ಅಲೆಮಾರಿ ಬುಡಕಟ್ಟು ಜನಾಂಗಕ್ಕೆ 1% ಮೀಸಲಾತಿಗಾಗಿ ಬೃಹತ್ ಹೋರಾಟ

ಮಸ್ಕಿ : ಪಟ್ಟಣದ ಹಳೇ ಬಸ್ ನಿಲ್ದಾಣದ ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ಬಳಿ ಅಲೆಮಾರಿ ಜನಾಂಗದ ಬುಡಕಟ್ಟು ಜನತೆಯು ನೆರೆದು ವೇಷ ಭೂಷಣ ಧರಿಸಿ ತಮ್ಮ ಮೀಸಲಾತಿಯ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಸಂಘಟನೆ ರಾಯಚೂರು ಜಿಲ್ಲಾ ಸಮಿತಿ ವತಿಯಿಂದ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಉಲ್ಲೇಖ (2)ರನ್ವಯ ಆದರೆ ರಾಜ್ಯ ಸರಕಾರವು ವಿಶೇಷ ಕ್ಯಾಬಿನೆಟ್ ನಿರ್ಣಯದ ಮೂಲಕ ಮಾನ್ಯ ಮುಖ್ಯಮಂತ್ರಿಗಳು ಅಸ್ಪೃಶ್ಯ ಸಂಬಂಧಿಸಿದಂತ ಅಲೆಮಾರಿಗಳ ಜಾತಿಗಳಿಗೆ ನೀಡಿದ ಶೇ. 1% ಮೀಸಲಾತಿಯನ್ನು ಬಲಾಡ್ಯ ಸ್ಪೃಶ್ಯ ಸಮುದಾಯಗಳಾದ ಲಮಾಣಿ, ಭೋವಿ, ಕೊರಮ, ಕೊರಚ ಸಮುದಾಯಗಳೊಂದಿಗೆ ಸೇರಿಸಿ ಆಲೆಮಾರಿಗಳಿಗೆ ಮರಣ ಶಾಸನವಾಗಿ ರೂಪಿಸಿ ಸರ್ಕಾರ ಆದೇಶ ಹೊರಡಿಸಿದೆ. ಸಮುದಾಯಗಳೊಂದಿಗೆ ಸೇರಿಸಿ ಅಲೆಮಾರಿಗಳಿಗೆ ಮರಣ ಶಾಸನವಾಗಿ ರೂಪಿಸಿ ಸರ್ಕಾರ ಆದೇಶ ಹೊರಡಿಸಿದೆ.

ಈ ಶಾಸನದಿಂದ ಮೂಲ 59 ಅಸ್ಪಶ್ಯ ಅಲೆಮಾರಿ ಸಮುದಾಯಗಳು ಧ್ವನಿ ಇಲ್ಲದ ಯಾವುದೇ ರಾಜಕೀಯ ಪ್ರಾತಿನಿಧ್ಯ ಉನ್ನತ ಮಟ್ಟದ ಉದ್ಯೋಗ ಸಾಮಾಜಿಕವಾಗಿ ಅತ್ಯಂತ ಕೆಳಸ್ತರ ಇರುವ 49+10=59 ಅಸ್ಪೃಶ್ಯ ಸಮುದಾಯಗಳನ್ನು ನಿಖರವಾಗಿ ಗುರುತಿಸಿ ಆಯೋಗದ ಮೂಲಕ ಸುಮಾರು 8 ತಿಂಗಳಗಳ ಕಾಲ ವರದಿ ತಯಾರಿಸಿ ಮಾನ್ಯ ನಿವೃತ್ತ ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನ್‌ದಾಸ ಸರಕಾರಕ್ಕೆ ಸಲ್ಲಿಸಿದ್ದು ಕೇವಲ ಒಳಮೀಸಲಾತಿ ಜನಸಂಖ್ಯೆಗೆ ಅನುಗುಣವಾಗಿ ಅಲ್ಲದೇ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀವಾಗಿ, ಔದ್ಯೋಗಿಕವಾಗಿ ಹಿಂದುಳಿದಿರುವಿಕೆಯನ್ನು ಮಾನ್ಯ ಸುಪ್ರಿಂ ಕೋರ್ಟ್ ಮಾನದಂಡಗಳ ಆಧಾರದ ಮೇಲೆ ಆಯೋಗವನ್ನು ರಚನೆ ಮಾಡಿ ಸುಮಾರು 8 ರಿಂದ 9 ತಿಂಗಳಗಳ ಕಾಲ ವರದಿ ತಯಾರಿಸಿ ಮಾನ್ಯ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು ಇದನ್ನು ಬಲಾಡ್ಯ ಸಮುದಾಯಗಳ ಸಚಿವರುಗಳ ಒಳ ಸಂಚಿನಿಂದ ಆಯೋಗದ ವರದಿಯನ್ನು ಸುಪ್ರಿಂ ಕೋರ್ಟ್‌ನ ಮಾನದಂಡಗಳನ್ನು ಬದಿಗೊತ್ತಿ ತಮ್ಮ ಕ್ಯಾಬಿನೆಟ್ ಮೂಲಕ 3 ವರ್ಗಗಳಾಗಿ ಮಾಡಿ ಅದರಲ್ಲಿ 59 ಅತ್ಯಂತ ಹಿಂದುಳಿದ ಅಲೆಮಾರಿಗಳ ಮೊದಲ ಸ್ಥಾನದಲ್ಲಿ ಎ ಗುಂಪಿನಲ್ಲಿ IN ಇದ್ದಂತಹ ಮಾನದಂಡವನ್ನು ಸರಕಾರ ಬಲಾಡ್ಯ ಸ್ಪಶ್ಯ ಸಮುದಾಯಗಳಾದ ಸಮುದಾಯಗಳೊಂದಿಗೆ ಸೇರಿಸಿ ಅಸಹಾಯಕ ಅಲೆಮಾರಿ ಸಮುದಾಯಗಳಿಗೆ ವಂಚನೆಯನ್ನು ಮಾಡಿರುತ್ತದೆ. ಕೂಡಲೇ ಮಾನ್ಯ ಮುಖ್ಯಮಂತ್ರಿಗಳು ಇದನ್ನು ಸರಿಪಡಿಸಿ ಅಲೆಮಾರಿಗಳ ಅನ್ನಕ್ಕೆ ಕೈ ಹಾಕದೇ ಅವರ ಪ್ರತ್ಯೇಕ 1 % ಮೀಸಲಾತಿಯನ್ನು ನೀಡಿ ಧ್ವನಿ ಇಲ್ಲದ ತಬ್ಬಲಿ ಅಲೆಮಾರಿಗಳಿಗೆ ನ್ಯಾಯ ಒದಗಿಸಬೇಕೆಂದು. ತಮ್ಮ ಘನ ಸರ್ಕಾರಕ್ಕೆ ವಿನಮ್ರವಾಗಿ ಕೇಳಿಕೊಳ್ಳುತ್ತೇವೆ. ಇಲ್ಲವಾದಲ್ಲಿ ಸತತ ಹೋರಾಟದ ಜೊತೆಗೆ ಕಾನೂನು ಹೋರಾಟದಲ್ಲಿ ತೊಡಗುತ್ತೇವೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಸಂಘಟನೆ ರಾಯಚೂರು ಜಿಲ್ಲಾ ಸಮಿತಿ ವತಿಯಿಂದ ತಹಶೀಲ್ದಾರರಾದ ಡಾಕ್ಟರ್ .ಮಲ್ಲಪ್ಪ. ಕೆ. ಯರಗೋಳ ಅವರ ಮೂಲಕ ರಾಜ್ಯದ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಹುಸೇನಪ್ಪ ಬಿ ವಿಭೂತಿ. ಮೌನೇಶ್ ಮುರಾರಿ ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಮಸ್ಕಿ, ಹನುಮಂತಪ್ಪ ವೆಂಕಟಾಪುರ,ಮಲ್ಲಯ್ಯ ಬಳ್ಳಾ,ದಾನಪ್ಪ ಸಿ ನಿಲೊಗಲ್ ಸಾಹಿತಿ ಹಾಗೂ ದಲಿತ ಮುಖಂಡರು, ಅಲೆಮಾರಿ ಬುಡಕಟ್ಟು ಮಹಾಸಭಾದ ವಿವಿಧ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*