ಪೋಸ್ಟ್‌ಗಳು

75ನೇ ಸಂವಿಧಾನ ಸಮರ್ಪಣಾ ದಿನಾಚರಣೆ- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಕೀಲರ ಸಂಘದ ನೂತನ ಸಂಘದ ಉದ್ಘಾಟನೆ

ಇಮೇಜ್
ಬೆಂಗಳೂರು; 75ನೇ ಸಂವಿಧಾನ ಸಮರ್ಪಣಾ ದಿನಾಚರಣೆಯ ಅಂಗವಾಗಿ 26 ರಂದು ಬೆಂಗಳೂರು ಯುವನಿಕ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಕೀಲರ ಸಂಘದ ನೂತನ ಸಂಘದ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ  ಮೈಸೂರು ಉರಿಲಿಂಗಪೆದ್ದಿ ಮಠದ ಸ್ವಾಮೀಜಿ ಶ್ರೀ ಪರಮಪೂಜ್ಯ ಜ್ಞಾನಪ್ರಕಾಶ ಅವರುಗಳು ಉದ್ಘಾಟನೆ ಮಾಡಲಿದ್ದಾರೆ ಕ.ರಾ.ಪ.ಟಾ ಪ.ಪಂ.ವ.ಸಂ(ರಿ). ಅಧ್ಯಕ್ಷರಾದ ಎಂ. ಮುನಿಯಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಛನ್ಯಾಯಾಲಯ, ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್‌, ಕೃಷ್ಣ ಎನ್ ದೀಕ್ಷಿತ್‌ ಗೃಹ ಸಚಿವ ಜಿ. ಪರಮೇಶ್ವರ್‌ ಸಚಿವರುಗಳಾದ ಡಾ| ಹೆಚ್.ಸಿ. ಮಹದೇವಪ್ಪ, ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷ ಭಕ್ತವಚ್ಚಲರ, ಕರ್ನಾಟಕ ಉಚ್ಚ ನ್ಯಾಯಾಲಯ ಅಡಿಷನಲ್ ಅಡ್ವಕೇಟ್ ಜನರಲ್ ಎಸ್.ಎ. ಅಹಮದ್‌ ಅವರುಗಳು ಭಾಗವಹಿಸಲಿದ್ದಾರೆ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷರಾದ ಎಂ.ಮುನಿಯಪ್ಪ, ಶ್ರೀ.ಭಕ್ತವತ್ಸಲ, ಎಂ.ಕುಂಭಯ್ಯ, ಎಸ್.ಬಿ.ಸುರೇಶ್, ಮುನಿರಾಜು, ಕೆ.ಪಿ.ವೆಂಕಟೇಶ್, ಗೋಪಾಲ್, ಟಿ.ಎಲ್.ನಾಗರಾಜ್, ಚಂದ್ರಶೇಖ‌ರ್, ಮಾರಪ್ಪ, ಸಂಪತ್ ಕುಮಾರ್ ಭಾಗವಹಿಸಿದ್ದರು

*ಶ್ರೀ ಕ್ಷೇತ್ರ ಸಿರಸಂಗಿ ಶ್ರೀ ಕಾಳಿಕಾದೇವಿ ದೇವಸ್ಥಾನಕ್ಕೆ ಪಾದಯಾತ್ರೆ ಜಾಲಿಹಾಳ ವಿಶ್ವಕರ್ಮ ಬಂಧುಗಳಿಂದ ಸನ್ಮಾನ,ಹಣ್ಣು,ಹಂಪಲು ವಿತರಣೆ*

ಇಮೇಜ್
ಸಿಂಧನೂರು ತಾಲೂಕಿನ ಮುಕುಂದ ಗ್ರಾಮದ ಶ್ರೀ ಕಾಳಿಕಾದೇವಿ ದೇವಸ್ಥಾನದಿಂದ ಸಿರಸಂಗಿ ಶ್ರೀ ಕಾಳಿಕಾದೇವಿ ದೇವಸ್ಥಾನದವರೆಗೆ ಕಾರ್ತೀಕ ಮಾಸದ ಅಂಗವಾಗಿ ಇಂದು ನಾಡಿನ ಹಾಗೂ ವಿಶ್ವಕರ್ಮ ಸಮಾಜದ ಒಳಿತಿಗಾಗಿ ಮುಕ್ಕುಂದ ಶ್ರೀ ಕಾಳಿಕಾದೇವಿ ದೇವಸ್ಥಾನದ ಅರ್ಚಕರಾದ ಬಸವರಾಜ ಆಚಾರಿ ಇವರ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.ಈ ಪಾದಯಾತ್ರೆ ಅತ್ಯಂತ ಯಶಸ್ವಿಯಾಗಲೆಂದು ಚನ್ನಳ್ಳಿ ಕ್ರಾಸ್ ಬಳಿ ಜಾಲಿಹಾಳ ಹೋಬಳಿ ವಿಶ್ವಕರ್ಮ ಬಂಧುಗಳು ಪಾದಯಾತ್ರೆ ನೇತೃತ್ವ ವಹಿಸಿದ ಶ್ರೀ ಬಸವರಾಜ ಆಚಾರಿ ಅವರಿಗೆ ಸನ್ಮಾನಿಸಿ,ಗೌರವಿಸಿ ಹಣ್ಣು, ಹಂಪಲುಗಳನ್ನು ನೀಡಿ ಪಾದಯಾತ್ರೆಗೆ ಚಾಲನೆ ನೀಡಿದರು. ಈ ಪಾದಯಾತ್ರೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದಿಂದ ಪ್ರಾರಂಭವಾಗಿ ಕಾರಟಗಿ,ನಾಗನಕಲ್ಲು(ಲಕ್ಷೀ ದೇವಸ್ಥಾನದಲ್ಲಿ ರಾತ್ರಿ ವಿಶ್ರಾಂತಿ),ತಾವರಗೇರ(ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ರಾತ್ರಿ ವಿಶ್ರಾಂತಿ),ಗಜೇಂದ್ರಗಡ ಪಟ್ಟಣದ(ಮೌನೇಶ್ವರ ದೇವಸ್ಥಾನದಲ್ಲಿ ರಾತ್ರಿ ವಿಶ್ರಾಂತಿ),ಬೇವಿನಹಾಳ(ಉಚ್ಚೀರಪ್ಪ ಅಜ್ಜ ದೇವಸ್ಥಾನದಲ್ಲಿ ರಾತ್ರಿ ವಿಶ್ರಾಂತಿ)ಸುರೇಬಾನ (ಶರಣರ ಮಠದಲ್ಲಿ ರಾತ್ರಿ ವಿಶ್ರಾಂತಿ) ನಂತರ ಈ ಮಾರ್ಗವಾಗಿ ವಿಶ್ವಕರ್ಮರ ಅಧಿದೇವತೆ ಶ್ರೀ ಕ್ಷೇತ್ರ ಸಿರಸಂಗಿ ಶ್ರೀ ಕಾಳಿಕಾದೇವಿ ದೇವಸ್ಥಾನವನ್ನು ತಲುಪಲಿದೆ.ಈ ಪಾದಯಾತ್ರೆ ಯಶಸ್ವಿಗಾಗಲೆಂದು ಈ ನಾಡಿಗೆ ಹಾಗೂ ವಿಶ್ವಕರ್ಮ ಸಮಾಜಕ್ಕೆ ತಾಯಿ ಕಾಳಿಕಾದೇವಿ ಕೃಪೆ ದೊರೆಯಲೆಂದು ಸಿಂಧ

*ಯುನಿಕ್ ಚಾರಿಟಬಲ್ ಸಮಾಜಮುಖಿ ಸೇವೆ ಶ್ಲಾಘನೀಯ : ಷ ||ಬ್ರ||ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು*

ಇಮೇಜ್
ಕೊಟ್ಟೂರು : ಪಟ್ಟಣದ ಯುನಿಕ್ ಚಾರಿಟಬಲ್ ಟ್ರಸ್ಟ್ ಸಮಾಜಮುಖಿ ಕಾರ್ಯಕ್ರಮವನ್ನು ಷ ||ಬ್ರ||ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಿ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇನೆ. ಸಮಾಜಕ್ಕೆ ಉಪಯುಕ್ತವಾದ ಸೇವಾ ಯೋಜನೆಗಳನ್ನು ರೂಪಿಸಿ ಜನರ ಸೇವೆಗೆ ಇದೆ. ಸಂಘಟನೆ ಕಟ್ಟುವ ಮನಸ್ಸು , ಜನಸೇವೆ ಮಾಡುವ ಕನಸು ಸಂಘಟಕರಲ್ಲಿರಬೇಕು. ಯುನಿಕ್ ಟ್ರಸ್ಟ್ ನವರು ತಮ್ಮ ದುಡಿಮೆಯ ಉಳಿತಾಯದಲ್ಲಿ ಇಂಥಾ ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು  ಸೇವಾ ಟ್ರಸ್ಟ್‌ಗಳು ಈ ರೀತಿಯ ಜನ ಉಪಯೋಗಿ ಆರೋಗ್ಯ ಕೇಂದ್ರವನ್ನು ಮಾಡುತ್ತಿರುವುದು ಮೆಚ್ಚುವುದು, ನೇತ್ರ ತಪಾಸಣೆ ಹಾಗೂ ಉಚಿತ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವವರನ್ನು ಮೆಚ್ಚಿಕೊಳ್ಳುವುದು ಬಡವರಿಗೆ ಉಚಿತ ಕನ್ನಡಕ ಕೊಡುವಂತಹ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ರೂಪಿಸಲು ಟ್ರಸ್ಟ್ ಸದಸ್ಯರಿಗೆ ಕೊಟ್ಟೂರು ಸಮುದಾಯ ಆರೋಗ್ಯ ವೈದ್ಯಾಧಿಕಾರಿ ಬದ್ಯಾನಾಯ್ಕ್ ಟ್ರಸ್ಟ್ ಸದಸ್ಯರಿಗೆ ಸಲಹೆ ನೀಡಿದರು ಯುನಿಕ್ ಚಾರಿಟಬಲ್ ಟ್ರಸ್ಟ್ ಸದಸ್ಯರು ತಮ್ಮ ದುಡಿಮೆಯ ಉಳಿತಾಯ ಹಣದಲ್ಲಿ ಸಮಾಜ ಸೇವೆ ನಡೆಯುತ್ತಿದೆ. ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತರು ಹಾಗೂ ಟ್ರಸ್ಟ್ ಸದಸ್ಯರ ಅಭಿಲಾಷೆ ಆರೋಗ್ಯ ಇಲಾಖೆ ವಿಜಯನಗರ ಮತ್ತು ಸಮುದಾಯ ಕೊಟ್ಟೂರು ಹಾಗೂ ಆರೋಗ್ಯ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರಲ್ಲಿ ಈ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರವನ್ನು ಆಯ

ಜೀವನಶೈಲಿಯನ್ನು ಬದಲಾಯಿಸಿ ಸಾವಯವ ಕೃಷಿಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ : ತಹಸೀಲ್ದಾರ್ ಡಾ:ಮಲ್ಲಪ್ಪ. ಕೆ.ಯರಗೋಳ ಕರೆ

ಇಮೇಜ್
  ಮಸ್ಕಿ : ಪಟ್ಟಣದ ಅಮರ ಪ್ರೇಮ ಕಾನ್ವೆಂಟ್ ನಲ್ಲಿ ಬಳ್ಳಾರಿ ಧರ್ಮ ಪ್ರಾಂತ್ಯ ಅಭಿವೃದ್ಧಿ ಸಂಸ್ಥೆಯ ಸಹಕಾರದಲ್ಲಿ ಉಜ್ಜೀವನ ಯೋಜನೆಯ ಸಾವಯವ ಕೃಷಿಯ ಕುರಿತು ಇಲಾಖೆಗಳ ಅಧಿಕಾರಿಗಳ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಜೀವನ ಶೈಲಿಯನ್ನು ಬದಲಾಯಿಸಿ ಸಾವಯ ಕೃಷಿಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ ಎಂದು ತಹಶೀಲ್ದಾರರಾದ ಡಾ : ಮಲ್ಲಪ್ಪ.ಕೆ.ಯರಗೋಳ ಕಾರ್ಯಕ್ರಮವನ್ನು ಉದ್ಘಾಟಿಸಿ ಕರೆ ನೀಡಿದರು.  ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಅಮರೇಗೌಡ ತಾಲೂಕ ಪಶು ವೈದ್ಯಾಧಿಕಾರಿಗಳು ಮಸ್ಕಿ ಇವರು ಪಶು ಇಲಾಖೆಯಿಂದ ದೊರೆಯುವ ಸೌಕರ್ಯಗಳ ಕುರಿತು ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿಗಳಾದ ಶ್ರೀ ಮಲ್ಲಪ್ಪ ಕೆ ವ್ಯವಸ್ಥಾಪಕರು ನೀರಾವರಿಯಲಕ್ಕೆ ಮಸ್ಕಿ ಇವರು ಸಾವಯವ ಕೃಷಿಯ ಮಹತ್ವದ ಕುರಿತು ಮಾತನಾಡಿದರು. ಅತಿಥಿಗಳಾದ ಶ್ರೀ ಅರಳಪ್ಪ ಹಾಗೂ ಯೋಜನಾ ಸಂಯೋಜಕರಾದ ಶಾಂತಪ್ಪ ಸೋಮನಮರಡಿ ಇವರು ಸಾವಯವ ಕೃಷಿಯ ಕುರಿತು ಮಾಹಿತಿಯನ್ನು ತಿಳಿಸಿದರು. ಈ ಕಾರ್ಯಗಾರದಲ್ಲಿ ನೂರಾರು ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡರು.   ಈ ಕಾರ್ಯಕ್ರಮದಲ್ಲಿ ಅಮರ ಪ್ರೇಮ ಕಾನ್ವೆಂಟಿನ ಸಿಸ್ಟರ್ ದೀಪ, ಶ್ರೀ ಮುದುಕಪ್ಪ ಪರಾಪೂರ, ವಿಜಯಕುಮಾರ್ ಕಾಟಿಗಲ್, ಹನುಮಂತ ಬೆನಕನಾಳ ಉಪಸ್ಥಿತರಿದ್ದು ಯಶಸ್ವಿಗೊಳಿಸಿದರು.

ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಿ –ವಿಜ್ಞಾನಿ ಪ್ರೊ.ಎಸ್ ಎಂ ಶಿವಪ್ರಸಾದ್

ಇಮೇಜ್
  ಕೊಟ್ಟೂರು: ನಿಸರ್ಗದ ಬಗ್ಗೆ ಅರ್ಥೈಸಿಕೊಳ್ಳುವುದರ ಜೊತೆಯಲ್ಲಿ ಕುತೂಹಲ ಗುಣ ಬೆಳೆಸಿಕೊಂಡವರು ವಿಜ್ಙಾನಿಗಳಾಗಲು ಸಾಧ್ಯ ಎಂದು ಧಾರವಾಡ ಐಐಟಿ ಪ್ರಾಧ್ಯಾಪಕ  ಹಾಗೂ ವಿಜ್ಞಾನಿ ಪ್ರೊ. ಎಸ್.ಎಂ.ಶಿವಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಗೊರ್ಲಿ ಶರಣಪ್ಪ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ  ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿವಿಧ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶನಿವಾರ ಏರ್ಪಡಿಸಿದ್ದ  ಸಂವಾದ ಕಾರ್ಯಕ್ರಮದಲ್ಲಿ  ‘ ವಿಜ್ಞಾನ  ಅರಿವು ಮತ್ತು ಜಾಗೃತಿ ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಸಂವಾದ ನಡೆಸಿದರು.    ವಿಜ್ಙಾನ ಎಂಬುದು ಸತ್ಯವಾದ ಮತ್ತು ಸುಂದರವಾದ ವಿಷಯವಾಗಿದೆ. ವಿದ್ಯಾರ್ಥಿಗಳು ಕೇವಲ ಪಠ್ಯಕ್ರಮಕ್ಕೆ ಸೀಮಿತವಾಗದೇ ಅದರಾಚೆಗೂ ವ್ಯಾಪಕ ಕಲಿಕೆಗೆ ಒತ್ತು ನೀಡುವತ್ತ ಗಮನ ಹರಿಸಬೇಕು ಹಾಗೂ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳನ್ನು ವೈಜ್ಞಾನಿಕ ಚಿಂತನೆಗೆ ಪ್ರಚೋದಿಸುವ ಹಾಗೂ  ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ    ಉಪನ್ಯಾಸಕರ ಪಾತ್ರ ಮುಖ್ಯವಾಗಿದೆ ಎಂದರು. ಕೇವಲ ಅಂಕಗಳ ಮಾನದಂಡದಿಂದ ವಿದ್ಯಾರ್ಥಿಗಳ ಜಾಣತನ ಅಳೆಯಬಾರದು ಅವರಲ್ಲಿ ಅಡಗಿರುವ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹಿಸುವ ನಿಟ್ಟಿನತ್ತ ಪಾಲಕರು ಹಾಗೂ ಶಿಕ್ಷಕರು ಮುಂದಾಗಬೇಕೆಂದರು.  ಯಂತ್ರಗಳ ಸಹಾಯದಿಂದ ಜಗತ್ತು ಮುನ್ನಡೆಯುವುದರ ಜೊತೆಯಲ್ಲಿ ವಯಸ್ಸನ್ನು ತಡೆಗಟ್ಟುವಂತಹ ತಂತ್ರ

"ಕರ್ನಾಟಕ ಸಂಸ್ಕೃತಿ ನಾಡಿನ ಪರಂಪರೆಯ ತಾಣ"

ಇಮೇಜ್
ಕೊಟ್ಟೂರು: ರಾಜ್ಯ ಸೇರಿ ಪಕ್ಕದ ರಾಜ್ಯಗಳಲ್ಲಿಯೂ ಹರಿದು ಹಂಚಿ ಹೋಗಿದ್ದ ಕನ್ನಡ ಭಾಷೆ ನೆಲಗಳನ್ನು ಒಗ್ಗೂಡಿಸುವ ಉದ್ದೇಶದಿಂದ ನಡೆದ ಕರ್ನಾಟಕ ಏಕೀಕರಣ ಹೋರಾಟ ಕನ್ನಡಿಗರಿಗದು ಎಂದಿಗೂ ಅಸ್ಮಿತೆಯಾಗಿದೆ ಎಂದು ಹಿರಿಯ ವಿದ್ವಾಂಸ ಡಾ.ಕೆ.ರವೀಂದ್ರನಾಥ ಹೇಳಿದರು. ಪಟ್ಟಣದ ಡಾ.ಎಚ್.ಜಿ.ರಾಜ್ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಆಯೋಜಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಕರ್ನಾಟಕ ಏಕೀಕರಣದ ಮಹತ್ವ ಕುರಿತು ಶನಿವಾರ ವಿಶೇಷ ಉಪನ್ಯಾಸ ನೀಡಿದರು. ಬ್ರಿಟಿಷ್ ಆಡಳಿತದಲ್ಲಿ ೨೦ಕ್ಕೂ ಹೆಚ್ಚು ಪ್ರಾಂತ್ಯಗಳಾಗಿ ಕನ್ನಡ ನಾಡು ಹರಿದು ಹಂಚಿ ಹೋಗಿತ್ತು. ನಮ್ಮ ಭಾಷಿಕರೇ ಅಧಿಕವಾಗಿದ್ದ ಪ್ರದೇಶಗಳಲ್ಲಿದ್ದ ಕನ್ನಡಿಗರಿಗೆ ಭಾಷಿಕವಾಗಿ, ಸಾಮಾಜಿಕವಾಗಿ, ಆಡಳಿತಾತ್ಮಕವಾಗಿ ಅನೇಕ ವಿಭಿನ್ನ ಸಮಸ್ಯೆಗಳು ಎದುರಾಗಿದ್ದವು. ಇಂತಹ ಸಮಸ್ಯೆಗಳಿಗೆ ಮುಕ್ತಿ ಕಾಣಿಸುವ ಉದ್ದೇಶಕ್ಕಾಗಿ, ಕನ್ನಡ ಭಾಷೆಯ ಆಧಾರದ ಮೇಲೆ ಅಖಂಡ ಕರ್ನಾಟಕ ನಾಡನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ನಾಡಿನ ಸಾಹಿತಗಳು, ಕಲಾವಿದರು, ಪತ್ರಿಕೆಗಳು, ಸಂಘ ಸಂಸ್ಥೆಗಳು ನಡೆಸಿದ ಏಕೀಕರಣ ಹೋರಾಟ ಕನ್ನಡಿಗರ ಅಸ್ಮಿತೆ ಕಥೆಯಾಗಿದೆ ಎಂದರು. ಕರ್ನಾಟಕ ಸಂಸ್ಕೃತಿಕೆ ನಾಡಿನ ಅರಸರು ಬಹು ದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ. ಏಕೀಕರಣದ ನಂತರ ಭಾಷಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಕನ್ನಡದ ಪ್ರತಿನಿಧಿಕತೆಯನ್ನು ಪುನರಾವಲೋಕನ ಮಾಡಿಕೊಳ್ಳುವುದ ಅವಶ್ಯವಾಗಿದೆ. ರಾಜ್ಯದಲ್ಲಿ ನ

ಮಸ್ಕಿ ಪುರಸಭೆ ಉಪಚುನಾವಣೆ ಶೇಕಡ 68 ರಷ್ಟು ಮತದಾನ

ಇಮೇಜ್
  ಮಸ್ಕಿ : ಸ್ಥಳೀಯ ಪುರಸಭೆ 3 ನೇ ವಾರ್ಡ್ ಅಭ್ಯರ್ಥಿ ಒಬ್ಬರು ಅಕಾಲಿಕ ಮರಣ ಹೊಂದಿದ್ದರಿಂದ ಮಸ್ಕಿ ಪುರಸಭೆ ಮೂರನೇ ವಾರ್ಡ್ ಗೆ ಉಪಚುನಾವಣೆ ಶನಿವಾರ ನಡೆಯಿತು . ಬೆಳಗ್ಗೆ ಆರಂಭವಾದ ಮತದಾನ ಸಂಜೆವರೆಗೂ ಶಾಂತಿಯುತವಾಗಿ ಮತದಾನ ನಡೆಯಿತು. ಇದೀಗ ಸ್ಥಳೀಯ ಪುರಸಭೆ ಮೂರನೇ ವಾರ್ಡ್ ಉಪಚುನಾವಣೆ ಶೇಕಡ 68% 03ರಷ್ಟು ಮತದಾನವಾಗಿದೆ. ಪುರುಷರ ಮತದಾರ 445 ಮಹಿಳೆ ಮತದಾರರು 509 ಒಟ್ಟು 954 ಮತದಾರರಿದ್ದು ಇದರಲ್ಲಿ 329 ಮಹಿಳೆಯರು ಮತದಾನ ಮಾಡಿದ್ದು, ಇನ್ನುಳಿದ ಪುರುಷ ಮತದಾನ320 ಮತದಾನ ಚಲಾಯಿಸಿದ್ದಾರೆ , ಒಟ್ಟು 649 ಮತದಾನವಾಗಿದ್ದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.ಪೋಲಿಸ್ ಬಿಗಿ ಬಂದೋಬಸ್ತ್ ನಲ್ಲಿ ಶಾಂತಿಯುತ ಮತದಾನ ಜರುಗಿತು. ಮತದಾನದ ನಡುವೆ ಸ್ವಲ್ಪ ಸಮಯ 3 ನೇ ವಾರ್ಡಿನ ಮತದಾರರ ಪಟ್ಟಿಯ ಪರಿಷ್ಕರಣೆಯಿಂದ 70 ರಿಂದ 80 ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ವಾದ ವಿಗ್ವಾದ ಜರುಗಿತು. ಇಂದಿನ ಚುನಾವಣೆ ಆದಂತೆ ಮುಂಬರುವ ಚುನಾವಣೆಗೆ 3 ನೇ ವಾರ್ಡಿನ ಮತದಾರರ ಹೆಸರನ್ನು ಸೇರಿಸುವ ಮೂಲಕ ಸರಿಪಡಿಸಿ ಎಂದು ಪುರಸಭೆ ಮಸ್ಕಿ ಚುನಾವಣಾ ಅಧಿಕಾರಿ ಮತ್ತು ತಾಲ್ಲೂಕ ದಂಡಾಧಿಕಾರಿ ಗಳಿಗೆ ಬಿಜೆಪಿ ಮಂಡಲ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ ಇವರ ನೇತೃತ್ವದಲ್ಲಿ ಕಾರ್ಯಕರ್ತರು ಮನವಿ ಪತ್ರವನ್ನು ಸಲ್ಲಿಸಿದರು.