ವಯೋ ನಿವೃತ್ತಿ ಪಡೆದ ಮುಖ್ಯ ಶಿಕ್ಷಕಿ ಗಿರಿಜಾ ಬಾಯಿ ಮಾಲಿಮಠ ಅವರಿಗೆ ಸನ್ಮಾನ ಸಮಾರಂಭ

 

ಮಸ್ಕಿ : ತಾಲೂಕಿನ ಮೆದಿಕಿನಾಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ (ಕರೇಗುಡ್ಡ) ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಗಿರಿಜಾ ಬಾಯಿ ಮಾಲಿಮಠ ಅವರು ತಮ್ಮ 31 ವರ್ಷದ ಶಿಕ್ಷಕ ವೃತ್ತಿ ಜೀವನಕ್ಕೆ ನಿವೃತ್ತಿ ಹೊಂದಿದ್ದು ಸನ್ಮಾನಿಸಿ ಗೌರವಿಸಲಾಯಿತು.

ಈಗಾಗಲೇ ಬೇರೆಡೆ 24 ವರ್ಷಗಳ ಕಾಲ ಸುದೀರ್ಘ ಶಿಕ್ಷಕಿ ವೃತ್ತಿ ನಿರ್ವಹಿಸಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕರೇಗುಡ್ಡ ದಲ್ಲಿ 7 ವರ್ಷಗಳ ಕಾಲ ತಮ್ಮ ಶಿಕ್ಷಕ ವೃತ್ತಿಯನ್ನು ತುಂಬಾ ಅಚ್ಚುಕಟ್ಟಾಗಿ ಜವಾಬ್ದಾರಿಯಿಂದ ನಿರ್ವಹಿಸಿ ಗ್ರಾಮದ ಜನತೆಯ ಮೆಚ್ಚುಗೆಗೆ ಪಾತ್ರರಾದ ಮುಖ್ಯ ಗುರುಗಳಾದ ಶ್ರೀಮತಿ ಗಿರಿಜಾ ಬಾಯಿ ಮಾಲಿಮಠ ಅವರನ್ನು ಅಭಿಮಾನದಿಂದ ಸಹಾಯಕ ಶಿಕ್ಷಕರು ಹಾಗೂ ಅಥಿತಿ ಶಿಕ್ಷಕರು ಮತ್ತು ಎಸ್ ಡಿ ಎಂ ಸಿ ಸಮಿತಿ ಹಾಗೆಯೇ ಗ್ರಾಮದ ಯುವ ಮುಖಂಡ ಮೌನೇಶ್ ಮೆದಿಕಿನಾಳ ಇವರು ಮೇಡಂ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಸನ್ಮಾನಿಸಿ ಅಭಿನಂದಿಸಿದ್ದಾರೆ. ಹಾಗೂ 7 ವರ್ಷದ ವೃತ್ತಿ ಜೀವನ ಒಂದೆಡೆ ಎಂಬಂತೆ ಒಂದು ಫೋಟೋ ಫ್ರೇಮ್ ಅನ್ನು ಉಡುಗೊರೆಯಾಗಿ ಅತೀ ಪ್ರೀತಿ ಅಕ್ಕರೆಯಿಂದ ನೀಡಿದ್ದು ವಿಶೇಷವಾಗಿ ಕಂಡು ಬಂದಿದೆ.

ಇದೇ ಸಂದರ್ಭದಲ್ಲಿ ವೆದಿಕೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷರಾದ ಮಲ್ಲಯ್ಯ,ಮುಖ್ಯ ಅಥಿತಿಗಳಾಗಿ ಮಂಗಳ ಮು.ಗು ಸರಕಾರಿ ಪ್ರೌಢ ಶಾಲೆ ಮೆದಿಕಿನಾಳ, ದೇವಪ್ಪ ಮು.ಗು ಸ. ಮಾ. ಹಿ. ಪ್ರಾ. ಶಾಲೆ ಮೆದಿಕಿನಾಳ, ಗುಂಡೂರಾವ್ ದೇಸಾಯಿ ಸಾಹಿತಿ,ಶಿವಪ್ಪ ರಾಥೋಡ್ ಸೇರಿದಂತೆ ಸಹ ಶಿಕ್ಷಕ ಮತ್ತು ಶಿಕ್ಷಕಿಯರು ಹಾಗೂ ಅಥಿತಿ ಶಿಕ್ಷಕರು ಮತ್ತು ಮಕ್ಕಳು ಭಾಗಿಯಾಗಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*