ಸ್ವಾತಂತ್ರ್ಯೋತ್ಸವದ ಸಂಭ್ರಮ
ವರದಿ - ಮಂಜುನಾಥ್ ಕೋಳೂರು ಕೊಪ್ಪಳ
ಕೊಪ್ಪಳ ಅಗಸ್ಟ್ 16 : - ದೇಶಾದ್ಯಂತ ಹಲವಾರು ಹೋರಾಟಗಾರರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣ , ಜೀವನವನ್ನೇ ತ್ಯಾಗ ಮಾಡಿ ಸ್ವತಂತ್ರವನ್ನು ಕೊಡಿಸಿದ್ದು , ಸ್ವತಂತ್ರ ಹೋರಾಟಗಾರರನ್ನು ಗುಣಗಾನ ಮಾಡುವ ಇಂದು 79ನೇ ಸ್ವಾತಂತ್ರ್ಯೋತ್ಸವದ ದಿನದ ಅಂಗವಾಗಿ ಜಿಲ್ಲೆಯ ಯಲಬುರ್ಗಾ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ- ಕನಕಪುರ ಭವನ ಮುಂಭಾಗದಲ್ಲಿ ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಸಿಬ್ಬಂದಿಯವರು ಏರ್ಪಡಿಸಿದ ಸ್ವಾತಂತ್ರೋತ್ಸವ ದಿನಾಚರಣೆ ಅಂಗವಾಗಿ ಡಾ// ಬಿ. ಆರ್. ಅಂಬೇಡ್ಕರ್ ರವರ ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರಗಳಿಗೆ ಪೂಜೆಸಲ್ಲಿಸಿ , ಧ್ವಜಾರೋಹನ ನೆರೆವೇರಿಸಿ ರಾಷ್ಟ್ರಧ್ವಜಕ್ಕೆ ಗೌರವ ವಂದನೆಯನ್ನು ಸಮರ್ಪಿಸಲಾಯಿತು. ಧ್ವಜರೋಣದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ್ ಗೌಡ್ರು ನೆರೆವೇರಿಸಿದರು. ನಂತರ ಪರಸ್ಪರ ಎಲ್ಲರಿಗೂ ಸಂತೋಷ ಸಂಭ್ರಮದಿಂದ ಸಿಹಿ ತಿಂಡಿ ತಿನಿಸುಗಳನ್ನು ಹಂಚಲಾಯಿತು. ಧ್ವಜಾರೋಹನ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣಾಧಿಕಾರಿಗಳಾದ ವೀರಭದ್ರಪ್ಪ ಅಂಗಡಿ , ವ್ಯವಸ್ಥಾಪಕರಾದ ಸೂರ್ಯನಾರಾಯಣ , ಕಚೇರಿಅಧೀಕ್ಷಕರಾದ ಫಾರೂಕ್ ಖಾನ್ , ಹಾಗೂ ಜ್ಯೋತಿಬಾ ಜಾದವ್, ದ್ವಿತೀಯ ದರ್ಜೆ ಸಹಾಯಕ ಎ .ವೆಂಕಟೇಶ್, ಶ್ರೀಶೈಲಪ್ಪ ತೋಟದ, ಶರಣಪ್ಪ ಹಳ್ಳಿಕೇರಿ, ಸಂತೋಷ್ ಇಮ್ಮಡಿಗೌಡ್ರ್ ಹಾಗೂ ಬಿ.ಇ.ಓ ಮತ್ತು ಬಿ.ಆರ್.ಸಿ ಕಛೇರಿಯ ಸರ್ವ ಸಿಬ್ಬಂದಿಯವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ