ನಾವು ಮಾಡುವ ಸೇವೆ ನಮ್ಮ ಹೆಸರಿಗಾಗಿ ಬೇಡ ಮತ್ತೊಂದು ಉಸಿರಿಗಾಗಿ ಇರಲಿ : ಶಿವಮೂರ್ತಿ ಗದ್ಗೀಮಠ
ಮಸ್ಕಿ : ತಾಲ್ಲೂಕಿನ ಬಳಗಾನೂರ ಗ್ರಾಮದ ಶ್ರೀ ಬಸವೇಶ್ವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿಪ್ರಕೃತಿ ಫೌಂಡೇಷನ್ ವತಿಯಿಂದ ಭಾರತಮಾತೆಗೆ ಸ್ವಾತಂತ್ರೋತ್ಸವ ಪ್ರಕೃತಿಮಾತೆಗೆ ವನಮಹೋತ್ಸವ ಅದ್ದೂರಿಯಾಗಿ ಜರುಗಿತು.
ಶಾಲೆಯ ಮುಖ್ಯ ಗುರುಗಳು ಧ್ವಜಾರೋಹಣ ನೆರವೇರಿಸಿ ನಂತರ ಶಾಲಾ ಆವರಣದಲ್ಲಿ ಸಸಿಗಳನ್ನು ಹಚ್ಚಿ ವಿದ್ಯಾರ್ಥಿಗಳಿಗೆ ದೇಶ ಹಾಗೂ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು.
ಶಾಲೆಯ ಮುಖ್ಯಗುರುಗಳಾದ ಗೀತಾ ಸುರೇಶ ರವರ ಮಾತನಾಡಿ, ಪ್ರಕೃತಿ ಫೌಂಡೇಶನ್ ನಿಸ್ವಾರ್ಥ ಸೇವೆ ಮಕ್ಕಳಿಗೆ ಸ್ಫೂರ್ತಿ ಯಾಗಲಿ ನಮಗೆ ಗಾಳಿ ನೆರಳು ಹಣ್ಣುಗಳನ್ನು ನೀಡುವ ಪರಿಸರಕ್ಕೆ ನಮ್ಮ ಕೈಯಿಂದಾದ ಸೇವೆ ಮಾಡೋಣ ಎಂದರು.
ನಂತರ ಮಾತನಾಡಿದ ಪ್ರಕೃತಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಶಿವಮೂರ್ತಿ ಗದ್ಗಿಮಠ (ಗ್ರೀನ್ ಆರ್ಮಿ) ಭಾರತ ಮಾತೆಯ ಸೇವೆಯಲ್ಲಿ ನಮ್ಮನೆಲ್ಲ ವೀರ ಯೋಧರು ರಕ್ಷಿಸುತ್ತಾರೆ ನಾವೆಲ್ಲ ಪ್ರಕೃತಿಮಾತೆಯ ಸೇವೆ ಮಾಡೋಣ ನಾವು ಮಾಡುವ ಸೇವೆ ನಮ್ಮ ಹೆಸರಿಗಾಗಿ ಬೇಡ ಮತ್ತೊಂದು ಉಸಿರಿಗಾಗಿ ಇರಲಿ ಎಂದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿ ಶ್ರೀದೇವಿ ಕಲ್ಮನಿ ,ಪಾರ್ವತಿ, ಪರಿಸರ ಪ್ರೇಮಿಗಳಾದ ಮಂಜುನಾಥ, ದಾವುದ,ಮತ್ತು ಶಾಲೆಯ ವಿದ್ಯಾರ್ಥಿಗಳು ಇದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ