"ನುಲಿಯ ಚಂದಯ್ಯ ಸಮಾಜಕ್ಕೆ ಜ್ಞಾನದ ಬೆಳಕು - ಕೆ ಕೊಟ್ರೇಶ್ "
*ಪೂಜೆಗಿಂತ ಕಾಯಕ ಶ್ರೇಷ್ಟ ಎಂದ ಶರಣ –ಬದ್ದಿ ಮರಿಸ್ವಾಮಿ *
ಕೊಟ್ಟೂರು 09.08.2025 :- ತಾಲೂಕು ಕಛೇರಿ, ಕೊಟ್ಟೂರಿನಲ್ಲಿ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ನುಲಿಯ ಚಂದಯ್ಯ ಜಯಂತಿ ಆಚರಿಸಲಾಯಿತು. ಚಂದಯ್ಯನವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡುವುದರೊಂದಿಗೆ ಚಾಲನೆ ನೀಡಲಾಯಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಗ್ರೇಡ್-2 ತಹಶೀಲ್ದಾರರಾದ ಪ್ರತಿಭಾ ಎಂ. ಇವರು ಚಂದಯ್ಯನವರು ಅರಿವಿನ ಹಗ್ಗವನ್ನು ಹೊಸೆಸು ಸಮಾಜವನ್ನು ಪರಿವರ್ತನೆ ಮಾಡಲು ಶ್ರಮಿಸಿದ್ದಾರೆ. ಹೀಗಾಗಿ ನಾವೆಲ್ಲರೂ ಅವರ ಸಂದೇಶವನ್ನು ಅರ್ಥೈಸಿಕೊಂಡು ಪರಿವರ್ತನೆಯಾಗಬೇಕು ಎಂದರು.
ಅಖಿಲ ಕರ್ನಾಟಕ ಕುಳವ ಮಹಾ ಸಂಘದ ರಾಜ್ಯ ಉಪ ಕಾರ್ಯದರ್ಶಿ ಕೆ ಕೊಟ್ರೇಶ್ ಇವರು ಮಾತನಾಡಿನುಲಿಯ ಚಂದಯ್ಯ ನೂಲಿನಿಂದ ತಯಾರಿಸಿದ ಹಗ್ಗ, ಕುಗ್ಗೆ ಮುಂತಾದ ಕೃಷಿ ಉಪಕರಣಗಳನ್ನು ಮಾರುವ ಕಾಯಕ ಮಾಡುತ್ತ, ಬಂದ ಹಣದಿಂದ ದಾಸೋಹ ಮಾಡುತ್ತಿದ್ದರು. ಒಂದು ಬಾರಿ ಕೆರೆಯಲ್ಲಿ ಹುಲ್ಲು ಕೊಯ್ಯುವಾಗ ಅಕಸ್ಮಿಕವಾಗಿ ಲಿಂಗ ಬೀಳುತ್ತದೆ. ಅದನ್ನು ನಿರ್ಲಕ್ಷ ಮಾಡಿ ಕಾಯಕಕ್ಕೆ ತೆರಳುತ್ತಾರೆ. ಲಿಂಗಯ್ಯನು ಚಂದಯ್ಯನ್ನು ಹಿಂಬಾಲಿಸಿದರು ಕಟ್ಟಿಕೊಳ್ಳುವುದಿಲ್ಲ. ಕೊನೆಗೆ ಅನುಭವ ಮಂಟಪದಲ್ಲಿ ಚರ್ಚೆಯಾಗಿ ಲಿಂಗಯ್ಯನ್ನು ಧರಿಸುತ್ತಾರೆ. ಹೀಗೆ ಪೂಜೆಗಿಂತ ಕಾಯಕ ಮುಖ್ಯ, ಕಾರೆಸೊಪ್ಪಾದರೂ ಕಾಯಕದಿಂದ ಬಂದಿರಬೇಕು, ಗುರು ಲಿಂಗ ಜಂಗಮ ಯಾರೇ ಆಗಲೀ ಕಾಯಕವನ್ನು ಮಾಡಲೇಬೇಕೆಂದು ತೋರಿಸಿಕೊಟ್ಟದ ಕಾಯಕಶ್ರೇಷ್ಠ ಶರಣ ನುಲಿಯ ಚಂದಯ್ಯ. ನಮ್ಮ ಕೊರವರ ಸಮಾಜದವರು ಅಕ್ಷರ ಜ್ಞಾನವನ್ನು ಗಳಿಸಿಕೊಳ್ಳಬೇಕು. ಪ್ರತಿತಿಂಗಳು ಪೊಲೀಸ್ ಹಾಗೂ ಕಂದಾಯ ಇಲಾಖೆಯವರು ಕಾನೂನು ಅರಿವು ಕಾರ್ಯಕ್ರಮವನ್ನು ನಡೆಸಿ ಆ ಮೂಲಕ ನಮ್ಮವರಿಗೆ ಕಾನೂನು ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಡಿಎಸ್ಎಸ್ ಮುಖಂಡರಾದ ಬದ್ದಿ ಮರಿಸ್ವಾಮಿ ಇವರು ಮಾತನಾಡಿ“ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ” ಎಂದು ಬಸವಣ್ಣನವರು ಹೇಳಿದಂತೆ ಪೂಜೆಯಿಂದ ಹೊಟ್ಟೆ ತುಂಬುವುದಿಲ್ಲ. ಹಾಗಾಗೀ ಕಾಯಕ ಮುಖ್ಯ,
ಚಂದಯ್ಯನವರು ನೂಲು ಹುಣ್ಣಿಮೆಯ ದಿನ ಹುಟ್ಟಿದ್ದು, ಸಮಾಜಕ್ಕೆ ಜ್ಞಾನದ ಬೆಳಕನ್ನು ಹುಣ್ಣಿಮೆಯ ಬೆಳಕಂತೆ ನೀಡಿದ್ದಾರೆ ಎಂದರು.
ಎ ಐ ಡಿ ಆರ್ ಎಂ ಸಹ ಸಂಘಟನೆ ಕಾರ್ಯದರ್ಶಿ ನಾಗರಾಜ್ ಇವರು ಮಾತನಾಡಿವಚನಗಳೆಲ್ಲವೂ ಕಾಯಕ ಮೌಲ್ಯವನ್ನು ಎತ್ತಿ ಹಿಡಿಯುತ್ತವೆ. ಗುರು, ಲಿಂಗ, ಜಂಗಮ ಎಲ್ಲರಿಗೂ ಕಾಯಕ ಕಡ್ಡಾಯ. ಭಾವ ಶುದ್ಧವಾಗಿ ಮಾಡುವುದೇ ನಿಜವಾದ ಕಾಯಕ. “ಕಾರೆಯ ಸೊಪ್ಪಾದರೂ ಕಾಯಕದಿಂದ ಬಂದುದು ಮಾತ್ರ ಲಿಂಗಾರ್ಪಿತವಾಗುತ್ತದೆ” ಎಂಬಂಥ ಮಾತುಗಳಲ್ಲಿ ಇವರ ಕಾಯಕದ ಪರಿಕಲ್ಪನೆ ಸ್ಪಷ್ಟವಾಗಿದೆ.ಎಂದು ಹೇಳಿದರು
ಈ ಕಾರ್ಯಕ್ರಮದಲ್ಲಿ ಕೊಟ್ಟೂರು ತಾಲೂಕು ಕುಳವ ಮಹಾಸಂಘದ ಅಧ್ಯಕ್ಷರಾದ ಕೆ ಮಂಜುನಾಥ, ಎಐಡಿಆರ್ಎಂ ಸಂಘಟನಾ ಕಾರ್ಯದರ್ಶಿ ಪರಶುರಾಮ, ಕೊರಚರ ಸಂಘದ ಉಪಾಧ್ಯಕ್ಷ ಕಾಂತಪ್ಪ, ಕೊರವ ಸಮಾಜದ ಮುಖಂಡರು, ಉಪತಹಶೀಲ್ದಾರ್ ಅನ್ನದಾನೇಶ ಬಿ ಪತ್ತಾರ್, ಪ್ರಭಾರೆ ಕಂದಾಯ ನಿರೀಕ್ಷಕ ಹರೀಶ್, ಗ್ರಾ ಆ ಸ ಜ್ಯೋತಿಬಾಯಿ, ವನಜಾಕ್ಷಿ, ಸುಧಾ ಬೆಟ್ಟಪ್ಪನವರ, ಸಿದ್ದೇಶ್ ಮುಂತಾದ ಸಿಬ್ಬಂದಿಯವರು ಹಾಜರಿದ್ದರು. ಸಿ ಮ ಗುರುಬಸವರಾಜ ಸ್ವಾಗತಿಸಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ದ್ಯಾಮಪ್ಪ, ಮೇನ್ಪಾಡಿ ಕೃಷ್ಣಪ್ಪ, ಮುರಾರಿ ಹನುಮಂತಪ್ಪ, ಶ್ರೀಧರ, ವೆಂಕಪ್ಪ, ಕಾಂತಪ್ಪ, ಪೊಲೀಸ್ ಮಂಜುನಾಥ, ವೆಂಕಟೇಶಪ್ಪ ಕೊರವ ಸಮಾಜದ ಮುಖಂಡರು ಹಾಗೂ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.






ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ