ದೇಶಗಳ ಗಣ್ಯರೂ ಭಾಗವಹಿಸಲಿದ್ದಾರೆ -ಬಿ.ಆರ್.ವಿಕ್ರಮ್ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ