ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ : ವಿಜಯಲಕ್ಷ್ಮಿ ಮುಖ್ಯ ಶಿಕ್ಷಕರು

ಲಿಂಗಸಗೂರು : ಹಟ್ಟಿ ಚಿನ್ನದ ಗಣಿ ಸಮೀಪದ ಸರಕಾರಿ ಪ್ರೌಢಶಾಲೆಯಲ್ಲಿ ಇಂದು ಪರಿಸರ ದಿನಾಚರಣೆಯನ್ನು ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಯಿಂದ 5 ಸಸಿಗಳನ್ನು ನೆಡುವುದರ ಮೂಲಕ ಪರಿಸರ ಪ್ರಜ್ಞೆ ಮೆರೆದರು.

ಅದೇ ರೀತಿ ಊರಿನ ಶಿಕ್ಷಣ ಪ್ರೇಮಿ ಹಾಗೂ ಸಮಾಜಸೇವಕರಾದ ಮೌನುದ್ದೀನ್ ಬೂದಿನಾಳರವರು ಸಸಿ ನೆಡುವುದರ ಮೂಲಕ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಜಾಣರ ಗುರು ದಿನಪತ್ರಿಕೆನ್ನು ಶೈಕ್ಷಣಿಕ ವರ್ಷ ಮುಗಿಯುವವರೆಗೂ ಪ್ರತಿ ವಿದ್ಯಾರ್ಥಿಗಳಿಗೆ ಒಂದೊಂದು ನೀಡುವುದರ ಮೂಲಕ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ 

ಚುಕ್ಕನಟ್ಟಿ.ಮತ್ತು ಉನ್ನತಿ ಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇನಗನೂರು ಶಾಲೆಗಳಿಗೆ.ಶೈಕ್ಷಣಿಕ ವರ್ಷ ಮುಗಿಯುವ ತನಕ ಪ್ರತಿದಿನ ಒಂದೊಂದು ದಿನ ಪತ್ರಿಕೆ ಕೊಡುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.

ಪರಿಸರ ದಿನಾಚರಣೆ ಕುರಿತು ಮಾತನಾಡಿದ ವಿಜ್ಞಾನ ಶಿಕ್ಷಕರಾದ ರಾಘವೇಂದ್ರರವರು ಪರಿಸರ ದಿನಾಚರಣೆ ಮೊದಲ ಬಾರಿ 1972 ರಲ್ಲಿ ಜಾರಿಗೆ ಬಂದಿದ್ದು. (UNEP)ಯುಎನ್ಇಪಿ ಮೂಲಕ ಆಚರಿಸಲಾಯಿತು. ಪ್ರತಿವರ್ಷವು ಒಂದೊಂದು ದೇಶ ವಿಶ್ವ ಪರಿಸರ ದಿನಾಚರಣೆಯ ಆತಿಥ್ಯವನ್ನು ವಹಿಸುತ್ತವೆ.ನಮ್ಮ ಭಾರತ ದೇಶ 2011 ರಲ್ಲಿ ವಹಿಸಿತ್ತು ಎಂದರು.

ಈ ವರ್ಷ ಪರಿಸರ ದಿನಾಚರಣೆಯ ಥೀಮ್ "ನಮ್ಮ ಭೂಮಿ" ಮರುಭೂಮೀಕರಣ ತಡೆಯುವುದಾಗಿದೆ ಎಂದರು.

ನಂತರ ಮಾತನಾಡಿದ ಎಸ್ ಡಿ ಎಂ ಸಿ ಅಧ್ಯಕ್ಷರಾದ ಚಿನ್ನಪ್ಪ ಕೊಟ್ರಿಕಿಯವರು ಪರಿಸರ ದಿನ ಒಂದೇ ದಿನಕ್ಕೆ ಸೀಮಿತವಾಗದೇ ನಿರಂತರವಾಗಿರಬೇಕು. ಎಲ್ಲಾ ವಿದ್ಯಾರ್ಥಿಗಳು ಪರಿಸರದ ಮೇಲೆ ಖಾಳಜಿ ವಹಿಸಬೇಕು ಎಂದರು.

ನಂತರ ಮಾತನಾಡಿದ ಶಾಲೆಯ ಮುಗು ಶ್ರೀಮತಿ ವಿಜಯಲಕ್ಷ್ಮೀ ಯವರು ಪ್ರತಿಯೊಬ್ಬರು ಪ್ರತಿ ವರ್ಷ ತಲಾ ಎರಡೆರಡು ಸಸಿಗಳನ್ನು ನೆಡಿ.ಹಾಗೂ ಪ್ರಕೃತಿಯು ತಾಯಿಯಂತೆ ಮನುಷ್ಯನಿಗೆ ಸರ್ವಸ್ವವನ್ನು ನೀಡಿ ಸಲಹುತ್ತದೆ ಇಂತಹ ನಿರ್ವಾಜ ಪ್ರೀತಿಯ ಅಮೂಲ್ಯ ಪರಿಸರ ಸಂಪತ್ತನ್ನು ಉಳಿಸಿ ಬೆಳೆಸೋಣ ಎಲ್ಲರಿಗೂ ಪರಿಸರದ ಮಹತ್ವವನ್ನು ಸಾರೋಣ.ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಮಾತನಾಡಿದರು.

ದೈಹಿಕ ಶಿಕ್ಷಕರಾದ ಮುಸ್ತಾಖ್ ಅಹ್ಮದ್ ರವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸುವುದರ ಜೊತೆ ಪರಿಸರವೇ ಅಂತೀಮ ಅದುವೇ ನಿತ್ಯಸತ್ಯ ಎಂದರು. 

ಕಾರ್ಯಕ್ರಮದಲ್ಲಿ ಸಹಶಿಕ್ಷಕರಾದ ಸುರೇಖಾ,ರವೀಂದ್ರಸ್ವಾಮಿ, ಶಿಕ್ಷಣ ಪ್ರೇಮಿ ಮೌನುದ್ದೀನ್ ಬೂದಿನಾಳ,ಪತ್ರಕರ್ತರಾದ ವಿಘ್ನೇಶ್,ಮೋಧಿನ್ ಸಾಬ್

 ಎಸ್ ಡಿ ಎಂ ಸಿ ಉಪಾಧ್ಯಕ್ಷರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಚುಕ್ಕನಟ್ಟಿ ಹಾಗೂ ಶಾಲೆಯ ಮುದ್ದು ಮಕ್ಕಳು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ