ಕೊಟ್ಟೂರು ಕೆರೆಯನ್ನು ಪ್ರವಾಸಿ ತಾಣವಾಗಿಸುವೆ -ಶಾಸಕ ಕೆ.ನೇಮಿರಾಜ ನಾಯ್ಕ
ಕೊಟ್ಟೂರು :೧೭ ಕೆರೆಗೆ ನೀರು ತುಂಬಿಸುವ ಯೋಜನೆ ಕೊಟ್ಟೂರು ಸೇರಿದಂತೆ ೬೦೦ ಕೋಟಿ ಅನುದಾನ ವನ್ನು ತರುವ ಯೋಜನೆಯನ್ನು ಹೊತ್ತು ಕೇಂದ್ರಕ್ಕೆ ತೆರಳಿ ಕುಮಾರಸ್ವಾಮಿಯವರು ಹಾಗು ಕೇಂದ್ರ ನೀರಾವರಿ ಮಂತ್ರಿ ಜೊತೆ ಮಾತುಕತೆ ನಡೆಸಿ ಬಂದಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ಸರ್ಕಾರ ಸಮ ಪಾಲು ಈ ಯೋಜನೆಗೆ ನೀಡಬೇಕು ಆದರೆ ರಾಜ್ಯ ಸರ್ಕಾರ ಅನುದಾನದ ಕೊರತೆಯ ಕಾರಣ ಕೇಂದ್ರದ ಪಾಲಿನ ಜೊತೆಗೆ ಬೇರೆ ಯಾವುದಾದರು ಅನುದಾದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸುವೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿದರು.
ಪಟ್ಟಣದಲ್ಲಿ ನಡೆದ ಕರೆಗೆ ಬಾಗಿನ ಕಾರ್ಯಕ್ರಮ ಶಾಸಕ ಕೆ.ನೇಮಿರಾಜ ನಾಯ್ಕ, ಉಜ್ಜಯಿನಿ ಸದ್ಧರ್ಮ ಜಗದ್ಗರು ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕೊಟ್ಟೂರು ದೇವರು, ಡೋಣೂರು ಚಾನುಕೋಟಿ ಮಠಾಧ್ಯಕ್ಷ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಸೇರಿ ಮಂಗಳವಾರ ಅರ್ಪಿಸಿ ಹೆಣ್ಣು ಮಕ್ಕಳಿಗೆ ಉಡಿ ತುಂಬಿದರು.
ಕೆರೆಗೆ ಬಾಗಿನ ಅರ್ಪಿಸಿ ಶಾಸಕ ಕೆ.ನೇಮಿರಾಜ ನಾಯ್ಕ ಮಾತನಾಡಿ ಕೊಟ್ಟೂರು ಕೆರೆಯನ್ನು ಪ್ರವಾಸ ತಾಣವನ್ನಾಗಿ ಮಾಡಲು ನಾವು ಹಿಂದಿನ ವರ್ಷ ಘೋಷಣೆಯನ್ನು ಮಾಡಿದ್ದೇವೆ.ಈ ವರ್ಷ ಅದನ್ನು ಪೂರ್ಣಗೊಳಿಸಲಿದ್ದೇವೆ ಅಲ್ಲದೆ ಕೊಟ್ಟೂರೇಶ್ವರ ದೇವಸ್ಥಾನವನ್ನು ಸೇರಿ ೯.೫೦ ಲಕ್ಷ ರೂಗಳಲ್ಲಿ ಪ್ರಾರಂಭವನ್ನು ಮಾಡಲಿದ್ದೇವೆ. ಅಲ್ಲದೆ ಕೆರೆಯ ಸುತ್ತಮುತ್ತಲಿನ ಜಂಗಲ್ ಕಟ್ಟಿಂಗ್ ಹಾಗು ರಾಜ್ಯ ಕಾಲುವೆ ಸ್ವಚ್ಛತೆ ಮಾಡಲು ಸಣ್ಣ ನೀರಾವರಿ ಇಲಾಖೆ ಹೇಳಿದ್ದೇನೆ ಎಂದರು.
ಮುಂದಿನ ದಿನಗಳಲ್ಲಿ ಕೊಟ್ಟೂರು ಕೆರೆಗೆ ನೀರು ತುಂಬಿಸಲು ಕೇಂದ್ರ ೩೦೦ ಕೋಟಿ ಅನುದಾನ ಹಾಗು ರಾಜ್ಯ ಸರ್ಕಾರದ ೩೦೦ ಕೋಟಿ ಅನುದಾನ ನೀಡಿದರೆ ಕೊಟ್ಟೂರು ಸೇರಿದಂತೆ ೧೭ ಕೆರೆಗೆ ನೀರು ತುಂಬಿಸುವ ಕಾರ್ಯ ಮಾಡುತ್ತೇನೆ ಎಂದರು.
ಮಾಜಿ ಜಿ.ಪಂ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್ ಮಾತನಾಡಿ ಇಲ್ಲೆ ಪಕ್ಕದಲ್ಲಿ ಹಾದು ಹೋದ ಕರೆ ತುಂಬಿಸುವ ಯೋಜನೆ ನಮ್ಮ ಕೆರೆಗೆ ತರಲು ಹಿಂದಿನ ಶಾಸಕರು ಮನಸ್ಸು ಮಾಡಲಿಲ್ಲ. ಮನಸ್ಸು ಮಾಡಿದರೆ ಈಗಿನ ಶಾಸಕರು ಪಕ್ಷ ಬೇದ ಮರೆತು ಎಲ್ಲರ ಜೊತೆ ಚರ್ಚಿಸಿ ೨೦೦ ಮೀಟರ್ ದೂರದಲ್ಲಿರುವ ಕೆರೆ ತುಂಬಿಸುವ ಯೋಜನೆಯಿಂದ ಕೊಟ್ಟೂರು ಕೆರೆಗೆ ನೀರನ್ನು ತುಂಬಿಸ ಬಹುದು ಎಂದರು.
ಡೋಣೂರು ಚಾನುಕೋಟಿ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಸ್ವಾಗತಿ ಪ್ರಾಸ್ತಾವಿಕವಾಗಿ ಮಾತನಾಡಿ ಶಾಶ್ವತವಾಗಿ ಕೆರೆ ತುಂಬಿಸುವ ಕಾರ್ಯ ಶಾಸಕರು ಮಾಡಬೇಕು. ಕೊಟ್ಟೂರು ಸುತ್ತಮುತ್ತಿಲಿನ ರೈತರ ಜಮೀನಿನಲ್ಲಿ ನೀರಿನ ಸೆಲೆ ಯಾವಾಗಲು ತುಂಬಿರುತ್ತದೆ. ಬೊಮ್ಮಮ್ಮ ಕೆರೆ ಕಟ್ಟಲು ತನ್ನ ದೇಹವನ್ನು ತ್ಯಾಗ ಮಾಡಿ ಕೊಟ್ಟೂರು ಕೆರೆ ನಿರ್ಮಾಣ ಮಾಡಿದ್ದಾಳೆ ಸಣ್ಣ ನೀರಾವರಿ ಇಲಾಖೆಯಿಂದ ಅನುದಾನದಲ್ಲಿ ಜೆಸಿಬಿಯನ್ನು ಕೊಟ್ಟರೆ ರೈತರು ತಮ್ಮ ಹೊಲಗಳಿಗೆ ಮಣ್ಣನ್ನು ತುಂಬಿಕೊAಡು ಹೋಗುತ್ತಾರೆ ಅದರಿಂದ ಕೆರೆಯ ಊಳು ಎತ್ತುವ ಕೆಲಸ ಸಾಗಿ ನೀರು ಹೆಚ್ಚಾಗಿ ಸಂಗ್ರಹವಾಗುತ್ತದೆ ಎಂದರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ