ನೂತನ ಎಸ್. ಡಿ. ಎಮ್. ಸಿ ಪದಾಧಿಕಾರಿಗಳ ನೇಮಕ
ದೇವದುರ್ಗ : ತಾಲೂಕಿನ ಸಿದ್ದಾಪುರ ಗ್ರಾಮದ ಉನ್ನರೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಶಾಲಾ ಆವರಣದಲ್ಲಿ ಎಸ್ ಡಿ ಎಂ ಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಎಲ್ಲರ ಒಮ್ಮತದಿಂದ ನೂತನ ಅಧ್ಯಕ್ಷರಾಗಿ ತಿಮ್ಮಣ್ಣ ನಾಯಕ ಬುಂಕಲದೊಡ್ಡಿ,ಉಪಾಧ್ಯಕ್ಷರಾಗಿ ಪಾರ್ವತಿ ಗಂಡ ಸಾಬಣ್ಣ ಜೆಲ್ಲಿ ಇನ್ನುಳಿದ ಎಲ್ಲರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮೌನೇಶ್ ನಾಯಕ ಬೆಂಗಂಡಿ,ಭೀಮಣ್ಣ ನಾಯಕ,ಶಿವರಾಜ ಮುರಾಳ, ಗ್ಯಾನಯ್ಯ ಮುರಾಳ,ವೆಂಕಟೇಶ್ ಪಾಣಿ,ತಿಮ್ಮಣ್ಣ ನಾಯಕ ಮೂಲಿಮನಿ,ಸಿದ್ಧಲಿಂಗ ಮುರಾಳ,ಸಿದ್ದಣ್ಣ ಚಿಂಚೋಡಿ,ವೆಂಕಟೇಶ್ ಹೆಚ್. ಪಿ ಹಾಗೂ ರಾಜಕೀಯ ಮುಖಂಡರು ಗ್ರಾಮದ ಹಿರಿಯ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

🙏
ಪ್ರತ್ಯುತ್ತರಅಳಿಸಿ