ಸಸಿ ನೆಡುವುದರಿಂದ ಆರೋಗ್ಯ ಸಮೃದ್ಧಿ ಶ್ರೀ ಶ್ರೀ ಶ್ರೀ ವಾಮದೇವ ಶಿವಾಚಾರ್ಯರು ಕರೆ

ಮಸ್ಕಿ : ತಾಲೂಕಿನ ಅಂಕುಶದೊಡ್ಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜನೆ ಮಾಡಿದ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಸಿ ನೆಡುವುದರಿಂದ ಆರೋಗ್ಯ ಸಮೃದ್ಧಿ ಎಂದು ಷಡಕ್ಷರಿ ಬ್ರಹ್ಮ ಶ್ರೀ ಶ್ರೀ ಶ್ರೀ ವಾಮದೇವ ಶಿವಾಚಾರ್ಯರು ಸಸಿ ನೆಡುವ ಮುಖಾಂತರ ಕರೆ ನೀಡಿದರು. 

ಪ್ರಾಸ್ತಾವಿಕವಾಗಿ ಶ್ರೀ ಶಾಂತಪ್ಪ ಸೋಮನಮರಡಿ ಉಜ್ಜೀವನ ಯೋಜನೆಯ ಸಂಯೋಜಕರು ಶುದ್ಧ ನೀರು ಶುದ್ದ ಗಾಳಿ ಶುದ್ಧ ಪರಿಸರ ಸಂರಕ್ಷಣೆ ಮಾಡುವದಕ್ಕೆ ಸಸಿ ನೆಡುವುದು ಅಗತ್ಯ ಇದೆಯೆಂದು ಮಾತನಾಡಿದರು. 

ನಂತರ ಶಾಲಾ ಮುಖ್ಯೋಪಾಧ್ಯಯರಾದ ಶ್ರೀ ದುರ್ಗಣ್ಣ ಮುಖ್ಯ ಶಿಕ್ಷಕರು ಇವರು ಮನೆಗೊಂದು ಮರ ಊರಿಗೊಂದು ವನ ಎಂದು ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. 

ಈ ಕಾರ್ಯಕ್ರಮದಲ್ಲಿ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರಾದ ಶೇಖರಪ್ಪ ಕಾಟಿಗಲ್, ಗ್ರಾಮ ಪಂಚಾಯತಿ ಸದಸ್ಯರಾದ ಮಾನಪ್ಪ, ಗ್ರಾಮದ ಹಿರಿಯರಾದ ಸಿದ್ದಯ್ಯ ಸ್ವಾಮಿ, ಮುದುಕಪ್ಪ ಪರಾಪುರ. ಹನುಮಂತ ಬೆನಕನಾಳ, ವಿಜಯ ಕಾಟಗಲ, ಅಮೃತಮ್ಮ ಮುದ್ಬಾಳ, ಶಾಲಾ ಶಿಕ್ಷಕ ವೃಂದದವರು ,ಸ್ಥಳೀಯ ರೈತರು,ಮುದ್ದು ಮಕ್ಕಳು, ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ