*ಬತ್ತನಹಳ್ಳಿಯಲ್ಲಿ ನಾಗರ ಪಂಚಮಿ ಹಬ್ಬ ವಿಶೇಷ*
ಕೊಟ್ಟೂರು: ನಾಗರ ಪಂಚಮಿಯಲ್ಲಿ ಹಾವಿನ ಹುತ್ತಕ್ಕೆ ಹಾಲು, ತುಪ್ಪ ಎರೆದು ಪೂಜೆ ಸಲ್ಲಿಸುತ್ತಾರೆ. ಇದು ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ. ಆದರೆ ಬತ್ತನಹಳ್ಳಿಯ ಕೊರಚ ಜನಾಂಗದವರು ಹುತ್ತಕ್ಕೆ ಕೋಳಿಯ ರಕ್ತ ಎರೆದು ನಾಗರಪಂಚಮಿಯನ್ನು ವಿಭಿನ್ನವಾಗಿ ಆಚರಿಸುವ ಪದ್ಧತಿಯೊಂದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಅದರಂತೆ ಭಾನುವಾರದಂದು ಬತ್ತನಹಳ್ಳಿಯಲ್ಲಿ ನಾಗರ ಪಂಚಮಿ ಹಬ್ಬ ಆಚರಿಸಲಾಯಿತು. ಇದರಿಂದ ಹೊರವಲಯದ ಹೊಲಗಳಲ್ಲಿದ್ದ ಹುತ್ತದ ಕೋವಿಗಳಲ್ಲಿ ಕೋಳಿಯ ರಕ್ತ ತುಂಬಿರುವುದು ಕಂಡುಬAದಿತು. ಹಬ್ಬದ ಅಂಗವಾಗಿ ಮಹಿಳೆಯರು, ಚಿಕ್ಕ ಮಕ್ಕಳು ಹೊಸ ಬಟ್ಟೆ ಧರಿಸಿ ಪೂಜಾ ಸಾಮಗ್ರಿಗಳೊಂದಿಗೆ ಹುತ್ತದ ಬಳಿ ತೆರಳಿ ಪೂಜೆ ಸಲ್ಲಿಸಿದರು. ಇವರು ತಂದ ಪೂಜಾ ಸಾಮಗ್ರಿಗಳಲ್ಲಿ ಕೋಳಿಯೂ ಸಹ ಸೇರಿತ್ತು. ಸಾಂಪ್ರದಾಯಿಕವಾಗಿ ಹುತ್ತಕ್ಕೆ ಪೂಜೆ ಸಲ್ಲಿಸಿದ ಬಳಿಕ ಹುತ್ತಕ್ಕೆ ನಮಸ್ಕರಿಸಿ, ಕೋಳಿಯ ಕತ್ತು ಕೊಯ್ದು ರಕ್ತವನ್ನು ಹುತ್ತದ ಕೋವಿಗಳಿಗೆ ತರ್ಪಣ ಬಿಟ್ಟರು. ನಂತರ ಪೂಜಾ ಸಾಮಾನುಗಳಲ್ಲಿ ಮಾಡಿದ ಚಿಕ್ಕದಾದ ‘ನಾಗರಹೆಡೆ’ಯನ್ನೂ ಕೋವಿಯೊಳಕ್ಕೆ ಹಾಕಿದರು. ರಸ್ತೆ ಬದಿ, ಪೊದೆಗಳು ಅಥವಾ ಜಮೀನುಗಳಲ್ಲಿ ಹುತ್ತಕ್ಕೆ ಕೋಳಿ ಬಲಿ ನೀಡಿ ರಕ್ತ ಅರ್ಪಿಸಿದರೆ ನಾಗರ ಪಂಚಮಿ ಹಬ್ಬ ಆಚರಿಸುವುದು ೧೯೫೭ ರಿಂದ ಇAದಿನವರಗೂ ನಡೆದು ಬಂದ ಪದ್ಧತಿ ಎನ್ನಲಾಗಿದೆ.
ಹಾವು ಸಸ್ಯಾಹಾರಿ ಅಲ್ಲ ಮಾಂಸಾಹಾರಿ ಆದ್ದರಿಂದ ಕೋಳಿ ರಕ್ತ ಅರ್ಪಿಸಿದರೆ ನಾಗದೋಷ ಕಾಡುವುದಿಲ್ಲ ಎಂಬ ನಂಬಿಕೆ ಗ್ರಾಮೀಣರಲ್ಲಿ ಇಂದಿಗೂ ಬಲವಾಗಿ ಬೇರೂರಿದೆ. ಹಾಗಾಗಿ, ಹಲವು ತಲೆಮಾರುಗಳಿಂದ ನಡೆದುಕೊAಡ ಬಂದ ಪದ್ಧತಿ ಇದಾಗಿದೆ. ಈ ವಿಭಿನ್ನ ಸಂಪ್ರದಾಯಕ ಪದ್ಧತಿಯನ್ನು ಕಂದಗಲ್ಲು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಸಾತವಾಡಿ ಕೊಟ್ರೇಶ್, ರವಿ, ಭಾಗ್ಯ, ಶೃತಿ, ಕುಮಾರ್ ಇತರರು ಪತ್ರಿಕೆಗೆ ತಿಳಿಸಿದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ